Tuesday, April 3, 2012

ಮುಖ-ಪುಸ್ತಕ



ಮುಖ-ಪುಸ್ತಕ
ಮೊದಲ್ ಮೊದಲ್ ನೋಡೋ ಮುಖ
ಮೋಡಿ ಮಾಡೈತೆ ಎಂಥದ್ದೋ ಸುಖ
ಏಯ್, ಬ್ಯಾಡಪ್ಪಾ, ಸ್ವಲ್ಪ ಕೆಲ್ಸ ಕಾರ್ಯ
ಬಾಸ್ ಗೂ ತೋರಿಸಬೇಡವೇ ಮುಖ?
ಚೂರು ಪಾರು ಮಾಡಿ ಆಗಲ್ವೇ ಧೈರ್ಯ?

ಕೆಲ್ಸದ್ ಮಧ್ಯೆ, ಏಯ್ ತಡಿ ಏನೈತೋ!!
ಯಾರು ಹೊಸ್ದಾಗಿ ಏನನ್ನ ಹಾಕವ್ರೋ!!
ಫೋಟೋ ಯಾವ್ದಾದ್ರೂ ಇಂಟ್ರೆಸ್ಟಿಂಗೂ
ಕಾಮೆಂಟ್ ಕಾಲೆಳಿಯೋ ಗ್ರೂಪಿಂಗೂ
ಬ್ಲಾಗಕ್ಕಂತೂ ಬರೊಲ್ಲ ಬ್ಲಾಗಿಗ್ರು ಹೆಂಗೂ
ಇಲ್ಲೇ ಹಾಕ್ತೀನಿ ನನ್ ಕವ್ನ ಒಂದ್ಸಾಂಗು

ಮಧ್ಯಾನ್ಹ ಆಯ್ತು ಕೆಲ್ಸದ್ ಅರ್ಧ ಪುಟ
ಅರ್ಧ ಘಂಟೆಲಿ ನಾಕಾಗ್ತಿತ್ತು ಮೊದ್ಲಾಗಿದ್ರೆ
ಈಗ ಮುಖ ನೊಡ್ಕೊಂಡ್ ಅರ್ಧನೇ ದಿಟ
ಏನ್ಮಾಡೋದು? ಗೊತ್ತಾಗ್ತಿಲ್ಲ ಯಾಕೋ
ಹೆಂಗ್ಬರೋದು ಹೊರ್ಗೆ ಸಾಕಪ್ಪ ಸಾಕೋ

ಆದಿನ ಬಂದೆ ಆಫೀಸ್ ಗಣ್ಕದ್ ಕಿವಿ ಹಿಂಡ್ದೆ
ಕಿಟ್ಕಿ ತೆರೆಕೊಳ್ತು, ಮುಖದ್ಬಾಗ್ಲು ಮುಚ್ಕೊಳ್ತು
ತಟ್ದೆ, ಕಿಟ್ಕಿ ಮುಚ್ದೆ, ಎಲ್ಲ ಬಂದ್ ಹೊರಗ್ಬಂದೆ
ಮತ್ತೆ ಕಿವಿ, ಕಿಟ್ಕಿ,.. ಊಹೂಂ.. ಮುಖ ಕಾಣ್ಲಿಲ್ಲ
ತಲೆ ಕೆರ್ಕೊಂಡೆ, ಮೈಯಲ್ಲಾ ಪರಚ್ಕೊಂಡೆ..
ಅಳು ಬರೊಂಗಾಯ್ತು ನನ್ನಲ್ಲೇ ಕಿರಿಚ್ಕೊಂಡೆ

ಕಛೇರಿ ಜವಾನ ಪರಿಯೋಜನೆ ಕಡ್ತ ತಂದಿಟ್ಟ
ವಿಧಿಯಿಲ್ಲ ಸುರ್ಹಚ್ಕೊಂಡೆ ಮುಗ್ಸಿ ಕಡ್ತದ್ ಬೆಟ್ಟ
ಚಾ ಕುಡಿಯೋಕೆ ಪಕ್ಕದ್ ಛೇಂಬರ್ ಮಯೇಸ
ಎಣ್ಣೆ ಕುಡ್ದಂಗೆ ಮುಖ-ಕ್ಯಾಂಟೀನ್ಗೆ ಬತ್ತೀರಾಸಾ?
ಇದೇನಪ್ಪ ಮಯೇಸಾ, ಮುಖದಲ್ಲೇ ಮುಳಗ್ತಿದ್ದೆ

