Wednesday, December 22, 2010

ಅಯ್ನೋರೆ ಸ್ವಲ್ಪ ಎಚ್ರ
(ಬಾಬೂಜಿ ಧೀರೆ ಚಲ್ನಾ...ಶೈಲಿ/ಧಾಟಿ)


ಅಯ್ನೋರೆ ಸ್ವಲ್ಪ ಎಚ್ರ
ಲವ್ವಲೀ ಸ್ವಲ್ಪ ಹುಷಾರು
ಹಾಂ....ಇಲ್ಲಿ ಮೋಸಾನೇ ..
ಇಲ್ಲಿ ಮೋಸಾನೇ ನಡೀತೈತಂತೆ// ಅಯ್ನೋರೆ ಸ್ವಲ್ಪ//

ನೀವು ಬಿದ್ದಾಯ್ತು ಹುಡ್ಗೀರ ಹಿಂದೆ...
ಯಾಕೆ ಕಾಣ್ತಿಲ್ಲ ಸರಿ ದಾರಿ ಮುಂದೆ..
ಇದು ಅಯ್ನೋರ್ದು ಮೊದಲನೇ ಹೆಜ್ಜೆ
ಪ್ರತಿ ಹುಡ್ಗಿಯೂ ನಿಮ್ ಕಣ್ಗೆ ರಂಭೆ
ಹಾಂ ಇಲ್ಲಿ ಮೋಸಾನೇ ..
ಇಲ್ಲಿ ಮೋಸಾನೇ ನಡೀತೈತಂತೆ//ಅಯ್ನೋರೆ ಸ್ವಲ್ಪ//

ಇದು ಹುಡ್ಗೀರು ಅಡ್ಡಾಡೋ ಜಾಗ
ಇದೆ ಅಯ್ನೋರ್ಗೂ ಕ್ಲಿಕ್ ಆಗೋ ಯೋಗ
ಬಲು ಯೋಚಿಸಿ ಮಾಡಿ ನಿರ್ಧಾರ
ಇಲ್ಲಾಂದ್ರೆ ಹಾಕ್ತಾಳೆ ಅವ್ಳೇ ಮೂಗ್ದಾರ...
ಹಾಂ...ಇಲ್ಲಿ ಮೋಸಾನೆ ..
ಇಲ್ಲಿ ಮೋಸಾನೇ ನಡೀತೈತಂತೆ//ಅಯ್ನೋರೆ ಸ್ವಲ್ಪ//

ಇಲ್ಲಿ ಏಮಾರ್ಸೋರ್ದೇ ಒಂದು ಧಂಧೆ
ಏಮಾರ್ದೇ ಇದ್ರೇ ಗೆಲ್ವು ನಿಮ್ದೇ
ನಿಮ್ಮ ಬುದ್ಧಿಗೆ ನೀವೇ ಸರದಾರ
ಇಲ್ಲಾಂದ್ರೆ ಆಗುತ್ತೆ ಜೀವ್ನಾನೇ ಭಾರ
ಹಾಂ...ಇಲ್ಲಿ ಮೋಸಾನೆ ..
ಇಲ್ಲಿ ಮೋಸಾನೇ ನಡೀತೈತಂತೆ//ಅಯ್ನೋರೆ ಸ್ವಲ್ಪ//





Wednesday, November 3, 2010

ಕಣ್ಣಿರುವ ಕುರುಡರು

ಕಣ್ಣಿಲ್ಲ ಕುರುಡನಾನು,


ಒಳಿತು ಕೆಡಕುಗಳನರಿಯೆ


ಕೈಯಲ್ಲಿ ಹಿಡಿದು ಲಾಂಧ್ರ


ಬುದ್ಧಿವಂತರ ಕಾಡಿಗೆ ಬಂದಿರುವೆ


ನಕ್ಕವರೆಷ್ಟೋ ಮಂದಿ


ಕಣ್ಣು ಮೊದಲೇ ಇಲ್ಲ


ಬುದ್ಧಿಯೂ ಕಳಕೊಂಡನಲ್ಲ..!!


ಕೇಳಿದ ಬುದ್ಧಿವಂತಗೆ ನನ್ನ


ನಮ್ರ ಉತ್ತರ....


