Sunday, December 25, 2011

ಚಿತ್ರ: ದಿಗ್ವಾಸ್ ಹೆಗಡೆ

ಸಾವಿಗೇಕೆ ಆಹ್ವಾನ
ಬೆಳ್ಮುಗಿಲ ಬೆಳಕಲ್ಲಿ
ಕಿರಣದಾವರಣ ಹೀಗೇ
ಇಣುಕಿದ ಪರಿಯೇನು?
ಹರಿದಾವರಣ ಕಿರಿದಾಗೆ
ಕಿರಣವಿರದು ರಣಬಿಸಿಲು
ಹರಿತಿಗೂ ಸಿಗದು ಉಸಿರು

ನೆಲ ಜಲಕೆ ಹಾ-ತೊರೆದು
ಕೆರೆಯಂಗಳ ಬಾಯ್ಬಿರಿದು
ಬಿಲ ಬಿಟ್ಟು ಹೊರ ಬಂದಾವು
ಇಲಿಯ ಬೆಂಬತ್ತಿ ಹಸಿದ ಹಾವು
ಮರ ಕಡಿದು, ನೆಲ ಬಗೆದು
ಬರಮಾಡಿಕೊಳ್ಳಬೇಡಿ ಸಾವು

15 comments:

  1. "ಮರ ಕಡಿದು, ನೆಲ ಬಗೆದು ಬರಮಾಡಿಕೊಳ್ಳಬೇಡಿ ಸಾವು".....ಅರ್ಥಪೂರ್ಣ ಸಾಲುಗಳು ಬಯ್ಯಾ.
    ಇದು ಮನುಜ ಕುಲಕೊಂದು ಕಿವಿಮಾತು
    ಇನ್ನಾದರೂ ಅರಿತು ನಡೆದರೆ ಒಳಿತು
    ಇಲ್ಲದಿರೆ ಸಿದ್ದರಾಗಿ ಕಾದಿದೆ ಕೆಡುಕು

    ReplyDelete
  2. ಅಂದದ ಚಿತ್ರಕ್ಕೆ ಚಂದದ ಕವನ.

    ReplyDelete
  3. ಧನ್ಯವಾದ ತಂಗಿ.. ನಾವು ಮಾಡುತ್ತಿರುವುದಕ್ಕೆ ನಾವೇ ಹೊಣೆ, ನಮ್ಮ ಊರಕೆರೆ ನನ್ನ ಬಾಲ್ಯದಲ್ಲಿ ಪ್ರತಿ ವರ್ಷ ತುಂಬಿ ಕೋಡಿ ಹರಿಯುತ್ತಿತ್ತು.. ನಾನು ಡಿಗ್ರಿ ಮುಗ್ಸಿ ಊರಿಗೆ ಬಂದ ಎರಡು ಮೂರು ವರ್ಷ ಅರ್ಧಂಬರ್ದ... ಈಗ..ಕೆರೆಯೇ ಇಲ್ಲವಾಗಿದೆ...

    ReplyDelete
  4. ವಿಚಲಿತ ಮಾಡಿದಿರಿ ಕಾಮೆಂಟೂ ನನ್ನನ್ನೂ ...ಹಹಹ...ಧನ್ಯವಾದ

    ReplyDelete
  5. ಡಾಕ್ಟ್ರೇ ಧನ್ಯವಾದ.. ತಪ್ಪದೇ ಭೇಟಿ ಕೊಡ್ತೀರಾ ಚಿಕ್ಕದಾದರೂ ಚೊಕ್ಕ ಪ್ರತಿಕ್ರಿಯೆ ಹಾಕ್ತೀರಿ...

    ReplyDelete
  6. ಧನ್ಯವಾದ ಸೀತಾಆರಾಮ್ ಸರ್...

    ReplyDelete
  7. ನೆಲ ಜಲಕೆ ಹಾ-ತೊರೆದು
    ಕೆರೆಯಂಗಳ ಬಾಯ್ಬಿರಿದು
    ಬಿಲ ಬಿಟ್ಟು ಹೊರ ಬಂದಾವು
    ಇಲಿಯ ಬೆಂಬತ್ತಿ ಹಸಿದ ಹಾವು
    ಮರ ಕಡಿದು, ನೆಲ ಬಗೆದು
    ಬರಮಾಡಿಕೊಳ್ಳಬೇಡಿ ಸಾವು.......

    Sundara saalugalu sir...Sumdara Kavana..

    ReplyDelete
  8. oLLEya kavana sir.. bahaLa sogasagide saalugaLu

    ReplyDelete
  9. ಅಶೋಕ್ ಬಹಳ ದಿನಗಳ ನಂತರ ನಿಮ್ಮ ಬರುವಿಕೆಗೆ ಸ್ವಾಗತ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  10. ಧನ್ಯವಾದ ಸುಗುಣ...

    ReplyDelete
  11. ಸುಶ್ಮಾ ಒಣಗುವ ಕೆರೆಯಂಗಳ ಮರಕಾಣದ ತೋಪುಗಳು...ಇವೇ ನಮ್ಮ ಕೊಡುಗೆ.. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  12. ಸಾಲುಗಳು ತು೦ಬಾ ಚೆನ್ನಾಗಿದೆ..ಧನ್ಯವಾದಗಳು

    ReplyDelete