Thursday, July 12, 2012

ಅವಳು - ಅವಳೇ....

ಅವಳು - ಅವಳೇ

ಎಂಡ್ರ್ ಮಕ್ಳ್ ಓಗೌವ್ರೆ ತೌರ್ಗೆ
ಎಣ್ ಯಾರೂ ಬರಲ್ಲ ಈ ಕಡ್ಗೆ
ಆದ್ರೂ ದೈರ್ಯ ಸರಿ ರಾತ್ರಿಗೆ
ಮೋಯಿನಿ ಬತ್ತಳೆ ಬಾಗ್ಲಿಗೆ...

... ನಾನೋ ಮಾಡಿದ್ದುಣ್ಣೋ ಮಾರಾಯಾ
ತಿಂದು ಒಗೀತೀನಿ ಪಾತ್ರೆ ಅಂಗೇಯಾ
ಕಾಯ್ತಾ ಕುಂತೆ ರಾತ್ರಿ ನೊಡ್ತಾ ಮುಸ್ರೆಯಾ
ರಾತ್ರಿಯೆಲ್ಲ ಕಾದೆ ಕಾಣ್ಲೇ ಇಲ್ಲ ಮೋಯಿನಿಯಾ

ಈವಾಗ್ ಅರ್ತ ಆಯ್ತ ಐತೆ ನನ್ನವಳ ಮಾತ್ವ
ಬೆಳಿಗ್ಗೆ ಎದ್ ಏಟ್ಗೆ ಬತ್ತಿತ್ತು ಬೋರ್ವೀಟಾ ಸತ್ವ
ಆಪೀಸ್ ಟೈಮ್ಗೆ ಬಿಸ್ಬಿಸಿ ತಿಂಡಿ ಜೊತ್ಗೆ ಕಾಪಿ
ದಿನಾಯೆಲ್ಲಾ ಗೆಲ್ವಾಗಿರ್ಲಿಂತ ಕೊಡ್ತಿದ್ ಪಪ್ಪಿ

ಏನಂದ್ರೂ ನನ್ನೆಂಡ್ರೂ ಒಂದು ಎಣ್ಣ್ ಅಲ್ವೇ
ನನ್ನೆತ್ತವಳೂ ಅವಳ್ ಜನ್ಮಕ್ಕೆ ನನ್ನಜ್ಜಿ ಅಲ್ವೇ
ಜಲ, ಗಾಳಿ, ಅನ್ನಹಣ್ಣು ಕೊಡ್ತಾಳೆ ಬೂಮಾತೆ
ನನ್ಮಗ್ಳಿಗೆ ನನ್ನೆಂಡ್ರು ಅಮ್ಮ, ನನಗೆ ನನ್ನಮ್ಮ
ಜಗ್ದಾಗಿರೋ ಎಲ್ಲ ಗಂಡಸ್ರಿಗೂ ಇದ್ದಾಳೆ ಮಾತೆ