Sunday, December 25, 2011

ಚಿತ್ರ: ದಿಗ್ವಾಸ್ ಹೆಗಡೆ

ಸಾವಿಗೇಕೆ ಆಹ್ವಾನ
ಬೆಳ್ಮುಗಿಲ ಬೆಳಕಲ್ಲಿ
ಕಿರಣದಾವರಣ ಹೀಗೇ
ಇಣುಕಿದ ಪರಿಯೇನು?
ಹರಿದಾವರಣ ಕಿರಿದಾಗೆ
ಕಿರಣವಿರದು ರಣಬಿಸಿಲು
ಹರಿತಿಗೂ ಸಿಗದು ಉಸಿರು

ನೆಲ ಜಲಕೆ ಹಾ-ತೊರೆದು
ಕೆರೆಯಂಗಳ ಬಾಯ್ಬಿರಿದು
ಬಿಲ ಬಿಟ್ಟು ಹೊರ ಬಂದಾವು
ಇಲಿಯ ಬೆಂಬತ್ತಿ ಹಸಿದ ಹಾವು
ಮರ ಕಡಿದು, ನೆಲ ಬಗೆದು
ಬರಮಾಡಿಕೊಳ್ಳಬೇಡಿ ಸಾವು

Friday, December 16, 2011



ಛಾಯಾ ಚಿತ್ರ: ರಂಜಿತಾ ಹೆಗಡೆ


ಉದಯರವಿ
ಉದಯಿಸಿಹ ರವಿಯ ನೋಡು ಹೇಗೆ ಕೆಂಪು ಮೂಡಿದೆ
ಗಗನದಾಚೆ ಪೂರ್ವಾಂಗಣದಿ ಕೆಂಪು ನೀರು ಚಲ್ಲಿದೆ
ಕಿರಣ ಹರಡಿ ಬಾನಂಗಳದಲಿ ಹೊಂಬಣ್ಣವ ಸುರಿಸಿದೆ
ಕಲಕಲರವದಿ ಹರಿವನದಿ ದೇಗುಲ ಘಂಟೆ ಮೊಳಗಿದೆ

ಮೋಡವೆರಡೋ ಮೂರೋ ಧೈರ್ಯತುಂಬಿ ನಿಂತಿವೆ
ಒಡಲಾಳದಿ ಹನಿಗಳೆರಡ ಬಸಿರ ಬಯಕೆ ಹೊಂದಿವೆ
ಬೆಳಗಿನ ತಣ್ಣನೆಯ ಗಾಳಿ ತಾಗಿ ಮೋಡ ಭಾರವಾಗಿವೆ
ಹೀಗೇ ಹಲವು ಕೂಡಿ ಒಮ್ಮೆ ಭೂಮಿತುಂಬಾ ಹನಿಸಿವೆ

ಹನಿಯ ಕುಡಿದ ಮಣ್ಣು ತಾನೂ ಬೀಜ ಫಲಕೆ ಕಾದಿದೆ
ಬೀಜ ಬಿರಿದು ಮೊಳಕೆಯೊಡೆದು ಸಸಿತಲೆಯ ಎತ್ತಿದೆ
ಸಸಿಯೂ ಸವಿದು ನೀರಧಾರೆ ಬೆಳೆದು ಹೆಮ್ಮರವಾಗಿದೆ
ಮರಗಳೆಷ್ಟೋ ಭೂಮಿಗಪ್ಪಿ ಹಸಿರ ಹೊದಿಕೆಯಾಗಿದೆ

ಬೇಡ ಮನುಜ ಭೂಮಿ ಕಣಜ ಬಗೆದು ಖನಿಜದ ಆಸೆಗೆ
ಮಣ್ಣ ಕೊರೆತ ಮರಕೆ ಹೊಡೆತ ಬೀಳುವುವೆಲ್ಲ ಭೂಮಿಗೆ
ಹರಿವನದಿ ಕೊರೆವ ಬದಿ ನೆರೆಹಾವಳಿ ಸತತ ಬದುಕಿಗೆ
ಮೋಡಮಾಯ ಕಾಡುಮಾಯ ಸುಡಲು ಸೂರ್ಯಬೇಗೆ   

