Monday, October 31, 2011

ನಮ್ಲೋಕ


ಚಿತ್ರ: ದಿಗ್ವಾಸ್ ಹೆಗಡೆನಮ್ಲೋಕ

ಕಣ್ಣ ಮುಚ್ಚಿ ಕುಂತಿನಿ
ಯಾಕೋ ಆಮ್ಯಾಲೆ ಹೇಳ್ತೀನಿ
ಆಡಾಕ್ಬಂದ್ರೆ ನಂನ್ಗುಟ್ಟು
ನಾ ನಿನ್ಜೊತೆ ಹಂಚ್ಕಾತೀನಿ

ಅಪ್ಪಾ ಕೊಟ್ಟ ಐದ್ರುಪಾಯ್
ಕೊಂಡ್ಕೊಳ್ಳಾಕೆ ಕಳ್ಳೆಕಾಯ್
ಇಬ್ರೂ ಕುಂತ್ಕಂಡ್ ತಿನ್ನಾಣಾ
ತಿನ್ನೋದ್ಚಂದ ಪುಟ್ಪುಟ್ಬಾಯ್

ಕಣ್ಣಾಮುಚ್ಚೆ ಕಾಡೆ ಗೂಡೆ
ಅವ್ಳೂ ಬಂದ್ಲು ಆಡಾಕ್ನೋಡೇ
ಪುಟ್ಲಂಗ ಆಕೊಂಡ್ ಪುಟ್ನಂಜಿ
ಅಮ್ಮ ಕೊಡ್ತಾಳೆ ಸೀರುಂಡೆ

ಸಂಜೆಗಂಟ ಆಡೋಣಾ
ಜಗ್ಲಿ ಅತ್ಕೊಂಡ್ ಕೂರೋಣಾ
ಕುಂಟಾಬಿಲ್ಲೆ ಚೌಕಾಬಾರಾ
ನಮ್ನಮ್ ಮನೀಗೋಗೋಣಾ

ಮಕ್ಳೂ ನಾವ್ ನಮ್ದೇ ಲೋಕ
ಕಪ್ಟ ವಂಚ್ನೆ ಇದ್ಯಾವ್ಲೋಕ
ಅವ್ರಿಗ್ ನಾನು ನನ್ಗೆ ಅವ್ರು
ಕಲಿಯಾಕ್ನಿಮ್ಗೆ ಬ್ಯಾರೆ ಬೇಕಾ?

Tuesday, October 25, 2011

ಔರ್- ಕಹೇಂ- ಆಪ್ ಸುನೋ


 ऎक् कहानी

किसी नॆ कहा लॆ लॊ ऎह् दौलत् ऎह् शॊह्रत्
भलॆ ही छीन् लो मुझ् सॆ मेरी ऎह् जवानी
अरॆ भाय् कौन् कंबख्त् लेगा तुम्हारी जवानी
हम खुद् हैरान् है...क्यू नहीं कोयी कॆह्ता
मै बीता कल् नहीं बस्  वह् थी ऎक् कहानि

ಎಕ್ ಕಹಾನೀ

ಕಿಸೀ ನೆ ಕಹಾ ಲೆ ಲೊ ಎಹ್ ದೌಲತ್ ಎಹ್ ಶೊಹ್ರತ್
ಭಲೆ ಹೀ ಛೀನ್ ಲೋ ಮುಝ್ ಸೆ ಮೇರೀ ಎಹ್ ಜವಾನೀ,
ಅರೆ ಭಾಯ್ ಕೌನ್ ಕಂಬಖ್ತ್ ಲೇಗಾ ತುಮ್ಹಾರೀ ಜವಾನೀ?
ಹಂ ಖುದ್ ಹೈರಾನ್ ಹೈಂ...ಕ್ಯೂ ನಹೀಂ ಕೋಯೀ ಕೆಹ್ತಾ
ಮೈ ಬೀತಾ ಕಲ್ ನಹೀಂ, ಬಸ್  ವಹ್ ಥೀ ಎಕ್ ಕಹಾನಿ

पागल
हम पागल थे उस्के पीछे इस कदर
खाना पीना भी छूटा हो गये बेखबर
आखिर एक दिन जनाज़ा हमारा निकला
उस्के पीछॆ दॊस्त दुश्मन सारा जहां निकला
मगर वह न निकली जिस्के लिये मेरा जनाज़ा निकला

