ನಿಸರ್ಗದ ನಿಯಮ
ಹಕ್ಕಿನಾನು ಪತಂಗ ನೀನು
ಸಿಕ್ಕಿ ಬಿದ್ದಾಯ್ತು, ಹೆಕ್ಕಿ ಹಿಡಿದಾಯ್ತು
ಎಲ್ಲಿಗೆ ಹೋಗ್ತೀಯಾ ತಪ್ಪಿಸ್ಕೊಂಡು?
ಗೂಡು ಕಟ್ಟಿಯಾಯ್ತು
ಮಾಡು ಗಟ್ಟಿಯಾಯ್ತು
ಮೊಟ್ಟೆಯೊಡೆದೈತೆ ಮರಿಯಾಗೈತೆ
ಹಸ್ದಿವೆ ಕೂಸ್ಗಳು ಅವಕ್ಕೇನ್ಕೊಡ್ಲಿ?
ಖುಷಿಯಾಗಿಟ್ಟಿದ್ದೆ ಹತ್ಮೊಟ್ಟೆ
ಎರಡ್ಸೇರಿದ್ವು ಪಾಪಿ ನಾಗಣ್ಣನ್ಹೊಟ್ಟೆ
ಒಡೆದು ಹೊರ್ಬಂದಿದ್ದು ಆರು
ಗೂಬೆ ಗಿಡ್ಗನ್ ಪಾಲ್ಗೆ ಮೂರು
ಬಿಡ್ಲಾ ನಿನ್ನ ? ನಂದೂ ಒಡೆದೈತೆ ಸಹನೆ ಕಟ್ಟೆ
ನಂಗೂ ಮನ್ಸಿಲ್ಲ ನಿನ್ನ ಕೊಲ್ಲೋಕೆ
ರಂಗು ರಂಗಿನ ಪತಂಗ ನೋಡೋಕೆ
ನಿಂಗೂ ಹಕ್ಕೈತೆ ನಿನ್ ಮಕ್ಳ ಜೊತೆ ಬಾಳೋಕೆ
ಮುಗದೈತಲ್ಲ ನಿನ್ಕರ್ತವ್ಯ ಪರಿಸರ್ದಾಗೆ
ಬಿಟ್ಟೆ ಎಲೆಮೇಲೆ ಮುತ್ತಿನಂಥಾ ಸವ್ರಾರು ಮೊಟ್ಟೆ
ನನ್ಕತೆನೂ ಮುಗೀತದೆ ನೋಡಿದ್ರೆ ಮಾರ್ಜಾಲ
ಅದರ್ಕೈಲಿ ತಪ್ಪಿಸ್ಕೊಂಡ್ರೆ ಆಗ್ತೀನಿ ನರಿ ಪಾಲ
ಈ ನಿಸರ್ಗದ್ನಿಯ್ಮಾನೇ ಹಿಂಗೆ ಅವೂ ಸಿಕ್ಬೀಳ್ತವೆ
ಹಾಸಿದ್ರೆ ಬೇಟೆಗಾರ ಮಾಯಾಜಾಲ
ಅವನೂ ಉಳಿಯೊಲ್ಲ ಕಾಣದ್ರೋಗ, ಸುನಾಮಿ ಕೈಗೆ ಸಿಕ್ರೆ
ಇದೆಲ್ಲಾ ನಿಯಮಾ ಸೂತ್ರದಾರನ್ನಾಟ್ಕದ್ದು
ಖುಷಿ ಪಡು ಆಯ್ತು ನಿನ್ ಜನ್ಮಾನೂ ಸಾರ್ಥಕ
ಧನ್ಯ ನೀನು ಅಹಾರಾಗ್ತಿದ್ದೀಯಾ ಸೇರಿ ಯಾರ್ದೋ ಹೊಟ್ಟೆ.
ಸೂಪರ್ ಕವನ ಕಣೊ.... !!
ReplyDeleteಮಸ್ತ್... ತುಂಬಾ ಇಷ್ಟವಾಯ್ತು.....
ನಿಸರ್ಗದ ಆಹಾರಚಕ್ರದ ನಿಯಮವನ್ನು ಕವನರೂಪದಲ್ಲಿಯೇ ಎಷ್ಟು ಚಂದವಾಗಿ, ಮನಕ್ಕೆ ತಗಲುವಂತೆ ವರ್ಣಿಸಿದ್ದೀರಲ್ಲ! ಶಿವು ಚಿತ್ರವೂ ಸುಪರ್!
ReplyDeleteha sir... nisargada niyama.. yaaru tappisokke agolla chennagide kavana...
ReplyDeleteಅಜಾದ್ ಸರ್;ಕವನದಲ್ಲಿ ನಿಸರ್ಗದ ನಿಯಮ ಸೊಗಸಾಗಿ ಮೂಡಿ ಬಂದಿದೆ!
