ನಿನಗೊಂದು ಪ್ರಶ್ನೆ
ಕೊಲ್ಲುವ ನಿನಗೆ ಕೊಲೆಯೇ ಧರ್ಮ
ಮಾನವ ಜೀವಕೆಲ್ಲಿದೆ ನಿನ್ನಲಿ ಬೆಲೆ?
ಹೆತ್ತ ಕರುಳನ್ನೇ ಕಿತ್ತು ತಿನುವವ ನೀನು
ಮಹಾತ್ಮರ ಮಾತಿಗೆಲ್ಲಿದೆ ನೆಲೆ?
ಮನಸು ಮೌನವಾಗಿ ರೋದಿಸುತಿದೆ..
ತಿಳಿಯದಾಗಿದೆ ಹರಿವ ರಕ್ತ ಬೆರೆತಿದೆ
ನಿನ್ನವನದ್ದೋ ನಿನಗಾಗದವನದ್ದೋ
ಜೀವ ಭಯಕೆ ತಪ್ಪಿ ಓಡಿದವನದ್ದೋ?
ಏನೂ ಅರಿಯದ ಕಂದಮ್ಮನ ಅಳು
ಅಮ್ಮನ ರಕ್ತವ, ಅಣ್ಣನ ದೇಹವ
ತನ್ನವರ ಕಳಕೊಂಡವರ ಗೋಳು
ಅರಿವೇ ಇಲ್ಲವೇ ನಿನಗೆ ನೋವ ಭಾವ?
ಇದು ಅಲ್ಲ ಧರ್ಮ ಯಾರೂ ಹೇಳಲಿಲ್ಲ
ಪ್ರವರ್ತಕ ನೊಂದರಿಯ ವಿಚಾರಿಸಿದನಲ್ಲ
ಯಾರಿಂದ ಪ್ರೇರಿತ ಯಾರು ನಿನ್ನ ಗುರು?
ಕೊಲ್ವೆಯಾ ನಿನ್ನ ಕಂದನ ತಂದರೆ ಎದುರು?
ಇದೊಂದು ಹೀನಾಯ ಕೃತ್ಯ..
ReplyDeleteಭ್ರಷ್ಟ ರಾಜಕಾರಣಿಗಳೇ ದೊಡ್ಡ ಭಯೋತ್ಪಾದಕರಾಗಿದ್ದಾರೆ. ಇವರಲ್ಲಿರುವ ಕಪ್ಪುಹಣವು ಹವಾಲಾದ ಮೂಲಕ ಸ್ವಿಸ್ ಬ್ಯಾಂಕುಗಳಿಗೆ ತಲುಪುತ್ತಿದೆ. ಆ ಹವಾಲಾ ಹಣವು ಭಯೋತ್ಪಾದಕರ ಕೈಗಳಿಗೆ ಹೋಗುತ್ತಿದೆ. ಅರ್ಥಾತ್, ಭಾರತದ ಬಡ ಪ್ರಜೆಗಳನ್ನು ಲೂಟಿ ಮಾಡಿ, ಆ ಹಣದಿಂದ ಅವರನ್ನೇ ಕೊಲ್ಲಿಸಲಾಗುತ್ತಿದೆ! ನಮ್ಮ ಮತದಾರರು ಇದನ್ನು ಅರ್ಥ ಮಾಡಿಕೊಂಡು ಭ್ರಷ್ಟರಿಗೆ ಮತ ನೀಡುವದನ್ನು ನಿಲ್ಲಿಸಬೇಕು.
ReplyDeleteಮಾನವತೆಯೇ ಇಲ್ಲದವರು ಮೃಗಗಳ ಜಾತಿಗೂ ಸೇರ್ಪಡೆಯಾಗುವುದಿಲ್ಲ...ಏಕೆಂದರೆ ಮೃಗಗಳೂ ಹಸಿವೆಯಿಲ್ಲದೇ ಇನ್ನೊಂದು ಪ್ರಾಣಿಯನ್ನು ಹಿಂಸಿಸುವುದಿಲ್ಲ...ಹೌದು ಸುಗುಣ ಅತಿ ಹೀನ ಕೃತ್ಯ....ಖಂಡನೀಯ ಇಂತಹವರು ಎಲ್ಲಾ ಕಾಲಾಕ್ಕೂ
ReplyDeleteಸುನಾಥಣ್ಣ ..ನಿಮ್ಮ ಮಾತು ಸತ್ಯ..ರಾಜಕಾರಣಿಗಳಿಂದ ಹುಟ್ಟಿದ್ದೇ ಭಯೋತ್ಪಾದನೆ..ಇವರ ಕುಮ್ಮಕ್ಕು ಇಲ್ಲದಿದ್ದರೆ ಇವರ ಹುಟ್ಟಡಗಿಸುವುದು ನಮ್ಮ ರಕ್ಷಕ ದಳಗಳಿಗೆ ಕಷ್ಟವೇನಲ್ಲ...ಅಡಗಿ ಕುಳಿತು ಹೀನವಾಗಿ ಕೊಲುವ ಇವರಿಗೆ ದಯೆ ತೋರದೆ ಹುಚ್ಚುನಾಯಿಯನ್ನು ಕೊಲ್ಲುವಂತೆ ಕೊಂದರೂ ತಪ್ಪಿಲ್ಲ...
