Monday, September 8, 2014

ಚಂದ್ರನ ನಾನು ಕದ್ದಿರುವೆ

ಚಂದ್ರನ ನಾನು ಕದ್ದಿರುವೆ

ಚಂದ್ರನ ನಾನು ಕದ್ದಿರುವೆ,
ಚಂದ್ರನ ನಾನು ಕದ್ದಿರುವೆ, ಚಂದ್ರನ ನಾನು ಕದ್ದಿರುವೆ
ನಡೆ ಕೂರೋಣ ಚರ್ಚಿನ ಹಿಂದೆ
ಓ..ನೋಡೋರಿಲ್ಲ ಗುರುತು ಸಿಗೊಲ್ಲ
ಕೂರೋಣ ಮರದಾ ಕೆಳಗೆ...,ಅರೆ ನಡಿ ಕೋರೋಣ ಚರ್ಚಿನ ಹಿಂದೆ
ಚಂದ್ರನ ನಾನು ಕದ್ದಿರುವೆ,
ಚಂದ್ರನ ನಾನು ಕದ್ದಿರುವೆ, ಚಂದ್ರನ ನಾನು ಕದ್ದಿರುವೆ
ನಡೆ ಕೂರೋಣ ಚರ್ಚಿನ ಹಿಂದೆ
ಓ..ನೋಡೋರಿಲ್ಲ ಗುರುತು ಸಿಗೊಲ್ಲ
ಕೂರೋಣ ಮರದಾ ಕೆಳಗೆ... ಅರೆ ನಡಿ ಕೋರೋಣ ಚರ್ಚಿನ ಹಿಂದೆ
ನಿನ್ನೆ ಅಪ್ಪಯ್ಯ ಎಚ್ಚರ ಗೊಂಡ ,..ಆದ್ರೆ..
ನನ್ನಯ ನಾಚಿಕೆ ಕೇಳು..
ನಿನ್ನೆ ಅಪ್ಪಯ್ಯ ಎಚ್ಚರ ಗೊಂಡ.. ನನ್ನಯ ನಾಚಿಕೆ ಕೇಳು..
ಅರೆ ..ಏನಾಗೋದಿತ್ತೋ ಆಗಿ ಹೋಯ್ತು
ಇಂದಿನದೇನೆಂದು ಹೇಳು..
ನಿನ್ನೆ ಅಪ್ಪಯ್ಯ ಎಚ್ಚರ ಗೊಂಡ.. ನನ್ನಯ ನಾಚಿಕೆ ಕೇಳು..
ಅರೆ ..ಏನಾಗೋದಿತ್ತೋ ಆಗಿ ಹೋಯ್ತು
ಇಂದಿನದೇನೆಂದು ಹೇಳು..
ಎಚ್ಚರ ಆದ್ರೆ..? ಆಗ್ಲಿ ಬಿಡು..
ಹೌದಾ... ಹಾಂ..
ಸರಿ ಹಾಗಾದ್ರೆ..ನಡೆ ಕೂರೋಣ ಚರ್ಚಿನ ಹಿಂದೆ.
ನಡೆ ಹಡಗನ್ನ ಸಾಗದಲ್ಲಿ ತೇಲಿಸಿ ದೂರ ನಡೆವ
ನಡೆ ಹಡಗನ್ನ ಸಾಗದಲ್ಲಿ ತೇಲಿಸಿ ದೂರ ನಡೆವ
ಹುಡುಕಲಾಗದೇ ಹಡಗಿನ ಒಡೆಯ ತಟವನೇ ಕೇಳುವ ನೋಡು
ನಡೆ ಹಡಗನ್ನ ಸಾಗದಲ್ಲಿ ತೇಲಿಸಿ ದೂರ ನಡೆವ
ಹುಡುಕಲಾಗದೇ ಹಡಗಿನ ಒಡೆಯ ತಟವನೇಕೇಳುವ ನೋಡು
ಹೇಳಿದನೆಂದರೆ..?  ಹೇಳ್ಳಿ ಬಿಡು
ಹೌದಾ.. ಹಾಂ...
ಸರಿ ಹಾಗಾದ್ರೆ.. ನಡೆ ಕೂರೋಣ ಚರ್ಚಿನ ಹಿಂದೆ
ಚಂದ್ರನ ನಾನು ಕದ್ದಿರುವೆ,
ಚಂದ್ರನ ನಾನು ಕದ್ದಿರುವೆ, ಚಂದ್ರನ ನಾನು ಕದ್ದಿರುವೆ
ನಡೆ ಕೂರೋಣ ಚರ್ಚಿನ ಹಿಂದೆ
ಓ..ನೋಡೋರಿಲ್ಲ ಗುರುತು ಸಿಗೊಲ್ಲ

ಕೂರೋಣ ಮರದಾ ಕೆಳಗೆ...,ಅರೆ ನಡಿ ಕೋರೋಣ ಚರ್ಚಿನ ಹಿಂದೆ

Saturday, May 10, 2014

ಮನದಾಳ

ಚಿತ್ರ ಕೃಪೆ: ಅಂತರ್ಜಾಲ.

Wednesday, April 30, 2014

ಧರೆಗೆ ನೀ ಹನಿಯೆ



ಚಿತ್ರ: ಅಂತರ್ಜಾಲ ಕೃಪೆ


ಧರೆಗೆ ನೀ ಹನಿಯೆ
**************
ಮೋಡದಲಿ ಮೈಮರೆತು
ಮಲಗಿರುವ ಹನಿಯೇ
ಬಾಯಾರಿ ಬಾಯ್ಬಿಟ್ಟ
ಧರೆಗೆ ನೀ ಹನಿಯೆ.
ಕಣ್ಣುಮುಚ್ಚಾಲೆಯಾಡಿ
ಅನ್ನದಾತನ ಕಾಡುವೆ
ನಿನದಾವ ಪರಿಯೇ?
ಬಿದ್ದೊಂದೊಂದು
ಹನಿಯಲೂ
ಮುತ್ತಿಡುವರು ಅಲ್ಲಿ
ಬೀಳದಿರೆ ಭಯವಿಲ್ಲ
ತೈಲಸಿರಿ ನಾಡಲ್ಲಿ.
ಬಂದು ಬಿಡು ಬಂದು ಬಿಡು
ಕಾಲ ಕಾಲಕೆ ಅಲ್ಲಿ
ಉಪ್ಪನಿಲ್ಲಿ ತೆಗೆದು
ಸಿಹಿನೀರ ಕಸಿದು 
ಹರಿಯುವುದು ನಲ್ಲಿ.
ಎಂದಿನಂತಿಲ್ಲ ಹಸಿರು
ಕಟ್ಟಿದೆ ಭೂತಾಯಿಯುಸಿರು
ಬೇಕು ದಯೆ ಕೃಪೆ
ನಮಗೆ ಅಲ್ಲಿ
ನಮ್ಮವರ ನಗು
ಹೊಲ ಹಸಿರ ಸೊಬಗು
ತುಂಬಿರಲಿ ಅನ್ನದಾನಕೆ
ರೈತನಾವಲ್ಲಿ.
ಮೋಡದಲಿ ಮೈಮರೆತು
ಮಲಗಿರುವ ಹನಿಯೇ
ಬಾಯಾರಿ ಬಾಯ್ಬಿಟ್ಟ
ಧರೆಗೆ ನೀ ಹನಿಯೆ.



Friday, January 3, 2014