Monday, June 4, 2012

ಮಾಲಿಸ್ ಎಣ್ಣೆ ಮಾಲಿಸ್..... (ಕರವೋಕೆ ಮತ್ತೊಂದು)

ಗುರುದತ್ ರವರ "ಪ್ಯಾಸಾ" ಚಿತ್ರದ ಈ ಜಾನಿವಾಕರ್ ಹಾಡು ನನಗೆ ಬಹಳ ಇಷ್ಟವಾದದ್ದು..ಅದೇ ರಫ್ಹಿ ಕಂಠಸಿರಿಯಲ್ಲಿ....





ಮಾಲಿಸ್ ಎಣ್ಣೆ ಮಾಲಿಸ್...
(ಪ್ಯಾಸಾ ಚಿತ್ರದ ಗೀತೆ... ಗಾಯಕ: ಮೊಹಮ್ಮದ ರಫಿ)
ಮಾಲಿಸ್ ಎಣ್ಣೆ ಮಾಲಿಸ್.....ಮಾಲಿಸ್ ಎಣ್ಣೆ ಮಾಲಿಸ್....ಚಂಪೀ ssss

ತಲೆ ಗಿಲೆ ತಿರ್ಗ್ತಾ ಐತಾ, ಇಲ್ಲ ಮನಸು ಮುರ್ದೇ ಓಯ್ತಾ..sss
ಬಾರೋ ತಮ್ಮ ಹತ್ತಿರ ನಮ್ಮ, ಯಾಕೆ ಗಾಬರಿ ss..ಯಾಕೆ ಗಾಬರೀsss
ಮಾಲೀಸ್ ಎಣ್ಣೆ ಮಾಲೀಸ್...
II ತಲೆ ಗಿಲೆ ತಿರ್ಗ್ತಾ ಐತಾ,......II II

ಎಣ್ಣೆ ನಂದು ಮಸ್ಕಿ, ಅನ್ಬೇಕು ಅರೆ ಇಸ್ಕಿ
ತಲೆ ಮ್ಯಾಲೆ ಸವ್ರಿದ್ರೆ ಸಾಕು ನೋಡಿ ತಿಂದಂಗೆ ನೀವು ರಸ್ಕಿ II 2II
ನಿಲ್ಲು ನಿಲ್ಲು ನಿಲ್ಲು ಅರೆ ತಮ್ಮ ನಿಲ್ಲು
ಈ ಚಂಪೀಲಿದೆ ಎಂಥ ನೋಡೂ ಗುಲ್ಲು II 2 II
ಲಕ್ಷ ಕೊಟ್ಟರೂ ಸಿಕ್ಕೋದಿಲ್ಲ ಮಾಡು ಒಮ್ಮೆ ದಿಲ್ಲು.sss
ಯಾಕೆ ಗಾಬರೀ ss ಯಾಕೆ ಗಾಬರೀss
IIತಲೆ ಗಿಲೆ ತಿರ್ಗ್ತಾ ಐತಾ,......II II

ಪ್ರೀತಿ ಪ್ರೇಮದ ಇರಸಾ, ಅಲ್ಲಾ ಯಾಪಾರ್ದಾಗೆ ಲಾಸಾ
ಬಿದ್ದರೆ ಎಣ್ಣೆ, ಎಲ್ಲವೂ ಮಾಯ, ಮಾಡಿದರೆ ಮಾಲೀಸಾ..ss..II 2 II
ನಿಲ್ಲು ನಿಲ್ಲು ನಿಲ್ಲು ಅರೆ ಬಾಬ ನಿಲ್ಲು

ಈ ಚಂಪೀಲಿದೆ ಎಂಥ ನೋಡೂ ಗುಲ್ಲುII 2 II
ಲಕ್ಷ ಕೊಟ್ಟರೂ ಸಿಕ್ಕೋದಿಲ್ಲ, ಮಾಡು ಒಮ್ಮೆ ದಿಲ್ಲು..sss
ಯಾಕೆ ಗಾಬರೀ ss ಯಾಕೆ ಗಾಬರೀss
IIತಲೆ ಗಿಲೆ ತಿರ್ಗ್ತಾ ಐತಾ,......II II