ಬಿಡಿಸಾ, ಒಸಾ ಸಾಯೇಬ ಲಾಕ್ ಮಾಡವ್ನೆ
ಮುಖ ನೋಡಿದ್ಸಾಕು ಕಡ್ತಾ ನೋಡಿ ಅಂತಾನೆ
ನೋಡಿದ್ರಲ್ಲಾ ನೀವೂನೂವೆ, ಆಫೀಸ್ಕೆಲ್ಸ ಎಲ್ಲಾ
ಮದ್ಯಾನಕ್ಕೇ ಮುಗೀತಾ ಅವೆ ಕೆಲ್ಸ, ಬಾಕಿ ಇಲ್ಲಾ
ದಿನಾ ರೇಗ್ತಿದ್ದ ನಮ್ ಸಬ್-ಬಾಸು, ಈಗ ಖುಶ್
ಮುಖ ಮನ್ಯಾಗ್ ನೊಡ್ಕೊಳ್ಳುಮಾ ಅದೇ ಭೇಶ್

6 comments:

  1. ನಿಜ ಆಜಾದ್ ಭೈಯ್ಯಾ!!ಮಜಾ ಬಂತು
    :-)
    ಮಾಲತಿ ಎಸ್

    ReplyDelete
  2. ಸಾ..ಬೋ ಚೆನ್ನಾಗಯ್ತೆ ಕವನ..

    ಮುಖಪುಟ
    ಕಾಣುವವು
    ಹಲವು ಚಿತ್ರಪಟ
    ಜೊತೆಗಷ್ಟು
    ಸ್ನೇಹ ಸಂಬಂಧ
    ಬೆರೆತು ಬಾಳುವ
    ಒಂದು ವಿಹಂಗಮ ನೋಟ

    ReplyDelete
  3. ಏಕ್ದಂ fantaastic .........ದಿನ ನಿತ್ಯವೂ ಈ ಮುಖ ಪುಟದಿಂದ ಹೊರಬರೋಕೆ,attachಆಗದೆ ಇರೋಕೆ ಏನೆಲ್ಲಾ ಕಷ್ಟ ಪಡ್ತೀವಿ ಅಲ್ವ...ಒಂದು ಪಕ್ಷ ಹೆಂಡತಿ ಮಕ್ಕಳನ್ನದ್ರು avoid ಮಾಡಬಹುದು..ಈ ಅರಗಿಣಿ ಫೇಸ್ ಬುಕ್ ನ ಅಲ್ಲ...ಬಹಳ ಚಂದ ಅನಾವರಣ ಮಾಡಿ ಬರೆದೀರಿ....ಅಣ್ಣ

    ReplyDelete
  4. ಮಾಲತಿ...ಅಪರೂಪದ ಮಳೆ ತರಹ ಬಂದು ಬ್ಲಾಗಲ್ಲಿ ನಾಲ್ಕು ಪ್ರತಿಕ್ರಿಯೆ ಹನಿ ಹನಿಸಿ ಹೋದಿರಿ...ಆಹಾ..!! ತಂಪಾಯ್ತು ಜೀವ..ಜಲನಯನದ್ದು ಭಾವಮಂಥನದಲ್ಲಿ....

    ReplyDelete
  5. ಸುಗುಣಾ... ಹಂಗಾಗೈತೆ...ಈವಾಗ ಮೊದ್ಲು ಬ್ಲಾಗ್ ನ ಬಯ್ತಿದ್ವಿ..ಆಮೇಲೆ ಬಜ್...ಈಗ ಫೇಸ್ಬುಕ್ಕು....ಹಹಹಹ....ಧನ್ಯವಾದ

    ReplyDelete
  6. ಸುನಿಲ ಸ್ವಾಗತಾನಪ್ಪಾ ನನ್ನ ಬ್ಲಾಗ್-ತ್ರಯಕ್ಕೆ (ಜಲನಯನಾನೂ ಒಸಿ ನೋಡು)....
    ಏಕ ಮಾರ್ ದೋ ತುಕ್ಡಾ ಅಂತ ಹಾಕಿದ್ದೀಯ ಬಿಡು.. ಪ್ರತಿಕ್ರಿಯೆ.

    ReplyDelete