ಛಾಯಾ ಚಿತ್ರ: ರಂಜಿತಾ ಹೆಗಡೆ
ಉದಯರವಿ
ಉದಯಿಸಿಹ ರವಿಯ ನೋಡು ಹೇಗೆ ಕೆಂಪು ಮೂಡಿದೆ
ಉದಯಿಸಿಹ ರವಿಯ ನೋಡು ಹೇಗೆ ಕೆಂಪು ಮೂಡಿದೆ
ಗಗನದಾಚೆ ಪೂರ್ವಾಂಗಣದಿ ಕೆಂಪು ನೀರು ಚಲ್ಲಿದೆ
ಕಿರಣ ಹರಡಿ ಬಾನಂಗಳದಲಿ ಹೊಂಬಣ್ಣವ ಸುರಿಸಿದೆ
ಕಲಕಲರವದಿ ಹರಿವನದಿ ದೇಗುಲ ಘಂಟೆ ಮೊಳಗಿದೆ
ಮೋಡವೆರಡೋ ಮೂರೋ ಧೈರ್ಯತುಂಬಿ ನಿಂತಿವೆ
ಒಡಲಾಳದಿ ಹನಿಗಳೆರಡ ಬಸಿರ ಬಯಕೆ ಹೊಂದಿವೆ
ಬೆಳಗಿನ ತಣ್ಣನೆಯ ಗಾಳಿ ತಾಗಿ ಮೋಡ ಭಾರವಾಗಿವೆ
ಹೀಗೇ ಹಲವು ಕೂಡಿ ಒಮ್ಮೆ ಭೂಮಿತುಂಬಾ ಹನಿಸಿವೆ
ಹನಿಯ ಕುಡಿದ ಮಣ್ಣು ತಾನೂ ಬೀಜ ಫಲಕೆ ಕಾದಿದೆ
ಬೀಜ ಬಿರಿದು ಮೊಳಕೆಯೊಡೆದು ಸಸಿತಲೆಯ ಎತ್ತಿದೆ
ಸಸಿಯೂ ಸವಿದು ನೀರಧಾರೆ ಬೆಳೆದು ಹೆಮ್ಮರವಾಗಿದೆ
ಮರಗಳೆಷ್ಟೋ ಭೂಮಿಗಪ್ಪಿ ಹಸಿರ ಹೊದಿಕೆಯಾಗಿದೆ
ಬೇಡ ಮನುಜ ಭೂಮಿ ಕಣಜ ಬಗೆದು ಖನಿಜದ ಆಸೆಗೆ
ಮಣ್ಣ ಕೊರೆತ ಮರಕೆ ಹೊಡೆತ ಬೀಳುವುವೆಲ್ಲ ಭೂಮಿಗೆ
ಹರಿವನದಿ ಕೊರೆವ ಬದಿ ನೆರೆಹಾವಳಿ ಸತತ ಬದುಕಿಗೆ
ಮೋಡಮಾಯ ಕಾಡುಮಾಯ ಸುಡಲು ಸೂರ್ಯಬೇಗೆ
thumba chennagide.. dhanyavadagalu
ReplyDeleteರಂಜಿತಾ ಕವನದ ಭಾವಕ್ಕೆ ಸ್ಫೂರ್ತಿ ಚಿತ್ರ ಹಾಗಾಗಿ ಶ್ರೇಯ ಚಿತ್ರಕ್ಕೆ,,, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ReplyDeleteಪ್ರಾಸದಿಂದ ಕೂಡಿದ ಕವನ ಓದಲು ಸಂತಸವಾಯ್ತು.
ReplyDeleteಪ್ರೇರಣೆ ನೀಡಿದ ಚಿತ್ರವೂ ಕಣ್ಸೆಳೆಯುವಂತಿದೆ.
Azad sir....
ReplyDeleteOdoke kushi aagutte...sundara prasa jodane....Madhura Kavana....Nice oine sir...
ಜಲನಯನ,
ReplyDeleteಕುವೆಂಪು ಅವರ ಕವನಗಳನ್ನು ನೆನಪಿಸುವ ಕವಿತೆ. ಸುಂದರವಾದ ವರ್ಣನೆಯಿಂದ ಕೂಡಿದೆ.
ಧನ್ಯವಾದ ಮಂಜುಳಾವ್ರೆ.. ಚಿತ್ರ ಕಂಡೊಡನೇ ಪದಗಳ ಸರವೊಂದು ಮೂಡಿತು ಹಾಗೇ ಕವನಕ್ಕೆ ಕೈ ಹಾಕಿದೆ.
