Friday, March 30, 2012

ಓತಿಕ್ಯಾತಗಳು.....



ಅವ್ವಾ..ಯವ್ವಾ.. ನನ್ನವ್ವಾ
ನಿನ್ನೇ ನೋಡೋಕ್ಬಂದೆ ಯವ್ವಾ
ನೀನ್ ಅಂದ್ರೆ ನಂಗೆ ದೇವ್ರವ್ವಾ
ಹ್ಯಾಂಗಿದ್ದೀಯವ್ವಾ..?? ಮಕ್ಳೂ ಮರಿ
ಇಡೀ ದೇಸದ್ದುಸಾಬರಿ ಕಣೇ ಅವ್ವಾ
ಅದ್ಕೇಯ ನಾಕ್ ವರ್ಸ ಬರಾಕಾಗ್ನಿಲ್ಲ
ಈ ದಪ ನಾನೇ ಯೋಳ್ತೀನಿ, ನಂಗೆ
ಮಿನಿಸ್ಟ್ರ ಕೆಲ್ಸ ಬ್ಯಾಡ ಜನ್ಸೇವೆ ಮಾಡ್ತೀನಿ ಅಂತಾ
ನಮ್ಮೂರು, ನಮ್ಜಿಲ್ಲೆ ಉದ್ದಾರ, ಕಲ್ಯಾಣ
ಎಲ್ಲಾ ಮಾಡುಮಾ ಅಂತ ಇವ್ನಿ
ಈ ದಪ ನಿಮ್ಮೆಲ್ಲಾರ್ ಓಟ್ಕೊಡ್ಸೇ ಯವ್ವಾ
ಆಟು ಮಾಡಿ ನಿನ್ನೀ ಮಗನ್ನ ಅರ್ಸು ಸಾಕು
-----------೦೦೦೦---------
ಅಮ್ಮಾ, ತಾಯಿ, ಮುಕ್ಯ ಮಂತ್ರ್ಯಮ್ಮಾ
ಓದ್ದಪಾ..ಮಳೆನೇ ಇಲ್ಲ.. ಈ ದಪ ಮಳೇನೋ
ಯಾಕೇಳನೇ ಮನೆ ಮಟ ಅಸ ಕರ ಏನೂ..
ನನ್ನಮ್ಮಗ್ಳೇ ಕೊಚ್ಕೊಂಡೋದ್ಲು ಪರ್ವಾದಾಗೆ
ನಾವೋಟ್ ಕೊಟ್ಟೋರ್ ಬರ್ನೇ ಇಲ್ಲ..
ಕೇಳೇ ಯಮ್ಮಾ ನಿನಾದ್ರೂ ನಮ್ಗೋಳು...
----೦೦೦೦೦೦--------
ತಾಯವ್ವ..ಏನ್ಮಾಡನೇ ಯಮ್ಮಾ..??
ಈ ದಪ ನನ್ ಕುರ್ಚಿನೇ ಕೊಚ್ಕೊಂಡೋಯ್ತು
ಗೆಲ್ಸಿದ್ರೇ ನೀವೆಲ್ಲಾ ನಮ್ ಪಾರ್ಟಿನಾ ?..
ಈವಾಗಿರೋ ಸರ್ಕಾರ್ದೋರ್ ಕಣ್ಣಿಟ್ಟವ್ರೆ
ಮನ್ಯಾಗ್ ಸುಮ್ ಕುಂತಿದ್ರೇ ಕ್ಷೇಮ ನಮ್ಗೆ..
ಮುಂದಿನ್ಸಲ ಗೆಲ್ಸಿ ನಮ್ಮನ್ನ ..
ಆವಾಗ ನೋಡುಮಾ ಏನಾದಾದೋ...