ಪಾಗಲ್
ಹಮ್ ಪಾಗಲ್ ಥೇ ಉಸ್ಕೇ ಪೀಛೇ ಇಸ್ ಕದರ್
ಖಾನಾ ಪೀನಾ ಭೀ ಛೂಟಾ ಹೋ ಗಯೇ ಬೇಖಬರ್
ಆಖಿರ್ ಏಕ ದಿನ್ ಜನಾಜ಼ಾ ಹಮಾರಾ ನಿಕಲಾ
ಉಸ್ಕೇ ಪೀಛೆ ದೊಸ್ತ್ ದುಶ್ಮನ್ ಸಾರಾ ಜಹಾಂ ನಿಕಲಾ
ಮಗರ್ ವಹ್ ನ ನಿಕಲೀ ಜಿಸ್ಕೇ ಲಿಯೇ ಮೇರಾ ಜನಾಜ಼ಾ ನಿಕಲಾ

तोड्- मोड्
जॊड् चुकॆ दिल् तुम्सॆ..
हिम्मत् हो तॊ तोड् कॆ देखो....
मोड् चुकॆ राह् जीनॆ की...
हिम्मत् हो तॊ साथ् छोड् कॆ दॆखो

ತೋಡ್-ಮೋಡ್
ಜೊಡ್ ಚುಕೆ ದಿಲ್ ತುಮ್ಸೆ..
ಹಿಮ್ಮತ್ ಹೋ ತೊ ತೋಡ್ ಕೆ ದೇಖೋ....
ಮೋಡ್ ಚುಕೆ ರಾಹ್ ಜೀನೆ ಕೀ...
ಹಿಮ್ಮತ್ ಹೋ ತೊ ಸಾಥ್ ಛೋಡ್ ಕೆ ದೆಖೋ

Friday, October 14, 2011

ಪಾರೂ..ಹೋಗೋಣ್ವಾ ರೈಡ್ ಒಂದ್ಚೂರು....???.

 ಚಿತ್ರ ಕೃಪೆ: http://www.facebook.com/dharamjagran

ಬಸ್ವನ್ ಮ್ಯಾಲೆ ಕುಂತೂ ಕುಂತೂ ಬೋರಾಗೈತೆ
ಬೆನ್ಕ ಆ ಪಿಳ್ಳಾರಿ ಎಗ್ಣದ್ ಮ್ಯಾಲೆ ..
ನಿನೂ ಉಲಿ, ಸಿಮ್ಮ ಅಂತ ಬ್ಯಾಸ್ರ ಮಾಡ್ಕಂಡಿದ್ದೀಯಾ
ಬಾ ಆತ್ತಾಗೆ ..ಪಾರೂ ಓಗ್ಬರ್ಮಾ ಒಂದ್ ರೌಂಡು..