ಕುರುಡ ನಾನು ಕಣ್ಣಿಲ್ಲ ಗೊತ್ತು


ಕಣ್ಣಿದ್ದೂ ಕುರುಡರು ನೀವು


ಲಾಂಧ್ರವ ಕಂಡೂ ಕೇಳುವಿರಿ


ಕೈಯಲ್ಲಿರುವುದೇನೆಂದು...


ನನಗಂತೂ ಇದರಿಂದಿಲ್ಲ ಉಪಯೋಗ


ತಂದೆ ಜೊತೆಯಲಿ


ಕಣ್ಣಿರುವ ಕುರುಡರಿಗೆ


ನಾನು ಬರುವುದು ಕಾಣಲೆಂದು.


ದೀಪ ಬೆಳಗುವುದೇ ಇದಕೆ


ನೋಡಿ ನಡೆಯಲೆಂದು


ನಯ ವಿನಯ ಎಚ್ಚರಿಕೆಗೆಂದು

Friday, October 1, 2010

ಗೊತ್ತಿಲ್ಲ ಮಗು

ಅಪ್ಪಾ



ಏನು ಮಗು?


ದೇವನಹಳ್ಳಿ ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಯ್ತು ಅಲ್ವಪ್ಪಾ?


ಹೌದು ಮಗು ನಾಡಿಗೆ ಒಳ್ಳೆ ವಿಮಾನ ನಿಲ್ದಾಣ ಸಿಕ್ತು


ಅದಲ್ಲಪ್ಪಾ..ಕೋಟ್ಯಾಂತರ ಸಿಕ್ಕ ರೈತ


ನಾಲ್ಕೈದೇ ವರ್ಷದಲ್ಲಿ ಬೀದಿಗೆ ಬಂದಾಂತ...


ಗೊತ್ತಿಲ್ಲ ಮಗು






ಅಪ್ಪಾ


ಹೇಳು.ಏನು?


ಮತ್ತೆ ಇನ್ನಷ್ಟು ದೇವನಹಳ್ಳಿ ದೊಡ್ಡಬಳ್ಳಾಪುರದ ರೈತರು


ಸರ್ಕಾರದ ಭೂ ಸ್ವಾಧೀನಕ್ಕೆ ಒಪ್ತಾ ಇಲ್ವಂತಲ್ಲಪ್ಪ


ಹೌದು ಕಣೋ ನೀನೇ ಹೇಳಿದ್ಯಲ್ಲ, ಬೇರೆ ಗೇಯ್ಮೆ ಗೊತ್ತಿಲ್ದೇ


ಹಣ ಖರ್ಚು ಮಾಡಿ ಬೀದಿಗೆ ಬರೋದು ಬೇಡಾಂತ..


ಅಲ್ಲಪ್ಪಾ..ಅವರ ಹೆಸರಲ್ಲಿದ್ದ ಜಮೀನು


ಮಂತ್ರಿಗಳು ದೋಚ್ಕಂಡವ್ರಂತೆ...?


ನಂಗೊತ್ತಿಲ್ಲ ಮಗು...






ಅಪ್ಪಾ..


ಇನ್ನೂ ಏನೋ ನಿಂದು...?


ಈ ಸರ್ತಿ ದಸರಾಕ್ಕೆ ಕರ್ಕೊಂಡು ಹೋಗ್ತೀಯಾ?


ಆಗಲಿ ಕಣೋ ನಿಮ್ಮಣ್ಣಂಗೆ ಹೇಳು


ರೈಲಲ್ಲಿ ಎಲ್ಲರಿಗೆ ಟಿಕೇಟ್ ಮಾಡ್ಸು ಅಂತ.


ಊಂ ನನಗೆ ಬೇಡ,, ನಮ್ಮ ಮುಖ್ಯಮಂತ್ರಿಗಳು


ಹೊಸ ವಿಮಾನ ನಿಲ್ದಾಣ ಮಾಡಿದ್ದಾರೆ, ವಿಮಾನದಲ್ಲೇ ಹೋಗ್ಬೇಕು


ಆಯ್ತಪ್ಪಾ..ನೀನು ನಿನ್ನಣ್ಣ ಇಬ್ಬರೇ ಹೋಗಿ ಬನ್ನಿ..


ಅಂದ ಹಾಗೆ ಅಲ್ಲೂ ಮಿನಿಸ್ಟ್ರ ಸಂಬಂಧೀಕರು


ಜಮೀನು ಕೊಂಡ್ಕೊಂಡಿದ್ದಾರಂತೆ...


