Saturday, June 5, 2010

ಏಕೆ ?ತಿಳಿಯದಾಗಿದೆ

ಮಳೆ ಬಂದು ನಿಂತ ಮೇಲೆ ಎಲ್ಲ ತಣ್ಣಗಾಗಿದೆ...



ಮರವೂ ಇಲ್ಲ ಹನಿಯೂ ಇಲ್ಲ ಎಲ್ಲಾ ಬೋಳಾಗಿದೆ...


ಬಿದ್ದ ಹನಿಗೆ ಗುದ್ದು ತಿಂದ ಮಣ್ಣು ಅಲುಗಾಡಿದೆ


ಶುಭ್ರ ಹರಿವನದಿ ಬೆಟ್ಟದಿಂದ ಬಗ್ಗಡ ಹೊತ್ತು ಹೊರಟಿದೆ




ದಾರಿಯಲ್ಲಿ ಸಿಕ್ಕಿಬಿದ್ದೆ ಹನಿಬಿತ್ತು ತಲೆಯಮೇಲೆ


ತಣ್ಣನೆಯ ಅನುಭವ ಇಲ್ಲ ಬರಬಹುದೇ ಖಾಯಿಲೆ


ಗಾಳಿಯಲ್ಲಿ ತೇಲುತಿದ್ದ ಧೂಳು ಕ್ರಿಮಿ ಇತ್ತುಮೊದಲೆ


ನಮ್ಮ ಗೋರಿ ನಾವೇ ತೋಡಿ ಅತ್ತು ಕರೆವ ಮೊದಲೇ




ಪರಿಸರ ನೋಡಲಿಲ್ಲ ಹುಚ್ಚು, ಬರೀ ಸರ-ವೇ ಕಂಡಿತಲ್ಲ


ಡಾಂಬರು ಹಚ್ಚಲು ಮರವ ಉರುಳಿಸಿ ಹಣ್ಣ ಬಯಸು ಸಲ್ಲ


ಹಾದಿ ಬದಿಲಿ ಬಾಯಾರಿ ಬರಲು ನೀರು ಬೇಡ ನೆರಳೂ ಇಲ್ಲ


ಆಳುದ್ದ ಬಾವಿ ಬಲು ನೀರು, ಈಗ ತೋಡಿ ಬರೀ ಬೆವರೇ ಎಲ್ಲಾ


ಪಾತಾಳ ಸೇರೆ ಬಾವಿ ಬೋರು, ನೀರಿಲ್ಲ ಮಗುವೇ ಬಿದ್ದಿತಲ್ಲಾ




ಕಾಡ ಕಡಿದು ಹಲ-ಹಲಗೆ ಮಾಡಿ, ಬೇಟೆಯಾಡಿ ಕೊಂದೆವು


ಹುತ್ತ ಹೊಡೆದು ಹಾವ ಸಿಗಿದು ಚೀಲಮಾಡಿ ಬೆಲ್ಟು ಮಾಡಿಕೊಂಡೆವು


ಹೊಲದಲಿ ಹೆಗ್ಗಣ ಪಿಡುಗಿಗೆ ಸುಲಭವೆಂದು ಪಾಶಾಣ ಹಾಕಿ ಕೊಂದೆವು


ಸೊಳ್ಳೆ ನೊಣ ಕ್ರಿಮಿ ಕೀಟಕೆ ಎಂಡೋಸಲ್ಫಾನ್ ಡಿ.ಡಿ.ಟಿ ತಂದೆವು


ಕಲುಷಿತ ಹುಲ್ಲು, ಗೋವಿನ ಹಾಲು, ತಾಯ ಮೊಲೆಗೂ ಕೊಟ್ಟೆವು




ಇದ್ದುದರಲ್ಲಿ ತೃಪ್ತಿಪಡುವ ಮನಸೇಕೆ ಇಲ್ಲದಾಗಿದೆ ?


ಜಾತಿ ಮತ, ಹಣ-ಅಧಿಕಾರದಾಸೆ ಏಕೆ ಪ್ರಧಾನವಾಗಿದೆ?


ನನ್ನಜನ, ನನ್ನ ಮನೆ, ನನ್ನಮಕ್ಕಳು ಕೊನೆಗೆ ನಾನೇ ಏಕಾಗಿದೆ?


ತಾನೇ ಎಂದು ಮೆರೆದವರು ಮಣ್ಣಾದರೆಂದು ಏಕೆ ತಿಳಿಯದಾಗಿದೆ?