ಆ ಬಸ್ವ ತಿಂದೂ ತಿಂದೂ ಲದ್ದಿ ಆಕ್ತಾನೆ
ಇವ್ನ ಎಗ್ಣ..ಊನಿ ಕಾಣ್ದೇಟ್ಗೇ ಇವ್ನ ಬೀಳ್ಸಿ ಓಡೋಗ್ತದೆ..
ಇನ್ನ ನಿನ್ನ ಉಲಿ ಸಿಮ್ಗೋಳು..ದುಬಾರಿ ಆಗವೆ
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ಈ ಡಮ್ರು, ಈ ಬೂದಿ, ಎಣ್ಗೋಳ್..ಆಮ್ಯಾಕೆ ಗೋಳು..
ಅಲ್ಲಿ ಪೂಜೆ ಇಲ್ಲಿ ಪೂಜೆ..ಅಗ್ರ ಪೂಜೆ ..ಗಣೇಸ್ನ ಗೋಳು
ಸಕ್ತಿ, ಓಂಕಾಳಿ, ಆ ಓಮ, ಈ ಯಗ್ನ,,,ನಿನ್ ಬಾಳು..
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ಪೋಲಿಸಪ್ಪ್ ಇಡ್ದಿರೋ ಬೈಕಂತೆ ಇದು ..ಓಗ್ಬಾ ಸಿವಾ ಅಂದ...
ಅದ್ರ ಯಜಮಾನನ್ತಾವ್ ಇವ್ನ್ಯಾರೋ ಕದ್ದಂದಂತೆ..
ಅದೇನೋ ..ಪೆಟ್ರೋಲು ಅನ್ನೋದು    ಟ್ಯಾಂಕು ತುಂಬೈತಂತೆ..
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ನಮ್ಕೆಂಪೇಗೌಡ್ರೂರು ಬೋ ಬೆಳ್ದೈದಂತೆ ಉದ್ದಗ್ಲಕ್ಕೆ
ಕನ್ನಡ ಕಮ್ಮಿ ಎನ್ನಡ. ಎವಿಡಾ ಎಕ್ಕಡ ಜಾಸ್ತಿ ಅಂತೆ
ಫೋರಮ್ಮು, ಮಾಲು, ಐಟಿ, ಬಿಟಿ, ಕಾಲ್ಸೆಂಟ್ರಂತೆ
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ನನ್ನ ಇರೂಪಾಕ್ಸ ಅಂತಿದ್ದ ಪ್ರದೇಸ್ದಾಗೆ ಗಣಿ- ಧೂಳೆದ್ದೈತಂತೆ
ಭೂಮಿನ ಪರ್ದೇಸಕ್ಕೆ ಮಾರಿ ಧಣಿಗಳಾಗಿ ಜನ ಕುಂತೌವ್ರಂತೆ
ಅನ್ನ ಕೊಡೋ ರೈತರ್ಗೆ ಆಕಿ ಪಂಗ್ನಾಮ ಎಮ್ಮೆನ್ಸಿ ಬತ್ತೈತಂತೆ
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ಸಿವಾ ಸಿವಾ ಅಂತಾನೆ ಬುಡಕ್ಕೇ ತತ್ತಾರೆ.. ಇವರ್ವಿಸ್ಯ ತಿಳ್ಕಾಬೇಕು
ಗಣೇಶನ್ಹೆಸರಾಗೆ ದುಡ್ಡು, ಕೆರೆ ಕೊಳ್ಳ ಇಶ ಆಗೋ ಬಣ್ಣ ತುಂಬ್ತಾರಂತೆ
ಮಾಟ ಮಂತ್ರ..ಸಕ್ತಿ ತಾಯ್ತಾ, ಮಾರಿಗೆ ಕುರಿ ಕೋಳಿ ಬಲಿಕೊಡ್ತಾರಂತೆ
ಇದ್ಯಲ್ಲಾವೇ ಸರಿ ಮಾಡಾಕೆ ನಾವೇ ಪ್ರತ್ಯಕ್ಸ ನೋಡ್ಮಾ ಅದೇನಿದ್ದಾದು
ಅದಕ್ಮುಂಚೆ, ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

Monday, October 10, 2011

ನಂಗೊತ್ತಿಲ್ಲ ಮಗು.....ನಿಜವಾಗ್ಲೂ ಗೊತ್ತಿಲ್ಲ ಮಗು
ಅಪ್ಪಾ...
ಏನ್ಮಗಾ..
ಸೂರ್ಯ ಬೆಳಕ್ಕೊಡ್ತಾನಲ್ವಾ?
ಹೌದ್ಕಣ್ಮಗಾ..ಲಕ್ಷಾಂತರ ವರ್ಷಗಳಿಂದ
ಮತ್ತೆ ಕತ್ತಲಾಗ್ತದೆ?
ಅದು ಭೂಮಿ ತಿರ್ಗೋದ್ರಿಂದ
ಮತ್ತೆ ಸರ್ಕಾರಾನೂ ತಿರುಗ್ತದಾ?
ಅದ್ಯಾಕ್ಮಗಾ ಅಂಗ್ ಕೇಳೀಯಾ?
ಮತ್ತೆ ಬೆಂಗ್ಳೂರ್ಗೆ ಒಂದ್ಗಂಟೆ ಕತ್ಲಂತೆ
ಬ್ಯಾರೆ ಪಟ್ನಕ್ಕೆ ಎರ್ಡೋ ಮೂರೋ ಅಂತೆ
ನಮ್ ಅಳ್ಳಿನಾಗೆ ಏನಿಲ್ಲಂದ್ರೂ ಆರ್ಗಂಟೆನಂತೆ..
ಇದ್ಯಾಕಪ್ಪಾ? ಇಂಗೇ??
ನಂಗೊತ್ತಿಲ್ಮಗಾ

ಅಪ್ಪಾ...
ಇನ್ನೇನ್ಲಾ ಮಗಾ?
ಕಲ್ಲಿದ್ಲಿರೋದು ಆಂದ್ರದೊಳ್ಗೇನಾ?
ಇಲ್ಲ ಮಗ ಬ್ಯಾರೆ ಕಡೆನೂ ಸಿಗ್ತೈತೆ..
ಮತ್ತೆ ಕರೆಂಟು ಉತ್ಪಾದ್ನೇಗೆ ಅದೊಂದೇಯಾ ಮಾರ್ಗ?
ಇಲ್ಕಣ್ಮಗಾ ಇನ್ನೂ ಅವೆ ಮಾರ್ಗ
ಇದನ್ನ ಸರ್ಕಾರಕ್ಕೆ ತಿಳ್ಸಿಕೊಡೂರು ಇಲ್ವಾ? ಅಂಗಾರೆ...
ನಿಜವಾಗ್ಲೂ ಈ ಇಸ್ಯ ನಂಗೊತ್ತಿಲ್ಲ ಮಗು