ನೌಕರನಾಗಲಿ ಮಾಲೀಕ, ಪ್ರಜೆಯೇ ಆಗಲಿ ನಾಯಕ
ನನ್ಮುಂದೆ ತಲೆ ಬಗ್ಗಿಸ್ತಾರೆ, ರಾಜನೇ ಆಗಲಿ ಸೈನಿಕ..II 2 II
ನಿಲ್ಲು ನಿಲ್ಲು ನಿಲ್ಲು ಅರೆ ರಾಜ ನಿಲ್ಲು

ಈ ಚಂಪೀಲಿದೆ ಎಂಥ ನೋಡೂ ಗುಲ್ಲು..II 2 II
ಲಕ್ಷ ಕೊಟ್ಟರೂ ಸಿಕ್ಕೋದಿಲ್ಲ ಮಾಡು ಒಮ್ಮೆ ದಿಲ್ಲು..sss
ಯಾಕೆ ಗಾಬರೀ, ss ಯಾಕೆ ಗಾಬರೀss

IIತಲೆ ಗಿಲೆ ತಿರ್ಗ್ತಾ ಐತಾ,......II II

Wednesday, May 9, 2012

ಸುಖ - ದುಃಖ (ಗೋಪಿ ಚಿತ್ರದ ಗೀತೆಯ ಕರವೋಕೆ ಪ್ರಯತ್ನ)

ಚಿತ್ರ: ಗೋಪಿ (೧೯೭೦); ಗಾಯಕರು: ರಫಿ; ಸಂಗೀತ: ಕಲ್ಯಾಣ್ ಜೀ ಆನಂದ್ ಜೀ

ಸುಖ - ದುಃಖ

ಸುಖದಾ ಜೊತೆ ಎಲ್ಲಾ, ದುಃಖದಿ ಯಾರೂ ಇಲ್ಲ
ಓ ರಾಮ..ನನ್ನ ರಾಮಾ,,,ssss 
ನಿನ್ನ ನಾಮವೊಂದೇ ಸತ್ಯ, ಬೇರೆಲ್ಲಾ ಮಿಥ್ಯ
II ಸುಖದಾ ಜೊತೆII

ಜೀವನ ಬಂದು ಹೋಗೋ ಛಾಯಾ
ಮಿಥ್ಯದ ಮಾಯ ಮಿಥ್ಯದ ಕಾಯಾ ..sss
                       II ಜೀವನ ಬಂದುII
ಮತ್ತೇತಕೇ ಈ ಜೀವನ ಎಲ್ಲಾ
ಪಾಪದ ಕರ್ಮವ ಹೊರುವೇ...ssss
                    IIಮತ್ತೇತಕೇ ಈII
                     IIಸುಖದಾ ಜೊತೆII

ನಿನ್ನದೂ ಇಲ್ಲ ನನ್ನದೂ ಇಲ್ಲsss
ಈ ಜಗಜೋಗಿ ಮಾಯೆಯ ಬಲ್ಲ 
                 II ನಿನ್ನದೂ ಇಲ್ಲII
ದೊರೆಯೇ ಇರಲಿ ದೀನನೇ ಆಗಲೀ..sss
ಸೇರುವರೊಮ್ಮೆ ಮಣ್ಣಿಗೆ ಎಲ್ಲಾ.ssss
                    II ದೊರೆಯೇ ಇರಲಿII
                IIಸುಖದಾ ಜೊತೆII

ಹೊರಗಿನದೆಲ್ಲಾ ತಿಳಿಯಬೇಕಲ್ಲಾ..sss
ಒಳಗಿನದೇಕೆ ತಿಳಿಯಲೇ ಒಲ್ಲಾ..sss
               IIಹೊರಗಿನದೆಲ್ಲಾII
ಹೊರಗಿನ ತನುವನು ಸಮ್ಮಾನಿಸಿದೆ..sss
ಮನಸಿನ ಕಸವ ಕಳೆಯಲಿಲ್ಲಾ..sss
              IIಹೊರಗಿನದೆಲ್ಲಾII