Wednesday, December 7, 2011








ಛಾಯಾ ಚಿತ್ರ:  ಪ್ರಕಾಶ್ ಹೆಗ್ಡೆ

ಜೀವನದಿ

ಹುಟ್ಟುಹಾಕಲು ಬೇಕು
ಗುಟ್ಟು ಅರಿಯಲು ಬೇಕು
ಇಲ್ಲವಿದು ಸುಲಭ ಹಾದಿ
ಮೆಟ್ಟಿ ಉಬ್ಬರಿಸೋ ಅಲೆ
ಜೀವ ಬಿಗಿಗೊಳಿಸೋ ಸೆಲೆ
ಏರಲೆಂದು ಬಯಸಿ ಗಾದಿ

ಬಿಟ್ಟು ತೀರದ ಬದುಕು
ಕಟ್ಟು ಬಾಳಿನ ಸರಕು
ನೀರ ಸೋಸುವುದೂ ಕಲೆ
ಜಲನಯನದ ಸೊಬಗು
ರುದ್ರ ಶರಧಿಯೂ ಮೆರಗು
ಹಾಯಿ-ಹಡಗು ಮೀನಬಲೆ

ಸುಳಿಗಳಿಲ್ಲದೇ ಎಲ್ಲಿದೆ ಜಲಧಿ
ಅಗಣಿತ ಗುಣ ಜಲಪರಿಧಿ
ಗಣಿ-ತೈಲ ಮುತ್ತು ಹುಟ್ಟುವುದಿಲ್ಲಿ
ನೆಲದಿ ಹರಿದಾಡಿರೆ ಸಿಹಿ
ಸಿಹಿಕೂಡಿ ಉಪ್ಪಿನಾಮೋಹಿ
ಸಾವಿನಲ್ಲೂ ದಿಟ ಬದುಕಿಹುದಿಲ್ಲಿ

Wednesday, November 9, 2011

ರಾ-ವಣ್ ಮತ್ತು Make-A

ರಾ-ವಣ್ ಮತ್ತು Make-A 

ನಾನ್ ಕಣೋ... ಮೇ.ಮೇ..ಮೇ..ಮೇಕೆ
ಅಂದ್ರೆ ನೀನ್ ಮಾಡಿದ್ದೇನು? Make-A? 
ಎಲ್ಲಾ ವಿಲನ್ಗಳೇ ಹೀರೋಗ್ಳಾಗ್ಬಿಟ್ರೆ
ರಾಮನ ಹೆಸರು ಹೋಗಿ..ರಾ-ವಣ್ ಏ? 

ನನ್ ಕಿವಿ ಮೂಗು ನಾಲ್ಗೆ ಜೂಲನ್ನೂ ಬಿಡ್ಲಿಲ್ಲ 
ಎಲ್ಲಾ ತೂತು, ಲೋಲಾಕು ಹೇರ್ ಸ್ಟೈಲು 
ಕಣ್ ಕಂಡ್ರೂ ಕುರ್ಡ, ಏರ್ಸಿ ಕಣ್ಗೆ ಕೂಲಿಂಗು
 ಒಳ್ಗೆಷ್ಟೋ ನೋವು, ತೋರಿಸ್ಕೊಳ್ಳೋದು ಸ್ಮೈಲು 

ಮೇಕೆಗೆ ಯಾಕೆ ಬೇಕು? ಕೇಳಿದ್ನೇ ನಾನೀ ಶೋಕು? 
ನಂಗೆ ಹಿಂಸೆ ಆಗುತ್ತೋ ಅಂದ್ರೆ ಕೇಳೋ ಮನಸೆಲ್ಲಿ? 
ಮಾಡ್ತೀಯಾ ಏನೇನೋ, ಬೇಕಲ್ವಾ ನಿಂಗೂ ಬ್ರೇಕು? 
ಯಾವ ಪ್ರಾಣೀನ ತಾನೇ ಬಿಡ್ತೀರಾ ಇತಿಯೆಲ್ಲಿ ಮಿತಿಯೆಲ್ಲಿ?

