ನೋಡಿದರೆ ಒಮ್ಮೆ
ನೋಡಬೇಕೆನಿಸುವುದು
ಮತ್ತೆ ಮಗದೊಮ್ಮೆ
ಇಳಿದಂತೆ ಆಳಕ್ಕೆ
ಇಳಿಯಬೇಕೆನಿಸುವುದು
ಕಳೆದು ಹೋಗಬೇಕೆನಿಸುವುದು
ಮತ್ತೆ ಮತ್ತೂ ಆಳಕ್ಕೆ
.......ಆ ಕಣ್ಣು.......
ಇಳಿದರೆ ಸ್ವಲ್ಪ
ಗಂಟಲಿನವರೆಗೆ
ಹೆಚ್ಚಾದರೆ ಹುಚ್ಚು
ಮೆಂಟಲಿನವರೆಗೆ
...ಮದಿರೆ.....
ಪರಿಶ್ರಮ ದಿನವಿಡೀ
ಅಂಗಾಂಗ ಸೋತಿದೆ
ಆಯಾಸ ಮೈಯಿಡೀ
ಹಾಯಿ ಸಿಗುವುದು
ಕಳೆದರೆ ರಾತ್ರಿಯಿಡೀ
........ನಿದಿರೆ.......
ಕಣ್ಣುತೆರೆದಾಗ ಕಾಣದಾದೆ
ಕಣ್ಣುಮುಚ್ಚಿ ಮರೆಯದಾದೆ
ದಿನವಿಡೀ ಸುಮ್ಮನೆ ಕಾಡುವುದು
ರಾತ್ರಿಯಾದಾಗ ಮೌನ ಹಾಡುವುದು
.................ಕನಸು................
ನನ್ನ ಹೃದಯ ಪುಸ್ತಕಲ್ಲಿದ್ದ
ನವಿಲುಗರಿ ಕದ್ದಾಗ ಅವನು
ಅನಿಸಿದ್ದು – ಹೃದಯ ಚೋರ
ನನ್ನಂತೆ ಹತ್ತಾರು ಹುಡ್ಗೀರು
ಹೇಳಿ ಮಂಡಿಗೆ ತಿಂದಾಗ
ಮನಸು-ಹೃದಯ ಮುಟ್ಟಿ ಹೇಳಿತು
...........“ಹುಶಾರು”...........
ನನ್ನ ಜೀವಂತ
ಕಾಡಿದಳು
ನನ್ನ ಬಾ ಅಂತ
ಬೇಡಿದಳು
ವರ್ಷಗಳೇ ಕಳೆದಿವೆ..
ಈಗ
ಬರ್ತಾಳೆ ರಾತ್ರಿ,
ಕಾಡ್ತಾಳೆ....
.........”ಮೋಹಿನಿ”........
ಹೊಸ ವರ್ಷಕ್ಕೆ ಹೊಸ ಒಗಟುಗಳನ್ನು ನೀಡಿದ್ದೀರಿ. ಹೊಸ ಸಂವತ್ಸರವು ನಿಮಗೆ ಸುಖ, ಶಾಂತಿ ಹಾಗು ಯಶಸ್ಸನ್ನು ತರಲಿ.
ReplyDeleteಎಲ್ಲಾ ಬಾಟಂ ಪಂಚ್ ಗಳು ಸೂಪರಾಗಿದೆ ಸರ್...ಅದರಲ್ಲೂ ಮದಿರೆ,ಹುಷಾರು, ಆ ಕಣ್ಣು ಭಾರಿ ಚೆನ್ನಾಗಿದೆ...
ReplyDeleteಸುನಾಥಣ್ಣ ನಿಮಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.....
ReplyDeleteಸುಶ್ಮಾ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ... ಯುಗಾದಿ ಶುಭಾಶಯಗಳು ನಿಮಗೂ
ReplyDeleteಎಲ್ಲವೂ ಸೂಪರಾಗಿವೆ
ReplyDeleteಹನಿಗವನಗಳಿಗೆ ಹೊಸ ಅವಿಷ್ಕಾರ.. :) ಸೊಗಸಾಗಿದೆ..ಅಭಿನ೦ದನೆಗಳು.
ReplyDeleteಅನ೦ಅತ್
ಧನ್ಯವಾದ ಮಂಜುಳಾವ್ರೆ...
ReplyDeleteಅನಂತ್ ಸರ್ ಯುಗಾದಿಯ ಹಾರ್ದಿಕ ಶುಭಾಶಯಗಳು....ಧನ್ಯ್ವವಾದ ನಿಮ್ಮ ಪ್ರೋತ್ಸಾಹಕ್ಕೆ
ReplyDelete