Friday, March 30, 2012

ಓತಿಕ್ಯಾತಗಳು.....ಅವ್ವಾ..ಯವ್ವಾ.. ನನ್ನವ್ವಾ
ನಿನ್ನೇ ನೋಡೋಕ್ಬಂದೆ ಯವ್ವಾ
ನೀನ್ ಅಂದ್ರೆ ನಂಗೆ ದೇವ್ರವ್ವಾ
ಹ್ಯಾಂಗಿದ್ದೀಯವ್ವಾ..?? ಮಕ್ಳೂ ಮರಿ
ಇಡೀ ದೇಸದ್ದುಸಾಬರಿ ಕಣೇ ಅವ್ವಾ
ಅದ್ಕೇಯ ನಾಕ್ ವರ್ಸ ಬರಾಕಾಗ್ನಿಲ್ಲ
ಈ ದಪ ನಾನೇ ಯೋಳ್ತೀನಿ, ನಂಗೆ
ಮಿನಿಸ್ಟ್ರ ಕೆಲ್ಸ ಬ್ಯಾಡ ಜನ್ಸೇವೆ ಮಾಡ್ತೀನಿ ಅಂತಾ
ನಮ್ಮೂರು, ನಮ್ಜಿಲ್ಲೆ ಉದ್ದಾರ, ಕಲ್ಯಾಣ
ಎಲ್ಲಾ ಮಾಡುಮಾ ಅಂತ ಇವ್ನಿ
ಈ ದಪ ನಿಮ್ಮೆಲ್ಲಾರ್ ಓಟ್ಕೊಡ್ಸೇ ಯವ್ವಾ
ಆಟು ಮಾಡಿ ನಿನ್ನೀ ಮಗನ್ನ ಅರ್ಸು ಸಾಕು
-----------೦೦೦೦---------
ಅಮ್ಮಾ, ತಾಯಿ, ಮುಕ್ಯ ಮಂತ್ರ್ಯಮ್ಮಾ
ಓದ್ದಪಾ..ಮಳೆನೇ ಇಲ್ಲ.. ಈ ದಪ ಮಳೇನೋ
ಯಾಕೇಳನೇ ಮನೆ ಮಟ ಅಸ ಕರ ಏನೂ..
ನನ್ನಮ್ಮಗ್ಳೇ ಕೊಚ್ಕೊಂಡೋದ್ಲು ಪರ್ವಾದಾಗೆ
ನಾವೋಟ್ ಕೊಟ್ಟೋರ್ ಬರ್ನೇ ಇಲ್ಲ..
ಕೇಳೇ ಯಮ್ಮಾ ನಿನಾದ್ರೂ ನಮ್ಗೋಳು...
----೦೦೦೦೦೦--------
ತಾಯವ್ವ..ಏನ್ಮಾಡನೇ ಯಮ್ಮಾ..??
ಈ ದಪ ನನ್ ಕುರ್ಚಿನೇ ಕೊಚ್ಕೊಂಡೋಯ್ತು
ಗೆಲ್ಸಿದ್ರೇ ನೀವೆಲ್ಲಾ ನಮ್ ಪಾರ್ಟಿನಾ ?..
ಈವಾಗಿರೋ ಸರ್ಕಾರ್ದೋರ್ ಕಣ್ಣಿಟ್ಟವ್ರೆ
ಮನ್ಯಾಗ್ ಸುಮ್ ಕುಂತಿದ್ರೇ ಕ್ಷೇಮ ನಮ್ಗೆ..
ಮುಂದಿನ್ಸಲ ಗೆಲ್ಸಿ ನಮ್ಮನ್ನ ..
ಆವಾಗ ನೋಡುಮಾ ಏನಾದಾದೋ...

Friday, March 23, 2012

ಕೆಲವು "ಬಾಟಮ್ ಪಂಚ್" ಗಳು


ನೋಡಿದರೆ ಒಮ್ಮೆ
ನೋಡಬೇಕೆನಿಸುವುದು
ಮತ್ತೆ ಮಗದೊಮ್ಮೆ
ಇಳಿದಂತೆ ಆಳಕ್ಕೆ
ಇಳಿಯಬೇಕೆನಿಸುವುದು
ಕಳೆದು ಹೋಗಬೇಕೆನಿಸುವುದು
ಮತ್ತೆ ಮತ್ತೂ ಆಳಕ್ಕೆ
.......ಆ ಕಣ್ಣು.......


