Why ಯಾರೀ?
ಬಲು ಜೋರು ಬಾಲೆ ಎರಡು ಜಡೆ ಹೂಮಾಲೆ
ಜಿಂಕೆಯಂತೆ ಜಿಗಿದವಳು ಓಹ್ ! ಓಲಾಡೋ ಓಲೆ
ಕಣ್ಣಿನಲಿ ತುಂಟತನ ಅದರೂ ಇಲ್ಲ ಮೊಂಡುತನ
ಹೆಣ್ಣಿನಂದ ತುಂಬಿದ ಗಲ್ಲ ಅಲ್ಲಿಗಲ್ಲಿಗೆ ಚೆಲ್ಲುತನ
ಬೆಳೆದು ಬಲುವೈಯಾರಿ ಸಿಂಗರಿಸೆ ಸಿಂಗಾರಿ
ಛೇಡಿಸೆ ಹುಸಿಗೋಪ ಕೆನ್ನೆಗೆ ಚಲ್ಲಿದಂತೆ ಕೇಸರಿ
ಹಳ್ಳಿಹಾದಿ ಅಜ್ಜಿ ಮನೆ ಬಾವಿನೀರಿಗೆ ಬಂದ ವೈಯಾರಿ
ಬಳುಕು ನಡು, ನೀಳ ಜಡೆ, ನೀರು ಹೋಗುತ್ತಿದೆ ಸೋರಿ
ಅವಳಾ ನೋಟ ಹೊನ್ನ ಮೈಬಣ್ಣ ಎಲ್ಲರ ಗೆಲ್ಲುವಾಸೆ
ಮುದಿ ಗೌಡ ಜಗುಲಿ ಮೇಲೆ, ನೋಡಿ ಕುಣಿಯಿತು ಮೀಸೆ
ಕೇಳಿದ್ರೆ ಹೇಳ್ತಾನೆ ಮುಪ್ಪಾದ್ರೂ ಹುಳಿಯಲ್ವೇ ಹುಣಿಸೆ
ಇದ ಕೇಳಿ ಗೌಡ್ತಿ ತಂದು ತೋರ್ಸಿದ್ಲು ಹಳೆ ಪೊರಕೆ ವರಸೆ
sundaravaada kavite mudaneedide.
ReplyDeleteಹಹ್ಹಹ್ಹಾ... ಚೆನ್ನಾಗಿದೆ... ಅದರಲ್ಲೂ ಕೊನೆ ಸಾಲುಗಳು ತುಂಬಾ ತಮಾಷೆಯಾಗಿದೆ...
ReplyDeleteಇದೀಗ ದೇಸಿ ವರಸೆಯ ನ್ಯಾನೊ. ಬರೀ ಓದಿದರೆ ಸಾಕು, ಮೀಸೆ ಕುಣಿಯತ್ತೆ!
ReplyDeleteಬಾಲು...ಧನ್ಯವಾದ...ನಿಮ್ಮ ಬರೋಣ ನಮ್ಮ ಮೀಸೆ ಕುಣಿಯೋಣ ಎಂಥ ಜುಗಲ್ ಬಂದಿ...ಹಹಹ
ReplyDeleteಪ್ರಗತಿ...ನಿಮ್ಮ ಪ್ರತಿಕ್ರಿಯೆ ನಮ್ಗೆ ಹುಮ್ಮಸ್ಸು...ಧನ್ಯವಾದ....
ReplyDeleteಸ್ನೇಹಿತ್ರೇ ಕೊಡ್ತಾರೆ ಪ್ರೋತ್ಸಾಹ ಬರೀ ಮಗ ಅಂತ ಭರವಸೆ
ReplyDeleteಎಲ್ಲರೂ ವಾವ್ ಅಂತಾರೆ ಬೆನ್ ತಟ್ತಾರೆ ಸುನಾಥಣ್ಣಂದು ಬೇರೇನೇ ವರಸೆ...
ಧನ್ಯವಾದ....
ಅದ್ಭುತ ಅಜಾದ್ ಭಾಯ್..
