Wednesday, November 3, 2010

ಕಣ್ಣಿರುವ ಕುರುಡರು

ಕಣ್ಣಿಲ್ಲ ಕುರುಡನಾನು,


ಒಳಿತು ಕೆಡಕುಗಳನರಿಯೆ


ಕೈಯಲ್ಲಿ ಹಿಡಿದು ಲಾಂಧ್ರ


ಬುದ್ಧಿವಂತರ ಕಾಡಿಗೆ ಬಂದಿರುವೆ


ನಕ್ಕವರೆಷ್ಟೋ ಮಂದಿ


ಕಣ್ಣು ಮೊದಲೇ ಇಲ್ಲ


ಬುದ್ಧಿಯೂ ಕಳಕೊಂಡನಲ್ಲ..!!


ಕೇಳಿದ ಬುದ್ಧಿವಂತಗೆ ನನ್ನ


ನಮ್ರ ಉತ್ತರ....


ಕುರುಡ ನಾನು ಕಣ್ಣಿಲ್ಲ ಗೊತ್ತು


ಕಣ್ಣಿದ್ದೂ ಕುರುಡರು ನೀವು


ಲಾಂಧ್ರವ ಕಂಡೂ ಕೇಳುವಿರಿ


ಕೈಯಲ್ಲಿರುವುದೇನೆಂದು...


ನನಗಂತೂ ಇದರಿಂದಿಲ್ಲ ಉಪಯೋಗ


ತಂದೆ ಜೊತೆಯಲಿ


ಕಣ್ಣಿರುವ ಕುರುಡರಿಗೆ


ನಾನು ಬರುವುದು ಕಾಣಲೆಂದು.


ದೀಪ ಬೆಳಗುವುದೇ ಇದಕೆ


ನೋಡಿ ನಡೆಯಲೆಂದು


ನಯ ವಿನಯ ಎಚ್ಚರಿಕೆಗೆಂದು

14 comments:

  1. ajad,

    ತಂದೆ ಜೊತೆಯಲಿ
    ಕಣ್ಣಿರುವ ಕುರುಡರಿಗೆ
    ನಾನು ಬರುವುದು ಕಾಣಲೆಂದು.

    I padagalu eastu arthapoornavallave....
    deepavaliya shubashayagalu..

    ReplyDelete
  2. ಶಿವು ನಿಮ್ಮ ಅಭಿಮಾನ ಆಪ್ಯಾಯತೆ ಆತ್ಮೀಯತೆಯ ಮುಂದೆ ಮೂಕ ನಾನು...
    ಧನ್ಯವಾದ...ನಿಮಗೂ ಹೇಮಾಶ್ರೀ ಗೂ ಮತ್ತೊಮ್ಮೆ ಶುಭಾಷಯಗಳು

    ReplyDelete
  3. azaad sir,

    vaaw..... sundara saaraviruva kavanakke dhanyavaada sir.....

    nimma kavanadalli sandesha idde iratte...

    nimagu mattu maneyavarigu dipaavaLi habbada subhaashaya sir....

    ReplyDelete
  4. ಬಹಳ ಗಂಭೀರವಾಗಿದೆ. ಕಣ್ಣಿರವ ಕುರುಡರಿಗೆ ನಾನು ಬರುವದು ಕಾಣಲೆಂದು, ತುಂಬ ಸಂಕೀರ್ಣವಾದ ಪದಪ್ರಯೋಗ

    ReplyDelete
  5. ಉತ್ತಮ ಸ೦ದೇಶವೊ೦ದನ್ನು ಕವನದ ಮೂಲಕ ಮೂಡಿಸಿದ ಶೈಲಿ ಇಷ್ಟವಾಯಿತು ಸರ್.

    ಶುಭಾಶಯಗಳು
    ಅನ೦ತ್

    ReplyDelete
  6. super agide ri.. ondu uttamma sandeshbarita kavana.. tumbaa ista aytu...

    ದನ್ಯವಾದಗಳು ಮತ್ತು ದೀಪಾವಳಿಯ ಶುಭಾಶಯಗಳು.. :)

    ReplyDelete
  7. ಜಲನಯನ,
    ಕಣ್ಣಿರುವ ಕುರುಡರೇ ಹೆಚ್ಚುತ್ತಿರುವ ಈ ಸಮಯದಲ್ಲಿ, ನಿಮ್ಮ ಕವನವು ಯಥಾರ್ಥ ಸಂದೇಶವನ್ನು ನೀಡುತ್ತಿದೆ.

    ReplyDelete
  8. ದಿನಕರ್ ಧನ್ಯವಾದ..ನಿಮ್ಮ ಹಬ್ಬ ಕಣ್ಣಿಗೆ ಮನಕ್ಕೆ ಮನಮೆಚ್ಚಿದವರಿಗೆ ಮಾತು ಮನೆಗೆ ಸಂತೋಷ ಸೌಭಾಗ್ಯ ತರಲಿ.

    ReplyDelete
  9. ಮಹೆಶ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  10. ಅನ್ಂತ್ ಸರ್ ದೀಪ ಎಂದಾಗ್ ನನಗೆ ಸ್ಕೂಲಿನ ನಮ್ಮ ಹಿಂದಿ ಪಠ್ಯದ ಒಂದು ಕಥೆ ನೆನಪಾಯ್ತು ಅದೇ ಮೂಲ ನನ್ನ ಕವನಕ್ಕೆ...ಧನ್ಯವಾದ..ಹಾಗೂ ಶುಭಾಷಯಗಳು ದೀಪಾವಳಿ ಸರ್ವ ಸುಖ ಸಂತೋಷಕ್ಕೆ ದಾರಿ ಮಾಡಲಿ

    ReplyDelete
  11. ತರುಣ್ ದೀಪಾವಳಿಯ ಹಾರ್ದಿಕ ಶುಭಕಾಮನೆಗಳು...

    ReplyDelete
  12. ಸುನಾಥಣ್ಣ ದೀಪಾವಳಿಯ ಹಾರ್ದಿಕ ಶುಭಾಶಯಗಳು ನಿಮ್ಮೆಲ್ಲರಿಗೆ...ಧನ್ಯವಾದ ನಿಮ್ಮ ಪ್ರೋತ್ಸಾಹ ಮತ್ತು ಹಾರೈಕೆಗೆ.

    ReplyDelete
  13. ಗಂಭೀರ ವಾದ ಸತ್ಯವನ್ನು ತೆರೆದಿಡುವ ಕವನ ಅದ್ಭುತ ವಾಗಿದೆ.ಅಭಿನಂದನೆಗಳು

    ReplyDelete
  14. ಧನ್ಯವಾದ ಕಲಾವತಿ ಮೇಡಂ ನಿಮ್ಮ ಅಭಿನಂದನೆಗೆ ನಮನ...

    ReplyDelete