Sunday, September 26, 2010

ಎರಡು - ಮಾತು

ದೀಕ್ಷೆ

ಹನಿ ಹನಿಸಿದಾಗ ಮಡು
ತುಂಬಿ ಬಂದಾಗ ನೆಡು
ಗಿಡ ಬಳ್ಳಿ ಹಸಿರಾಗಲಿ ಕಾಡು
 ತೊಡು ದೀಕ್ಷೆ, ಬಿಡು ನಿರೀಕ್ಷೆ

ನೀನು, ನಿನ್ನವರಿಗಿದು ಪರೀಕ್ಷೆ

ಚಲಿಸಿ ಬಿಡದೆಭುವಿ ತನ್ನಾಕಕ್ಷೆ



ಇಲ್ಲಗಾವಲು ಹಸಿರು ಬರೀ ಸೀಳು

ಗೋಮಾಳವಿಲ್ಲ ಆಗಿ ಎಲ್ಲ ಗೋಳು

ಹೊಗೆ ಪ್ರದೂಷಣೆ ಹಾಳು ಹಾಳು


ನೀರಿಲ್ಲ ಎಲ್ಲೆಡೆ ನೀರ್-ಮಲ

ಪ್ರಾಣವಾಯು ಆಗಿ ವಿಷಾನಿಲ

ತಲ-ಜಲ-ಚರ ಒದ್ದಾಡಿ ವಿಲವಿಲ


ಸೂರ್ಯ ಶಕ್ತಿ

ಕೂಡಿಟ್ಟರೆ ಹನಿ

ಆಗುವುದು ಖನಿ

ಒಂದೊಂದೇ ದನಿ

ಕೊಳ್ಳಲಿ ಮಾರ್ದನಿ

ಮನೆಯಾಗಿ ಮೊದಲು

ಬೀದಿ ಮಾಡಿ ನಕಲು

ಎಲ್ಲ ಒಂದಾಗಿ ಮಾಡಲು

ಉಕ್ಕಿಹರಿವುದು ಹೊನಲು

ವಿವೇಚಿಸಿ ಉಪಯೋಗಿಸಲು

ನಿಸರ್ಗದತ್ತ ಸೂರ್ಯನ ಬಿಸಿಲು

20 comments:

  1. ಅಜಾದ್ ಸರ್,
    ಎರೆಡು ಕವನಗೂ ಸೂಪರ್,
    ಹಸಿರು ಇಲ್ಲ ಎಂದು ಬೊಬ್ಬೆ ಹೊಡೆಯುವ ಬದಲು ನಾವೇ ಒಂದೆರೆಡು ಗಿಡ ನೆಟ್ಟರೆ ಅದೇ ಪುಣ್ಯದ ಕೆಲಸ........
    ಕವನಗಳು ತುಂಬಾ ಚೆನ್ನಾಗಿವೆ.

    ReplyDelete
  2. ನಾಡಹಿತವು ನಿಮ್ಮ ಮನದಲ್ಲಿ ಮೂಡಿ ಕವನರೂಪದಲ್ಲಿ ಸ್ಫುರಿಸುತ್ತಲೇ ಇದೆ. ಇದು ನಿರಂತರವಾಗಿರಲಿ.

    ReplyDelete
  3. ಎರಡು ಕವನಗಳು ಚನ್ನಾಗಿವೆ
    "ಎಲ್ಲ ಒಂದಾಗಿ ಮಾಡಲು
    ಉಕ್ಕಿಹರಿವುದು ಹೊನಲು" ತುಂಬಾ ಚಂದದ ಸಾಲುಗಳು

    ReplyDelete
  4. ಆಜ಼ಾದ್ ಸರ್... ತುಂಬಾ ಚೆನ್ನಾಗಿವೆ ಕವನಗಳು...ಇಂದಿನ ದಿನಗಳಲ್ಲಿ ಪ್ರಕೃತಿಯನ್ನು ಉಳಿಸಿಕೊಳ್ಳಲು ಸೌರಶಕ್ತಿಯ ಸದುಪಯೋಗ ಅನಿವಾರ್ಯವೆನ್ನುವಂತಾಗಿದೆ....