ಲೋ ತರ್ಲೆ...


ನಂಗೊತ್ತಿಲ್ಲ ಕಣೋ...

Sunday, September 26, 2010

ಎರಡು - ಮಾತು

ದೀಕ್ಷೆ

ಹನಿ ಹನಿಸಿದಾಗ ಮಡು
ತುಂಬಿ ಬಂದಾಗ ನೆಡು
ಗಿಡ ಬಳ್ಳಿ ಹಸಿರಾಗಲಿ ಕಾಡು
 ತೊಡು ದೀಕ್ಷೆ, ಬಿಡು ನಿರೀಕ್ಷೆ

ನೀನು, ನಿನ್ನವರಿಗಿದು ಪರೀಕ್ಷೆ

ಚಲಿಸಿ ಬಿಡದೆಭುವಿ ತನ್ನಾಕಕ್ಷೆ



ಇಲ್ಲಗಾವಲು ಹಸಿರು ಬರೀ ಸೀಳು

ಗೋಮಾಳವಿಲ್ಲ ಆಗಿ ಎಲ್ಲ ಗೋಳು

ಹೊಗೆ ಪ್ರದೂಷಣೆ ಹಾಳು ಹಾಳು


ನೀರಿಲ್ಲ ಎಲ್ಲೆಡೆ ನೀರ್-ಮಲ

ಪ್ರಾಣವಾಯು ಆಗಿ ವಿಷಾನಿಲ

ತಲ-ಜಲ-ಚರ ಒದ್ದಾಡಿ ವಿಲವಿಲ


ಸೂರ್ಯ ಶಕ್ತಿ

ಕೂಡಿಟ್ಟರೆ ಹನಿ

ಆಗುವುದು ಖನಿ

ಒಂದೊಂದೇ ದನಿ

ಕೊಳ್ಳಲಿ ಮಾರ್ದನಿ

ಮನೆಯಾಗಿ ಮೊದಲು

ಬೀದಿ ಮಾಡಿ ನಕಲು

ಎಲ್ಲ ಒಂದಾಗಿ ಮಾಡಲು

ಉಕ್ಕಿಹರಿವುದು ಹೊನಲು

ವಿವೇಚಿಸಿ ಉಪಯೋಗಿಸಲು

ನಿಸರ್ಗದತ್ತ ಸೂರ್ಯನ ಬಿಸಿಲು

Friday, September 17, 2010

ಸಸ್ಯವನದಲ್ಲಿ ಬ್ಲಾಗೋತ್ಸವ












ಸಸ್ಯವನದ ಸೊಬಗಿನಲ್ಲಿ ಬ್ಲಾಗಿಗರ ಬಳಗದಲ್ಲಿ

ಅರ್ಕಾವತಿ ಹರಿಯುವಲ್ಲಿ ಸಸ್ಯಗಳ ನೆಟ್ಟೆವಲ್ಲಿ
ಈಶ್ವರರ ಸಾಂಗತ್ಯದಲ್ಲಿ ಸಸ್ಯವನದ ತಂಪಿನಲ್ಲಿ
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ..
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ
ಪಕ್ಕುಮಾಮನ ಸಾರಥ್ಯದಲ್ಲಿ ಶಿವುಛಾಯಾಲೋಕದಲ್ಲಿ
ಪರಾಂಜಪೆ ದೇಸಾಯರ ಗಂಭೀರ ಚರ್ಚೆಗಳಲಿ
ಈಶ್ವರರ ಸಸ್ಯಜ್ಞಾನ ಹುಡುಗರ ಹುಡುಕಾಟದಲಿ
ಬ್ಲಾಗತ್ಸವ ನಮ್ಮ ಬ್ಲಾಗೋತ್ಸವ
ಅನಿರಾಘು ನವೀನ್ ಶಿಪ್ರ ಗುರುಮಹೇಶಸುಗುಣರೊಂದಿಗೆ
ದಿಲ್ಪ್ರಗತಿ ವಸುದೇಶ ವಿದ್ಯಾ ಆಶಶೀಶ್ ಪ್ರಶಾಂತ ವೈದ್ಯ
ಚೇತು ನಂಜುಂಡ್ ಒಡನಾಟದಲ್ಲಿ ಜಲನಯನದ ಉಪವಾಸದಲ್ಲಿ
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ

Thursday, August 5, 2010

ಮತ್ತೆ ಕೆಲವು ನ್ಯಾನೋಗಳು.......

