ಚಿತ್ರ ಕೃಪೆ: http://www.facebook.com/dharamjagran
ಬಸ್ವನ್ ಮ್ಯಾಲೆ ಕುಂತೂ ಕುಂತೂ ಬೋರಾಗೈತೆ
ಬೆನ್ಕ ಆ ಪಿಳ್ಳಾರಿ ಎಗ್ಣದ್ ಮ್ಯಾಲೆ ..
ನಿನೂ ಉಲಿ, ಸಿಮ್ಮ ಅಂತ ಬ್ಯಾಸ್ರ ಮಾಡ್ಕಂಡಿದ್ದೀಯಾ
ಬಾ ಆತ್ತಾಗೆ ..ಪಾರೂ ಓಗ್ಬರ್ಮಾ ಒಂದ್ ರೌಂಡು..
ಆ ಬಸ್ವ ತಿಂದೂ ತಿಂದೂ ಲದ್ದಿ ಆಕ್ತಾನೆ
ಇವ್ನ ಎಗ್ಣ..ಊನಿ ಕಾಣ್ದೇಟ್ಗೇ ಇವ್ನ ಬೀಳ್ಸಿ ಓಡೋಗ್ತದೆ..
ಇನ್ನ ನಿನ್ನ ಉಲಿ ಸಿಮ್ಗೋಳು..ದುಬಾರಿ ಆಗವೆ
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...
ಈ ಡಮ್ರು, ಈ ಬೂದಿ, ಎಣ್ಗೋಳ್..ಆಮ್ಯಾಕೆ ಗೋಳು..
ಅಲ್ಲಿ ಪೂಜೆ ಇಲ್ಲಿ ಪೂಜೆ..ಅಗ್ರ ಪೂಜೆ ..ಗಣೇಸ್ನ ಗೋಳು
ಸಕ್ತಿ, ಓಂಕಾಳಿ, ಆ ಓಮ, ಈ ಯಗ್ನ,,,ನಿನ್ ಬಾಳು..
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...
ಪೋಲಿಸಪ್ಪ್ ಇಡ್ದಿರೋ ಬೈಕಂತೆ ಇದು ..ಓಗ್ಬಾ ಸಿವಾ ಅಂದ...
ಅದ್ರ ಯಜಮಾನನ್ತಾವ್ ಇವ್ನ್ಯಾರೋ ಕದ್ದಂದಂತೆ..
ಅದೇನೋ ..ಪೆಟ್ರೋಲು ಅನ್ನೋದು ಟ್ಯಾಂಕು ತುಂಬೈತಂತೆ..
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...
ನಮ್ಕೆಂಪೇಗೌಡ್ರೂರು ಬೋ ಬೆಳ್ದೈದಂತೆ ಉದ್ದಗ್ಲಕ್ಕೆ
ಕನ್ನಡ ಕಮ್ಮಿ ಎನ್ನಡ. ಎವಿಡಾ ಎಕ್ಕಡ ಜಾಸ್ತಿ ಅಂತೆ
ಫೋರಮ್ಮು, ಮಾಲು, ಐಟಿ, ಬಿಟಿ, ಕಾಲ್ಸೆಂಟ್ರಂತೆ
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...
ನನ್ನ ಇರೂಪಾಕ್ಸ ಅಂತಿದ್ದ ಪ್ರದೇಸ್ದಾಗೆ ಗಣಿ- ಧೂಳೆದ್ದೈತಂತೆ
ಭೂಮಿನ ಪರ್ದೇಸಕ್ಕೆ ಮಾರಿ ಧಣಿಗಳಾಗಿ ಜನ ಕುಂತೌವ್ರಂತೆ
ಅನ್ನ ಕೊಡೋ ರೈತರ್ಗೆ ಆಕಿ ಪಂಗ್ನಾಮ ಎಮ್ಮೆನ್ಸಿ ಬತ್ತೈತಂತೆ
ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...
