Monday, September 12, 2011

ಬುಂಡೆ ಕ್ಯಾತೆ



ಏನ್ಲಾ ಬುಂಡೆ ನಾಗ ಎಸ್ರು ಎಸ್ರುವಾಸಿ ಆಗ್ತಾ ಐತೆ?
ಬೋ ಪೈನಾಗಿ ಬೆಳ್ದಿದ್ವು ಕೂದ್ಲು ಆವಾಗ
ಎಗರ್ಸ್ಕೊಂಡ್ ಓಡಾಡಿದ್ದು..ಜುಟ್ ಬಿಟ್ ಜೂಲ್ನಾಗ ಆಗಿದ್ದು..
ವೈನಾಗಿ ತಲೆಬಾಚಿ ಜೀನ್ಸ್ ಆಕಿ ಅರೆ-ರಾಮ ಅರೆ-ಕಿಸ್ನ ಆಗಿದ್ದು
ಬೆಲ್ ಬಾಟಮ್ ಈಟಗ್ಲ ಆಕಿ ಪುಕ್ಸಟ್ಟೆ ರಸ್ತೆ ಎಲ್ಲಾ ಗುಡ್ಸಿದ್ದು..!!!
ಎಲ್ ಲ್ಲಾ ಓಯ್ತು ಎಲ್ಲಾನೂವೆ...??

ಕೆರ್ಯಾಗಿನ್ನೀರ್ಮುಗ್ದು ಕುರ್ಚುಲ್ಬೆಳ್ಯೋಂಗೆ
ಅಲ್ಲಲ್ಲಿ ಒಂದೊಂದೇ ಚಿಗ್ರಕ್ಕೊಂಡ್ ಕುಂತಂಗೆ
ಗರ್ಕೆ ಮಾತ್ರ ಇತ್ಲಾಗ್ ವೈನಾಗ್ಬೆಳ್ದಂಗೆ
ತ್ವಾಟ ಎಲ್ಲಾ ಖಾಲಿ ಮಾಡ್ಕಂಡ್ಕೂತಿದ್ದೀಯಾ

ಓಗ್ಲಿ ಅತ್ಲಾಗೆ ಅಂದ್ರೆ..ಲಾನ್ ಮಿಸೀನು ಆಕಿ ಬೋಡ್ಸಿದ್ದ್ಯಾಕ್ಲಾ??
ಬಂಜ್ರು ಎದ್ದು ಕುಂತದೆ, ನೆತ್ತಿಮ್ಯಾಗೆ ಬೆಳೀಯೊಲ್ದು ಅಂತಾ
ಮೂರೋನಾಲ್ಕೋ ತಿಣಕಾಡ್ತಾ ಇದ್ದದು..
ಬಣ್ಣ ಗಿನ್ಣ ಅಚ್ಚಿದ್ಯೇನ್ಲಾ ಬೆಳ್ಳಗಾಗಿಲ್ಲ??

ಟೋಪೀನಾದ್ರೂ ಆಕ್ಕೊಂಡ್ ಓಡಾಡು..
ಕತ್ಲಾಗ್ ಮಕ್ಳು-ಎಂಗಸ್ರು ನೋಡಿದ್ರೆ ಎದ್ರ್ಕೊಂಡಾರು
ಅಲ್ಕಲ್ಲಾ ಯಾವನ್ಲಾ ಪೋಟಾ ತಗ್ದವನು..??
ಮಕಾ ಕಾಣಂಗಲ್ವಾ ತೆಗ್ಯಾದು..??

ಒಬ್ರು ಗುಂಡ ಎಂಕ ಅಂತಾರೆ; ಇನ್ನೊಬ್ರು ಗಾಬ್ರಿ ಬಸ್ಯ ಅಂತಾರೆ
ಅಲ್ಲೊಬ್ರು ಸಿಡ್ಕ ಸಿದ್ದ ಅಂದ್ರೆ; ಇಲ್ಲೊಬ್ರು ಡೌಟೇ ಬ್ಯಾಡ ಇದು
ನಮ್ಮಟ್ಟೀ ಕೋಳಿಕಳ್ಳ ಕರಿಯಾ ಅಂತಾರೆ
ಆಮೇಲೊಬ್ರು ಎಲ್ಡು ಸುಳಿಯವೆ....ಇದು ಸುಬ್ಬಾನೇ ಅಂತಾರೆ.
ಎಲ್ಲಾ ಬುಟ್ಟ್ ಪೂರ್ತಾ ಮನ್ಸನ್ ಪೋಟೋ ಆಕೇ ಬುಡು..
ನಂಗೊತೋ ನೀನ್ಬುಂಡೆ ನಾಗ ಅಂತಾ....!!!