Wednesday, October 5, 2011

ಗೆಳೆಯ ಶಿವುರವರ ಸೊಗಸಾದ ಛಾಯಾಚಿತ್ರಕ್ಕೆ ನನ್ನ ಕವನ


ನಿಸರ್ಗದ ನಿಯಮ

ಹಕ್ಕಿನಾನು ಪತಂಗ ನೀನು

ಸಿಕ್ಕಿ ಬಿದ್ದಾಯ್ತು, ಹೆಕ್ಕಿ ಹಿಡಿದಾಯ್ತು

ಎಲ್ಲಿಗೆ ಹೋಗ್ತೀಯಾ ತಪ್ಪಿಸ್ಕೊಂಡು?

ಗೂಡು ಕಟ್ಟಿಯಾಯ್ತು

ಮಾಡು ಗಟ್ಟಿಯಾಯ್ತು

ಮೊಟ್ಟೆಯೊಡೆದೈತೆ ಮರಿಯಾಗೈತೆ

ಹಸ್ದಿವೆ ಕೂಸ್ಗಳು ಅವಕ್ಕೇನ್ಕೊಡ್ಲಿ?

ಖುಷಿಯಾಗಿಟ್ಟಿದ್ದೆ ಹತ್ಮೊಟ್ಟೆ

ಎರಡ್ಸೇರಿದ್ವು ಪಾಪಿ ನಾಗಣ್ಣನ್ಹೊಟ್ಟೆ

ಒಡೆದು ಹೊರ್ಬಂದಿದ್ದು ಆರು

ಗೂಬೆ ಗಿಡ್ಗನ್ ಪಾಲ್ಗೆ ಮೂರು

ಬಿಡ್ಲಾ ನಿನ್ನ ? ನಂದೂ ಒಡೆದೈತೆ ಸಹನೆ ಕಟ್ಟೆ

ನಂಗೂ ಮನ್ಸಿಲ್ಲ ನಿನ್ನ ಕೊಲ್ಲೋಕೆ

ರಂಗು ರಂಗಿನ ಪತಂಗ ನೋಡೋಕೆ

ನಿಂಗೂ ಹಕ್ಕೈತೆ ನಿನ್ ಮಕ್ಳ ಜೊತೆ ಬಾಳೋಕೆ

ಮುಗದೈತಲ್ಲ ನಿನ್ಕರ್ತವ್ಯ ಪರಿಸರ್ದಾಗೆ

ಬಿಟ್ಟೆ ಎಲೆಮೇಲೆ ಮುತ್ತಿನಂಥಾ ಸವ್ರಾರು ಮೊಟ್ಟೆ

ನನ್ಕತೆನೂ ಮುಗೀತದೆ ನೋಡಿದ್ರೆ ಮಾರ್ಜಾಲ

ಅದರ್ಕೈಲಿ ತಪ್ಪಿಸ್ಕೊಂಡ್ರೆ ಆಗ್ತೀನಿ ನರಿ ಪಾಲ

ಈ ನಿಸರ್ಗದ್ನಿಯ್ಮಾನೇ ಹಿಂಗೆ ಅವೂ ಸಿಕ್ಬೀಳ್ತವೆ

ಹಾಸಿದ್ರೆ ಬೇಟೆಗಾರ ಮಾಯಾಜಾಲ

ಅವನೂ ಉಳಿಯೊಲ್ಲ ಕಾಣದ್ರೋಗ, ಸುನಾಮಿ ಕೈಗೆ ಸಿಕ್ರೆ

ಇದೆಲ್ಲಾ ನಿಯಮಾ ಸೂತ್ರದಾರನ್ನಾಟ್ಕದ್ದು

ಖುಷಿ ಪಡು ಆಯ್ತು ನಿನ್ ಜನ್ಮಾನೂ ಸಾರ್ಥಕ

ಧನ್ಯ ನೀನು ಅಹಾರಾಗ್ತಿದ್ದೀಯಾ ಸೇರಿ ಯಾರ್ದೋ ಹೊಟ್ಟೆ.