ಸಿವಾ ಸಿವಾ ಅಂತಾನೆ ಬುಡಕ್ಕೇ ತತ್ತಾರೆ.. ಇವರ್ವಿಸ್ಯ ತಿಳ್ಕಾಬೇಕು
ಗಣೇಶನ್ಹೆಸರಾಗೆ ದುಡ್ಡು, ಕೆರೆ ಕೊಳ್ಳ ಇಶ ಆಗೋ ಬಣ್ಣ ತುಂಬ್ತಾರಂತೆ
ಮಾಟ ಮಂತ್ರ..ಸಕ್ತಿ ತಾಯ್ತಾ, ಮಾರಿಗೆ ಕುರಿ ಕೋಳಿ ಬಲಿಕೊಡ್ತಾರಂತೆ
ಇದ್ಯಲ್ಲಾವೇ ಸರಿ ಮಾಡಾಕೆ ನಾವೇ ಪ್ರತ್ಯಕ್ಸ ನೋಡ್ಮಾ ಅದೇನಿದ್ದಾದು
ಅದಕ್ಮುಂಚೆ, ಬಾ ಅತಾಗೆ.. ಪಾರೂ ಓಗ್ಬರ್ಮಾ ಒಂದ್ ರೌಂಡು...
Super! Song..! Papa Shiv onde round ge vapus hogbidthane,, Kailasa da dari hididu...!
ReplyDeleteಹಹಹಹ್...ಹೌದು ಯೋಗಿ...ಈಗ ನಡೀತಿರೋ ಮೆಟ್ರೋ ಕಾಮಗಾರಿ..ಆ ಧೂಳು...ಪ್ರದೂಶಿತ ಗಾಳಿ...ಅಬ್ಬಬ್ಬಾ...ಅಂತ ....ಧನ್ಯವಾದ ಯೋಗಿ.
ReplyDeleteಬಾ ಶಿವನೇ,ಬ್ಯಾಡ ಈ ಊರು
ReplyDeleteಈ ಹೊಗೆ,ಈ ಧಗೆ,ಈ ಧೂಳು!
ಉಸಿರಾಡೋಕೆ ತೊಂದ್ರೆ
ಓಡಾಡೋಕೆ ತೊಂದ್ರೆ
ಕರೆಂಟಿಗೆ ತೊಂದ್ರೆ !
ಬಾ ಕೈಲಾಸವಾಸ
ನಮ್ ಕೈಲಾಸವೇ ವಾಸಿ!
ಹೋಗೋಣ ಸೀದಾ ಕೈಲಾಸಕ್ಕೆ!
ಗುದ್ದು...ಎದುರಿನ ಲಾರಿಗೆ!
ಡಾಕ್ಟ್ರೇ ಸಕ್ಕತ್ ಸಾಥ್ ಸಿವನಿಗೆ...ಗುದ್ದಿದ್ರೆ ಸುಮ್ಕೇ ಓದಾದ್ದಾ ಪಿರಾಣಾ...?? ಹಹಹ...ಚನಾಗಿದೆ ನಿಮ್ಮ ಪ್ರತಿಕ್ರಿಯೆನೂ...ಧನ್ಯವಾದ
ReplyDeletebO sandaagaithey sivane, siva, paarothammana yaatre magan kooda,
ReplyDeletepadyadage namoorina gabbellaa elirodu super aagade
:)
"ಪಾರೂ, ಆಯೇಗಿ ಕ್ಯಾ ತೂ ಖಂಡಾಲಾ?
ReplyDeleteಐಶ್ ಕರೇಂಗೆ, ಮಜಾ ಕರೇಂಗೆ,
ಆಯೇಗಿ ಕ್ಯಾ ತೂ ಖಂಡಾಲಾ?"
ಜಲನಯನ, ಶಿವ-ಪಾರ್ವತಿಯರ ಜೊತೆಗೆ ಸಖತ್ತಾದ jolly trip ಮಾಡಿಸಿದಿರಿ. ವಿನೋದಪೂರ್ಣ ಐಡಿಯಾಗಳು ಹಾಗು ಅದಕ್ಕೆ ತಕ್ಕ ಕಾವ್ಯರಚನೆ ನಿಮಗೆ ಹೊಳೆಯುವದನ್ನು ನೋಡಿದರೆ ವಿಸ್ಮಯವಾಗುತ್ತದೆ!