Saturday, July 23, 2011

ಒಂದು ಅಂತರ್ಜಾಲದ ಚಿತ್ರದಿಂದ ಪ್ರೇರಿತ ಕವನ (Inspired by a Foto from the Net..)

Wednesday, July 13, 2011


ನಿನಗೊಂದು ಪ್ರಶ್ನೆ


ಕೊಲ್ಲುವ ನಿನಗೆ ಕೊಲೆಯೇ ಧರ್ಮ
ಮಾನವ ಜೀವಕೆಲ್ಲಿದೆ ನಿನ್ನಲಿ ಬೆಲೆ?
ಹೆತ್ತ ಕರುಳನ್ನೇ ಕಿತ್ತು ತಿನುವವ ನೀನು
ಮಹಾತ್ಮರ ಮಾತಿಗೆಲ್ಲಿದೆ ನೆಲೆ?

ಮನಸು ಮೌನವಾಗಿ ರೋದಿಸುತಿದೆ..
ತಿಳಿಯದಾಗಿದೆ ಹರಿವ ರಕ್ತ ಬೆರೆತಿದೆ
ನಿನ್ನವನದ್ದೋ ನಿನಗಾಗದವನದ್ದೋ
ಜೀವ ಭಯಕೆ ತಪ್ಪಿ ಓಡಿದವನದ್ದೋ?

ಏನೂ ಅರಿಯದ ಕಂದಮ್ಮನ ಅಳು
ಅಮ್ಮನ ರಕ್ತವ, ಅಣ್ಣನ ದೇಹವ
ತನ್ನವರ ಕಳಕೊಂಡವರ ಗೋಳು
ಅರಿವೇ ಇಲ್ಲವೇ ನಿನಗೆ ನೋವ ಭಾವ?

ಇದು ಅಲ್ಲ ಧರ್ಮ ಯಾರೂ ಹೇಳಲಿಲ್ಲ
ಪ್ರವರ್ತಕ ನೊಂದರಿಯ ವಿಚಾರಿಸಿದನಲ್ಲ
ಯಾರಿಂದ ಪ್ರೇರಿತ ಯಾರು ನಿನ್ನ ಗುರು?
ಕೊಲ್ವೆಯಾ ನಿನ್ನ ಕಂದನ ತಂದರೆ ಎದುರು?

Thursday, July 7, 2011

ಪುಟ್ಟಿಯ ವಿಸ್ಮಯ

(ಚಿತ್ರ ಕೃಪೆ: ಶ್ರೀ ಆನಂದ್ ಮತ್ತು ಶ್ರೀಮತಿ ಸೌದಾಮಿನಿ)

ಪುಟ್ಟಿಯ ವಿಸ್ಮಯ

ಓ..ಓ...ಅಲ್ನೋಡೇ ಅಮ್ಮಾ... ಅಬ್ಬಾ...!!!
ಎಂತಾ ಸಾಲು..!! ಕೆಂಪಗೆ ಒಂದರ ಹಿಂದೊಂದು
ನಾವು ಪ್ರೇಯರ್ ಗೆ ಸ್ಕೂಲಲ್ಲಿ ಹೋಗೋ ಹಂಗೆ
ಸಕ್ರೆ ತುಂಡು ಹಿಡ್ಕಂಡು..ಎಂತ ಡಿಸಿಪ್ಲಿನ್ನು ಅಲ್ಲಾ...??

ಆಮೇಲೆ...ಅಲ್ಲಿ ನೋಡು ಚಿಕ್ಕ ಮರಿ ಕಷ್ಟಪಡ್ತಿದೆ..
ಅರೆ,,,ಬಂತು..ಅದರ ಅಣ್ಣ ಅನ್ಸುತ್ತೆ..ಹೆಲ್ಪ್ ಮಾಡೋಕೆ
ಹಹಹ ಅಲ್ಲಿ..ಅಲ್ಲಿ..ಓ...ಈಗ ಕುಶಿ ಮರಿಗೆ ಕಾಣುತ್ತೆ
ಹಿಂದೆ..ಅಯ್ಯೋ ಗಡವ ಬತ್ತಿದೆ..ಅಯ್ಯೋ ..
ಡ್ಯಾಶ್ ಆಯ್ತು ..ಇಲ್ಲ ಇಲ್ಲ...ಪಕ್ಕ ಹೋಯ್ತು...

