ಛಾಯಾ ಚಿತ್ರ: ಪ್ರಕಾಶ್ ಹೆಗ್ಡೆ
ಜೀವನದಿ
ಹುಟ್ಟುಹಾಕಲು ಬೇಕು
ಗುಟ್ಟು ಅರಿಯಲು ಬೇಕು
ಇಲ್ಲವಿದು ಸುಲಭ ಹಾದಿ
ಮೆಟ್ಟಿ ಉಬ್ಬರಿಸೋ ಅಲೆ
ಜೀವ ಬಿಗಿಗೊಳಿಸೋ ಸೆಲೆ
ಏರಲೆಂದು ಬಯಸಿ ಗಾದಿ
ಬಿಟ್ಟು ತೀರದ ಬದುಕು
ಕಟ್ಟು ಬಾಳಿನ ಸರಕು
ನೀರ ಸೋಸುವುದೂ ಕಲೆ
ಜಲನಯನದ ಸೊಬಗು
ರುದ್ರ ಶರಧಿಯೂ ಮೆರಗು
ಹಾಯಿ-ಹಡಗು ಮೀನಬಲೆ
ಸುಳಿಗಳಿಲ್ಲದೇ ಎಲ್ಲಿದೆ
ಜಲಧಿ
ಅಗಣಿತ ಗುಣ ಜಲಪರಿಧಿ
ಗಣಿ-ತೈಲ ಮುತ್ತು
ಹುಟ್ಟುವುದಿಲ್ಲಿ
ನೆಲದಿ ಹರಿದಾಡಿರೆ ಸಿಹಿ
ಸಿಹಿಕೂಡಿ ಉಪ್ಪಿನಾಮೋಹಿ
ಸಾವಿನಲ್ಲೂ ದಿಟ
ಬದುಕಿಹುದಿಲ್ಲಿ
ಕವನ ಸರಣಿಯ ೨ನೇ ಭಾಗ ಸೊಗಸಾಗಿದೆ.
ReplyDeleteಹೇಳಿ ಕೇಳಿ 'ಜಲನಯನದ ಸೊಬಗು' ಅಸದಳ.
ಮೂರನೇ ಮತ್ತು ಆರನೇ ಸಾಲಿನ ಪ್ರಾಸಗಳು ಚೆನ್ನಾಗಿವೆ.
ReplyDeleteಚೆನ್ನಾಗಿದೆ
ಸ್ವರ್ಣ
ಆಜಾದೂ...
ReplyDeleteನಕತ್ ಆಗಿದೆ ಕವನದ ಸಾಲುಗಳು...
ಅದು ಹೇಗೆ ಪೊಣಿಸುತ್ತೀಯಾ ಮಾರಾಯಾ...
ನಿನಗೆ ಜೈ ಜೈ ಜೈ ಹೋ !!
ನೀರ ಸೋಸುವುದೂ ಕಲೆ
ReplyDeleteಜಲನಯನ ಬಲ್ಲರು ಸಲೆ!
ಕಾವ್ಯಸಾಗರದ ಆಳಕಿಳಿದು
ಹೆಕ್ಕುವರು ಮುತ್ತು ಹಿರಿದು!
`ಜೀವನದಿ'ಯ ಹರಿವು ಸೊಗಸಾಗಿದೆ. ಅಭಿನಂದನೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.
ReplyDeleteಸರಳ ಪದಗಳು,ಪ್ರಾಸಗಳೊಂದಿಗೆ ಅರ್ಥಪೂರ್ಣವಾದ ಕವಿತೆ ಚೆನ್ನಾಗಿ ಮೂಡಿದೆ.ಅಭಿನಂದನೆಗಳು.
ReplyDeleteಚೆಂದದ ಕವನ!
ReplyDeleteಧನ್ಯವಾದ ಬದರಿ ಸರ್,
ReplyDeleteಇದು ಪ್ರಕಾಶನ ಚಿತ್ರದ ಕರಾಮತ್ತು...ಅಲ್ಲದೇ ನನಗೆ ಸ್ವಾಭಾವಿಕ ಆಕರ್ಷಣೆ ನೀರ, ಹಡಗು-ದೋಣಿಯ, ಮೀನ ನೋಡಿದರೆ....
ಸ್ವರ್ಣ ಸ್ವಾಗತ ನನ್ನ ಬ್ಲಾಗ್ ಗೆ. ಜಲನಯನಕ್ಕೂ ಒಂದು ಭೇಟಿ ಹಾಕಿ...
ReplyDeleteಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ....ಪ್ರಾಸವಿರುವ ಕವನವೆಂದರೆ ಸುಂದರಿಗೆ ಆಭರಣವಿಟ್ಟಂತೆ..ಹಾಗಾಗಿ ....
ಪ್ರಕಾಶೂ...ನಿನ್ನ ಚಿತ್ರದ ಜಾದೂ ಹಾಕಿದ ಮೋಡಿಯಿದು..ಪೋಣಿಸಲು ಅಕ್ಷರ ಕವನಸಾಲು ಸಂತಾನೆ ಸ್ಫುರಿಸುವ ಶಕ್ತಿ ಇರುತ್ತೆ... ಬಹುಶಃ ಚಿತ್ರವಿಲ್ಲದೇ ಈ ಸಾಲುಗಳು ಮೂಡುತ್ತಿರಲಿಲ್ಲ...ನಿನಗೆ ಜೈ ಜೈ ಹೋ....ನಿನ್ನ ಪ್ರತಿಕ್ರಿಯೆಗೆ..ಸಲಾಂ...
ReplyDeleteಸುನಾಥಣ್ಣ..ಕವನಕ್ಕೆ ನಿಮ್ಮ ಪ್ರತಿಕ್ರಿಯೆ ಎನ್ನುವುದಕ್ಕಿಂತಾ ನಿಮ್ಮ ಆಶೀರ್ವಾದ ಸಿಗುತ್ತಿದೆ ಎನ್ನಲೇ...ಧನ್ಯವಾದ.
ReplyDeleteಪ್ರಭಾಮಣಿಯವರೇ...ಧನ್ಯವಾದ...
ReplyDeleteಮಂಜುಳಾವ್ರೇ ಧನ್ಯವಾದ.. ಪ್ರಾಸಕ್ಕೂ ನನಗೂ ಒಂಥರಾ ನಂಟು ಅನ್ನಿಸುತ್ತೆ...
ReplyDeleteಧನ್ಯವಾದ ಪ್ರದೀಪ್ ನಿಮ್ಮ ಪ್ರತಿಕ್ರಿಯೆಗೆ. ಹೇಗಿತ್ತು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ?
ReplyDeleteishta aytu kavana sir...
ReplyDeleteಸುಶ್ಮಾ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
ReplyDeleteishta aytu sir .. chennagide kavana...
ReplyDeleteಬದುಕಬಲೆಯಾಟ ಬಲು ತೆರನಾಗಿ ತೆರೆದಿದ್ದಿರಾ ಸುಂದರ ಸಾಲಲ್ಲಿ ಕವನವಾಗಿಸಿ....
ReplyDelete