ರೂಪಾ, ಬೋ ಪಸಂದಾಗ್ ಆಕೀರಿ ತಗೋರಿ...ನಿಮ್ಮ ಅನ್ಸಿಕೆನಾ...
ReplyDeleteಸಿವಾ ಎಲ್ಲ ನೋಡಿ ಬೆನ್ಕಪ್ಪ ಬುದ್ದಿ ಕೊಟ್ಟು ಪಾರೊತಮ್ಮ ಶಕ್ತಿ (ಎಲೆಕ್ಟ್ರಿಸಿಟಿ) ಕೊಟ್ರೆ ಬೆಂಗ್ಳೂರು ಎದ್ದಾದು ಇಲ್ಲಾಂದ್ರೆ ಕಸ್ಟ ಐತೆ...
ಪಾರೂ ಆಯೇಗಿ ಪ್ಯಾರಿ ಪ್ಯಾರಿ ನಜರೋಂಸೆ..ಸಿವಾ ಕೆ ಸಾಥ್...ಮಗರ್ ಐಶ್ ಕರ್ನೆ ಮೆ ಮಿಶ್ಕಿಲ್ ಹೈ...ಖಬಾಬ್ ಮೆ ಹಡ್ಡಿ ಗಣೇಶಾ ಸಾಥ್ ಮೆ ಹೈ...ಹಹಹ ಧನ್ಯವಾದ...
ReplyDeleteಆಹಾ! ಸೂಪರ್ರೂ ಸೂಪರ್ರೂ...
ReplyDeleteಅಂದ ಹಾಗೆ ಪಾರೂ ಒಂದ್ ರೌಂಡು ಬದಳಾ ಹೇಗೆ?
ಗಣೀಶ, ಬೆಂಗ್ಳೂರು, ಬಳ್ಳಾರಿ ಹಿಂಗೆಲ್ಲ ಚೆನ್ನಾಗಿ ಹೇಳ್ತಾ ಹೋಗಿದ್ದೀರಾ ಸಾರ್.
ಪೊಗದಸ್ತು ಕವನ...
ಆಹಾ! ಸೂಪರ್ರೂ ಸೂಪರ್ರೂ...
ಪ್ರಸ್ತುತತೆಗೆ ಹಿಡಿದ ಕೈಗನ್ನಡಿ ನಿಮ್ಮ ಈ ಹಾಸ್ಯ-ವ್ಯ೦ಗ್ಯಭರಿತ ಸು೦ದರ ಕವನ. ಅಭಿನ೦ದನೆಗಳು.
ReplyDeleteಧನ್ಯವಾದ ಬದರಿ ಸರ್...ಹೂಂ...ಪಾರೊತಕ್ಕ ಏನೋ ಹೋಗಿ ಬಂದ್ಳು ಆದ್ರೆ ಗಣೇಶಾ ಅಲ್ಲೇ ಒಂದ್ಕಡೆ ಕೂತ್ಬಿಟ್ಟ...ಅಲ್ಲ ಕೂರ್ಸಿಬಿಟ್ರು...ಯಾಕಂದ್ರೆ ಗಣೇಶನ ಹಬ್ಬ ಆಗಿತ್ತು ಮುಂದಿನ ಹಬ್ಬದವರೆಗೂ ಸಿವಾ ಸಿವಾ ಗಣೇಶನ ಕಥೆ...ಹಹಹಹ
ReplyDeleteಪ್ರಭಾಮಣಿ ಮೇಡಂ ಧನ್ಯವಾದ...ಹೌದು ಸಿವ ಓಡೋಗ್ತಾನೆ ಒಂದೇ ರೌಂಡಿಗೆ ಬೆಂಗ್ಳೂರಿಂದ...ಹಹಹಹ
ReplyDeleteಅಜಾದ್,
ReplyDeleteನಿಮಗೊಂದು ಚಿತ್ರ ಸಿಕ್ಕರೆ ಸಾಕು ಅದಕ್ಕೆ ಸಕತ್ ಕವನ ಬರೆದುಬಿಡುತ್ತೀರಿ...ಪ್ರಸ್ತುತ ವಿಚಾರವನ್ನು ಚೆನ್ನಾಗಿ ವಿವರಿಸಿದ್ದೀರಿ...