Monday, October 31, 2011

ನಮ್ಲೋಕ


ಚಿತ್ರ: ದಿಗ್ವಾಸ್ ಹೆಗಡೆ



ನಮ್ಲೋಕ

ಕಣ್ಣ ಮುಚ್ಚಿ ಕುಂತಿನಿ
ಯಾಕೋ ಆಮ್ಯಾಲೆ ಹೇಳ್ತೀನಿ
ಆಡಾಕ್ಬಂದ್ರೆ ನಂನ್ಗುಟ್ಟು
ನಾ ನಿನ್ಜೊತೆ ಹಂಚ್ಕಾತೀನಿ

ಅಪ್ಪಾ ಕೊಟ್ಟ ಐದ್ರುಪಾಯ್
ಕೊಂಡ್ಕೊಳ್ಳಾಕೆ ಕಳ್ಳೆಕಾಯ್
ಇಬ್ರೂ ಕುಂತ್ಕಂಡ್ ತಿನ್ನಾಣಾ
ತಿನ್ನೋದ್ಚಂದ ಪುಟ್ಪುಟ್ಬಾಯ್

ಕಣ್ಣಾಮುಚ್ಚೆ ಕಾಡೆ ಗೂಡೆ
ಅವ್ಳೂ ಬಂದ್ಲು ಆಡಾಕ್ನೋಡೇ
ಪುಟ್ಲಂಗ ಆಕೊಂಡ್ ಪುಟ್ನಂಜಿ
ಅಮ್ಮ ಕೊಡ್ತಾಳೆ ಸೀರುಂಡೆ

ಸಂಜೆಗಂಟ ಆಡೋಣಾ
ಜಗ್ಲಿ ಅತ್ಕೊಂಡ್ ಕೂರೋಣಾ
ಕುಂಟಾಬಿಲ್ಲೆ ಚೌಕಾಬಾರಾ
ನಮ್ನಮ್ ಮನೀಗೋಗೋಣಾ

ಮಕ್ಳೂ ನಾವ್ ನಮ್ದೇ ಲೋಕ
ಕಪ್ಟ ವಂಚ್ನೆ ಇದ್ಯಾವ್ಲೋಕ
ಅವ್ರಿಗ್ ನಾನು ನನ್ಗೆ ಅವ್ರು
ಕಲಿಯಾಕ್ನಿಮ್ಗೆ ಬ್ಯಾರೆ ಬೇಕಾ?

Tuesday, October 25, 2011

ಔರ್- ಕಹೇಂ- ಆಪ್ ಸುನೋ


 ऎक् कहानी

किसी नॆ कहा लॆ लॊ ऎह् दौलत् ऎह् शॊह्रत्
भलॆ ही छीन् लो मुझ् सॆ मेरी ऎह् जवानी
अरॆ भाय् कौन् कंबख्त् लेगा तुम्हारी जवानी
हम खुद् हैरान् है...क्यू नहीं कोयी कॆह्ता
मै बीता कल् नहीं बस्  वह् थी ऎक् कहानि

