ಚಿತ್ರ: ದಿಗ್ವಾಸ್ ಹೆಗಡೆ
ನಮ್ಲೋಕ
ಕಣ್ಣ ಮುಚ್ಚಿ ಕುಂತಿನಿ
ಯಾಕೋ ಆಮ್ಯಾಲೆ ಹೇಳ್ತೀನಿ
ಆಡಾಕ್ಬಂದ್ರೆ ನಂನ್ಗುಟ್ಟು
ನಾ ನಿನ್ಜೊತೆ ಹಂಚ್ಕಾತೀನಿ
ಅಪ್ಪಾ ಕೊಟ್ಟ ಐದ್ರುಪಾಯ್
ಅಪ್ಪಾ ಕೊಟ್ಟ ಐದ್ರುಪಾಯ್
ಕೊಂಡ್ಕೊಳ್ಳಾಕೆ ಕಳ್ಳೆಕಾಯ್
ಇಬ್ರೂ ಕುಂತ್ಕಂಡ್ ತಿನ್ನಾಣಾ
ತಿನ್ನೋದ್ಚಂದ ಪುಟ್ಪುಟ್ಬಾಯ್
ಕಣ್ಣಾಮುಚ್ಚೆ ಕಾಡೆ ಗೂಡೆ
ಕಣ್ಣಾಮುಚ್ಚೆ ಕಾಡೆ ಗೂಡೆ
ಅವ್ಳೂ ಬಂದ್ಲು ಆಡಾಕ್ನೋಡೇ
ಪುಟ್ಲಂಗ ಆಕೊಂಡ್ ಪುಟ್ನಂಜಿ
ಅಮ್ಮ ಕೊಡ್ತಾಳೆ ಸೀರುಂಡೆ
ಸಂಜೆಗಂಟ ಆಡೋಣಾ
ಸಂಜೆಗಂಟ ಆಡೋಣಾ
ಜಗ್ಲಿ ಅತ್ಕೊಂಡ್ ಕೂರೋಣಾ
ಕುಂಟಾಬಿಲ್ಲೆ ಚೌಕಾಬಾರಾ
ನಮ್ನಮ್ ಮನೀಗೋಗೋಣಾ
ಮಕ್ಳೂ ನಾವ್ ನಮ್ದೇ ಲೋಕ
ಮಕ್ಳೂ ನಾವ್ ನಮ್ದೇ ಲೋಕ
ಕಪ್ಟ ವಂಚ್ನೆ ಇದ್ಯಾವ್ಲೋಕ
ಅವ್ರಿಗ್ ನಾನು ನನ್ಗೆ ಅವ್ರು
ಕಲಿಯಾಕ್ನಿಮ್ಗೆ ಬ್ಯಾರೆ ಬೇಕಾ?
ಹೌದು ಆಜಾದೂ...
ReplyDeleteಮಕ್ಕಳಿಂದ ನಾವು ಕಲಿಯೋದು ಬಹಳ ಇದೆ..
ಸಣ್ಣ ವಿಷಯಗಳಿಗೆ ಇಗೋ...
ಅದೆನ್ನೆಲ್ಲ ಬದುಕಿನ ಪೂರ್ತಿ ತುಂಬಿಕೊಂಡಿರುವ ಕಸದ ಬುಟ್ಟಿ ನಮ್ಮ ಮನಸ್ಸು..
ಮಗು ಅಳ್ತಿತ್ತು...
ಯಾವುದೋ ಕಾರಣಕ್ಕೆ ನಗು ಬಂದುಬಿಟ್ಟಿದೆ........
ಮಗು ನಗ್ತಾ ಇದೆ...
ಕೆನ್ನೆಗಳ ಮೇಲೆ ಕಣ್ಣೀರ ಹನಿ ಇನ್ನೂ ಇದೆ !!
ಸ್ವಲ್ಪ ಹೊತ್ತಿನ ಹಿಂದೆ ತಾನು ಅತ್ತಿದ್ದು ಮರೆತು..
ಹೂ ಮಗು ಚೆಲ್ಲುವ ಮುಗ್ಧ ಮನಸ್ಸುಗಳಿಂದ ನಾವು ಕಲಿಯಬೇಕಾದದ್ದು ಬಹಳ ಇದೆ...
ಚಂದದ ಹೂ... ಮಗುವಿನ ಕವನಕ್ಕೆ ಅಭಿನಂದನೆಗಳು...
ನಮ್ಮೊಳಗಿನ ಭಾವಗಳನ್ನು ಕೆದಕಿದ ದಿಗ್ವಾಸರಿಗೂ ಕೂಡ.. ಅಭಿನಂದನೆಗಳು..
ಕಣ್ಣ್ಮುಚ್ಚಿ ಹಾಡಿದೆನು ಅಂದು ನಾನು
ReplyDeleteಒಕ್ಕಣ್ಣಿನಲಿ ಪೋಟೋ ತೆಗೆದಿರಿ ನೀವು...
ಇಂದು ನಾ ಕಣ್ಮಿಚ್ಚಿ
ಹಾಡಿದರೆ ಅಂದಿನಂತೆ
ಪೋಟೋ ತೆಗೆಯುವಿರೇನು
ಇಂದು ನೀವು ಬಂದು...