ಶಿವು ಚಿತ್ರಪ್ರದರ್ಶನ ನೋಡಿಬಂದ ನಿಮಗೆ ಅವಕ್ಕೆಲ್ಲಾ ಭಾವವ್ಯಕ್ತತೆ ಬಂದರೆ ಹೇಗಿರುತ್ತೆ ಅನಿಸಿರಬೇಕು...ಇಲ್ಲಿಯೂ ನಿಮಗೆ ಅದೇ ಚಿತ್ರಗಳು...ಹಹಹ ದನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ReplyDeleteKavana tumba chennagide sir!
ReplyDeleteTumba ishta aaytu..:)
ಹೇ ಹೇ!!!!!!!೧
ReplyDeleteಕವಿತಾ ಧನ್ಯವಾದ..ನಿಮ್ಮ ಪ್ರತಿಕ್ರಿಯೆಗೆ...
ReplyDeleteಸೀತಾರಾಂ ಸರ್....ಓಹೋ...ಹೋ..ಹೋ...ಹಹಹಹ
ReplyDeletehmm.. super agede sir.. nice one
ReplyDeleteತರುಣ್...ಧನ್ಯವಾದ ನಿನ್ನ ಪ್ರತಿಕ್ರಿಯೆಗೆ...
ReplyDeleteಏನ್ ಸಿವಾ...
ReplyDeleteಮಸ್ತ್ ಬರ್ದೀದೀಯಾ...
ಹ್ಹಾ ಹ್ಹಾ.. !!
ನಿನಗೆ ನೀನೇ ಸಾಟಿ..
ಎಲ್ಲಿಂದ ಕಲಿತೆ ಮಾರಾಯಾ ಈ ಭಾಷೆಗಳ ರೀತಿ ??
SOOOOOOOOOOOPER LIKE......
ಎಲ್ಲಾ ನಿಮ್ಮಂಥ ಚಿತ್ರಗ್ರಾಹಕರ ಕರಾಮತ್ತು...ಮತ್ತೆ ಪ್ರೋತ್ಸಾಹದ ಫಲ ದೋಸ್ತಾ......
ReplyDeleteನನಗೆ ಈ ಹಾಡು ನೆನಪಾಗುತ್ತೆ...
ತುಮ್ ಯೂಂ ಹೀ ಸಾಥ್ ದೇನೆ ಕಾ ವಾದಾ ಕರೋ
ಮೈಂ ಯುಂ ಹೀ ಮಸ್ತ್ ನಗ್ಮೆ ಸುನಾತಾ ರಹೂಂ...
hahaha....chennagide siva.....
ReplyDeleteಸಿವಾ ಪಾರೊತಕ್ಕ...ಗಣೇಶನ್ನ ಕರ್ಕೊಂಡು ಓಗಿದ್ದೇ...ಪೆಟ್ರೋಲ್ ರೇಟು ಎಚಾಗೋಯ್ತು ಸಿವಾ....ಧನ್ಯವಾದ ಮಹೇಶ್...
ReplyDeletesakkattaagide jalanayanaravare.
ReplyDeleteavarigoo saakaagittu bere bere
pranigalamele prayana maadi anisutte.vidambanaatmakavaagide.
abhinandanegalu.
ಸಂದಾಗೈತೆ
ReplyDeleteಕಲರವ ಧನ್ಯವಾದ...ನಿಮ್ಮ ಅನಿಸಿಕೆಗೆ ಧನ್ಯವಾದ....
ReplyDelete