(ಚಿತ್ರ ಕೃಪೆ: ಶ್ರೀ ಆನಂದ್ ಮತ್ತು ಶ್ರೀಮತಿ ಸೌದಾಮಿನಿ)
ಪುಟ್ಟಿಯ ವಿಸ್ಮಯ
ಓ..ಓ...ಅಲ್ನೋಡೇ ಅಮ್ಮಾ... ಅಬ್ಬಾ...!!!
ಎಂತಾ ಸಾಲು..!! ಕೆಂಪಗೆ ಒಂದರ ಹಿಂದೊಂದು
ನಾವು ಪ್ರೇಯರ್ ಗೆ ಸ್ಕೂಲಲ್ಲಿ ಹೋಗೋ ಹಂಗೆ
ಸಕ್ರೆ ತುಂಡು ಹಿಡ್ಕಂಡು..ಎಂತ ಡಿಸಿಪ್ಲಿನ್ನು ಅಲ್ಲಾ...??
ಆಮೇಲೆ...ಅಲ್ಲಿ ನೋಡು ಚಿಕ್ಕ ಮರಿ ಕಷ್ಟಪಡ್ತಿದೆ..
ಅರೆ,,,ಬಂತು..ಅದರ ಅಣ್ಣ ಅನ್ಸುತ್ತೆ..ಹೆಲ್ಪ್ ಮಾಡೋಕೆ
ಹಹಹ ಅಲ್ಲಿ..ಅಲ್ಲಿ..ಓ...ಈಗ ಕುಶಿ ಮರಿಗೆ ಕಾಣುತ್ತೆ
ಹಿಂದೆ..ಅಯ್ಯೋ ಗಡವ ಬತ್ತಿದೆ..ಅಯ್ಯೋ ..
ಡ್ಯಾಶ್ ಆಯ್ತು ..ಇಲ್ಲ ಇಲ್ಲ...ಪಕ್ಕ ಹೋಯ್ತು...
ಅಮ್ಮ ಅದು ಯಾರು...?? ದೊಡ್ಡದು..
ಅಪ್ಪನ್ ಥರ ಡುಮ್ಮ..ಮರಿನ ಮೇಲೆ ಎತ್ಕೊಂಡ್ತು
ಹೋಗ್ತಾ ಇದೆ,,,ಹಹಹ ನನ್ನ ಅಪ್ಪ ಎತ್ಕೊಳ್ಳೋ ಥರಾ...
ಎಲ್ಲಾ ಅದಕ್ಕೆ ದಾರಿ ಬಿಡ್ತಾ ಇವೆ...ಅದು ..ರಾಜಾನಾ..??
ಓ..ಓ..ಅಲ್ಲಿ ನೋಡೇ ಅಮ್ಮಾ... ಕ್ವೀನು...
ನಂಗೊತ್ತು..ನಿನ್ ತರಾ ಕ್ಯೂಟು...ರೆಡ್ಡು..
ಅರೆ ..ರಾಜಾನೂ ದಾರಿ ಬಿಡ್ತು ಅದಕ್ಕೆ...
ಎಂಥಾ ಡೌಲು..ಅಲ್ಲಾ...?? ಕುಶಿ ಆಯ್ತು
ಹೌದೂ.. ಅಮ್ಮಾ ..ಎಲ್ಲಿಗೋಗ್ತಿದೆ ಇರುವೆ ಸಾಲು???
ಅಜಾದ್ ಸರ್ ಮಗುವಿನ ಅಚ್ಚರಿಯ ಭಾವನೆಯನ್ನು ಸೆರೆಹಿಡಿದ ಛಾಯಾಗ್ರಾಹಕರಿಗೆ ಸಲಾಂ, ಹಾಗು ಅದಕ್ಕೆ ಸಾತ್ ನೀಡುವಂತೆ ಕವಿತೆ ಬರೆದ ಕವಿಗೆ ಶರಣು . ಮಗುವಿನ ಭಾವನೆಗೆ ತಕ್ಕಂತೆ ಕವಿತೆ ಬಂದಿದೆ,ಇಷ್ಟ ಆಯ್ತು .ಗುಡ್
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
muddaada chitraanjaliya acchariya bhaava teredittiruva pari sundaravaagide.
