ನಿಜವಾಗ್ಲೂ ಗೊತ್ತಿಲ್ಲ ಮಗು
ಅಪ್ಪಾ...
ಏನ್ಮಗಾ..
ಸೂರ್ಯ ಬೆಳಕ್ಕೊಡ್ತಾನಲ್ವಾ?
ಹೌದ್ಕಣ್ಮಗಾ..ಲಕ್ಷಾಂತರ ವರ್ಷಗಳಿಂದ
ಮತ್ತೆ ಕತ್ತಲಾಗ್ತದೆ?
ಅದು ಭೂಮಿ ತಿರ್ಗೋದ್ರಿಂದ
ಮತ್ತೆ ಸರ್ಕಾರಾನೂ ತಿರುಗ್ತದಾ?
ಅದ್ಯಾಕ್ಮಗಾ ಅಂಗ್ ಕೇಳೀಯಾ?
ಮತ್ತೆ ಬೆಂಗ್ಳೂರ್ಗೆ ಒಂದ್ಗಂಟೆ ಕತ್ಲಂತೆ
ಬ್ಯಾರೆ ಪಟ್ನಕ್ಕೆ ಎರ್ಡೋ ಮೂರೋ ಅಂತೆ
ನಮ್ ಅಳ್ಳಿನಾಗೆ ಏನಿಲ್ಲಂದ್ರೂ ಆರ್ಗಂಟೆನಂತೆ..
ಇದ್ಯಾಕಪ್ಪಾ? ಇಂಗೇ??
ನಂಗೊತ್ತಿಲ್ಮಗಾ
ಅಪ್ಪಾ...
ಇನ್ನೇನ್ಲಾ ಮಗಾ?
ಕಲ್ಲಿದ್ಲಿರೋದು ಆಂದ್ರದೊಳ್ಗೇನಾ?
ಇಲ್ಲ ಮಗ ಬ್ಯಾರೆ ಕಡೆನೂ ಸಿಗ್ತೈತೆ..
ಮತ್ತೆ ಕರೆಂಟು ಉತ್ಪಾದ್ನೇಗೆ ಅದೊಂದೇಯಾ ಮಾರ್ಗ?
ಇಲ್ಕಣ್ಮಗಾ ಇನ್ನೂ ಅವೆ ಮಾರ್ಗ
ಇದನ್ನ ಸರ್ಕಾರಕ್ಕೆ ತಿಳ್ಸಿಕೊಡೂರು ಇಲ್ವಾ? ಅಂಗಾರೆ...
ನಿಜವಾಗ್ಲೂ ಈ ಇಸ್ಯ ನಂಗೊತ್ತಿಲ್ಲ ಮಗು
ಮಗಾ...
ReplyDeleteನಮ್ಮ ದೇಶ, ಜನ ಯಾರಿಗೂ ಬೇಡ..
ತಮ್ಮ ಪಕ್ಷ ಗೆದ್ದಾಗಿದೆ..
ಐದು ವರ್ಷ ಮೇಯೋದು ಹೇಗೆ ಅಂತ ಲೆಕ್ಕಾಚಾರ...
ಯಾಕೆ ಗೊತ್ತಾ?
ಹುಚ್ಚರ ಮದುವೇಲಿ ಉಂಡೋನೇ ಜಾಣ... !
ಪುಟ್ಟಣ್ಣಾ.. ಚೆನ್ನಾಗಿದೆ..
ಅಪ್ಪ. ಮಗನ ಸಂಭಾಷಣೆ ಇನ್ನಷ್ಟು ಬರ್ಲಿ...
ಎಲ್ಲಾ ಮಾರ್ಗಗಳು ಸರಕಾರಕೆ ಹೇಳಿಕೊಟುರುವೆ ಅವರು ಮಾಡಕಿಲ್ಲ.
ReplyDeleteಅವರ ಮನೆಗಳಿಗೆ ಬೇಕುಂದ್ರೆ ಥಟ್ ಅಂತ ಮಾಡಿಕೋತಾರೆ........
ಆದ್ರೆ ಅದೇ ಹಳ್ಳಿಗಳಿಗೆ,ನಮ್ಮ ದೇಶಕ್ಕೆ ಅಂದ್ರೆ ಅವರು ಮಾಡಕಿಲ್ಲ ಮಗಾ........
ಸಂಭಾಷಣೆ ಚೆನ್ನಾಗಿದೆ ................:)
jai ho!!!!!!
ReplyDeleteಸರಳವಾಗಿ ಮಾತನಾಡೋ ಶೈಲಿಯಲ್ಲೂ ಹಾಸ್ಯಮಯ ಹಾಅಹಾಆಆ
ReplyDeleteಚನ್ನಾಗಿದೆ ಭಯ್ಯಾ...............
haha sir foto sakkatagide elli hudukidri haha... paapa appanige enu gottila haha
ReplyDeleteಪ್ರಸ್ತುತ ಸನ್ನಿವೇಶಕ್ಕೆ ಹೊ೦ದುವ ಅರ್ಥ ಪೂರ್ಣ ಕವನ. ಅಭಿನ೦ದನೆಗಳು ಆಜಾದ್ ಸರ್.
ReplyDeleteಥ್ಯಾಂಕ್ಸ್ ಪ್ರಕಾಶಾ...ಅವರಿಗೆ ಅವರದೇ ಚಿಂತೆ..ಅವರಡಿಯ ಕುರ್ಚಿಯ ಕಂತೆ...ಇನ್ನು ಜನಸಾಮಾನ್ಯನ ಕಷ್ಟ..ದೇವರೇ ಕೇಳಬೇಕು...
ReplyDeleteಮಂಜು...ನಿಜ ಮಾರ್ಗ ಹುಡುಕುವುದು ಸರ್ಕಾರದ ಕೆಲ್ಸ ಆದ್ರೆ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿತೋಡುವ ಕೆಲ್ಸ ಸರ್ಕಾರ ಮಾಡೋದೇ ಶೋಚನೀಯ...ಧನ್ಯವಾದ ನಿನ್ನ ಪ್ರತಿಕ್ರಿಯೆಗೆ.
ReplyDeleteಸೀತಾರಾಂ...ಧನ್ಯವಾದಗಳು,,,,
ReplyDeleteಸುಗುಣ...ಫೋಟೋ ನೆಟ್ಟಿಂದು...ಹೌದು ಅದರ ಮೂಲ ಹಾಕ್ಬೇಕು ಇಲ್ಲಾಂದ್ರೆ ...ತಪ್ಪಾಗುತ್ತೆ ಅಲ್ವಾ...ಹಹಹಹ
ReplyDeleteಪ್ರಭಾಮಣಿ ಮೇಡಂ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
ReplyDelete