Why ಯಾರೀ?



ಬಲು ಜೋರು ಬಾಲೆ ಎರಡು ಜಡೆ ಹೂಮಾಲೆ
ಜಿಂಕೆಯಂತೆ ಜಿಗಿದವಳು ಓಹ್ ! ಓಲಾಡೋ ಓಲೆ

 

ಕಣ್ಣಿನಲಿ ತುಂಟತನ ಅದರೂ ಇಲ್ಲ ಮೊಂಡುತನ
ಹೆಣ್ಣಿನಂದ ತುಂಬಿದ ಗಲ್ಲ ಅಲ್ಲಿಗಲ್ಲಿಗೆ ಚೆಲ್ಲುತನ

ಬೆಳೆದು ಬಲುವೈಯಾರಿ ಸಿಂಗರಿಸೆ ಸಿಂಗಾರಿ
ಛೇಡಿಸೆ ಹುಸಿಗೋಪ ಕೆನ್ನೆಗೆ ಚಲ್ಲಿದಂತೆ ಕೇಸರಿ

ಹಳ್ಳಿಹಾದಿ ಅಜ್ಜಿ ಮನೆ ಬಾವಿನೀರಿಗೆ ಬಂದ ವೈಯಾರಿ
ಬಳುಕು ನಡು, ನೀಳ ಜಡೆ, ನೀರು ಹೋಗುತ್ತಿದೆ ಸೋರಿ

ಅವಳಾ ನೋಟ ಹೊನ್ನ ಮೈಬಣ್ಣ ಎಲ್ಲರ ಗೆಲ್ಲುವಾಸೆ
ಮುದಿ ಗೌಡ ಜಗುಲಿ ಮೇಲೆ, ನೋಡಿ ಕುಣಿಯಿತು ಮೀಸೆ

ಕೇಳಿದ್ರೆ ಹೇಳ್ತಾನೆ ಮುಪ್ಪಾದ್ರೂ ಹುಳಿಯಲ್ವೇ ಹುಣಿಸೆ
ಇದ ಕೇಳಿ ಗೌಡ್ತಿ ತಂದು ತೋರ್ಸಿದ್ಲು ಹಳೆ ಪೊರಕೆ ವರಸೆ

Sunday, August 1, 2010

ಸ್ನೇಹಿತ


(ಸ್ನೇಹಿತರ ದಿನದಂದು ನನ್ನ ಬಾಲ್ಯದ ಗೆಳೆಯನ ನೆನಪಲ್ಲಿ)

ಅವನಲ್ಲಿ ನಾನಿಲ್ಲಿ ಆದರೂ ನಮ್ಮಲ್ಲಿಲ್ಲ ದೂರ


ಅವನಿದ್ದ ನನ್ನ ಜೊತೆ ಇದ್ದಾಗಲೂ ನಾನು ಪೋರ



ಮಾಸ್ತರು ಹಾಜರಿಗೆ ಅವನದಾಯ್ತು ಜವಾಬು

ಎಂದೋ ಸತ್ತಿದ್ದ ನನ್ನ ತಾತ ಸತ್ತ ಎಂದ ಸಬೂಬು



ಸ್ಕೂಲಿಂದ ಬರುವಾಗ ತೋಪಿಗೆ ನುಗ್ಗಿದ್ದು ಮಾವಿಗೆ

ಮಾಲಿ ಬಂದಾಗ ನನ್ನ ಬದಲಿಗೆ ತಾನೇ ಸಿಕ್ಕಿದ್ದ ಪೆಟ್ಟಿಗೆ



ತುಂಟಾಟಮಾಡಿ ಸಿಕ್ಕಿಬಿದ್ದೆ, ಬೆತ್ತ ಬಿತ್ತು ಛಟೀರ್-ಕೈಗೆ

ಅಯ್ಯೋ ಎಂದಿದ್ದ ಗೆಳೆಯ ಬಿದ್ದಂತೆ ಏಟು ತನ್ನ ಮೈಗೆ



ಹತ್ತರಲ್ಲಿ ಪ್ರಥಮ ದರ್ಜೆ ಸಿಕ್ಕಿದ್ರೂ ಪೆಚ್ಚಾಗಿ ಬಂದ್ರೆ - ನಾನು

ಊರಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದ ತಾನೇ ಗೆದ್ದಂತೆ ಅವನು