ಸುಖದಾ ಜೊತೆ ಎಲ್ಲಾ, ದುಃಖದಿ ಯಾರೂ ಇಲ್ಲ
ಓ ರಾಮ..ನನ್ನ ರಾಮಾ,,,ssss II ಸುಖದಾ ಜೊತೆII

Tuesday, April 10, 2012

ತಂಗಿ ಮದುವೆ




ಮೆರಿ ಪ್ಯಾರಿ ಬೆಹನಿಯಾ ಬನೆಗಿ ದುಲ್ಹನಿಯಾ (ಸಚ್ಚಾ ಝೂಠಾ...1970)
ತಂಗಿ ಮದುವೆ
ನನ್ನ ಮುದ್ದು ತಂಗ್ಯಮ್ಮ
ನಿನ್ನ ಗಂಡು ಎಲ್ಲಮ್ಮಾ
ಬಂತು ನೋಡು ದಿಬ್ಬಣದ ಸವಾರಿ
ನಿನ್ನ ಅಣ್ಣ ಕುಣಿದವನೆ ಇದನ ನೋಡಿ// ನನ್ನ ಮುದ್ದು ತಂಗ್ಯಮ್ಮ//
          ಎಂತ ಸಿಂಗಾರ ಮಾಡಿ ತಂಗ್ಯಮ್ಮ ಕುಂತವ್ಳೆ//೨//
          ತಿಲಕ ಹಣೆಗೆ ಅಚ್ಚಿ ನಗ್ ನಗ್ತಾ ಕುಂತವ್ಳೆ
ತಂಗ್ಯಮ್ಮ ಉಟ್ಟವ್ಳೆ ತವರಿನ ಸೀರೆ 
ಲಗ್ನಾ ಆಗೋಕೆ ಗಂಡಿನ ಜೋಡಿ...
          ನಿನ್ನ ಅಣ್ಣ ಕುಣಿದವನೆ ಇದನ ನೋಡಿ// ನನ್ನ ಮುದ್ದು ತಂಗ್ಯಮ್ಮ//
ತಂಗ್ಯಮ್ಮ ಮದ್ವಣಗಿತ್ತಿ ಅರಿಸಿಣ ಅಚ್ಚಂಡು//೨//
ತವ್ರನ್ನ ಬಿಡೋವಾಗ ಕಣ್ಣೀರು ತುಂಬ್ಕೊಂಡು
ತಬ್ಕೊಂಡು ಅಮ್ಮನ್ನ ಅಳ್ತಾಳೆ ತಾರೆ...
ತಾರೆ ಒಂಟವ್ಳೆ ಗಂಡನ ಕೂಡಿ....
ನಿನ್ನ ಅಣ್ಣ ಕುಣಿದವನೆ ಇದನ ನೋಡಿ// ನನ್ನ ಮುದ್ದು ತಂಗ್ಯಮ್ಮ//
          ಅಮ್ಮನ ಗೋಳು ನಾನು ನೋಡಲಾರೆ ತಂಗಿ//೨//
          ಅಪ್ಪನ ಕಣ್ಣಲ್ಲೂ ನೀರು ಗೋಳಾಡ್ತಾಳೆ ಪುಟ್ನಿಂಗಿ
          ನೋವಿದ್ರೂ ನಗ್ತೀನಿ ಭಾವನ್ಗುಣ ನೋಡಿ
          ತಂಗಿ ಒಂಟವ್ಳೆ ಗಂಡನ ಜೋಡಿ
          ನಿನ್ನ ಅಣ್ಣ ಕುಣಿದವ್ನೆ ಇದನ ನೋಡಿ// ನನ್ನ ಮುದ್ದು ತಂಗ್ಯಮ್ಮ

Tuesday, April 3, 2012

ಮುಖ-ಪುಸ್ತಕ



ಮುಖ-ಪುಸ್ತಕ
ಮೊದಲ್ ಮೊದಲ್ ನೋಡೋ ಮುಖ
ಮೋಡಿ ಮಾಡೈತೆ ಎಂಥದ್ದೋ ಸುಖ
ಏಯ್, ಬ್ಯಾಡಪ್ಪಾ, ಸ್ವಲ್ಪ ಕೆಲ್ಸ ಕಾರ್ಯ
ಬಾಸ್ ಗೂ ತೋರಿಸಬೇಡವೇ ಮುಖ?
ಚೂರು ಪಾರು ಮಾಡಿ ಆಗಲ್ವೇ ಧೈರ್ಯ?