    ReplyDelete
  5. ಅಜಾದ್,

    ದೀಕ್ಷೆಯಲ್ಲಿನ ನಿಮ್ಮ ಸ್ಫೂರ್ತಿಯುತ ಪದಗಳು ಗಮನ ಸೆಳೆಯುತ್ತವೆ. ಸೂರ್ಯಶಕ್ತಿಯ ಬಗೆಗಿನ ಕವನವೂ ಚೆನ್ನಾಗಿದೆ..

    ReplyDelete
  6. ಭೂಮಾತೆಯ ಹಸಿರು ಸೀರೆ ತೊಡಿಸಲು ನಾವೆಲ್ಲರೂ ಒಂದೊಂದು ನೂಲು ಸೇರಿಸೋಣ..

    ReplyDelete
  7. ಆಜಾದ್ ಸರ್,
    ಚೆನ್ನಾಗಿದೆ ಸರ್, ನಿಮ್ಮ ಪರಿಸರ ಕಾಳಜಿಗೊಂದು ಸಲಾಮ್......

    ReplyDelete
  8. ಪ್ರವೀಣ್ ಈ ನಿಟ್ಟಿನಲ್ಲಿ ಸಸ್ಯವನದ ನಮ್ಮ ಕೆಲಸ ಸಮಾಧಾನ ತಂದಿದೆ...ತರುಣ್ ನಿಮ್ಮಲ್ಲೂ ಈ ಕೆಲ್ಸ ನಡಿತಿರೋದು ಸಂತಸ ನಮಗೆ, ಧನ್ಯಯ್ವಾದ

    ReplyDelete
  9. ಸುನಾಥಣ್ಣ ಘೋಷಣೆಗಳು ಸಾವಿರ ಕೂಗುವ ಬದಲು ಒಬ್ಬರು ಒಂದು ಸಸಿ ಮರವಾಗುವುದನ್ನು ಖಚಿತಪಡಿಸಿದರೆ ಎಷ್ಟು ಚನ್ನ ಅಲ್ವಾ...? ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ

    ReplyDelete
  10. ಸುಗುಣಾವ್ರೆ ಧನ್ಯವಾದ...ನಮ್ಮ ಒಂದು ಹೆಜ್ಜೆ ದಾಖಲಾಗಿದೆ ಅಲ್ವಾ...ಸಸ್ಯವನದಲ್ಲಿ...?..ಅದೇ ಸಂತೋಷ

    ReplyDelete
  11. ಮಂಜು ಧನ್ಯವಾದ ..ಈ-ಕವಿಯಲ್ಲೂ ಹಸಿರು ನೆಡುವುದನ್ನು ಮಾಡಿದರೆ ಚನ್ನ ಅಲ್ವಾ..?

    ReplyDelete
  12. ಪ್ರಾಂಜಪೆ ಸರ್, ಪ್ರಗತಿ, ಶಿವು ನೆಡುವ ಕೆಲ್ಸ ಮುಂದಿನ ವರ್ಷವೂ ಆದರೆ ..ಒಳ್ಲೆದು ಏನಂತೀರಾ?

    ReplyDelete
  13. ಗುರು, ದಿನಕರ್ ಮತ್ತು ಮಹೇಶ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..ದಿನಕರ್ ಮತ್ತು ಗುರು ಮುಂದಿನ ವರ್ಷದ ನಮ್ಮ ಕಾರ್ಯಕ್ರಮಕ್ಕೆ ಬರ್ತೀರ ತಾನೇ..?

    ReplyDelete
  14. ಪ್ರಕೃತಿಯ ವಿರೂಪದಿ೦ದ.. ವಿಕೋಪಕ್ಕೆ ನಾ೦ದಿಯಾಗುವ ಬಗೆಗಿನ ನಿಮ್ಮ ಕಳಕಳಿ
    ಕವನರೂಪದಲ್ಲಿ ಮಾರ್ದನಿಗೊಳಿಸುತ್ತಿದೆ. ಸಸ್ಯವನದ ನಿಮ್ಮ ಕೆಲಸಕ್ಕೆ ಜಯಹೋ...ಅಜಾದ್ ಸರ್.

    ಅನ೦ತ್

    ReplyDelete
  15. ಚೆಂದದ ಆಶಯದ ಹನಿಗಳು.
    ಬಹಳ ಸುಂದರವಾಗಿವೆ.

    ReplyDelete
  16. Azad sir,

    sorry for the late comment.....eradu kavanagalu super....tumbaa chennagive..

    ReplyDelete