Thursday, September 29, 2011

ಮನುವಚನ್ -ಚಿತ್ರಕ್ಕೆ ನನ್ನ ಕವನ

(ಚಿತ್ರ: ಮನುವಚನ್ ನ ಛಾಯಾಗ್ರಹಣ ಕೌಶಲ್ಯ)
ಇದರಿಂದ ಹುಟ್ಟಿದ ಹಸಿರುಳಿಸೆನುವ ಕಾಳಜಿಯ ಕವನ

ಎಲೆಮೇಲೆಳೆಹನಿ
ಎಲೆಯಮೇಲೆಳೆಹನಿ...
ಮಳೆಕರಗಿ ಹನಿಸಿತೇ?
ಇಲ್ಲಾ ಎಲೆಬೆವರಿತೇ..?
ಉಸಿರ್ಕಟ್ಟಿ ಪ್ರದೂಷಣೆಗೆ
ಬೇರ-ಬೇರ್ಕೊಂಡ ಬವಣೆಗೆ
ಕಾಂಡಕೆ ಬಿದ್ದ ಕೊಡಲಿಗೆ..??
ಇಲ್ಲಾ.. ಪಾರ್ಕನೂ ನುಂಗುವ
ಹಸಿರ್ಹಾಸುಗೆಗೂ ಲಗ್ಗೆ
ಎಗ್ಗು-ನೆಗ್ಗಿಲ್ಲದ ಭೂಕಬಳಿಕೆಗೆ..
ಭೂಗರ್ಭವನೂ ಬಗೆವವಗೆ
ಹೆದರಿ ಚಿಗುರೆಯಾಗಿ
ಚಿಗುರೊಡೆಯದಾಗುವ
ಮತ್ತೆಲೆ ಬಾರದೋ ಎನುವ
ಭಯಕೆ..ನಭಕೆ ತಲೆಯೆತ್ತಿ
ಬೇಡುತಾ ಅಳುತಿದೆಯೇ..??
ಕಣ್ಣ ಹನಿಸುವ ಹನಿಯ
ಕನಿಕರಿಸೆನುವ ದನಿಯೇ..??
ಹಸಿರಳಿದರೆ ಉಸಿರುಳಿಯದು
ಬೇಡ ಭಯ ಎಲೆ ಎಲೆಯೇ
ನೀನು, ಮನುಕುಲಕಿರುವ
ಅಳಿವುಳಿವಿನ ಏಕೈಕ ಸೆಲೆಯೇ.

23 comments:

  1. ಸ್ಕೂಲ್ ಪ್ರಾಜೆಕ್ಟ್ ಗಾಗಿ ಮನೆಯಲ್ಲಿ ಪುಟ್ಟ ಗಿಡ ಬೆಳೆಸಿದ್ದೆವು ಅದಕ್ಕೆ ದಿನವೂ ನೀರು ಹಾಕುವಾಗ ಎಲೆಗಳ ಮೇಲೆ ನೀರು ಚಿಮುಕಿಸಿ ಈ ಫೋಟೋ ತೆಗೆದಿದ್ದಾನೆ... ಇದಕ್ಕೆ ಪೂರಕವಾಗುವಂತೆ ಕವನ ರಚಿಸಿದ್ದಕ್ಕೆ ಬಹಳ ಧನ್ಯವಾದಗಳು ಸರ್...

    ReplyDelete
  2. Lovely Photo and lovely kavana Azad bhaiyaa!!
    :-)
    ms

    ReplyDelete
  3. ಮಂಜು ..ಧನ್ಯವಾದ..ಇಲ್ಲಿ ಬಂದುದಕ್ಕೆ ಪ್ರತಿಕ್ರಿಯೆ ನೀಡಿದ್ದಕ್ಕೆ...

    ReplyDelete
  4. ಸುಗುಣ...ಒಳ್ಳೆ ಆಸಕ್ತಿ ಇದೆ ಮನುಗೆ..ಸ್ವಲ್ಪ ಸೂಕ್ಷ್ಮಗಳನ್ನ ತಿಳ್ಕೊಂಡ್ರೆ ಒಳ್ಳೆ ಫೋಟೋಗ್ರಾಫಿ ಕಲೀತಾನೆ...ಮನುಗೆ ಥ್ಯಾಂಕ್ಸು...ಈ ಚಿತ್ರಕ್ಕೆ..

    ReplyDelete
  5. ಓ.ಓ.ಓ.ಓ....ಮಾಲ-T ಮೇಡಂ...ಬರಬೇಕು ಬರಬೇಕು...ಏನಿದು ಬಹಳ ದಿನಗಳ ನಂತರ...ಧನ್ಯವಾದ..

    ReplyDelete
  6. ಮನುವಚನನ ಚಿತ್ರ ಹಾಗು ನಿಮ್ಮ ಕವನ ಸೂಪರ್

    ReplyDelete
  7. ಅಜಾದ್ ಸಾಬ್.........
    ಕ್ಯಾ ಖೂಬ್ ಹೈ.............!

