ಚಿತ್ರ: ಗೋಪಿ (೧೯೭೦); ಗಾಯಕರು: ರಫಿ; ಸಂಗೀತ: ಕಲ್ಯಾಣ್ ಜೀ ಆನಂದ್ ಜೀ
ಸುಖ - ದುಃಖ
ಸುಖದಾ ಜೊತೆ ಎಲ್ಲಾ, ದುಃಖದಿ ಯಾರೂ ಇಲ್ಲ
ಓ ರಾಮ..ನನ್ನ ರಾಮಾ,,,ssss
ನಿನ್ನ ನಾಮವೊಂದೇ ಸತ್ಯ, ಬೇರೆಲ್ಲಾ ಮಿಥ್ಯ
II ಸುಖದಾ ಜೊತೆII
ನಿನ್ನ ನಾಮವೊಂದೇ ಸತ್ಯ, ಬೇರೆಲ್ಲಾ ಮಿಥ್ಯ
II ಸುಖದಾ ಜೊತೆII
ಜೀವನ ಬಂದು ಹೋಗೋ ಛಾಯಾ
ಮಿಥ್ಯದ ಮಾಯ ಮಿಥ್ಯದ ಕಾಯಾ ..sss
II ಜೀವನ ಬಂದುII
ಮತ್ತೇತಕೇ ಈ ಜೀವನ ಎಲ್ಲಾ
ಪಾಪದ ಕರ್ಮವ ಹೊರುವೇ...ssss
IIಮತ್ತೇತಕೇ ಈII
IIಸುಖದಾ ಜೊತೆII
ನಿನ್ನದೂ ಇಲ್ಲ ನನ್ನದೂ ಇಲ್ಲsss
ಈ ಜಗಜೋಗಿ ಮಾಯೆಯ ಬಲ್ಲ
II ನಿನ್ನದೂ ಇಲ್ಲII
ದೊರೆಯೇ ಇರಲಿ ದೀನನೇ ಆಗಲೀ..sss
ಸೇರುವರೊಮ್ಮೆ ಮಣ್ಣಿಗೆ ಎಲ್ಲಾ.ssss
II ದೊರೆಯೇ ಇರಲಿII
IIಸುಖದಾ ಜೊತೆII
ಹೊರಗಿನದೆಲ್ಲಾ ತಿಳಿಯಬೇಕಲ್ಲಾ..sss
ಒಳಗಿನದೇಕೆ ತಿಳಿಯಲೇ ಒಲ್ಲಾ..sss
IIಹೊರಗಿನದೆಲ್ಲಾII
ಹೊರಗಿನ ತನುವನು ಸಮ್ಮಾನಿಸಿದೆ..sss
ಮನಸಿನ ಕಸವ ಕಳೆಯಲಿಲ್ಲಾ..sss
IIಹೊರಗಿನದೆಲ್ಲಾII
ಓ ರಾಮ..ನನ್ನ ರಾಮಾ,,,ssss II ಸುಖದಾ ಜೊತೆII
ಆಜಾದೂ....
ReplyDeleteತುಂಬಾ ಚೆನ್ನಾಗಿ ಮೂಡಿ ಬಂದಿದೆ....
ಭಕ್ತಿ... ಆಧ್ಯಾತ್ಮಗಳ ಸಮ್ಮಿಲನ...
ಅದು ಹೇಗೆ ಅಷ್ಟು ಪ್ರಾಸ ಬದ್ಧವಾಗಿ ಹೆಣೆಯುತ್ತೀಯೋ ಆ ದೇವರಿಗೆ ಗೊತ್ತು... !
ಜೈ ಹೋ ಗೆಳೆಯಾ....
ಜಲನಯನ,
ReplyDeleteಇದು ಅನುವಾದ ಎನ್ನಿಸದೇ ಮೂಲಗೀತೆ ಎಂದೇ ಅನ್ನಿಸುತ್ತದೆ. ಉತ್ತಮ ರಚನೆ.
ವಾಹ್..!! ತುಂಬಾ ಚೆನ್ನಾಗಿದೆ
ReplyDeleteಒಂದು ಒಳ್ಳೆಯ ಹಾಡನ್ನು ಕೇಳಿಸುವುದರೊಂದಿಗೆ ಉತ್ತಮ ಕನ್ನಡ ಅನುವಾದವನ್ನೂ ನೀಡುತ್ತಿದ್ದೀರಿ.ಅಭಿನಂದನೆಗಳು
ReplyDeleteಅನುವಾದದ ಜೊತೆಗೆ ಸೊಗಸಾದ ಹಾಡು ಕೇಳಿಸಿದ್ದೀರಿ...ತುಂಬಾ ಧನ್ಯವಾದಗಳು ಅಜಾದ್..
ReplyDeleteಪ್ರಕಾಶೂ ಧನ್ಯವಾದ....
ReplyDeleteಸುನಾಥಣ್ಣ...ನಿಮ್ಮ ಹಾರೈಕೆ ಹೀಗೇ ಇರಲಿ...
ReplyDeleteಸುಗುಣ...ಈ ಮಧ್ಯೆ ಬ್ಲಾಗುಗಳು ಬಣಗುಡ್ತಾ ಇವೆ... ಅಲ್ವಾ..??
ReplyDeleteಮಂಜುಳಾ ಮೇಡಮ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ReplyDeleteಶಿವು ಧನ್ಯವಾದ ನಿಮ್ಮ ಅಭಿಮತಕ್ಕೆ...
ReplyDelete