ReplyDeleteಬಾಲು ಧನ್ಯವಾದ...ವಿಸ್ಮುಯಳ ಫೋಟೋ ನೋಡಿದಾಗಿನಿಂದ ಕಾಡ್ತಾ ಇದ್ದು..ಅದಕ್ಕೆ ರೂಪ್ ಕೊಡೋಕೆ ಆಗಿರ್ಲಿಲ್ಲ...ನಿನ್ನೆ ಇರುವೆ ಸಾಲನ್ನು ನೋಡಿ ಅಚ್ಚರಿ ಪಡೋ ಒಂದು ಪುಟ್ಟ ಮಗುವನ್ನು ನೋಡ್ದೆ...ಆಗ ಹರಿದ ಕಲ್ಪನಾ ಲಹರಿ...
ReplyDeleteಧನ್ಯವಾದ ಕಲರವ ಮೇಡಂ ಇದು ವಿಸ್ಮಯಳ ಭಾವಚಿತ್ರ...ಚಿತ್ರಾಂಜಲಿ ಕಳುಹಿಸಿದ್ದು..ಅವಳ ಮುಖಭಾವಕ್ಕೆ..ಹೊಂದಿಸೋ ಯತ್ನದಲ್ಲಿ ಬರೆದ ಕವನ..
ReplyDeleteಮುದ್ದಾದ ಮಗುವಿನ ಚಿತ್ರದ ಜೊತೆ ಚಂದದ ಕವಿತೆ ...
ReplyDeleteಧನ್ಯವಾದ ಶಶಿ...ನಿಮ್ಮ ಮುದ್ದಾದ ಪ್ರತಿಕ್ರಿಯೆಗೂ..
ReplyDeleteಚಂದದ ಕವಿತೆ ಮುದ್ದಾದ ವಿಸ್ಮಯಗೆ.....
ReplyDeleteಇರುವೆ ಸಾಲು ಉದ್ದಾಗಿತ್ತು
ReplyDeleteನಿಮ್ಮ ಪುಟ್ಟಿ ಮಾತಾಡಿತ್ತು
ಅಪ್ಪನಿಗೆ ಡುಮ್ಮ ಅಂತ
ಅಮ್ಮನಿಗೆ ಕ್ವೀನು ಅಂತಾ
ಚಿಕ್ಕ ಮರಿ ಕಷ್ಟ ಹೇಳಿತ್ತು
ಅಣ್ಣನ ಹೆಲ್ಪು ಕಾನಿತ್ತು
ರಾಜನಿಗೂ ಕ್ವೀಟು ರೆಡ್ದು
ಇರುವೆ ಮೇಲೆ ಪ್ರೀತಿ ಇತ್ತು
ನಿಮ್ಮ ಕವನ ಎಲ್ಲ ಇರುವೆಗೂ ಹಿಡಿಸಿತ್ತು ..
ಸರ್ , ಯಾವುದರ ಮೇಲೆ ಯಾವಾಗ್ ನೀವು ಕವನ ಬರಿತಿರ ಅಂತಾ ಹೇಳುವುದು ಕಷ್ಟಾನೆ
ಚೆನ್ನಾಗಿದೆ ನಿಮ್ಮ ಪುಟ್ಟಿಯ ಕವನ ಮತ್ತು ಅವಳ ಮುಗ್ಧ ಮಾತುಗಳು ...
ha ha ha tumba chennagide kavana bayya..puttiya mukhadalli vyakthavaagiro vismaya da bhaavanege sariyaagi saalu jodisidira..chennagide.
ReplyDeleteಜಲನಯನ,
ReplyDeleteಮುದ್ದು ಮಗುವಿನ ಅಚ್ಚರಿಯನ್ನು ಹೊಮ್ಮಿಸುವ ಭಾವಚಿತ್ರ ಬಲು ಸೊಗಸಾಗಿದೆ. ಅವಳ ಅಚ್ಚರಿಯನ್ನು ಕಲ್ಪಿಸಿ, ಮುದ್ದಾದ ಕವನಕ್ಕೆ ಇಳಿಸಿದ್ದೀರಿ. ಅಭಿನಂದನೆಗಳು.
wow.cute
ReplyDeleteಪುಟ್ಟಿ ಸಿಕ್ಕಾಪಟ್ಟೆ ಮುದ್ದಾಗಿದ್ದಾಳೆ. ಅಬ್ಬಬ್ಬಾ... ಅದೇನು ಭಾವ ! ಕವನ ಕೂಡ ಚೆನ್ನಾಗಿದೆ ಸಾರ್...
