Sunday, November 22, 2009

ಎರಡು ದಿಕ್ಕು -ಒಂದೇ ಯೋಚನೆ













ನಾಳೆ ಚಿಂತೆ ಬಿಡು
ಭವಿತಕೆ ಹೇಳಿಬಿಡು
ಚಿಂತೆ ಮಾಡದಿರು
ಸೂತ್ರವಾಗಲಿದು ಎಂದೂ
ಮರೆತುಬಿಡು
ನೋಡದಿರು
ಕನ್ನಡಿಯನ್ನೆಂದೂ
ತೊರೆದುಬಿಡು
ನಿಟ್ಟುಸಿರು
ಕಾಡಬೇಡೆಂದು
ನಿಂತು ನಟ್ಟ ನಡು
ನಾಳೆ ಎನ್ನದಿರು
ಸುಖಪಡುವೆ ಎಂದೆಂದೂ

ಪ್ರಳಯ
ಎಲ್ಲಿ ಪ್ರಳಯ?
ಎಲ್ಲ ಸುಳ್ಳಯ್ಯ
ಆಕರ್ಷಿಸಲೊಂದು ನೆಪ
೨೦೧೨, ಓಡದಿದ್ದರೆ
ಪಾಪರ್ ಆಗುವರೇ ಪಾಪ!!
ಕೊಚ್ಚಿ ಹೋದವು ಊರು
ಕಳಚಿ ತಲೆಮೇಲಿನ ಸೂರು
ಅನ್ನ-ವಸ್ತ್ರವಿಲ್ಲದ ಪರದಾಟ
ಅವರ ಕೇಳಿ ಏನೆಂದು ವಿಧಿಯಾಟ
ಮನೆಮಂದಿಯೆಲ್ಲಾ ಕೊಚ್ಚಿಹೋದರೆ
ತೋರದೇ ಒಂದೂ ಉಪಾಯ
ಅಳಿಸಿ ಹೋದರೆ ಮನೆತನದ ಹೆಸರೇ
ಅದೇ ಅಲ್ಲವೇ ಅವರಿಗೆ ಪ್ರಳಯ
ಅಲ್ಲಿ ಅನ್ನ-ಸೂರಿಗೆ ಚೀರಾಟ
ಇಲ್ಲಿ ಪದವಿ-ಛೇರಿಗೆ ಜಗ್ಗಾಟ
ತಮ್ಮವರ ಅಗಲಿ ಕೋಡಿ ಕಣ್ಣೀರು
ಇಲ್ಲಿ ಮೊಸಳೆ ಕಣ್ಣಲಿ ಹುಸಿನೀರು
ನೆರೆಗೆ ಹೋದವರು ಕೆಲವರು
ಬರಿದೇ ಸತ್ತವರು ಹಲವರು
ಪದವಿ-ಅಧಿಕಾರದಾಸೆಯ ನಮ್ಮವರು
ಅನ್ನ-ನೀರುಬಿಡಿ, ಮಾನವತೆಯನೇ ಮರೆತರು