ಗುರುದತ್ ರವರ "ಪ್ಯಾಸಾ" ಚಿತ್ರದ ಈ ಜಾನಿವಾಕರ್ ಹಾಡು ನನಗೆ ಬಹಳ ಇಷ್ಟವಾದದ್ದು..ಅದೇ ರಫ್ಹಿ ಕಂಠಸಿರಿಯಲ್ಲಿ....
ಮಾಲಿಸ್ ಎಣ್ಣೆ ಮಾಲಿಸ್...
(ಪ್ಯಾಸಾ ಚಿತ್ರದ ಗೀತೆ... ಗಾಯಕ: ಮೊಹಮ್ಮದ ರಫಿ)
ಮಾಲಿಸ್ ಎಣ್ಣೆ ಮಾಲಿಸ್.....ಮಾಲಿಸ್ ಎಣ್ಣೆ ಮಾಲಿಸ್....ಚಂಪೀ ssss
ತಲೆ ಗಿಲೆ ತಿರ್ಗ್ತಾ ಐತಾ, ಇಲ್ಲ ಮನಸು ಮುರ್ದೇ ಓಯ್ತಾ..sss
ಬಾರೋ ತಮ್ಮ ಹತ್ತಿರ ನಮ್ಮ, ಯಾಕೆ ಗಾಬರಿ ss..ಯಾಕೆ ಗಾಬರೀsss
ಮಾಲೀಸ್ ಎಣ್ಣೆ ಮಾಲೀಸ್...
II ತಲೆ ಗಿಲೆ ತಿರ್ಗ್ತಾ ಐತಾ,......II ಪ II
ಎಣ್ಣೆ ನಂದು ಮಸ್ಕಿ, ಅನ್ಬೇಕು ಅರೆ ಇಸ್ಕಿ
ತಲೆ ಮ್ಯಾಲೆ ಸವ್ರಿದ್ರೆ ಸಾಕು ನೋಡಿ ತಿಂದಂಗೆ ನೀವು ರಸ್ಕಿ II 2II
ನಿಲ್ಲು ನಿಲ್ಲು ನಿಲ್ಲು ಅರೆ ತಮ್ಮ ನಿಲ್ಲು
ಈ ಚಂಪೀಲಿದೆ ಎಂಥ ನೋಡೂ ಗುಲ್ಲು II 2 II
ಲಕ್ಷ ಕೊಟ್ಟರೂ ಸಿಕ್ಕೋದಿಲ್ಲ ಮಾಡು ಒಮ್ಮೆ ದಿಲ್ಲು.sss
ಯಾಕೆ ಗಾಬರೀ ss ಯಾಕೆ ಗಾಬರೀss
IIತಲೆ ಗಿಲೆ ತಿರ್ಗ್ತಾ ಐತಾ,......II ಪ II
ಪ್ರೀತಿ ಪ್ರೇಮದ ಇರಸಾ, ಅಲ್ಲಾ ಯಾಪಾರ್ದಾಗೆ ಲಾಸಾ
ಬಿದ್ದರೆ ಎಣ್ಣೆ, ಎಲ್ಲವೂ ಮಾಯ, ಮಾಡಿದರೆ ಮಾಲೀಸಾ..ss..II 2 II
ನಿಲ್ಲು ನಿಲ್ಲು ನಿಲ್ಲು ಅರೆ ಬಾಬ ನಿಲ್ಲು
ಈ ಚಂಪೀಲಿದೆ ಎಂಥ ನೋಡೂ ಗುಲ್ಲುII 2 II
ಲಕ್ಷ ಕೊಟ್ಟರೂ ಸಿಕ್ಕೋದಿಲ್ಲ, ಮಾಡು ಒಮ್ಮೆ ದಿಲ್ಲು..sss
ಯಾಕೆ ಗಾಬರೀ ss ಯಾಕೆ ಗಾಬರೀss
IIತಲೆ ಗಿಲೆ ತಿರ್ಗ್ತಾ ಐತಾ,......II ಪ II
ನೌಕರನಾಗಲಿ ಮಾಲೀಕ, ಪ್ರಜೆಯೇ ಆಗಲಿ ನಾಯಕ
ನನ್ಮುಂದೆ ತಲೆ ಬಗ್ಗಿಸ್ತಾರೆ, ರಾಜನೇ ಆಗಲಿ ಸೈನಿಕ..II 2 II
ನಿಲ್ಲು ನಿಲ್ಲು ನಿಲ್ಲು ಅರೆ ರಾಜ ನಿಲ್ಲು
ಈ ಚಂಪೀಲಿದೆ ಎಂಥ ನೋಡೂ ಗುಲ್ಲು..II 2 II
ಲಕ್ಷ ಕೊಟ್ಟರೂ ಸಿಕ್ಕೋದಿಲ್ಲ ಮಾಡು ಒಮ್ಮೆ ದಿಲ್ಲು..sss
ಯಾಕೆ ಗಾಬರೀ, ss ಯಾಕೆ ಗಾಬರೀss
IIತಲೆ ಗಿಲೆ ತಿರ್ಗ್ತಾ ಐತಾ,......II ಪ II
ಆಜಾದ್ ಭಾಯ್;ಇದು ನನ್ನ ಫೇವರೇಟ್ ಹಾಡು.ಇದು ಹೀಗೆ ಶುರು ಆದರೆ ಚೆಂದ ಅನಿಸುತ್ತದೆ;
ReplyDelete"ತಲೆಗಿಲೆ ತಿರ್ಗ್ತಾ ಐತಾ?ಇಲ್ಲಾ,ಮನ್ಸೇ ಮುರ್ದು ಓಯ್ತಾ?".ಅರ್ಥ ಮತ್ತು ಪ್ರಾಸ ಸರಿಯಾಗಿ ಹೊಂದುತ್ತೆ.ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.