ReplyDeleteಓದಿ ಮೀಸೆ ಕುಣಿದು ಕುಪ್ಪಳಿಸುತ್ತಿದೆ...
ಸಕತ್ತಾಗಿದೆ ಸರ್... :D
ReplyDeleteದಿಲೀಪ್...ನಿಮ್ಮ ಕಾರ್ಟೋನಿಗೆ ಒಂದು ವಿಷಯ ಸಿಕ್ತಾ...?? ಹಹಹ ಮೀಸೆ ನೀವೂ ಕುಣಿಸಬಹುದು..ಅಲ್ವಾ...??? ಧನ್ಯವಾದ
ReplyDeleteಆನಂದ್...ಧನ್ಯವಾದ ನಿಮ್ಮ ಅನಿಸಿಕೆ ಪ್ರತಿಕ್ರಿಯೆಗೆ...
ReplyDeleteಅಜಾದು ಮಾಡಬಲ್ಲರು ಜಾದೂ
ReplyDeleteಅವರಿಗೆ ಸಾಟಿ ಇಲ್ಲ ಯಾರೂ
ಅವರ ನ್ಯಾನೋ ಸಾಲುಗಳಲ್ಲಿದೆ ಪ೦ಚು
ಓದುಗರ ಮನದಲ್ಲಿ ಮೂಡುವುದು ಮಿ೦ಚು
ತು೦ಟತನದಿ೦ದ ಕೂಡಿದ ಕವನ. ಯಾವುದಪ್ಪಾ ಆ ಬಾವಿ ಇರುವ remote ಹಳ್ಳಿ!
ReplyDeletesuper..
ReplyDeleteಪರಾಂಜಪೆ ಸರ್...ಹಹಹ...ಟಿಟ್ ಫಾರ್ ಟ್ಯಾಟೇ..? ನಿಮ್ಮಲ್ಲಿ ಕವನಕ್ಕೆ ಕವನದ ಪ್ರತಿಕ್ರಿಯೆ..ಇಲ್ಲಿ ನೀವು...ಹಹಹ..ಧನ್ಯವಾದ
ReplyDeleteಪ್ರಭಾಮಣಿಯವರೇ..ಇದು ರಿಮೋಟ್ ವಿಲೇಜ್ ಅಲ್ಲ ಇನ್ನೂ ಹೀಗೆ ಕೆಲವು ಇವೆ...ನೀರೆ ಹೊತ್ತ ನೀರಿನ ಕೊಡ ..ಈಗ ರಿಮೋಟ್ ಖಂಡಿತ...
ReplyDeleteಧನ್ಯವಾದ
ಸರ್
ReplyDeleteಚೆಂದದ ಕವಿತೆ
ಪ್ರಾಸಗಳು ಇಷ್ಟವಾಯಿತು
ಅಜಾದ್,
ReplyDeleteನ್ಯಾನೋ ಕತೆಗಳೋ ಅಥವ ಕವಿತೆಗಳೋ...
ಕತೆಗಳು ಎಂದುಕೊಂಡು ಓದಿದಾಗ ಕವಿತೆಯ ಭಾವನೆ ಉಂಟಾಯಿತು...ಚೆನ್ನಾಗಿವೆ...
ಸರ್, ನಾ ಓದಿ ಮೀಸೆಯಲ್ಲೇ ನಕ್ಕೆ
ReplyDeleteನಿಮ್ಮ ತುಂಟ Yಯ್ಯಾರಿ ಚೆನ್ನಾಗಿದೆ..
ReplyDeleteYಯ್ಯಾರಿಯಿಂದ ನೀರು ಸೋರಿತೆ..
ಅಜಾದ್ ಸರ್.......
ReplyDeleteಸಕತ್ತಾಗಿದೆ.........
ಗುರು, ಧನ್ಯವಾದ..ಪ್ರಾಸಗಳು ಇಲ್ಲ ಅಂದ್ರೆ ಕಥೆ ಆಗೋ ಚಾನ್ಸು...ಅದಕ್ಕೆ
ReplyDeleteಶಿವು...ಹೌದಾ...ಕಥೆ ಕವಿತೆ ಎರಡರಲ್ಲೂ ಆಸ್ವಾದಿಸಿದ್ದು ನನ್ನ ಲೇಖನಕ್ಕೆ ಮತ್ತೊಂದು ಆಯಾಮ ಕೊಟ್ಟಹಾಗಾಯ್ತು ಧನ್ಯವಾದ.