Sunday, May 16, 2010

ಮತ್ತೆ-ಕೆಲವು ಚುಟುಕು-ಗುಟುಕು

ಮುತ್ತು-ಮತ್ತು

ಕೊಟ್ಟರೆ

ಮುತ್ತು

ಬರುವುದು

ಮತ್ತು



ರಸ-ವಿರಸ
ಸಮರಸ

ಆದರೆ..ಗಂಡ-ಹೆಂಡತಿ

ಬರೀ ವಿರಸ

ಆದರೆ..ಪ್ರಾಣ ಹಿಂಡುತೀ



ಬದಲಾವಣೆ

ನಮ್ಮನೆ ನಾಯಿ ಬೆಕ್ಕು

ಈ ಮಧ್ಯೆ ಕಚ್ಚಾಡ್ತಿಲ್ಲ

ಕೇಳ್ದೇ..ಯಾಕೋ ಗೊತ್ತಾಗ್ತಿಲ್ಲ

ನನ್ನವಳು ಹೇಳಿದ್ಲು

ಡೈಲಿ ಟೀವೀಲಿ ನೋಡ್ತಾವಲ್ಲ
ವಿಧಾನ-ಸಂಸತ್ ಸಮಾಚಾರಾನೆಲ್ಲ

Friday, April 30, 2010

Something ಡಿಫರೆಂಟು

Something ಡಿಫರೆಂಟು


ಕತ್ತೆ, ಕಿರುಬ, ಹಂದಿ,


ರಣಹದ್ದು, ಕಾಗೆ, ರೋಗಿ,


ನರಿ, ಗೂಬೆ, ಗೋಸುಂಬೆ


ಮಾಸ್ತರು ಹೇಳಿದರು ಮಕ್ಕಳನ್ನು ಕೇಳುತ್ತಾ


ಈ ಎಲ್ಲ ಗುಣಕೆ ಹೊಂದುವ ಒಂದು


ಪ್ರಾಣಿಯ ಹೆಸರು ಹೇಳಿ,


ಮಕ್ಕಳೆಲ್ಲ ಕೂಗಿ ಹೇಳಿದರು


‘ರಾಜಕಾರಣಿ‘





ಡುಂಡಿ ನೀವ್ ನನ್ ಸೀನಿಯರ್


ವಿ.ವಿ.ಲಿ ನಾನ್ ನಿಮ್ ಜೂನಿಯರ್


ನೀವ್ ಬರೆದ್ರಿ ಎಲ್ಲ ಅಂದ್ರು


ಚುಟುಕ ಅಂದ್ರೆ ಡುಂಡಿ


ನಾನ್ ಬರೆದ್ರೆ ಓದೋರಿಲ್ಲ


ಹೇಳ್ತಾರೆ ಹಾಳ್ಮಾಡ್ಬ್ಯಾಡ ಪೇಪರ್


ದಂಡಿ



ಹುಡುಗೀದು


ಹೋಗುತ್ತೆ ಮುಂದಕ್ಕೆ


ಆಂಟೀದು


ನಿಂತಲ್ಲೇ ನಿಲ್ಲುತ್ತೆ


ವಯಸ್ಸು



ಅವನು ಆಗ್ಲಿಲ್ಲವೇ


ಅಂತ ಪರದಾಟ


ಇವನು ಯಾಕಾದ್ರೂ


ಮಾಡ್ಕೊಂಡೆನೋ


ಒದ್ದಾಟ....


ಮದುವೆ




ಯೋಗಾಯೋಗ


ಭೋಗಾಭಾಗ


ಸದಾನಂದ


ನಿತ್ಯಾನಂದ




ಹೊಟ್ಟೇಲಿ ಹೊತ್ತೆ


ಕನಸನ್ನ ಕಟ್ಟಿ


ಎದೆಯಾಮೃತ


ಕೈತುತ್ತ ಕೊಟ್ಟೆ


ಬೆಳೆದೆ ನಾ ಸುಖದಲಿ ಓಲಾಡಿ


ಮುತ್ತಿಗಾಗಿ ನಿನ್ನ


ಬೆಂಕಿಯ ಬೇಯ್ಗೆಗಿಟ್ಟೆ ಕಾಡಿ


ಆದರೂ ನಕ್ಕು ಹರಸಿದೆ


ಹರಿಸಿ ಮಮತೆಯಾ ಕೋಡಿ


ಏಕೆಂದರೆ ನೀನನ್ನ


ಅಮ್ಮ


ಬಿರಿದ ನೆಲಕೆ ಬೇಕು..


ನಾ ನೊಂದರೆ ಅಮ್ಮನ


ಕಣ್ಣಲಿ ತುಳುಕುವುದು..


ಪ್ರಿಯಕರ ತನ್ನ ಪ್ರಿಯೆಗೀಗ


ಮನತುಂಬಿ ಕರೆವುದು..