ReplyDeleteajad,
ReplyDeletenanna chitrakke tumba chennagi kavanavannu barediddiri....thanks
ನಿಸರ್ಗ ನಿಯಮದ ಸೊಗಸಾದ ಚಿತ್ರಣ.ಅಭಿನಂದನೆಗಳು
ReplyDeleteಪ್ರಕಾಶಾ ಬೆಳಿಗ್ಗೆಯಿಂದ ಒಂದ್ ಹತ್ತು ಸರ್ತಿ ನಿನಗೆ ಉತ್ತರ ಹಾಕಿ ಬೋರ್ ಆಗಿದ್ದೀನಿ...ಯಾಕೋ ಅಕ್ಸೆಪ್ಟ್ ಆಗ್ತಿರ್ಲಿಲ್ಲ...ಧನ್ಯವಾದ ನಿನ್ನ ಮೊದಲ ಬೆ.ತ. ಪ್ರತಿಕ್ರಿಯೆಗೆ....
ReplyDeleteಸುನಾಥಣ್ಣ...ನಿಸರ್ಗದ ನಿಯಮ ಬಲ್ಲವರಿಲ್ಲ...ಆದ್ರೆ ಒಂದಂತೂ ನಿಜ ಸರಿದೂಗುತ್ತೆ ಎಲ್ಲ ಹೆಚ್ಚು-ಕಡಿಮೆಗಳನ್ನ ತನ್ನಂತಾನೆ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ReplyDeleteಮನಸು ಮೇಡಂ ಈಗ ಆಯ್ತು...ಕಾಮೆಂಟ್ ಗೆ ಉತ್ತರ ಹಾಕೋಕೆ...ಉಸ್ಸಪ್ಪಾ...ಬ್ರೌಸರ್ ಅಪ್ಡೇಟ್ ಮಾಡಿದ್ಮೇಲೆ....ಆಯ್ತು,,,
ReplyDeleteಧನ್ಯವಾದ ನಿಮ್ಮ ಅನಿಸಿಕೆಗೆ.
ಡಾಕ್ಟ್ರೇ, ಥ್ಯಾಂಕ್ಸ್...ನಿಸರ್ಗ ನಿಯಮದ ದಾವ್-ಪೇಚ್ ಗಳಲ್ಲಿ ನಾವು ನೆಪಮಾತ್ರ ಅಲ್ವಾ..??
ReplyDeleteಶಿವು ನಿಮ್ಮ ಚಿತ್ರಕ್ಕೆ ಸ್ವಲ್ಪವಾದರೂ ನ್ಯಾಯ ಒದಗಿಸಿದ್ದೀನಾ.?...ಧನ್ಯವಾದ ನಿಮ್ಮ ಚಿತ್ರಕ್ಕೆ ಮತ್ತು ಪ್ರತಿಕ್ರಿಯೆಗೆ.
ReplyDeleteಮಂಜುಳಾದೇವಿಯವರಿಗೆ ಧನ್ಯವಾದ ಕವನ ಇಷ್ಟವಾಗಿದ್ದರೆ ...ಥ್ಯಾಂಕ್ಯೂ ,,...
ReplyDeletenisarga niyamada chandadakavana
ReplyDeleteತುಂಬಾ ಅದ್ಭುತವಾಗಿ ಚಿತ್ರಕ್ಕೊಪ್ಪುವಂತೆ ಆಹಾರ ಸರಪಳಿ ಹಕ್ಕಿಯ ಮನದಿಂದ ಹೇಳಿಸಿದ್ದಿರಿ.... ವಾಹ್ಹ್ಹ್ ನಿಮಗೆ ನೀವೇ ಸಾಟಿ!!!
ReplyDelete-ಸೀತಾರಾಮ.
ಚಿತ್ರಕ್ಕೊಪ್ಪುವ ಹಾಡು.. ತುಂಬಾ ಖುಷಿಯೆನಿಸಿತು :)
ReplyDeleteಕಲರವಿಸಿದ ಕಲರವಕ್ಕೆ ಧನ್ಯವಾದ...
ReplyDeleteಸೀತಾರಾಂ ಸರ್..ನನ್ನ ಲ್ಯಾಪ್ ಟಾಪಿನ ಕನ್ನಡ ಕುಟ್ಟುವಿಕೆ...ಕೈ ಕೊಟ್ಟಿತ್ತು ಅದಕ್ಕೇ ಲೇಟ್ ನಿಮಗೆ ಉತ್ತರ ನೀಡೋದ್ರಲ್ಲಿ...ಧನ್ಯವಾದ.
ReplyDeleteಈಶ್ವರ್ ಸರ್..ಧನ್ಯವಾದ... ಭಾನುವಾರದ ಕಚಗುಳಿ ನೋಡಿ ನನ್ನ ಜಲನಯನದಲ್ಲಿ ..ಹಾಗೆನೆ...
ReplyDeleteಚಿತ್ರ-ಚಿತ್ರಣ ಸೊಗಸಾಗಿದೆ. ಅಜಾದ್ ಸರ್ ಅವ್ರ ಶೈಲಿಯಲ್ಲಿ ಗ್ರಾಮ್ಯ ಭಾಷೆಯ ಸೊಗಡು ಸಲೀಸಾಗಿ ಹರಿದು ಬರುತ್ತದೆ. ಅಭಿನ೦ದನೆಗಳು.
ReplyDeleteಅನ೦ತ್
ಅನಂತ್ ಸರ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
ReplyDelete