ಕೆಲ್ಸದ್ ಮಧ್ಯೆ, ಏಯ್ ತಡಿ ಏನೈತೋ!!
ಯಾರು ಹೊಸ್ದಾಗಿ ಏನನ್ನ ಹಾಕವ್ರೋ!!
ಫೋಟೋ ಯಾವ್ದಾದ್ರೂ ಇಂಟ್ರೆಸ್ಟಿಂಗೂ
ಕಾಮೆಂಟ್ ಕಾಲೆಳಿಯೋ ಗ್ರೂಪಿಂಗೂ
ಬ್ಲಾಗಕ್ಕಂತೂ ಬರೊಲ್ಲ ಬ್ಲಾಗಿಗ್ರು ಹೆಂಗೂ
ಇಲ್ಲೇ ಹಾಕ್ತೀನಿ ನನ್ ಕವ್ನ ಒಂದ್ಸಾಂಗು

ಮಧ್ಯಾನ್ಹ ಆಯ್ತು ಕೆಲ್ಸದ್ ಅರ್ಧ ಪುಟ
ಅರ್ಧ ಘಂಟೆಲಿ ನಾಕಾಗ್ತಿತ್ತು ಮೊದ್ಲಾಗಿದ್ರೆ
ಈಗ ಮುಖ ನೊಡ್ಕೊಂಡ್ ಅರ್ಧನೇ ದಿಟ
ಏನ್ಮಾಡೋದು? ಗೊತ್ತಾಗ್ತಿಲ್ಲ ಯಾಕೋ
ಹೆಂಗ್ಬರೋದು ಹೊರ್ಗೆ ಸಾಕಪ್ಪ ಸಾಕೋ

ಆದಿನ ಬಂದೆ ಆಫೀಸ್ ಗಣ್ಕದ್ ಕಿವಿ ಹಿಂಡ್ದೆ
ಕಿಟ್ಕಿ ತೆರೆಕೊಳ್ತು, ಮುಖದ್ಬಾಗ್ಲು ಮುಚ್ಕೊಳ್ತು
ತಟ್ದೆ, ಕಿಟ್ಕಿ ಮುಚ್ದೆ, ಎಲ್ಲ ಬಂದ್ ಹೊರಗ್ಬಂದೆ
ಮತ್ತೆ ಕಿವಿ, ಕಿಟ್ಕಿ,.. ಊಹೂಂ.. ಮುಖ ಕಾಣ್ಲಿಲ್ಲ
ತಲೆ ಕೆರ್ಕೊಂಡೆ, ಮೈಯಲ್ಲಾ ಪರಚ್ಕೊಂಡೆ..
ಅಳು ಬರೊಂಗಾಯ್ತು ನನ್ನಲ್ಲೇ ಕಿರಿಚ್ಕೊಂಡೆ

ಕಛೇರಿ ಜವಾನ ಪರಿಯೋಜನೆ ಕಡ್ತ ತಂದಿಟ್ಟ
ವಿಧಿಯಿಲ್ಲ ಸುರ್ಹಚ್ಕೊಂಡೆ ಮುಗ್ಸಿ ಕಡ್ತದ್ ಬೆಟ್ಟ
ಚಾ ಕುಡಿಯೋಕೆ ಪಕ್ಕದ್ ಛೇಂಬರ್ ಮಯೇಸ
ಎಣ್ಣೆ ಕುಡ್ದಂಗೆ ಮುಖ-ಕ್ಯಾಂಟೀನ್ಗೆ ಬತ್ತೀರಾಸಾ?
ಇದೇನಪ್ಪ ಮಯೇಸಾ, ಮುಖದಲ್ಲೇ ಮುಳಗ್ತಿದ್ದೆ

ಬಿಡಿಸಾ, ಒಸಾ ಸಾಯೇಬ ಲಾಕ್ ಮಾಡವ್ನೆ
ಮುಖ ನೋಡಿದ್ಸಾಕು ಕಡ್ತಾ ನೋಡಿ ಅಂತಾನೆ
ನೋಡಿದ್ರಲ್ಲಾ ನೀವೂನೂವೆ, ಆಫೀಸ್ಕೆಲ್ಸ ಎಲ್ಲಾ
ಮದ್ಯಾನಕ್ಕೇ ಮುಗೀತಾ ಅವೆ ಕೆಲ್ಸ, ಬಾಕಿ ಇಲ್ಲಾ
ದಿನಾ ರೇಗ್ತಿದ್ದ ನಮ್ ಸಬ್-ಬಾಸು, ಈಗ ಖುಶ್
ಮುಖ ಮನ್ಯಾಗ್ ನೊಡ್ಕೊಳ್ಳುಮಾ ಅದೇ ಭೇಶ್

Friday, March 30, 2012

ಓತಿಕ್ಯಾತಗಳು.....



