ಮತ್ತೊಂದು ಕರವೋಕೆ ಗೀತೆ, ಚಿತ್ರ:
ವಖ್ತ್,
ಗಾಯಕ: ಮನ್ನಾ ಡೆ
ಯೌವನ
ಓ ನನ್ನ ಮನದನ್ನೆ
ಅರಿವಿಲ್ಲ ನಿನಗೆ ಚನ್ನೆ
ನೀನಿನ್ನೂ ತರುಣಿಯು ನಾ
ತರುಣನಾಗಿಹೇ..
ಕೇಳಿ ನೋಡು ಜೀವವನೇ ಕೊಟ್ಟು
ಬಿಡುವೆನೇ..
II ಓ ನನ್ನ ಮನದನ್ನೇ II
ಈ ಶೋಕಿ ವೈಯಾರ ಗೆಳತಿಯೇ..ss
ನಿನ್ನಲ್ಲಿಯೇ ಬೇರೆಲ್ಲಿದೇ.. II2II
ಮನವನ್ನೇ ಕದಿಯೋ ಕಲೆಯದು
ನಿನದಲ್ಲದೇ ಬೇರಾರದು..
ಓ ನಿನ್ನ..ಓ ನಿನ್ನ ಕಣ್ಣಲೇ ಕಂಡೆ ನಾ ಮೂಜಗ.. II2II
II
ಓ ನನ್ನ ಮನದನ್ನೇ II
ಸಿಹಿ ನುಡಿಯನೆರಡು ಗೆಳತಿಯೇ
ನಸುನಕ್ಕು ನೀ ನುಡಿದರೆ.. II2II
ಎದೆ ಆಳದಲ್ಲಿ ಬಡಿತಹೆಚ್ಚಿಸಿ
ನಶೆಯೇರಿಸಿ ಕುಣಿಸುವೆ..
ಓ ಸಖಿ..ಓ ಸಖಿ ಇಂದಿಗೂ ನಾನಿನ್ನ
ಪ್ರಿಯ ಸಖ
II ಓ ನನ್ನ ಮನದನ್ನೇ II