ಅಮ್ಮ ಅದು ಯಾರು...?? ದೊಡ್ಡದು..
ಅಪ್ಪನ್ ಥರ ಡುಮ್ಮ..ಮರಿನ ಮೇಲೆ ಎತ್ಕೊಂಡ್ತು
ಹೋಗ್ತಾ ಇದೆ,,,ಹಹಹ ನನ್ನ ಅಪ್ಪ ಎತ್ಕೊಳ್ಳೋ ಥರಾ...
ಎಲ್ಲಾ ಅದಕ್ಕೆ ದಾರಿ ಬಿಡ್ತಾ ಇವೆ...ಅದು ..ರಾಜಾನಾ..??

ಓ..ಓ..ಅಲ್ಲಿ ನೋಡೇ ಅಮ್ಮಾ... ಕ್ವೀನು...
ನಂಗೊತ್ತು..ನಿನ್ ತರಾ ಕ್ಯೂಟು...ರೆಡ್ಡು..
ಅರೆ ..ರಾಜಾನೂ ದಾರಿ ಬಿಡ್ತು ಅದಕ್ಕೆ...
ಎಂಥಾ ಡೌಲು..ಅಲ್ಲಾ...?? ಕುಶಿ ಆಯ್ತು
ಹೌದೂ.. ಅಮ್ಮಾ ..ಎಲ್ಲಿಗೋಗ್ತಿದೆ ಇರುವೆ ಸಾಲು???

Friday, June 24, 2011

ಮತ್ತೊಂದು ಮುಂಗಾರು

(ಮಿತ್ರ ಪ್ರಕಾಶನ: ಛಾಯಾ ಚಿತ್ತಾರ ಬ್ಲಾಗಿಂದ)

ದೂರ ಗಗನದಂಚಿನಲಿ ಬೆಳ್ಳಿ ಚಿನ್ನ
ಲೇಪನವಾದಂತೆ ಮೇಘಕ್ಕೆ ಬಳಿದ ಬಣ್ಣ
ರವಿಕಿರಣಕೂ ದುರ್ಭರವಾಗುತಿದೆ
ಹಲ ಬಣ್ಣಗಳ ಮೋಡ ಕಪ್ಪಾಗುತಿದೆ
ತೇಲ ತೇಲುತ ಹೆಚ್ಚಿದಂತೆ ಭಾರ
ಭೂಮಿಗಿಳಿಯಲು ಸಾಗದ ಸಾರ....

ಮೇಘ ಕಪ್ಪಾಗುವುದನೋಡುವಾಸೆ
ಕಪ್ಪು ಸೂರಮೇಲೆ ಕರಗಿಸುವಾಸೆ
ಕರಗಿದ ಸೆಲೆಯಡಿ ತೊಯ್ಯುವಾಸೆ
ತೊಯ್ದ ಸುಖದಲಿ ಇನಿಯನ ತೋಳಿನಾಸೆ
ತೋಳ ಬಂಧನದಲಿ ಎಲ್ಲ ಮರೆತು
ಮತ್ತೆ ಮೇಘಕಾಣುವ ಕನಸಲಿ ಕರಗುವಾಸೆ.....

ಬಿರಿದ ಭೂಮಿಯ ಕಣ್ಬಿಟ್ಟ ನೋಟ
ಬೀಳ್ಬಿಟ್ಟ ಹೊಲ ಹಾತೊರೆವ ತೋಟ
ಕೆಲವೆಡೆ ಬಿದ್ದವು ಹನಿದಂತೆ ಹನಿ
ನಿರಾಸೆಯಲಿ ಮುನಿದಂತೆ ದನಿ
ಕಡೆಗೂ ಮುಖದಲಿ ಕಂಡಿತ್ತು ಹರ್ಷ
ಕಪ್ಪಾದ ಮೇಘ ಧರೆಗಿಳಿಯಿತು ವರ್ಷ

Tuesday, June 21, 2011

(ಕೃಪೆ: ಪ್ರಕಾಶ್ ಹೆಗ್ಡೆ - ಬ್ಲಾಗ್ ಛಾಯಾಚಿತ್ತಾರದಿಂದ)

ನಿರೀಕ್ಷೆ


ಕಾದು ಕಾದು ಕಾತರತೆ ಸತ್ತಿದೆ
ಕುಳಿತಿದ್ದೆ ಬೆಳಕಲಿ ದೀಪ ಬತ್ತಿದೆ
ನಿನಗೇನು? ನಿನಗಿನ್ನೂ ಹೊತ್ತಿದೆ..
ನಾ ಬೆಳಕಿಂದ ಕತ್ತಲೆಡೆಗೆ ಜಾರಿದೆ