ಇಳಿದರೆ ಸ್ವಲ್ಪ
ಗಂಟಲಿನವರೆಗೆ
ಹೆಚ್ಚಾದರೆ ಹುಚ್ಚು
ಮೆಂಟಲಿನವರೆಗೆ
...ಮದಿರೆ.....

ಪರಿಶ್ರಮ ದಿನವಿಡೀ
ಅಂಗಾಂಗ ಸೋತಿದೆ
ಆಯಾಸ ಮೈಯಿಡೀ
ಹಾಯಿ ಸಿಗುವುದು
ಕಳೆದರೆ ರಾತ್ರಿಯಿಡೀ
........ನಿದಿರೆ.......

ಕಣ್ಣುತೆರೆದಾಗ ಕಾಣದಾದೆ
ಕಣ್ಣುಮುಚ್ಚಿ ಮರೆಯದಾದೆ
ದಿನವಿಡೀ ಸುಮ್ಮನೆ ಕಾಡುವುದು
ರಾತ್ರಿಯಾದಾಗ ಮೌನ ಹಾಡುವುದು
.................ಕನಸು................


ನನ್ನ ಹೃದಯ ಪುಸ್ತಕಲ್ಲಿದ್ದ
ನವಿಲುಗರಿ ಕದ್ದಾಗ ಅವನು
ಅನಿಸಿದ್ದು – ಹೃದಯ ಚೋರ
ನನ್ನಂತೆ ಹತ್ತಾರು ಹುಡ್ಗೀರು
ಹೇಳಿ ಮಂಡಿಗೆ ತಿಂದಾಗ
ಮನಸು-ಹೃದಯ ಮುಟ್ಟಿ ಹೇಳಿತು
...........“ಹುಶಾರು”...........


ನನ್ನ ಜೀವಂತ ಕಾಡಿದಳು
ನನ್ನ ಬಾ ಅಂತ ಬೇಡಿದಳು
ವರ್ಷಗಳೇ ಕಳೆದಿವೆ.. ಈಗ
ಬರ್ತಾಳೆ ರಾತ್ರಿ, ಕಾಡ್ತಾಳೆ....
.........”ಮೋಹಿನಿ”........

Tuesday, March 13, 2012

ಸನಿಹ (ಕರವೋಕೆ)

ಸನಿಹ
(ರಿಮ್ ಝುಮ್ ಗಿರೆ ಸಾವನ್)
ಚುಮುಚುಮುಚುಮು ಛಳಿಯಲಿ
ಬಿಸಿಯುಸಿರಿರೆ ಬಳಿಯಲಿ...
ಹೇಗೆ ನಾನು ಮರೆಯಲೀ...
ಇರುತಿರೆ ನೀ ಸನಿಹದಲಿ...//ಚುಮು ಚುಮುಚುಮು//
ನಿನ ಬಳೆಯ ಕಲಕಲನಾದ
ಮುಂಗುರುಳ ಲಾಸ್ಯವಿನೋದ
ಮನದಾಳದಾಸೆಯನಿಂದು
ಮುದಗೊಳಿಸಿವೆ ಬಳಿ ಬಂದು
ಮರೆಯಾಗಿದೆ ಮುಖ ಸೆರಗಲಿ
ಮಂದಸ್ಮಿತೆ ನಗುವಲಿ
ಹೇಗೆ ನಾನು ಮರೆಯಲಿ...
ಇರುತಿರೆ ನೀ ಸನಿಹದಲಿ...//ಚುಮುಚುಮುಚುಮು//
 ಮೀಟಿದೆ ಮನವೀಣೆಯನಂದು
ನವಿರಾದ ನಿನ ಬೆರಳಲ್ಲಿ
ಮರುದನಿಸಿದೆ ಸನಿಹವು ಇಂದು
ಸುಮಧುರ ಇನಿಗಾನವು
ನಿನ ನೆನಪು ಮನದಲಿ
ಒನಪು ಸದಾ ಕಣ್ಣಲಿ
ಹೇಗೆ ನಾನು ಮರೆಯಲಿ...
ಇರುತಿರೆ ನೀ ಸನಿಹದಲಿ...//ಚುಮುಚುಮುಚುಮು//