ಎಕ್ ಕಹಾನೀ

ಕಿಸೀ ನೆ ಕಹಾ ಲೆ ಲೊ ಎಹ್ ದೌಲತ್ ಎಹ್ ಶೊಹ್ರತ್
ಭಲೆ ಹೀ ಛೀನ್ ಲೋ ಮುಝ್ ಸೆ ಮೇರೀ ಎಹ್ ಜವಾನೀ,
ಅರೆ ಭಾಯ್ ಕೌನ್ ಕಂಬಖ್ತ್ ಲೇಗಾ ತುಮ್ಹಾರೀ ಜವಾನೀ?
ಹಂ ಖುದ್ ಹೈರಾನ್ ಹೈಂ...ಕ್ಯೂ ನಹೀಂ ಕೋಯೀ ಕೆಹ್ತಾ
ಮೈ ಬೀತಾ ಕಲ್ ನಹೀಂ, ಬಸ್  ವಹ್ ಥೀ ಎಕ್ ಕಹಾನಿ

पागल
हम पागल थे उस्के पीछे इस कदर
खाना पीना भी छूटा हो गये बेखबर
आखिर एक दिन जनाज़ा हमारा निकला
उस्के पीछॆ दॊस्त दुश्मन सारा जहां निकला
मगर वह न निकली जिस्के लिये मेरा जनाज़ा निकला

ಪಾಗಲ್
ಹಮ್ ಪಾಗಲ್ ಥೇ ಉಸ್ಕೇ ಪೀಛೇ ಇಸ್ ಕದರ್
ಖಾನಾ ಪೀನಾ ಭೀ ಛೂಟಾ ಹೋ ಗಯೇ ಬೇಖಬರ್
ಆಖಿರ್ ಏಕ ದಿನ್ ಜನಾಜ಼ಾ ಹಮಾರಾ ನಿಕಲಾ
ಉಸ್ಕೇ ಪೀಛೆ ದೊಸ್ತ್ ದುಶ್ಮನ್ ಸಾರಾ ಜಹಾಂ ನಿಕಲಾ
ಮಗರ್ ವಹ್ ನ ನಿಕಲೀ ಜಿಸ್ಕೇ ಲಿಯೇ ಮೇರಾ ಜನಾಜ಼ಾ ನಿಕಲಾ

तोड्- मोड्
जॊड् चुकॆ दिल् तुम्सॆ..
हिम्मत् हो तॊ तोड् कॆ देखो....
मोड् चुकॆ राह् जीनॆ की...
हिम्मत् हो तॊ साथ् छोड् कॆ दॆखो

ತೋಡ್-ಮೋಡ್
ಜೊಡ್ ಚುಕೆ ದಿಲ್ ತುಮ್ಸೆ..
ಹಿಮ್ಮತ್ ಹೋ ತೊ ತೋಡ್ ಕೆ ದೇಖೋ....
ಮೋಡ್ ಚುಕೆ ರಾಹ್ ಜೀನೆ ಕೀ...
ಹಿಮ್ಮತ್ ಹೋ ತೊ ಸಾಥ್ ಛೋಡ್ ಕೆ ದೆಖೋ

Friday, October 14, 2011

ಪಾರೂ..ಹೋಗೋಣ್ವಾ ರೈಡ್ ಒಂದ್ಚೂರು....???.

 ಚಿತ್ರ ಕೃಪೆ: http://www.facebook.com/dharamjagran

ಬಸ್ವನ್ ಮ್ಯಾಲೆ ಕುಂತೂ ಕುಂತೂ ಬೋರಾಗೈತೆ
ಬೆನ್ಕ ಆ ಪಿಳ್ಳಾರಿ ಎಗ್ಣದ್ ಮ್ಯಾಲೆ ..
ನಿನೂ ಉಲಿ, ಸಿಮ್ಮ ಅಂತ ಬ್ಯಾಸ್ರ ಮಾಡ್ಕಂಡಿದ್ದೀಯಾ
ಬಾ ಆತ್ತಾಗೆ ..ಪಾರೂ ಓಗ್ಬರ್ಮಾ ಒಂದ್ ರೌಂಡು..