ಮೇಲಿಂದ ಬರಲು ಏನಡ್ಡಿ ?
ನನ್ನರ್ಥಮಾಡಿಕೋ ಏ ದಡ್ಡಿ
ನಂಬಿ ಕುಳಿತಿರುವೆ ನಿನ್ನನೇ...
ಮುಳುಗುವವಗೆ ಆಸರೆ ಹುಲ್ಲು ಕಡ್ಡಿ

ಮಹಡಿಯಿದು ನಿನ್ನದು
ಗಡಿಯದುವೇ ನನ್ನದು
ಕೈಬಿಡಬೇಡವೆಂದವಳು...
ಕೈಕೊಡುವುದು ಸಲ್ಲದು

ಅಂಗಳದಿ ಬೆಳಕು ಮಾಯವಾಗುವ ಮುನ್ನ
ತಿಂಗಳದು ಕರಗಿ ಕತ್ತಲಾಗುವ ಮುನ್ನ
ಕಂಗಳಲಿ ತುಂಬಿಕೊಳ್ಳಲುಬಹುದೇ?..
ನಿನ್ನಂದ ಚಂದವಿದು ಕರಗುವಾ ಮುನ್ನ

Thursday, June 2, 2011

ಎರಡು ಚಿತ್ರ ಕವನಗಳು (ಪ್ರಕಾಶು, ಪಾಲಾ)

ಚಿತ್ರ: ಪ್ರಕಾಶ್ (ಛಾಯಾಕನ್ನಡಿ)


ಧೂಪ್-ಛಾಂವ್

ಉಜಾಲೋಂಕೆ ಅಂಧೇರೆ
ಮನ್ಕಿ ಗೆಹರಾಯಿಯೋಂಮೆ
ಕೆಹತಾ ಹೈ ದಿಲ್ ಹೌಲೆ ಹೌಲೆ

ದಿನ್ ಢಲಾ ಶಾಮ್ ಹುಯೀ
ಇಂತಜಾರ್ ಮೆಂ ರಾಧಾ ಜಪೆ
ಶ್ಯಾಮ್ ಕಾ ನಾಮ್ ಹೌಲೆ ಹೌಲೆ

ದುನಿಯಾಂ ಕೆ ಲಿಯೆ ಭಲೆ ಹೋ ಅಂಧೇರೆ
ಮನ್ ಮಂದಿರ್ ಕೆ ಅಂಧೇರೋಂಮೆ ಭೀ ಜಲೆ
ಭಾವನಾವೋಂಕಾ ದಿಯಾ ಹೌಲೆ ಹೌಲೆ

ಜೋ ಉಜಾಲೋಂಮೆ ದಿಖೆ ಒಹ್
ಅಕ್ಸರ್ ಹೋತಾ ಹೈ ಆಂಖ್ ಕಾ ದೋಖಾ
ಧೋಕೆ ಭೀ ಹೋತೇಹೈಂ ಉಜಾಲೋಂ ಮೆ ಹೌಲೆ ಹೌಲೆ


ಚಿತ್ರ: ಪಾಲಾ (PaLa)

ಸವಾಲು

ವಾಹ್ರೆ ನನ್ನ ಇರುವೆ ನೀ ಕಾಲು ಕೆದಕುತಿರುವೆ..
ಕೆದಕು ಅಲ್ಲಾ ಮುದುಕನಾನು ಕೆಂಚು ಕೋತಿ ಇರುವೆ..
ಬಾರೋ ನನ್ನ ಮೀಸೆ ನೋಡು ಇರುವೆ ಮಾಮ...//೨// ವಾಹ್ರೆ ನನ್ನ ಇರುವೆ//

ಸಾಮನಾ

ಮೈಂ ತೇರೆ ಸಾಮನೆ
ತೂ ಮೇರೆ ಸಾಮನೆ
ಹಮ್ ಐಸೆ ಹೀ ಪ್ಯಾರ್ ಕರೆಂ

ಜೋ ಮುಝೇ ತೂ ಮಿಲ್ ಗಯಾ
ಮೈ ತೇರಿ ಹೀ ಹೋ ಗಯೀ
ಬಸ್ ಐಸೆ ಹೀ ಪ್ಯಾರ್ ಕರೇಂ


ನನ್ನು ದೋಚುಕೊಂಡುವಟೇ

ನನ್ನು ದೋಚುಕೊಂಡುವಟೇ
ಚೀಮಲ ದೊರಸಾನಿ
ಕನ್ನುಲ್ಲೋ ನುವ್ವೇ ಲೇ
ಎಲ್ಲಪ್ಪಡೂ ಸ್ವಾಮೀ...
ಎಲ್ಲಪ್ಪಡೂ ಸ್ವಾಮೀ..sss
// ನನ್ನು ದೋಚುಕೊಂಡು//