ReplyDeleteಅಶೋಕ್, ಧನ್ಯವಾದ ನಿಮ್ಮ ಅನಿಸಿಕೆ ಮತ್ತು ಕವನವನ್ನು ಇಷ್ಟಪಟ್ಟಿದ್ದಕ್ಕೆ.
ReplyDeleteಸುನಾಥಣ್ಣ.. ಅವರ ಒಂದೆರಡು ಅಕ್ಷರದ ಸಮ ನನ್ನೆಲ್ಲಾ ಪ್ರಯತ್ನಗಳಾದರೂ ಧನ್ಯವೆನಿಸುತ್ತೆ ನನ್ನ ಕನ್ನಡ ಲೇಖನ ಕೃಷಿ... ನಿಮ್ಮ ಅಭಿಮಾನ ಪ್ರೋತ್ಸಾಹವೇ ನನಗೆ ಟಾನಿಕ್...ಧನ್ಯವಾದ
ReplyDeleteಅಂದದ ಚಿತ್ರಕ್ಕೆ ಚೆಂದದ ಕವನ.ಅಭಿನಂದನೆಗಳು.
ReplyDeleteಧನ್ಯವಾದ...ಡಾಕ್ಟ್ರೇ.. ಚಿತ್ರಕ್ಕೆ ಶ್ರೇಯ ರಂಜಿತಾಗೆ, ಕವನಕ್ಕೆ ನಿಮ್ಮ ಅನಿಸಿಕೆ ಧನ್ಯವಾದ...
ReplyDeleteಪ್ರಾಸದೊಂದಿಗೆ ಭಾವಗಳು ಮಿಳಿತವಾಗಿ ಮೂಡಿ ಬಂದ ಕವನದ ಸೊಗಸೋ ಸೊಗಸು..
ReplyDeleteಇಷ್ಟವಾಯ್ತು ಸರ್..
ಸುಶ್ಮಾ, ಧನ್ಯವಾದ...ಪ್ರಾಸ ನನಗೂ ಇಷ್ಟ...
ReplyDeleteಆಜಾದು...
ReplyDeleteಚಂದದ ಫೋಟೊಕ್ಕೆ ಸುಂದರ ಕವನ...
ಬೆಳಗಿನ ವಾತವರಣವೇ ಅಂಥಾದು ಅಲ್ವಾ?
ಚಿತ್ರಕ್ಕೆ ಮೆರಗು ತ೦ದ ಚಿತ್ರಣ. ಪದ ಲಾಲಿತ್ಯದೊಡನೆ ಪ್ರಾಸದ ಹೂರಣ.
ReplyDeleteಅಭಿನ೦ದನೆಗಳು.
ಅನ೦ತ್
sir nimage "prasa kavi "antha birudnnu kodabeku ...thumbha chennagagi prasa baritha , artha thumbida kavana bereyutthiri...
ReplyDeleteಸುಂದರ ಚಿತ್ರಕ್ಕೆ ಚೆಂದದ ಕವನ. ಚೆನ್ನಾಗಿದೆ ಬಯ್ಯಾ :)
ReplyDeleteಧನ್ಯವಾದ ಪ್ರಕಾಶೂ....
ReplyDeleteಅನಂತ್ ಸರ್.. ಪ್ರಸಾದ ನಿಮ್ಮ ಪ್ರತಿಕ್ರಿಯೆ ನಮಗೆ..ಧನ್ಯವಾದ
ReplyDeleteನೀವು ಕೊಟ್ಟರೇನೇ ಚಂದವದುವೇ
ReplyDeleteಹುಡುಗ ಹುಡುಗಿಗೆ ಆದಂತೆ ಮದುವೆ
ನಿಮ್ಮ ಅಭಿಮಾನವೆಂದರೆ ಇದುವೇ..
ಧನ್ಯವಾದ ಆಶಾವ್ರೆ...
ಮನಸೇ ಹೀಗೆ ಒಳ್ಳೆಯದನ್ನೆಲ್ಲಾ ಇಷ್ಟಪಡುತ್ತೆ, ಹಾರೈಸುತ್ತೆ .. ಸಿಗಲೆಂದು ಬಯಸುತ್ತೆ... ಧನ್ಯವಾದ ಬೆಹನಾ...
ReplyDeleteಪರ್ಯಾವರಣದ ಕಾಳಜಿಯ ಕವನ ಅದ್ಭುತ
ReplyDeleteಧನ್ಯವಾದ ಸೀತಾರಾಂ ಸರ್... ಪರಿಸರಕ್ಕೆ ನಮ್ಮ ಕೊಡುಗೆ ಸೊನ್ನೆಯೆನ್ನಬಹುದು ಅಲ್ವಾ...??
ReplyDelete