Monday, March 5, 2012

ಇಂಗೇ ಒಸಿ ಸುಮ್ಕೆ


ಚಿತ್ರ: (ಫೇಸ್ ಬುಕ್ ) ವಿಜಯಶ್ರೀ ನಟರಾಜ್ ಕೃಪೆ

ಇಂಗೇ ಒಸಿ ಸುಮ್ಕೆ
ಏನ್ಲ ತಿಂಮ ಏನಿಂಗ್ ಕೂತಿಯಾ?
ತಲೆಮ್ಯಾಗಾಕಾಶಾ ಬಿದ್ದಂಗಿದ್ದೀಯಾ??
ಬೋ ಯೋಸ್ನೆ, ನಿನ್ ಬ್ಯಾಸ್ರ ಏನ್ಲಾ ಬಡ್ಡೆತ್ತದೆ?
ಆ ಕಡೆ ನೋಡುದ್ರೆ ನಿನ್ನಮ್ಮಾನೂ ಸುಮ್ಕುಂತದೆ?

ಇಲ್ಕಲಾ ಸಿಂಗ.. ಬ್ಯಾಸ್ರ ಆಗೋ ಇಸ್ಯಾನೇಯಾ
ಅಮ್ಮಂಗ್ ಗೊತ್ತಾಯ್ತದೆ ಮುಂದಾಗೋ ಇಸಯಾ
ಅನ್ಮಪ್ಪ ಐನಾತಿ ವರ ಕೊಟ್ಟವ್ನೆ ನಮ್ಮಮ್ಮಂಗೆ
ಅವ್ಳೇಳಿದ್ಬವಿಸ್ಯ ಕೇಳಿ ಕುಂತಿವಿ ಎಲ್ಲಾ ಗುಮ್ನಂಗೆ

ನಮ್ ಪೈಕಿ ಕೆಲವ್ರು ಅಗ್ತೀವಂತೆ ಬೆಳ್ದು ಗಡವ
ನೆಲ್ದ್ ಮ್ಯಾಗೇ ಓಡಾಡ್ತೀವಂತೆ ಬಿಟ್ಟು ಮರಗಿಡ್ವ
ಅಂಗೇ ಸಾವ್ರಾರು ವರ್ಸದ್ ಮ್ಯಾಗೆ ನಿಂತು ನೆಟ್ಗೆ
ಅಲ್ದಾಡ್ತೀವಂತೆ ಕಾಡು ಮೇಡು, ಆಗ್ತೀವಂತೆ ರಾಜ್ರಂಗೆ

ಇಸ್ಯಾ ಆಟೇ ಆಗಿದ್ರೆ ಯೋಸ್ನೆ ಇರ್ನಿಲ್ಲ ತಮ್ಮ
ಬೆಳೀತೀವಂತೆ, ಇಡೀತದಂತೆ ಬೇಸಾಯದ್ಗುಮ್ಮ
ಅದ್ಕೆ ಕಾಡ್ಕಡೀತೀವಂತೆ, ನೆಲ ಬಗೀತೀವಂತೆ
ಅಂಗೇ ನಮ್ಗೋರೀನ್ ನಾವೇ ತೋಡ್ಕೋತೀವಂತೆ

ಅಂದ್ಲು ಅಮ್ಮ, ಜಾತಿ ಮತ ಧರ್ಮ ಕರ್ಮ ಬತ್ತದೆ
ಮನ್ಸಾ ಆಗ್ತೀವಿ, ತನ್ನೋರ್ಮ್ಯಾಲೇ ದ್ವೇಸ ಉಟ್ತದೆ
ಪ್ರಾಣಿ ಪಕ್ಸಿ ಏನು ನೆಲಾನೂ ಇಪರೀತ ಎದ್ರಾದೂ
ಬ್ರಮ್ಮ ಮಾಡಿದ್ದು ಬ್ರಮ್ಮನ್ಗೇ ಎಡ್ವಂಟ್ಟಾಗ್ಕುಂತದೂ

ಅದ್ಕೇ ಯೋಸ್ನೆ ಆಗದೆ, ಅಮ್ಮನ್ಮಾತು ಆದ್ರೆ ದಿಟ ?
ಅನ್ಮಂತಣ್ಣ ಎಲ್ಲಾ ಗೊತ್ತಿದ್ದೇ ಆಡವ್ನಾ ಇಂಗೆ ಆಟ?
ಯೋಳ್ಬಿಡ್ತೀನಿ.. ನಾನಿರ್ತೀನಿ ಮರದ್ಮ್ಯಾಲೆ ಇಂಗೇ
ನೀವ್ಬೇಕಾದ್ರೆ ಮನುಸ್ರಾಗಿ ನಾನ್ಕುಂತ್ಕತೀನಿ ಸುಮ್ಗೆ.