ಆ ಬಸ್ವ ತಿಂದೂ ತಿಂದೂ ಲದ್ದಿ ಆಕ್ತಾನೆ
ಇವ್ನ ಎಗ್ಣ..ಊನಿ ಕಾಣ್ದೇಟ್ಗೇ ಇವ್ನ ಬೀಳ್ಸಿ ಓಡೋಗ್ತದೆ..
ಇನ್ನ ನಿನ್ನ ಉಲಿ ಸಿಮ್ಗೋಳು..ದುಬಾರಿ ಆಗವೆ
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ಈ ಡಮ್ರು, ಈ ಬೂದಿ, ಎಣ್ಗೋಳ್..ಆಮ್ಯಾಕೆ ಗೋಳು..
ಅಲ್ಲಿ ಪೂಜೆ ಇಲ್ಲಿ ಪೂಜೆ..ಅಗ್ರ ಪೂಜೆ ..ಗಣೇಸ್ನ ಗೋಳು
ಸಕ್ತಿ, ಓಂಕಾಳಿ, ಆ ಓಮ, ಈ ಯಗ್ನ,,,ನಿನ್ ಬಾಳು..
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ಪೋಲಿಸಪ್ಪ್ ಇಡ್ದಿರೋ ಬೈಕಂತೆ ಇದು ..ಓಗ್ಬಾ ಸಿವಾ ಅಂದ...
ಅದ್ರ ಯಜಮಾನನ್ತಾವ್ ಇವ್ನ್ಯಾರೋ ಕದ್ದಂದಂತೆ..
ಅದೇನೋ ..ಪೆಟ್ರೋಲು ಅನ್ನೋದು    ಟ್ಯಾಂಕು ತುಂಬೈತಂತೆ..
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ನಮ್ಕೆಂಪೇಗೌಡ್ರೂರು ಬೋ ಬೆಳ್ದೈದಂತೆ ಉದ್ದಗ್ಲಕ್ಕೆ
ಕನ್ನಡ ಕಮ್ಮಿ ಎನ್ನಡ. ಎವಿಡಾ ಎಕ್ಕಡ ಜಾಸ್ತಿ ಅಂತೆ
ಫೋರಮ್ಮು, ಮಾಲು, ಐಟಿ, ಬಿಟಿ, ಕಾಲ್ಸೆಂಟ್ರಂತೆ
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ನನ್ನ ಇರೂಪಾಕ್ಸ ಅಂತಿದ್ದ ಪ್ರದೇಸ್ದಾಗೆ ಗಣಿ- ಧೂಳೆದ್ದೈತಂತೆ
ಭೂಮಿನ ಪರ್ದೇಸಕ್ಕೆ ಮಾರಿ ಧಣಿಗಳಾಗಿ ಜನ ಕುಂತೌವ್ರಂತೆ
ಅನ್ನ ಕೊಡೋ ರೈತರ್ಗೆ ಆಕಿ ಪಂಗ್ನಾಮ ಎಮ್ಮೆನ್ಸಿ ಬತ್ತೈತಂತೆ
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...

ಸಿವಾ ಸಿವಾ ಅಂತಾನೆ ಬುಡಕ್ಕೇ ತತ್ತಾರೆ.. ಇವರ್ವಿಸ್ಯ ತಿಳ್ಕಾಬೇಕು
ಗಣೇಶನ್ಹೆಸರಾಗೆ ದುಡ್ಡು, ಕೆರೆ ಕೊಳ್ಳ ಇಶ ಆಗೋ ಬಣ್ಣ ತುಂಬ್ತಾರಂತೆ
ಮಾಟ ಮಂತ್ರ..ಸಕ್ತಿ ತಾಯ್ತಾ, ಮಾರಿಗೆ ಕುರಿ ಕೋಳಿ ಬಲಿಕೊಡ್ತಾರಂತೆ
ಇದ್ಯಲ್ಲಾವೇ ಸರಿ ಮಾಡಾಕೆ ನಾವೇ ಪ್ರತ್ಯಕ್ಸ ನೋಡ್ಮಾ ಅದೇನಿದ್ದಾದು
ಅದಕ್ಮುಂಚೆ, ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...