ಸ್ನೇಹಿತ
(ಸ್ನೇಹಿತರ ದಿನದಂದು ನನ್ನ ಬಾಲ್ಯದ ಗೆಳೆಯನ ನೆನಪಲ್ಲಿ)
ಅವನಲ್ಲಿ ನಾನಿಲ್ಲಿ ಆದರೂ ನಮ್ಮಲ್ಲಿಲ್ಲ ದೂರ
ಅವನಿದ್ದ ನನ್ನ ಜೊತೆ ಇದ್ದಾಗಲೂ ನಾನು ಪೋರ
ಮಾಸ್ತರು ಹಾಜರಿಗೆ ಅವನದಾಯ್ತು ಜವಾಬು
ಎಂದೋ ಸತ್ತಿದ್ದ ನನ್ನ ತಾತ ಸತ್ತ ಎಂದ ಸಬೂಬು
ಸ್ಕೂಲಿಂದ ಬರುವಾಗ ತೋಪಿಗೆ ನುಗ್ಗಿದ್ದು ಮಾವಿಗೆ
ಮಾಲಿ ಬಂದಾಗ ನನ್ನ ಬದಲಿಗೆ ತಾನೇ ಸಿಕ್ಕಿದ್ದ ಪೆಟ್ಟಿಗೆ
ತುಂಟಾಟಮಾಡಿ ಸಿಕ್ಕಿಬಿದ್ದೆ, ಬೆತ್ತ ಬಿತ್ತು ಛಟೀರ್-ಕೈಗೆ
ಅಯ್ಯೋ ಎಂದಿದ್ದ ಗೆಳೆಯ ಬಿದ್ದಂತೆ ಏಟು ತನ್ನ ಮೈಗೆ
ಹತ್ತರಲ್ಲಿ ಪ್ರಥಮ ದರ್ಜೆ ಸಿಕ್ಕಿದ್ರೂ ಪೆಚ್ಚಾಗಿ ಬಂದ್ರೆ - ನಾನು
ಊರಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದ ತಾನೇ ಗೆದ್ದಂತೆ ಅವನು
ಅಜಾದ್ ಸರ್,
ReplyDeleteಸ್ನೇಹದ ಬಂಧವೇ ಹಾಗೆ..........
ನಮ್ಮ ಖುಶಿಗಿಂತ ಸ್ನೇಹಿತರ ಖುಷಿಗೆ ಹೆಚ್ಚು ಸಂತೋಷ ಪಡುವುದು.
ಚಂದದ ಕವನ......
ಸ್ನೇಹಿತರ ದಿನದ ಶುಭಾಶಯಗಳು.........
ಸ್ನೇಹದ ಬಂಧವೇ ಹಾಗೆ...
ReplyDeleteಸ್ನೇಹದಿನದ ಶುಭಾಶಯಗಳು...
ಸ್ನೇಹ ದಿನದ ಶುಭಾಷಯ..
ReplyDeleteಹೂವಂತೆ ಈ ಸ್ನೇಹ..
ಪ್ರವೀಣ್ ಧನ್ಯವಾದ ನಿಮ್ಮ ಅಭಿಪ್ರಾಯ ಮತ್ತು ಹಾರೈಕೆಗೆ...
ReplyDeleteಪ್ರವೀಣ್ ಧನ್ಯವಾದ..ನಿಮ್ಮ ಹಾರೈಕೆ ಮತ್ತು ಅನಿಸಿಕೆಗೆ
ReplyDeleteಮಹೇಶ್ ಹೌದು...ತಂದೆ ತಾಯಿಯೂ ಒಮ್ಮೊಮ್ಮೆ ಸ್ನೇಹಿತನಿಗೆ ದಂಬಾಲು ಬೀಳೊಲ್ವೇ...ನೀನೇ ಹೇಳಪ್ಪ ಸ್ವಲ್ಪ ನಿನ್ನ ಸ್ನೇಹಿತನಿಗೆ ಅಂತ....ಸ್ನೇಹಿತರ ದಿನದ ಶುಭಾಷಯಗಳು..ನಿಮಗೂ
ReplyDeleteಕತ್ತಲೆ ಮನೆಗೆ ಧನ್ಯವಾದ...ಹೌದು ಕತ್ತಲೆ ಮನೆ ಏಕೆ..? ಬೆಳಕು ಬರೋಲ್ಲವೇ...? ಧನ್ಯವಾದ.
