Friday, June 24, 2011

ಮತ್ತೊಂದು ಮುಂಗಾರು

(ಮಿತ್ರ ಪ್ರಕಾಶನ: ಛಾಯಾ ಚಿತ್ತಾರ ಬ್ಲಾಗಿಂದ)

ದೂರ ಗಗನದಂಚಿನಲಿ ಬೆಳ್ಳಿ ಚಿನ್ನ
ಲೇಪನವಾದಂತೆ ಮೇಘಕ್ಕೆ ಬಳಿದ ಬಣ್ಣ
ರವಿಕಿರಣಕೂ ದುರ್ಭರವಾಗುತಿದೆ
ಹಲ ಬಣ್ಣಗಳ ಮೋಡ ಕಪ್ಪಾಗುತಿದೆ
ತೇಲ ತೇಲುತ ಹೆಚ್ಚಿದಂತೆ ಭಾರ
ಭೂಮಿಗಿಳಿಯಲು ಸಾಗದ ಸಾರ....

ಮೇಘ ಕಪ್ಪಾಗುವುದನೋಡುವಾಸೆ
ಕಪ್ಪು ಸೂರಮೇಲೆ ಕರಗಿಸುವಾಸೆ
ಕರಗಿದ ಸೆಲೆಯಡಿ ತೊಯ್ಯುವಾಸೆ
ತೊಯ್ದ ಸುಖದಲಿ ಇನಿಯನ ತೋಳಿನಾಸೆ
ತೋಳ ಬಂಧನದಲಿ ಎಲ್ಲ ಮರೆತು
ಮತ್ತೆ ಮೇಘಕಾಣುವ ಕನಸಲಿ ಕರಗುವಾಸೆ.....

ಬಿರಿದ ಭೂಮಿಯ ಕಣ್ಬಿಟ್ಟ ನೋಟ
ಬೀಳ್ಬಿಟ್ಟ ಹೊಲ ಹಾತೊರೆವ ತೋಟ
ಕೆಲವೆಡೆ ಬಿದ್ದವು ಹನಿದಂತೆ ಹನಿ
ನಿರಾಸೆಯಲಿ ಮುನಿದಂತೆ ದನಿ
ಕಡೆಗೂ ಮುಖದಲಿ ಕಂಡಿತ್ತು ಹರ್ಷ
ಕಪ್ಪಾದ ಮೇಘ ಧರೆಗಿಳಿಯಿತು ವರ್ಷ

11 comments:

  1. ಆಜಾದು..

    ಕವನದ ಸಾಲುಗಳು ಬಹಳ ಸೊಗಸಾಗಿದೆ..

    ಮೂರು ಚರಣಗಳು..
    ಮೂರು ರೀತಿಯ ಭಾವಗಳನ್ನು ಸೂಚಿಸುವ ..
    ಭಾವಾರ್ಥ ಬಲು ಸೊಗಸು..

    ಅಭಿನಂದನೆಗಳು..

    ಧನ್ಯವಾದಗಳು... ಜೈ ಹೋ !!

    ReplyDelete
  2. ಧನ್ಯವಾದ ಪ್ರಕಾಶೂ...ಇದು ಚಿತ್ರದ ಕಮಾಲು ನನ್ನದು ಅದಕ್ಕೆ ಪದಗಳ ಅಹವಾಲು.

    ReplyDelete
  3. ಅಜಾದ್ ಸರ್...ಕವಿತೆ ಚೆನ್ನಾಗಿದೆ...ಬೆಂಗಳೂರಿನಲ್ಲಿ ಇಂದು ಒಳ್ಳೆ ಮಳೆ ಬರ್ತಾ ಇದೆ..
    :)
    ನಿಮ್ಮವ,
    ರಾಘು.

    ReplyDelete
  4. ಮುಂಗಾರಿನ ಚಿತ್ರಣ ತುಂಬಾ ಚೆನ್ನಾಗಿದೆ. ನನ್ನ ಕವನ "ಮುಗಿಲ ಆಟ" ವನ್ನು ಒಮ್ಮೆ ಓದಿ ನೋಡಿ.

    ReplyDelete
  5. ಮಳೆಗಾಲವೆಂದರೆ ಎಲ್ಲರಿಗೂ ಆಸೆ!

    ReplyDelete
  6. ರಾಘು ಧನ್ಯವಾದ ನಿನ್ನ ಬ್ಲಾಗ್ ಪಯಣ ಮತ್ತೆ ಪ್ರಾರಂಭವಾದುದಕ್ಕೆ ಸಂತೋಷ.

    ReplyDelete
  7. ಮಂಜುಳಾವ್ರೆ ಖಂಡಿತಾ ಭೇಟಿ ನೀಡ್ತೇನೆ...ಧನ್ಯವಾದ ಪ್ರತಿಕ್ರಿಯೆಗೆ

    ReplyDelete
  8. ಸುನಾಥಣ್ಣ ಅಲ್ಲಿ ಹೇಗೆ ಮಳೆ ಜೋರಾ...ಇಲ್ಲ ಸಪ್ಪೆಯಾ...?? ಇಲ್ಲಂತೂ ಮರುಭೂಮಿ...ಅಲ್ಲಿನ ಚಿತ್ರಣ ಮಾಡ್ಕೋಬೇಕು ಅಷ್ಟೇ,,,ಅದರಲ್ಲೇ ಮೂಡಿ ಬಂದ ಒಂದು ಭಾವಮಂಥನದ ಕವನ...ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ

    ReplyDelete
  9. tumba sundara saalugalu bayyaa...mungarinalli nenedu nasu naachuva bhoomaateya nota ve balu sundara alva...:)

    ReplyDelete
  10. ಧನ್ಯವಾದ ಚೇತು...ಅಂತೂ ಬಂದೆ ಒಮ್ಮೆ ಈ ಕಡೆ...ಹಹಹ...ನಿನ್ನ ಮಾತು ನಿಜ.. ಮಳೆಯಲ್ಲಿ ನೆನೆಯೋಕೆ ಭೂಮಾತೆಗೆ ಎಷ್ಟು ಇಷ್ಟವೋ ಅಷ್ಟೇ ಇಷ್ಟ ಆಗ್ತಿತ್ತು ಮೊದಲ ಹನಿಗೆ ಮೈಯೊಡ್ಡೋಕೆ ನಮ್ಮ ಸ್ಕೂಲ್ ದಿನಗಳಲ್ಲಿ,,,

    ReplyDelete
  11. ಚಂದದ ಸಾಲುಗಳು

    ReplyDelete