ReplyDeleteಶ್ಯಾಮಲ
ಧನ್ಯವಾದ ಮಹೇಶ್...ಮುದ್ದು ಪುಟ್ಟಿಗೆ ನನ್ನದೂ ಧನ್ಯವಾದ,,,ಮತ್ತು ಆಶೀರ್ವಾದ..
ReplyDeleteಕೀರ್ತಿ...ನಿಮ್ಮ ಕವನಕ್ಕೆ ಕವನದ ಪ್ರತಿಕ್ರಿಯೆಗೆ ಧನ್ಯವಾದ,,
ReplyDeleteಚೇತು ನಿನ್ನಷ್ಟೇ ಖುಷಿ ಆಯ್ತು ನನಗೂ ಈ ಮುದ್ದು ಪುಟ್ಟಿಯ ಭಾವಚಿತ್ರ ಕಂಡಾಗ...ಧನ್ಯವಾದ ನಿನ್ನ ಪ್ರತಿಕ್ರಿಯೆಗೆ.
ReplyDeleteಸುನಾಥಣ್ಣ....ಧನ್ಯವಾದ ನನಗೆ ಚಿತ್ರದ ಗುಣಮಟ್ಟಕ್ಕೆ ..ಆ ಮುದ್ದು ಪುಟ್ಟಿಯ ಮುಖಭಾವಕ್ಕೆ ಹೊಂದಿಕೊಂಡಂತೆ ಕವನ ರಚಿಸಲಾಯಿತೋ ಇಲ್ಲವೋ ಎನ್ನುವುದು ನನ್ನ ಆತಂಕ...ಧನ್ಯವಾದ ನಿಮ್ಮ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹಕ್ಕೆ.
ReplyDeleteಧನ್ಯವಾದ ವಿಜಯಶ್ರೀ...
ReplyDeleteಶ್ಯಾಮಲಾವ್ರೆ...ಹೌದು ಪುಟ್ಟಿ ತುಂಬಾ ಕ್ಯೂಟ್ ಅದರ ಜೊತೆಗೆ ಪುಟ್ಟಿಯ ಮುಖ ಭಾವ ಇನ್ನೂ ಸೂಪರ್....
ReplyDeleteತುಂಬಾ ಚೆನ್ನಾಗಿದೆ ಸರ್ ಕವನ... ಪುಟ್ಟಿ ಮಾತ್ರ ಸೂಪರ್, ಮಸ್ತ್ ಪೋಟೋ
ReplyDeleteಆ ಪುಟ್ಟಿ ಹೇಗೆ ಸುಂದರವಾಗಿ, ಮುದ್ದಾಗಿದ್ದಾಳೊ ಹಾಗೆಯೆ ಸೊಗಸಾಗಿದೆ ಕವಿತೆ
ReplyDeleteಚಿತ್ರ-ಚಿತ್ರಣ.....ಮೋಡಿ ಮಾಡುತ್ತವೆ..:) ಅಭಿನ೦ದನೆಗಳು ಸರ್.
ReplyDeleteಅನ೦ತ್
ಧನ್ಯವಾದ ಸುಗುಣ...ಮಗು ತುಂಬಾ ಎಕ್ಸ್ ಪ್ರೆಸಿವ್ ಪೋಸ್ ಕೊಟ್ಟಿದೆ..ಅಲ್ವಾ??
ReplyDeleteಆಶಾವ್ರೆ ಧನ್ಯವಾದ ಮಗುವಿನ ಭಾವಕ್ಕೆ ತಕ್ಕ ಕವನ ಬರೆಯುವ ಪ್ರಯತ್ನ...
ReplyDeleteಅನ್ಂತ್ ಸರ್ ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ
ReplyDelete