ReplyDeleteaazaad sir,
ReplyDeletenimma geleyanigoo nimma geletanakkoo, nimma kavitegoo preetiya salaam..... ssooppaar kavana... nanna geleyana nenapaayitu........
ಜಲನಯನ,
ReplyDeleteಗೆಳೆತನದ ದಿನದ ಶುಭಾಶಯಗಳು. ಈ ದಿನದ ನೆನಪಿಗೆ ನಿಮ್ಮ ಹಳೆಯ ಗೆಳೆಯನನ್ನು ನೆನಪಿಸಿಕೊಂಡು ಚಂದದ ಕವನ ನೀಡಿದ್ದೀರಿ. ಇದು ನನಗೆ ನನ್ನ ಬಾಲ್ಯದ ಗೆಳೆಯರನ್ನು ನೆನೆಸಿಕೊಳ್ಳುವಂತೆ ಮಾಡಿತು.
ದಿನಕರ್ ಗೆಳೆಯನನ್ನ ನೆನಪಿಸಿಕೊಳ್ಳೋ ಸದವಕಾಶ್...ಎಲ್ಲಿ ಯಾರಿದ್ದರೋ ತಿಳಿಯದು...ನನ್ನ ಒಬ್ಬ ಗೆಳೆಯನ್ನ ಸುಮಾರು ೧೫ ವರ್ಷ ಆಯ್ತು ನೋಡಿ..ಅವನಾದರೂ ಈ ಬ್ಲಾಗ್ ನೊಡಿದ್ರೆ ನನಗೆ ಸಮಾಧಾನ ಮತ್ತೂ ನಿಮ್ಮೆಲ್ಲರನ್ನ ನಿಮ್ಮ ಗೆಳೆಯರನ್ನ ನೆನಪಿಸಿಕೊಳ್ಳುವುದಕ್ಕೆ ಸಹಾಯ ಮಾಡಿದರ ಜೊತೆಗೆ..
ReplyDeleteಸುನಾಥಣ್ಣ...ನಿಜ ನಿಮ್ಮಂಥ ಹಿರಿಗೆಳೆಯರ ಗೆಳೆತನ ಈ ಬ್ಲಾಗಿನ ಮೂಲಕ ಸಿಕ್ಕಿದ್ದೂ ನಮ್ಮ ಸುಕೃತ..ಅಲ್ಲವೇ ಧನ್ಯವಾದ ನಿಮ್ಮ ಆತ್ಮೀಯತೆಗೆ.
ReplyDeleteನನ್ನ ಬಾಲ್ಯದ ಗೆಳೆಯರೆಲ್ಲಾ ನೆನಪಿಗೆ ಬಂದರು ತಮ್ಮ ಕವನ ಓದಿ. ಅಷ್ಟೊಂದು ಆರ್ದ್ರತೆ ತುಂಬಿದೆ ಇದರಲ್ಲಿ.
ReplyDeleteಗೆಳೆತನದ ಒ೦ದು ಝಲಕ್ ಮೂಡಿಸಿದ್ದೀರಿ. ಚೆ೦ದ ಇದೆ.
ReplyDeleteಶುಭಾಶಯಗಳು
ಅನ೦ತ್
Aajaad Sir,
ReplyDeleteNimma kavana, geletana, ellavu superrr sir...Kavana odi nanna agaliruva praana snehitanobbana nenapaaitu...