ReplyDeleteಹೀನಾಯ ಕೃತ್ಯವೆಸಗಿದವರಿಗೆ ಧಿಕ್ಕಾರವಿರಲಿ..
ReplyDeleteಭಯೋತ್ಪಾದಕರಿಗೆ ಧಿಕ್ಕಾರವಿರಲಿ.....
ReplyDeleteನಿಮ್ಮ ಕವನದ ಕೊನೆಯ ಸಾಲಿನ ಪ್ರಶ್ನೆಯನ್ನು ಅಂಥವರೊಮ್ಮೆ ಕೇಳಿಕೊಳ್ಳಲಿ..ಛೀ.. ಇದೂ ಒಂದು ಬದುಕೇ...?
ಅನಂತ್ ಸರ್...ಪೈಶಾಚಿಕ ಕೃತ್ಯಕ್ಕೆ ಖಂಡನೆ ಒಂದೇ ಅಲ್ಲದೇ ಶೀಘ್ರ ದಂಡನೆಯೂ ಆಗಬೇಕು ಇಲ್ಲವಾದರೆ ಇಂತಹವರಲ್ಲಿ ಒಂದು ರೀತಿಯ ಮೊಂಡು-ಭಂಡತನ ಬೆಳೆದುಬರುತ್ತೆ....
ReplyDeleteಮಂಜುಳಾದೇವಿಯವರೇ...ಖಂಡನೀಯ ಯಾರೇ ಮಾಡಿದ್ರೂ...ತಮ್ಮವರನ್ನು ಜೋಪಾನ ಮಾಡಿಯೇ ಎಲ್ಲ ಕಾರ್ಯ ನಡೆಸ್ತಾರೆ...ಇವರಿಗೆ ಮನಸ್ಸಾಕ್ಷಿ ಅನ್ನೋದೇ ಇರೊಲ್ಲ ಅನ್ಸುತ್ತೆ.
ReplyDeleteಭಯೋತ್ಪಾದನೆ ಭ್ರಷ್ಟಾಚಾರಕ್ಕೆ ದುಷ್ಟ ರಾಜಕಾರಿಣಿಗಳೇ ಕಾರಣ..
ReplyDeleteನಾವೆಲ್ಲ ಒಂದಾಗೋಣ, ಸುಸಂಸ್ಕ್ರತ ರಾಷ್ಟ ಕಟ್ಟೋಣ
bejaaraagatte sir
ReplyDeleteidrinda enu sigatte avarige artha agalla
ಆಶಾವ್ರೇ ಜನಜಾಗೃತಿ ಜತೆಗೆ ಎಲ್ಲರಲ್ಲೂ ದೇಶಾಭಿಮಾನ ಮತ್ತು ಕಾಳಜಿ ಬೆಳೆದರೆ ಮನೆಯನ್ನು ದುರಸ್ತಿ ಮಾಡಿಕೊಳ್ಳುವುದರ ಜೊತೆಗೆ ..ಹೊರ ಶತೃವನ್ನು ಹಿಡಿಯುವುದು ಕಷ್ಟವಾಗಲಾರದು....ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ReplyDeleteಧನ್ಯವಾದ ಗುರು,,,ಪ್ರತಿಕ್ರಿಯೆಗೆ...ನಿಜಕ್ಕ್ಕೂ ಅರ್ಥವಾಗದು...ಏನು ಸಿಗುತ್ತೆ? ಅಮಾಯಕರನ್ನು ಕೊಲ್ಲುವ ಹೀನಾತಿಹೀನ ಕೃತ್ಯದಿಂದ...
ReplyDeleteಇದಕ್ಕೆ ಕೊನೆ ಯಾವಾಗ..? ..
ReplyDeleteಇದು ನಮ್ಮ ಭಾರತ ಸರ್ಕಾರದ ಕರುಣೆಗೆ ಉಗ್ರಗಾಮಿಗಳ ಪ್ರತಿಪಲ ...
well written poem. There is no end to terror activities in india until gov wake up.
ReplyDeleteAlliyavage namma life istene..:)
Nimmava,
Raghu
ಧನ್ಯವಾದ ಸಂದೀಪ...ಸರ್ಕಾರದ ಕರುಣೆ ಅನ್ನೋದಕ್ಕಿಂತ ಅವರ ಮೃದು ಧೋರಣೆ..
ReplyDeleteಥ್ಯಾಂಕ್ಸ್ ರಾಘು....ಸರ್ಕಾರಕ್ಕೆ ತನ್ನ ಉರಿತಿರೋ ತಳ ಬಚಾವಾಗೋದು ಮುಖ್ಯ...
ReplyDelete