ಡಾಕ್ಟ್ರೇ...ನಿಮ್ಮ ಅನಿಸಿಕೆಗಾಗೇ ಕಾಯ್ತಿದ್ದೆ...ಇದೋ...ಬದಲಾಯಿಸ್ತಿದ್ದೇನೆ ಈಗಲೇ...ಧನ್ಯವಾದ...
Deleteಆಜಾದೂ...
ReplyDeleteಈ ಹಾಡನ್ನು ನಾನು ಮತ್ತು ನಾಗು ಕಾಲೇಜಿನಲ್ಲಿ ಕಾರ್ಯಕ್ರಮವೊಂದರಲ್ಲಿ ಅಭಿನಯಿಸಿದ್ದೆವು..
ತುಂಬಾ ಇಷ್ಟದ ಹಾಡು.. ಆಗಾಗ ಗುನುಗಿಕೊಳ್ಳುತ್ತಾ ಇರ್ತೇನೆ...
ತುಂಬಾ ಚೆನ್ನಾಗಿ ಕನ್ನಡೀಕೃತವಾಗಿದೆ...
ಬಹುಷಃ ಇನ್ನು ಮುಂದೆ ಈ ಹಾಡನ್ನೇ ಗುನುಗುತ್ತೇನೆ.. ಬಹಳ ಇಷ್ಟವಾಯಿತು.. ಜೈ ಹೋ !
ಡಾಕುಟ್ರು ಒಂದು ಒಳ್ಲೆ ಸಜೆಸನ್ ಕೊಟ್ರು ಕನ್ತಮ್ಮಾ ಅದನ್ನ ಹಾಕಿವ್ನಿ ನೋಡು...ಟ್ಯಾಂಕೂ ನಿನ್ನ ಬೆನ್ತಟ್ಟೋ ಕೆಲ್ಸಕ್ಕೆ...ಊಂ...
Deleteಹಾ ಹಾ ಹಾ..ನಾನು ಅಕ್ಕ ಇದನ್ನು ಕನ್ನಡದಲ್ಲೇ ಹಾಡಿದ್ವಿ..ಥ್ಯಾಂಕ್ಯು
ReplyDelete:-)
ಮಾಲತಿ ಎಸ್
ನಿಮ್ಮ ಅಕ್ಕಾನಾ...ಯಾರದು...? ಹಾಡಿ ಹಾಡಿ...ಸ್ವಲ್ಪ ಚೇಂಜ್ ಮಾಡಿದ್ದೀನಿ ಮೊದಲ ಲೈನ್...(ಪಲ್ಲವಿ) ಟ್ಯಾಂಕೂ..
Deleteಜಲನಯನ,
ReplyDeleteನಮ್ಮ ಇಷ್ಟದ ಹಿಂದೀ ಹಾಡುಗಳನ್ನು ನೀವು ಹೀಗೇ dubbing ಮಾಡಿ ಕೊಡ್ತಾ ಇರೋದು, ನಮಗೆ ಖುಶಿಯ ಸಂಗತಿ. Please carry on.
ಧನ್ಯವಾದ ಸುನಾಥಣ್ಣ... ನಿಮಗೆ ಬೇಜಾರು ಆದಾಗ ನಿಲ್ಲಿಸ್ತೇನೆ,
ReplyDeleteನಾನು ಮೆಚ್ಚಿದ ಕೆಲವು ಹಾಡುಗಳಲ್ಲಿ ಇದೂ ಒಂದು. ಅನುವಾದ ಚೆನ್ನಾಗಿದೆ.
ReplyDeleteಧನ್ಯವಾದ ಮಂಜುಳಾ ಮೇಡಂ...
ReplyDeleteಸಖತ್ತಾಗಿದೆ ಆಜಾದ್ ಭಾಯ್.. ಭಾವಾನುವಾದ ಅದೇ ರಾಗದಲ್ಲಿ ಚೆನ್ನಾಗಿ ಮೂಡಿದೆ :-)
ReplyDeleteprashasti.ಧನ್ಯವಾದ ಪ್ರಶಸ್ತಿ ಸಿಕ್ಕಷ್ಟು ಖುಷಿ ಆಯ್ತು
Delete