9 comments:

  1. ಫೇಸ್ಬುಕ್ ಗೆಳತಿ...ಆರತಿಯವರು (Arathi Ghatikar) ಕಾಮೆಂಟ್ ಹಾಕಲು ಪ್ರಯತ್ನಿಸಿ ಆಗದೇ ಇದ್ದುದಕ್ಕೆ ನಾನೇ ಅವರು ಕಳುಹಿಸಿದ ಪ್ರತಿಕ್ರಿಯೆ ಪ್ರಕಟಿಸುತ್ತಿದ್ದೇನೆ. ಅವರು ಬ್ಲಾಗ್ ಮಾಡಿಲ್ಲ....ಸದ್ಯದಲ್ಲೇ ಮಾಡುವವರಿದ್ದಾರೆ.

    ಅವರ ಪ್ರತಿಕ್ರಿಯೆ:

    ಹಾಹ ! ಈ ವೋಟಿಗಾಗಿ ರಾಜಕಾರಣಿಗಳು , ಎಷ್ತೆಸ್ತು ಸೋಗು ಹಾಕಿ , ನಂತರ ಪದವಿ ಸಿಕ್ಕಮೇಲೆ ಕಣ್ ಮರೆಯಾಗಿ ಹೋಗುವುರು , ಇದನ್ನು ಕವನಲ್ಲಿ ಚನ್ನಾಗಿ ಬಿಂಬಿಸಿದ್ದೀರ ಚನ್ನಾಗಿದೆ ನಿಮ್ಮ ಕವನ !!

    ReplyDelete
  2. ಮೂರೂ ವಿಭಿನ್ನ ಮನಸ್ಥಿತಿ ಕಟ್ಟಿಕೊಟ್ಟ ಚರಣಗಳು. ಪ್ರಸಕ್ತ ರಾಜಕಾರಣ, ಹಳ್ಳಿಗಾಡಿನ ಕಡು ಬಡತನ ಎರಡನ್ನೂ ಸಮಸ್ಟಿಯಾಗಿ ಚಿತ್ರಿಸಿಕೊಟ್ಟಿದ್ದೀರ!

    ನೀವು ಚಿತ್ರಕಾರನ ಮನಸ್ಥಿತಿಯ ಕವಿ.

    ಸಲಾಂ... ಸಲಾಂ...

    ReplyDelete
  3. ಹ್ಹ ಹ್ಹ ಹ್ಹಾ! ಮಂತ್ರಿಯ, ಮುಖ್ಯಮಂತ್ರಿಯ ಮಾತು ಕೇಳಿ ನಗು ಬಂದರೆ... ಪಾಪ ಮುದುಕಿಯ ಮಾತು ಕೇಳಿ ಮರುಕ ಹುಟ್ಟಿತು!

    ನಿಮ್ಮ ಹಳ್ಳಿ ಭಾಷೆಯ ಪದಗಳು ಬಹಳ ಇಷ್ಟವಾಯಿತು... ಭಾಷಾ ಸೊಗಡು ಮನ ಸೆಳೆಯಿತು!

    ReplyDelete
  4. ಹೂಂ! ಶಾಲಿನಲ್ಲಿ ಸುತ್ತಿ ಹೊಡೆದಿದ್ದೀರಲ್ರೀ!!

    ReplyDelete
  5. ಬದರಿ ಧನ್ಯವಾದ...ನಿಮ್ಮ ಬ್ಲಾಗಿನ ಚಿತ್ರ ನೋಡಿ ಹೀಗನ್ನಿಸಿದ್ದು...ಅದಕ್ಕೆ ಈ ಪ್ರಯತ್ನ...

    ReplyDelete
  6. This comment has been removed by the author.

    ReplyDelete
  7. ಧನ್ಯವಾದ ಪ್ರದೀಪ್ ...

    ReplyDelete
  8. ಆಹಾ ಆಜಾದ್ ಸರ್ :) ಖುಷಿಯಾಯ್ತು ಓದಿ :) ಚೆನ್ನಾಗಿದೆ..

    ReplyDelete
  9. ಧನ್ಯವಾದ ಈಶ್ವರ್ ...

    ReplyDelete