(ಬಾಬೂಜಿ ಧೀರೆ ಚಲ್ನಾ...ಶೈಲಿ/ಧಾಟಿ)
ಅಯ್ನೋರೆ ಸ್ವಲ್ಪ ಎಚ್ರ
ಲವ್ವಲೀ ಸ್ವಲ್ಪ ಹುಷಾರು
ಹಾಂ....ಇಲ್ಲಿ ಮೋಸಾನೇ ..
ಇಲ್ಲಿ ಮೋಸಾನೇ ನಡೀತೈತಂತೆ// ಅಯ್ನೋರೆ ಸ್ವಲ್ಪ//
ನೀವು ಬಿದ್ದಾಯ್ತು ಹುಡ್ಗೀರ ಹಿಂದೆ...
ಯಾಕೆ ಕಾಣ್ತಿಲ್ಲ ಸರಿ ದಾರಿ ಮುಂದೆ..
ಇದು ಅಯ್ನೋರ್ದು ಮೊದಲನೇ ಹೆಜ್ಜೆ
ಪ್ರತಿ ಹುಡ್ಗಿಯೂ ನಿಮ್ ಕಣ್ಗೆ ರಂಭೆ
ಹಾಂ ಇಲ್ಲಿ ಮೋಸಾನೇ ..
ಇಲ್ಲಿ ಮೋಸಾನೇ ನಡೀತೈತಂತೆ//ಅಯ್ನೋರೆ ಸ್ವಲ್ಪ//
ಇದು ಹುಡ್ಗೀರು ಅಡ್ಡಾಡೋ ಜಾಗ
ಇದೆ ಅಯ್ನೋರ್ಗೂ ಕ್ಲಿಕ್ ಆಗೋ ಯೋಗ
ಬಲು ಯೋಚಿಸಿ ಮಾಡಿ ನಿರ್ಧಾರ
ಇಲ್ಲಾಂದ್ರೆ ಹಾಕ್ತಾಳೆ ಅವ್ಳೇ ಮೂಗ್ದಾರ...
ಹಾಂ...ಇಲ್ಲಿ ಮೋಸಾನೆ ..
ಇಲ್ಲಿ ಮೋಸಾನೇ ನಡೀತೈತಂತೆ//ಅಯ್ನೋರೆ ಸ್ವಲ್ಪ//
ಇಲ್ಲಿ ಏಮಾರ್ಸೋರ್ದೇ ಒಂದು ಧಂಧೆ
ಏಮಾರ್ದೇ ಇದ್ರೇ ಗೆಲ್ವು ನಿಮ್ದೇ
ನಿಮ್ಮ ಬುದ್ಧಿಗೆ ನೀವೇ ಸರದಾರ
ಇಲ್ಲಾಂದ್ರೆ ಆಗುತ್ತೆ ಜೀವ್ನಾನೇ ಭಾರ
ಹಾಂ...ಇಲ್ಲಿ ಮೋಸಾನೆ ..
ಇಲ್ಲಿ ಮೋಸಾನೇ ನಡೀತೈತಂತೆ//ಅಯ್ನೋರೆ ಸ್ವಲ್ಪ//
ಚೆನ್ನಾಗಿದೆ ಕಣ್ರೀ, ಈ ತರಹ ಇನ್ನಷ್ಟು ಜನಪ್ರಿಯ ಹಾಡುಗಳ ಸಾಹಿತ್ಯವನ್ನು ಕನ್ನಡೀಕರಿಸಿ ಗುರುವೇ .
ReplyDeleteನಮಸ್ತೆ ಪ್ರಾಂಜಪೆ ಸರ್, ಧನ್ಯವಾದ ಸಾಥ್ ಕೊಡಿ ಗುರುವೇ ಮಾಡೋಣ ಜುಗಲ್ ಬಂದಿ...ಏನಂತೀರಾ??
ReplyDeleteಜಲನಯನ,
ReplyDeleteರಾಗವಾಗಿ ಹಾಡಿಕೊಳ್ಳಬಹುದಾದ ಈ ಗೀತೆಯನ್ನು ಓದಿ(ಕೇಳಿ)ಖುಶಿಯಾಯಿತು!
ಇಂತಹ ಇನ್ನಷ್ಟು ಗೀತೆಗಳು ನಿಮ್ಮಿಂದ ಹೊರಬರಲಿ.
ಸುನಾಥಣ್ಣ ಧನ್ಯವಾದ...ದಯಮಾಡಿ ತಪ್ಪುಗಳಿದ್ದರೆ ಹೇಳಿ...ಮತ್ತೆ ಬರೀ ಅಟ್ಟಕ್ಕೇರ್ಸೋದು ಮಾಡ್ಬೇಡಿ...ಹಹಹ ನಿಮ್ಮ ಪ್ರೋತ್ಸಾಹ ಸದಾ ಇರಲಿ..
ReplyDeleteಅಜಾದ್ ಹಿಂದಿ ಹಾಡನ್ನು ಕನ್ನಡೀಕರಿಸಿರುವುದು ಒಂಥರ ಮಜವೆನಿಸುತ್ತೆ..ಈ ಹಾಡಿನ ಅರ್ಥ ಇದು ಅಂತ ನನಗೆ ಮೊದಲು ಗೊತ್ತಿರಲೇ ಇಲ್ಲ. ಇನ್ನಷ್ಟು ಹಿಂದಿ ಹಾಡುಗಳನ್ನು ಅನುವಾದಿಸಿ..