ಅವ್ವಾ..ಯವ್ವಾ.. ನನ್ನವ್ವಾ
ನಿನ್ನೇ ನೋಡೋಕ್ಬಂದೆ ಯವ್ವಾ
ನೀನ್ ಅಂದ್ರೆ ನಂಗೆ ದೇವ್ರವ್ವಾ
ಹ್ಯಾಂಗಿದ್ದೀಯವ್ವಾ..?? ಮಕ್ಳೂ ಮರಿ
ಇಡೀ ದೇಸದ್ದುಸಾಬರಿ ಕಣೇ ಅವ್ವಾ
ಅದ್ಕೇಯ ನಾಕ್ ವರ್ಸ ಬರಾಕಾಗ್ನಿಲ್ಲ
ಈ ದಪ ನಾನೇ ಯೋಳ್ತೀನಿ, ನಂಗೆ
ಮಿನಿಸ್ಟ್ರ ಕೆಲ್ಸ ಬ್ಯಾಡ ಜನ್ಸೇವೆ ಮಾಡ್ತೀನಿ ಅಂತಾ
ನಮ್ಮೂರು, ನಮ್ಜಿಲ್ಲೆ ಉದ್ದಾರ, ಕಲ್ಯಾಣ
ಎಲ್ಲಾ ಮಾಡುಮಾ ಅಂತ ಇವ್ನಿ
ಈ ದಪ ನಿಮ್ಮೆಲ್ಲಾರ್ ಓಟ್ಕೊಡ್ಸೇ ಯವ್ವಾ
ಆಟು ಮಾಡಿ ನಿನ್ನೀ ಮಗನ್ನ ಅರ್ಸು ಸಾಕು
-----------೦೦೦೦---------
ಅಮ್ಮಾ, ತಾಯಿ, ಮುಕ್ಯ ಮಂತ್ರ್ಯಮ್ಮಾ
ಓದ್ದಪಾ..ಮಳೆನೇ ಇಲ್ಲ.. ಈ ದಪ ಮಳೇನೋ
ಯಾಕೇಳನೇ ಮನೆ ಮಟ ಅಸ ಕರ ಏನೂ..
ನನ್ನಮ್ಮಗ್ಳೇ ಕೊಚ್ಕೊಂಡೋದ್ಲು ಪರ್ವಾದಾಗೆ
ನಾವೋಟ್ ಕೊಟ್ಟೋರ್ ಬರ್ನೇ ಇಲ್ಲ..
ಕೇಳೇ ಯಮ್ಮಾ ನಿನಾದ್ರೂ ನಮ್ಗೋಳು...
----೦೦೦೦೦೦--------
ತಾಯವ್ವ..ಏನ್ಮಾಡನೇ ಯಮ್ಮಾ..??
ಈ ದಪ ನನ್ ಕುರ್ಚಿನೇ ಕೊಚ್ಕೊಂಡೋಯ್ತು
ಗೆಲ್ಸಿದ್ರೇ ನೀವೆಲ್ಲಾ ನಮ್ ಪಾರ್ಟಿನಾ ?..
ಈವಾಗಿರೋ ಸರ್ಕಾರ್ದೋರ್ ಕಣ್ಣಿಟ್ಟವ್ರೆ
ಮನ್ಯಾಗ್ ಸುಮ್ ಕುಂತಿದ್ರೇ ಕ್ಷೇಮ ನಮ್ಗೆ..
ಮುಂದಿನ್ಸಲ ಗೆಲ್ಸಿ ನಮ್ಮನ್ನ ..
ಆವಾಗ ನೋಡುಮಾ ಏನಾದಾದೋ...

Friday, March 23, 2012

ಕೆಲವು "ಬಾಟಮ್ ಪಂಚ್" ಗಳು


ನೋಡಿದರೆ ಒಮ್ಮೆ
ನೋಡಬೇಕೆನಿಸುವುದು
ಮತ್ತೆ ಮಗದೊಮ್ಮೆ
ಇಳಿದಂತೆ ಆಳಕ್ಕೆ
ಇಳಿಯಬೇಕೆನಿಸುವುದು
ಕಳೆದು ಹೋಗಬೇಕೆನಿಸುವುದು
ಮತ್ತೆ ಮತ್ತೂ ಆಳಕ್ಕೆ
.......ಆ ಕಣ್ಣು.......


