ಮೆರಿ ಪ್ಯಾರಿ ಬೆಹನಿಯಾ ಬನೆಗಿ ದುಲ್ಹನಿಯಾ
(ಸಚ್ಚಾ ಝೂಠಾ...1970)
ತಂಗಿ ಮದುವೆ
ನನ್ನ ಮುದ್ದು ತಂಗ್ಯಮ್ಮ
ನಿನ್ನ ಗಂಡು ಎಲ್ಲಮ್ಮಾ
ಬಂತು ನೋಡು ದಿಬ್ಬಣದ ಸವಾರಿ
ನಿನ್ನ ಅಣ್ಣ ಕುಣಿದವನೆ ಇದನ ನೋಡಿ//
ನನ್ನ ಮುದ್ದು ತಂಗ್ಯಮ್ಮ//
ಎಂತ
ಸಿಂಗಾರ ಮಾಡಿ ತಂಗ್ಯಮ್ಮ ಕುಂತವ್ಳೆ//೨//
ತಿಲಕ
ಹಣೆಗೆ ಅಚ್ಚಿ ನಗ್ ನಗ್ತಾ ಕುಂತವ್ಳೆ
ತಂಗ್ಯಮ್ಮ ಉಟ್ಟವ್ಳೆ
ತವರಿನ ಸೀರೆ
ಲಗ್ನಾ ಆಗೋಕೆ
ಗಂಡಿನ ಜೋಡಿ...
ನಿನ್ನ
ಅಣ್ಣ ಕುಣಿದವನೆ ಇದನ ನೋಡಿ// ನನ್ನ ಮುದ್ದು ತಂಗ್ಯಮ್ಮ//
ತಂಗ್ಯಮ್ಮ ಮದ್ವಣಗಿತ್ತಿ ಅರಿಸಿಣ
ಅಚ್ಚಂಡು//೨//
ತವ್ರನ್ನ ಬಿಡೋವಾಗ ಕಣ್ಣೀರು
ತುಂಬ್ಕೊಂಡು
ತಬ್ಕೊಂಡು ಅಮ್ಮನ್ನ ಅಳ್ತಾಳೆ ತಾರೆ...
ತಾರೆ ಒಂಟವ್ಳೆ ಗಂಡನ ಕೂಡಿ....
ನಿನ್ನ ಅಣ್ಣ ಕುಣಿದವನೆ ಇದನ ನೋಡಿ// ನನ್ನ
ಮುದ್ದು ತಂಗ್ಯಮ್ಮ//
ಅಮ್ಮನ ಗೋಳು ನಾನು ನೋಡಲಾರೆ ತಂಗಿ//೨//
ಅಪ್ಪನ ಕಣ್ಣಲ್ಲೂ ನೀರು ಗೋಳಾಡ್ತಾಳೆ
ಪುಟ್ನಿಂಗಿ
ನೋವಿದ್ರೂ ನಗ್ತೀನಿ ಭಾವನ್ಗುಣ ನೋಡಿ
ತಂಗಿ ಒಂಟವ್ಳೆ ಗಂಡನ ಜೋಡಿ
ನಿನ್ನ
ಅಣ್ಣ ಕುಣಿದವ್ನೆ ಇದನ ನೋಡಿ// ನನ್ನ ಮುದ್ದು ತಂಗ್ಯಮ್ಮ
ತಂಗಿ ಮದುವೆ ಎಂದರೆ ಅಣ್ಣಂದಿರಿಗೆ ಏನೋ ಸಂಭ್ರಮ.... ಅವರ ಓಡಾಟ ಹೇಳತೀರದು.... ನನ್ನ ಅಣ್ಣ ಸಂಭ್ರಮಿಸಿದ್ದು ನೆನಪಾಯಿತು.. ಹಾಡು ಸೂಪರ್ ಸರ್
ReplyDeletebhavapurnavagide sir. tamil, hindiya bhashegalalli bandaddu, eega kannadakku bantu...courtesy ajad sir...:)
ReplyDeleteಧನ್ಯವಾದ ಸುಗುಣ... ಅಣ್ನಂದಿರ ಸಂಭ್ರಮ ನೋಡಿದ್ದೀರಲ್ಲಾ... ಅದ್ರಲ್ಲೂ ಹಿರಿಯಣ್ನನಿಗೆ ಸಂಭ್ರಮದ ಜೊತೆಗೆ ಜವಾಬ್ದಾರಿ ಸಹಾ...
ReplyDeleteಅನಂತ್ ಸರ್ ಧನ್ಯವಾದ..ಬಹಳ ಭಾವ ತುಂಬುತ್ತೆ ಮನೆಮನದಲ್ಲಿ, ಮನೆ ಹೆಣ್ಣುಮಗಳು ಮದುವೆಯಾಗಿ ಗಂಡನ ಮನೆಗೆ ಹೊರಡುವಾಗ.
ReplyDeleteಭಾವಪೂರ್ಣವಾದ ಸನ್ನಿವೇಶ,ಉತ್ತಮ ಭಾವಾನುವಾದ
ReplyDeleteಧನ್ಯವಾದ ಮಂಜುಳಾದೇವಿಯವರೇ.... ತಂಗಿ ಮದ್ವೆಯ ಸನ್ನಿವೇಶ ನನಗೆ ಇಷ್ಟವಾದದ್ದು...
ReplyDelete