Tuesday, March 13, 2012

ಸನಿಹ (ಕರವೋಕೆ)

ಸನಿಹ
(ರಿಮ್ ಝುಮ್ ಗಿರೆ ಸಾವನ್)
ಚುಮುಚುಮುಚುಮು ಛಳಿಯಲಿ
ಬಿಸಿಯುಸಿರಿರೆ ಬಳಿಯಲಿ...
ಹೇಗೆ ನಾನು ಮರೆಯಲೀ...
ಇರುತಿರೆ ನೀ ಸನಿಹದಲಿ...//ಚುಮು ಚುಮುಚುಮು//
ನಿನ ಬಳೆಯ ಕಲಕಲನಾದ
ಮುಂಗುರುಳ ಲಾಸ್ಯವಿನೋದ
ಮನದಾಳದಾಸೆಯನಿಂದು
ಮುದಗೊಳಿಸಿವೆ ಬಳಿ ಬಂದು
ಮರೆಯಾಗಿದೆ ಮುಖ ಸೆರಗಲಿ
ಮಂದಸ್ಮಿತೆ ನಗುವಲಿ
ಹೇಗೆ ನಾನು ಮರೆಯಲಿ...
ಇರುತಿರೆ ನೀ ಸನಿಹದಲಿ...//ಚುಮುಚುಮುಚುಮು//
 ಮೀಟಿದೆ ಮನವೀಣೆಯನಂದು
ನವಿರಾದ ನಿನ ಬೆರಳಲ್ಲಿ
ಮರುದನಿಸಿದೆ ಸನಿಹವು ಇಂದು
ಸುಮಧುರ ಇನಿಗಾನವು
ನಿನ ನೆನಪು ಮನದಲಿ
ಒನಪು ಸದಾ ಕಣ್ಣಲಿ
ಹೇಗೆ ನಾನು ಮರೆಯಲಿ...
ಇರುತಿರೆ ನೀ ಸನಿಹದಲಿ...//ಚುಮುಚುಮುಚುಮು//

14 comments:

  1. Love this song. Your translation is also equally good.
    Swarna

    ReplyDelete
  2. ಸ್ವರ್ಣ ಧನ್ಯವಾದ ಕಣ್ರೀ...

    ReplyDelete
    Replies
    1. ಉತ್ತಮ ಅನುವಾದ ಆಜಾದ್ ಸರ್, ಮೂಲ ಹಿ೦ದಿ ಗೀತೆಯೂ ಬಹಳ ಚೆನ್ನಾಗಿದೆ.

      Delete
    2. ಪ್ರಭಾಮಣಿ ಮೇಡಂ ಧನ್ಯವಾದ ...

      Delete
  3. ಅಜಾದ್,
    ನಾನು ಸದಾ ಕೇಳುವ ಹಾಡುಗಳಲ್ಲಿ ಇದು ಒಂದು. ಇದರ ಅನುವಾದವನ್ನು ಚೆನ್ನಾಗಿ ಮಾಡಿದ್ದಿರಿ...

    ReplyDelete
    Replies
    1. ಶಿವು ಈ ಹಳೇ ಹಾಡುಗಳ ಮಾಧುರ್ಯ ಈಗಿನ ಹಾಡುಗಳಲ್ಲಿ ಎಲ್ಲಿರುತ್ತೆ ..ಅಲ್ವಾ...??

      Delete
  4. ಉತ್ತಮ ಅನುವಾದ ಆಜಾದ್ ಸರ್, ಮೂಲ ಹಿ೦ದಿ ಗೀತೆಯೂ ಬಹಳ ಚೆನ್ನಾಗಿದೆ.

    ReplyDelete
  5. ಅನುವಾದ ಚೆನ್ನಾಗಿದೆ.ನನ್ನ ಮೆಚ್ಚಿನ ಗೀತೆಗಳಲ್ಲಿ ಇದೂ ಒಂದು.

    ReplyDelete
    Replies
    1. ಮಂಜುಳಾ ಮೇಡಂ ಹೌದು ನನಗೂ ಇಷ್ಟವಾದ ಹಾಡು,ಧನ್ಯವಾದ

      Delete
  6. ಶಿವು ನನಗೂ ಕಾಲೇಜ್ ದಿನಗಳ ಪೆಟ್ ಹಾಡು...ಇದಾಗಿತ್ತು...ಧನ್ಯವಾದ

    ReplyDelete
  7. ಮಧುರ ಗೀತೆಯ ಮಧುರ ಅನುವಾದ ಮಾಡಿದ್ದೀರಿ, ಜಲನಯನ. ಧನ್ಯವಾದಗಳು.

    ReplyDelete
  8. ಕಿಶೋರ್ ಕುಮಾರ್ ಹಾಡು ಅಂದ್ರೆ ಪಂಚಪ್ರಾಣ. ಹಿಂದಿ ಅರ್ಥ ಆಗದಿದ್ರೂ ಕೇಳಲು ಖುಷಿ.. ಅನುವಾದದ ಹಾಡೂ ತುಂಬಾ ಚೆನ್ನ್ನಾಗಿದೆ. ಧನ್ಯವಾದ ಅಝಾದ್ ಸರ್ :))

    ReplyDelete
  9. ಈಶ್ವರ್ ಸರ್ ಧನ್ಯವಾದ ನಿಮಗೂ ಮೆಚ್ಚಿದ್ದಕ್ಕೆ...

    ReplyDelete