ReplyDeleteಶಿವು ಥ್ಯಾಂಕ್ಸ್..ಇದು ಹಾಡಿನ ಅನುವಾದ ಅಲ್ಲ...ಆದ್ರೆ ಧಾಟಿ ಅದೇ ಮತ್ತು ಸ್ಥೂಲ ಭಾವ ಅದೇ,,ಖಂಡಿತಾ...ಹಲವಾರು ಮಾಡಿದ್ದೇನೆ ಭಾವಾನುವಾದ..ಒಂದೆರಡು ಹಳೆಯ ತೆಲುಗು ಹಾಡಿಗೂ ಹಾಕಿದ್ದೇನೆ ಭಾವಾನುವಾದ.
ReplyDeleteಆಜಾದು...
ReplyDeleteಈ ಥರಹದ ಹಾಡುಗಳು..
ನಿನ್ನ ಬಲ (ಸ್ಟ್ರೆಂಥ್)..
ಬಹಳ ಲೀಲಾಜಾಲವಾಗಿ...
ಭಾವ ಪೂರ್ಣವಾಗಿ..
ಮೂಲ ಹಾಡಿನ ಹೂರಣವನ್ನು ಸೊಗಸಾಗಿ ಬಡಿಸುವ ಕಲೆ ನಿನಗೆ ಸಿದ್ಧಿಸಿದೆ...
ಅದಷ್ಟು ಬೇಗ ಒಂದು ಸಿಡಿ ಮಾಡೋಣ ಏನಂತೀಯಾ?
ಪ್ರಕಾಶು...ಹಹಹ...ಏನೋಪ್ಪಾ ನನಗೆ ತೋಚಿದ ಹಾಗೆ ಭಾವಾನುವಾದ ಮಾಡಿದೆ..ನಿನಗೆ ಹಿಡಿಸ್ತು ಅಂದ್ರೆ ತುಂಬಾ ಸಂತೋಷ...ನೀನು ಲೀಡ್ ತಗೋ ..ಗಾಯಕರು..ಸಂಗೀತ ಆದ್ರೆ...ವೈ ನಾಟ್...ಧನ್ಯವಾದ ನಿನ್ನ ಅಭಿಮಾನದ ಮಾತಿಗೆ
ReplyDeleteಹಹ್ಹಹ್ಹಾ... ಅಷ್ಟೊಂದು ಮೋಸಾನ?? ಛೆ ಛೆ... ಅದ್ರೂ ಚೆನ್ನಾಗಿದೆ..
ReplyDeleteಅಯ್ಯೋ...ಮೋಸಾನೇ ಇಲ್ಲಿ ಮೋಸಾನೇ ನಡೀತೈಂತೆ..
ReplyDeleteಆಕ್ಕಾವ್ರೇ ಸ್ವಲ್ಪ ಎಚ್ರ ಲವ್ವಲೀ ಸ್ವಲ್ಪ ಉಸಾರು
ಇಲ್ಲಿ ಲೈನನ್ನ ಇಲ್ಲಿ ಲೈನನ್ನ ಒಡೀತಾರಂತೆ..
ಹಹಹ.....ಧನ್ಯವಾದ ಪ್ರಗತಿ...ಮತ್ತೆ ದಿಲೀಪಣ್ಣಂಗೆ ತೋರ್ಸಿದ್ರಾ ..ಜ್ವಾಕೆ ಅಂತ ಹೇಳಿ..ಹಹಹ
ಅನುವಾದ ಮಜಕೊಟ್ಟಿತು, ಹಳ್ಳಿಯ ಭಾಷೆಯನ್ನು ಬಳಸಿ ಅನುವಾದಿಸಿದ ಶಬ್ದಗಳು ಕಚಗುಳಿ ಇಡುತ್ತವೆ, ನೆನಪಾದಾಗಲೆಲ್ಲ ಬರಲಿ ಈ ಥರದ ಲವಲವಿಕೆಗಳು! ಚಪ್ಪಾಳೆ ಸಹಿತ ಧನ್ಯವಾದ.
ReplyDeleteವಿ,ಆರ್.ಬಿ.ಸರ್...
ReplyDeleteಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...
ಹೊಸವರ್ಷದ ಮನದಾಳದ ಹಾರ್ದಿಕ ಶುಭಹಾರೈಕೆಗಳು...
ಚುರುಕಾಗಿದೆ..
ReplyDelete೨೦೧೧ರಲ್ಲಿ ಸಿಹಿಕ್ಷಣಗಳು ಎದುರಾಗಲಿ
ಧನ್ಯವಾದ ಗುರು..ನಿಮಗೂ ೨೦೧೧ ಉತ್ತಮ ಬೆಳಕನ್ನು ನೀಡಲಿ...ಹಹಹಹ
ReplyDeletegraamina bhaashaa shaili,sogadina kavana chennaagide.abhinandanegalu.ittichege namma mane kade aparuupavaagiddira,kaaranakelabahude..?
ReplyDeleteಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಹಹಹ ನಿಮ್ಮ ಮನೆಗೆ ಹೋಗಿ ಗಣತಂತ್ರದಿನದ ಶುಭಹಾರೈಕೆ ತಿಳಿಸಿಯೇ ಇಲ್ಲಿಗೆ ಬಂದದ್ದು...
ReplyDelete