ಇಳಿದರೆ ಸ್ವಲ್ಪ
ಗಂಟಲಿನವರೆಗೆ
ಹೆಚ್ಚಾದರೆ ಹುಚ್ಚು
ಮೆಂಟಲಿನವರೆಗೆ
...ಮದಿರೆ.....

ಪರಿಶ್ರಮ ದಿನವಿಡೀ
ಅಂಗಾಂಗ ಸೋತಿದೆ
ಆಯಾಸ ಮೈಯಿಡೀ
ಹಾಯಿ ಸಿಗುವುದು
ಕಳೆದರೆ ರಾತ್ರಿಯಿಡೀ
........ನಿದಿರೆ.......

ಕಣ್ಣುತೆರೆದಾಗ ಕಾಣದಾದೆ
ಕಣ್ಣುಮುಚ್ಚಿ ಮರೆಯದಾದೆ
ದಿನವಿಡೀ ಸುಮ್ಮನೆ ಕಾಡುವುದು
ರಾತ್ರಿಯಾದಾಗ ಮೌನ ಹಾಡುವುದು
.................ಕನಸು................


ನನ್ನ ಹೃದಯ ಪುಸ್ತಕಲ್ಲಿದ್ದ
ನವಿಲುಗರಿ ಕದ್ದಾಗ ಅವನು
ಅನಿಸಿದ್ದು – ಹೃದಯ ಚೋರ
ನನ್ನಂತೆ ಹತ್ತಾರು ಹುಡ್ಗೀರು
ಹೇಳಿ ಮಂಡಿಗೆ ತಿಂದಾಗ
ಮನಸು-ಹೃದಯ ಮುಟ್ಟಿ ಹೇಳಿತು
...........“ಹುಶಾರು”...........


ನನ್ನ ಜೀವಂತ ಕಾಡಿದಳು
ನನ್ನ ಬಾ ಅಂತ ಬೇಡಿದಳು
ವರ್ಷಗಳೇ ಕಳೆದಿವೆ.. ಈಗ
ಬರ್ತಾಳೆ ರಾತ್ರಿ, ಕಾಡ್ತಾಳೆ....
.........”ಮೋಹಿನಿ”........

Tuesday, March 13, 2012

ಸನಿಹ (ಕರವೋಕೆ)

ಸನಿಹ
(ರಿಮ್ ಝುಮ್ ಗಿರೆ ಸಾವನ್)
ಚುಮುಚುಮುಚುಮು ಛಳಿಯಲಿ
ಬಿಸಿಯುಸಿರಿರೆ ಬಳಿಯಲಿ...
ಹೇಗೆ ನಾನು ಮರೆಯಲೀ...
ಇರುತಿರೆ ನೀ ಸನಿಹದಲಿ...//ಚುಮು ಚುಮುಚುಮು//
ನಿನ ಬಳೆಯ ಕಲಕಲನಾದ
ಮುಂಗುರುಳ ಲಾಸ್ಯವಿನೋದ
ಮನದಾಳದಾಸೆಯನಿಂದು
ಮುದಗೊಳಿಸಿವೆ ಬಳಿ ಬಂದು
ಮರೆಯಾಗಿದೆ ಮುಖ ಸೆರಗಲಿ
ಮಂದಸ್ಮಿತೆ ನಗುವಲಿ
ಹೇಗೆ ನಾನು ಮರೆಯಲಿ...
ಇರುತಿರೆ ನೀ ಸನಿಹದಲಿ...//ಚುಮುಚುಮುಚುಮು//
 ಮೀಟಿದೆ ಮನವೀಣೆಯನಂದು
ನವಿರಾದ ನಿನ ಬೆರಳಲ್ಲಿ
ಮರುದನಿಸಿದೆ ಸನಿಹವು ಇಂದು
ಸುಮಧುರ ಇನಿಗಾನವು
ನಿನ ನೆನಪು ಮನದಲಿ
ಒನಪು ಸದಾ ಕಣ್ಣಲಿ
ಹೇಗೆ ನಾನು ಮರೆಯಲಿ...
ಇರುತಿರೆ ನೀ ಸನಿಹದಲಿ...//ಚುಮುಚುಮುಚುಮು//