ReplyDeleteಸುಗಾವಿಯವರೇ..ನಿಮ್ಮ ಮೀಸೆಯಲ್ಲೇ ನಕ್ಕ ದೃಶ್ಯ...ನಿಮ್ಮವಳು (ಮದುವೆಯಾಗಿದ್ದರೆ) ನೋಡಿದ್ರೆ ಕಷ್ತ...ಹಹಹ...ಧನ್ಯವಾದ
ReplyDeleteಕತ್ತಲೆ ಮನೆ...ನನಗೆ ಭಯ ಆಗ್ತಿದೆ...ಕತ್ತಲೆ ಮನೆಯಿಂದ ಬರುತ್ತಿರುವ ಪ್ರತಿಕ್ರಿಯೆಗಳಿಂದ...yಯಾರಿ ಕೊಡದ ನೀರು ..ಹೇಗೆ ಸೋರಿದ್ದು ಎನ್ನೋದು ಗುಟ್ಟು...ಹಹಹ
ReplyDeleteಪ್ರವೀಣ್...ಹೇಗಿದ್ದೀರಿ...ಆರಾಮ ತಾನೇ,,??!! ಧನ್ಯವಾದ...
ReplyDeleteಚೆನ್ನಾಗಿದೆ ತಮ್ಮ ಹೊಸ ಪ್ರಯತ್ನ!
ReplyDeleteಸೀತಾರಾಂ ಸರ್....ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
ReplyDeletemudi goudra suddi bedittu enisuttade! channagide modala saalugaLu. koneyalli swalpa rasa bhanga ennisuttade
ReplyDeleteAajaad Sir,
ReplyDeletetumbaa uttama, yashashvi prayoga...tumbaa chennagittu sir...
ರಾಘು,,,ಮುದಿಗೌಡರನ್ನ ಕಂಡು ಪಾಪ ಅನಿಸ್ತಾ...ಹಹಹ...ಸುಮ್ನೆ ಹಾಗೇ,,,ರಸಿಕತೆಗೆ ಮತ್ತು ವಿಕೃತತೆಗೆ ವ್ಯತ್ಯಾಸ ಅದೇ ನೋಡಿ....ಧನ್ಯವಾದ
ReplyDeleteಅಶೋಕ್ ನ ಪ್ರೋತ್ಸಾಹ ನಿಮ್ಮ ಅನಿಸಿಕೆಗಳು ನಮಗೆ ಟಾನಿಕ್’ ಧನ್ಯವಾದ
ReplyDeletechennagide :)last 2 lines super :)
ReplyDelete:) ಹಾಸ್ಯ ಲೇಪಿತ ಸುಂದರ ನ್ಯಾನೋಗಳು.. ಉತ್ತಮವಾಗಿವೆ..
ReplyDeleteಹೊಸ ಹೊಸ ಪ್ರಯತ್ನ ನಡೆದೇ ಇದೆ, ಚೆನ್ನಾಗಿದೆ, ನಡೆಯಲಿ, ಧನ್ಯವಾದಗಳು
ReplyDeleteಸ್ನೋ ವೈಟ್...ನಿಮ್ಮ ಎರಡು ಸಾಲುಗಳೂ ಸೂಪರ್
ReplyDeleteಶ್ರವಣ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ReplyDeleteವಿಆರ್ಬಿ ಸರ್, ನಿಮ್ಮ ಪ್ರೋತ್ಸಾಹ ನಮಗೆ ಟಾನಿಕ್ಕು...ಧನ್ಯವಾದ
ReplyDeleteವಸಂತ್ ನಿಮ್ಮ ಅಭಿಮಾನ ಪ್ರೋತ್ಸಾಹ ಹೀಗೇ ಸಿಗಲಿ...ನನ್ನ ಧನ್ಯವಾದ
ReplyDelete