ನನ್ನ ಭಾವಚಿತ್ರ ನೋಡಿದೊಡನೆ
ಬಾಬ್ಬಿಟ್ಟು ನೋಡುತಿಹರಲ್ಲಾ
ನನಗೆ ಇದಕಿಂತ
ಖುಷಿ ಬೇಕೇನು..?
ಪೋಟೋ ತೆಗೆಯಲಿ
ಎಂದು ನಾನು ಕುಳಿತಿಲ್ಲ
ಎಳೆ ಬಿಸಿಲು
ಬೆಚ್ಚಗಿಡುತಿಹುದೆಂದು
ಕುಳಿತಿಹೆನು ಬಂದು...
ಹಹಹಾ ತುಂಬಾ ಚೆನ್ನಾಗಿದೆ ನಿಮ್ಮ ಕವನ
...
ಕವನ,ಫೋಟೋ ಎರಡೂ ಚೆಂದ.
ReplyDeleteಪ್ರಕಾಶೂ ಥ್ಯಾಂಕ್ಸ್...ನಿನ್ನ ಪ್ರಕಾಶ ಚೆಲ್ಲಿದ್ದು ಗಿಗ್ವಾಸ ಸೊಗಸಾದ ಚಿತ್ರದಮೇಲೆ ಮಗುವಿನ ಭಾವನೆಗಳ ಮೇಲೆ...ಪ್ರತಿಕ್ರಿಯೆಗೆ ಧನ್ಯವಾದ
ReplyDeleteಧನ್ಯವಾದ ಸುಗುಣ...ಕವನಕ್ಕೊಂದು ಕವನದ ಪ್ರತಿಕ್ರಿಯೆ ....
ReplyDeleteಡಾಕ್ಟ್ರೇ ಧನ್ಯವಾದ...
ReplyDeleteಆಹಾ ಫೋಟೋ ಸೂಪರ್ .. ದಿಗ್ವಾಸಣ್ಣನ ಫೋಟೋ ಅಂದ್ರೆ ಕಾವ್ಯನೇ!
ReplyDeleteನಿಮ್ಮ ಕವನನೂ ಚೆನ್ನಾಗಿದೆ.. ಶಬ್ಧಗಳನ್ನ ಬಳಸಿಕೊಂಡದ್ದು ಚೆನ್ನಾಗಿದೆ . ಕವನವೋ ಫೋಟೋವೇ ಆಗಿದೆ ..
ದಿಗ್ವಾಸರ ಚಿತ್ರ, ನಿಮ್ಮ ಕವನ ಹಾಗು ಸುಗುಣಾ ಅವರ ಕವನ ಇವು ಮೂರೂ ಮನಸ್ಸಿಗೆ ಖುಶಿ ಕೊಟ್ಟವು!
ReplyDeletekavana matte chitra eraDu chennaagide sir.......
ReplyDeleteಈಶ್ವರ್ ಸರ್ ಹೌದು ದಿಗ್ವಾಸ್ ಸೆರೆಹಿಡಿದದ್ದು ಛಾಯಾಚಿತ್ರ ಮಾತ್ರವಲ್ಲ ಆ ಪುಟ್ಟಿಯ ಭಾವವನ್ನ ಜೊತೆಗೆ ನನ್ನ ಭಾವನೆಯನ್ನೂ....ಧನ್ಯವಾದ
ReplyDeleteಸುನಾಥಣ್ಣ ಧನ್ಯವಾದ..ಮಕ್ಕಳ ಕೆಲವೊಂದು ಭಾವವನ್ನು ಸೆರೆಹಿಡಿದರೆ ಚಿತ್ರದಲ್ಲಿ ಅದಕ್ಕಿಂತಾ ಉತ್ತಮ ಸ್ವಪ್ರಕಟಿತ ಕವನ ಮತ್ತೊಂದಿಲ್ಲ ಅಲ್ಲವೇ..??
ReplyDeleteದಿನಕರ್ ಎಲ್ಲಿದ್ದೀರಪ್ಪಾ? ಈ ಮಧ್ಯೆ ಎಲ್ಲೂ ಕಾಣ್ತಿಲ್ಲ..?? ಧನ್ಯವಾದ ಇಲ್ಲಿ ಬಂದು ಪ್ರತಿಕ್ರಿಯೆ ಹಾಕಿದ್ರಲ್ಲಾ...!!!
ReplyDeletesaar ellu hogilla... nimma sutta muttale iddene....
ReplyDeletehha hha... oduttaa idde nimma ellaa kavana...
hahaha, ದಿನಕರ್...೨೦ ಕ್ಕೆ ಮಂಗಳೂರಿಗೆ ಬರ್ತಿದ್ದೀನಿ...೨೪ ರ ವ್ರೆಗೂ ಇರ್ತೇನೆ ಕಾನ್ಫರೆನ್ಸ್ ಇದೆ.. ಸಿಗೋಣ ನಿಮಗೆ ಸಾಧ್ಯಾ ಅದ್ರೆ...
ReplyDeletechendada shishugeete..
ReplyDelete