Tuesday, July 20, 2010

ಮಗುವಿರಬೇಕು

ಪ್ರತಿ ಮನದಲಿ ಒಂದು ಮಗುವಿರಬೇಕು



ಮನ ಕಲಕು, ಮೆಲುಕು ಪಲುಕುತಿರಬೇಕು


ನಗು ಒಳಿತಿಗೆ ಕೆಡಕಿಗೂ ಉಕ್ಕುತಿರಬೇಕು


ಅದ ಅರಿತಂತಿದ್ದೂ ಮರೆಯುವಂತಿರಬೇಕು



ಅಪ್ಪ ಅಮ್ಮಗೆ ಚುಮ್ಮ ಕೊಡುತಿರಬೇಕು


ಬೆಳೆದರೂ ಬಲಿತರೂ ತುಂಬೊಲವಿರಬೇಕು


ಅಣ್ಣನಾದರೂ ತಮ್ಮ ಅಕ್ಕನಾದರೂ ತಂಗಿ


ಎಲ್ಲಬಲ್ಲವನಾದರೂ ಅರಿಯದಂತಿರಬೇಕು



ತುಂಬು ಮನದ ನಿರ್ಮಲ ಮಗುವಿನ ನಗುವಿರಬೇಕು


ಸಹಾಯ ಬೇಡದೆಯೂ ಎಲ್ಲರಿಗೆ ಸಿಗುತಿರಬೇಕು


ತನ್ನಳಲ ಬಿಸಿಲಲ್ಲಿಟ್ಟುಸುಟ್ಟು ನೆಚ್ಚಿದವರಿಗೆ ನೆಳಲ


ಬಿಳಲು ಬಿಟ್ಟು ತಂಪನೆರೆವ ಹರಡಿದಾಲದಂತಿರಬೇಕು



ಕರೆಯದೇ ಬರುವ ಆಪತ್ತಿಕಾದವನಂತಿರಬೇಕು


ಮರೆಯದೇ ನೆನೆವ, ಕೊಟ್ಟದ್ದ ಮರೆತಂತಿರಬೇಕು


ಉರಿವ ಧೂಪ, ತೇಯ್ವ ಸುಗಂಧದಂತಿರಬೇಕು


ಇರಬೇಕು, ಇರಬೇಕು ಪ್ರತಿ ಮನದಲ್ಲೂ ಮಿಡಿವ


ಮುಗ್ಧ, ತುಂಬು ನಗುವಿನ ಮಗುವಿರಬೇಕು.