    ಚಿಗುರೆ ಕಂಗಳ
    ಚಿಗುರು ಹುಡುಗನ
    ಚಿಗುರು ಎಳೆಗಳ
    ಚಿಗುರು ಚಿತ್ರಕೆ
    ಬೆರಗುಗೊಳಿಸುತ
    ಮೆರಗು ನೀಡುವ
    ಚುರುಕು ಮುಟ್ಟಿಸುತ ಬುದ್ಧಿಗೆ
    ಅರಿವು ಮೂಡಿಸುತ ಮನಕೆ
    ಹುರುಪು ತುಂಬಿತು ನಿಮ್ಮೀ ಕವನ................

    ReplyDelete
  8. ಸುನಾಥಣ್ಣ...ಎಂದಿನಂತೆ ನಿಮ್ಮ ಮಾತು ನಮಗೆ ಬೆನ್ನುತಟ್ಟುವ ನುಡಿಗಳು...

    ReplyDelete
  9. ಪ್ರವೀಣ...ನನ್ನ ಕವನಕ್ಕಿಂತಾ...ನಿನ್ನ ಉತ್ತರರೂಪ ಸುಂದರ ಅತಿ ಸುಂದರ....

    ReplyDelete
  10. ದಿನಕರ್ ಕವನ ಸೂಪರ್....ಚಿತ್ರ ಸೂಪಾರ್..ನಿಮ್ಮ ಮಾತು ಇನ್ನೂ..ಸೂಊಪರ್...

    ReplyDelete
  11. ಅಜಾದ್ ಸರ್;
    ಚಿತ್ರ ಸೂಪರ್
    ಕವನ ಸೂಪರ್
    ಕವಿಯ ಮನಸು
    ಇನ್ನೂ ಸೂಪರ್!

    ReplyDelete
  12. ಸಾಮಾನ್ಯ ಎನಿಸುವ ಸುಂದರ ಚಿತ್ರಕ್ಕೆ ಆಳದರ್ಥದ ಸಾಲುಗಳು

    ReplyDelete
  13. `ಮನು'ಕ್ಲಿಕ್ಕಿಸಿದ ಸೂಕ್ಷ್ಮತೆಯುಳ್ಳ ಚಿತ್ರಕ್ಕೆ ನಿಮ್ಮ ಕಲ್ಪನೆ ಹಾಗೂ ವೈಚಾರಿಕತೆಯನ್ನೊಳಗೊ೦ಡ ಕವನ ಬಹಳ ಚೆನ್ನಾಗಿ ಮೂಡಿ ಬ೦ದಿದೆ ಸರ್,ಇಬ್ಬರಿಗೂ ಅಭಿನ೦ದನೆಗಳು.

    ReplyDelete
  14. ಡಾಕ್ಟ್ರೇ...ಧನ್ಯವಾದ..ನಿಮ್ಮ ಮಾತಿಗೆ ಎದುರಿಲ್ಲ.. ಅದುವಲ್ಲವೇ ಸೂಪರ್??....

    ReplyDelete
  15. ಧನ್ಯವಾದ...ವಿಚಲಿತವಾಗದಂತೆ ಭುವಿಯ ಭವಿತಕ್ಕೆ ಹಸಿರೆಲೆಗೆ ಜೈಎಂದ ನಿಮಗೆ...

    ReplyDelete
  16. ಗುರು, ಈ ಚಿತ್ರ ಕಂಡ ತಕ್ಷಣ ಯಾಕೋ ಬಹು ಬೇಗ ಮನಸಿಗೆ ಬಂದ ಸಾಲುಗಳು...ಹಾಗೇ ಹಾಳೆಗೆ ಹೋಗದೇ..ಕಂಪ್ಯೂಟರ್ ಬರಹ ಕ್ಕೆ ವರ್ಗಾವಣೆಯಾಗಿದ್ದು...

    ReplyDelete
  17. ಪ್ರಭಾಮಣಿ ಮೇಡಂ ಧನ್ಯವಾದ...ಮನು ಚಿತ್ರಕ್ಕೆ ಭಾವ ತುಂಬುವ ಪ್ರಯತ್ನ... ಸಹಜವಾಗಿ ನನ್ನ ಪರಿಸರಪರ ಮನಸ್ಸು ಇದರಿಂದ ಪ್ರಭಾವಗೊಂಡಿದ್ದು ಸಹಜ...

    ReplyDelete
  18. ಫೋಟೋ ಮತ್ತು ಕವನ ಎರಡೂ ಸುಂದರವಾಗಿದೆ. ಚಿತ್ರಕ್ಕೆ ಭಾವ, ಭಾವಕ್ಕೆ ಚಿತ್ರಣ :) :)

    ReplyDelete
  19. ಈಶ್ವರ್ ಸರ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಮೊದಲಿಗೆ ನಿಮಗೆ ಜಲನಯನ-ಭಾವಮಂಥನ-ಸೈನ್ಸ್ ಽ ಶೇರ್ ತ್ರಿವಳಿ ಬ್ಲಾಗ್ ಗೆ ಸ್ವಾಗತ...

    ReplyDelete