ಹನಿ

Saturday, March 13, 2010

हिंदि में कुछ ऐसे ही

ಮೂಹ್ ಬೋಲೀ-ಬೆಹೆನ್

ಎಹ್ ಲಡಕಿ ಹೈ ಆತೀ ಹೈ ಅಕ್ಸರ್ ಶಾಯದ್ ನಹೀಂ ಅಜಬ್
ಪಲ್ ಭರ್ ಮೆ ಪತಾ ನಹೀ ಕ್ಯೋಂ ಹೋ ಜಾತೀ ಹೈ ಗಾಯಬ್

ಇಸ್ಕಾ ಆನಾ ಲಗ್ನೆ ಲಗಾ ಹೈ ಹೋತಾ ಬರಾಬರ್ ನ ಆನಾ

ಹೈ ಶಾದೀ ಕೀ ತಯಾರಿ ಔರ್ ಹೈ ಬೆಚಾರೀಕೋ ಪಿಯಾ ಘರ್ ಜಾನಾ
ಕಹಾಂಕೆ ರಿಶ್ತೆ, ಕಿಧರ್ ಕೆ ನಾತೆಂ, ಓ ಥೀ ಅಜನಬೀ ಬನೇ ಐಸೇ ಭೀ ನಾತೇ
ಮೂಹ್ ಬೋಲೀ ಬೆಹನಾ ಛೋಡ್ ಬಾಬುಲ್ ಕೆ ಘರ್ ಚಲೀ ಹೈ ಸಸುರಾಲ್

ಪಿಯಾ ಭುಲಾ ರಹೆ ಹೈಂ ಉಸ್ಕೆ ಬಾಬುಲ್ ಕೀ ಬಾತೇಂ



ಓ ಥೀ-ನೆಟ್ ಪರ್

ಹೋ ಗಯೀ ಐಸೇಹೀ ಮುಲಾಖಾತ್ ಉಸ್ ಸೆ- ಕ್ಯಾ ಲಡ್ಕೀ ಥೀ

ನೆಟ್ ಪರ್

ಕೈಸೆ ಹೋ, ಕಹಾಂ ಹೋ ಲಗೇ ಪೂಛ್ ನೆ ಹಮ್ ಬೋಲ್ ಉಠೀ …ಭಯ್ಯಾ

ಝಟ್ ಕರ್

ಹೋತೀ ಬಾತೇಂ ಇಧರ್ ಕೆ ಉಧರ್ ಕೆ ಆತೀ ಥೀ ಅಕ್ಸರ್ ಒಹ್

ನೆಟ್ ಪರ್

ಅಪ್ನೀ ಬಚ್ಪನ್ ಕೀ ಓ ಸುನಾತೀ ಮೈ ಕರ್ತಾ ಮೆರೆ ಕಾಲೆಜ್ ಕೀ

ಬಾತೇಂ ಅಕ್ಸರ್

ಐಸಾ ಭೀ ಮೌಕಾ ನ ಆಯಾ ಮಿಲ್ ನೇ ಕಾ ಆಮ್ನೆ-ಸಾಮ್ನೆ, ಪರ್ ಬಾತೇಂ

ಬರಾಬರ್ ನೆಟ್ ಪರ್

ಗುಜರ್ ಗಯೆ ಐಸೆ ಹೀ ಪಾಂಚ್ -ಸಾತ್ ಸಾಲ್, ಓ ಥೀ
ಮೂಹ್ ಬೋಲೀ ಬೆಹನಾ
"ಗುಲ್ ಬದರ್"


ಬ್ಲಾಗಿಯೋಂ ಕೀ ಮೀಟಿಂಗ್ ಥೀ ಮೈಂ ಭೀ ಪಹೂಂಚಾ, ಹೋಗಯೀ ಥೀ

ಬಹುತ್ ದೇರ್

ಸಾಲ್ ಕೆ ಸಬ್ಸೆ ಮಶ್ ಹೂರ್ ಬ್ಲಾಗಿ ಕೋ ಬುಲಾಯಾಗಯಾ

ಸ್ಟೇಜ್ ಪರ್

ಬುರ್ಖಾ ಪಹನೆ ಲಡಕೀ "ಗುಲ್ ಬದರ್" ಹಟಾಯಿ ಚಹರೆ ಸೆ ಪರದಾ

-ಹೋಶ್ ಮೇರೆ ಉಡ್ ಗಯೇ..ದೇಖ್ ಕರ್ ಉಸ್ಕೋ-

ಅರೆ ಒಹ್ ಥೀ ಮೇರಿ ಜಿಂದಗೀ ಕಿ

ಹಮ್-ಸಫರ್

Thursday, February 25, 2010

ಛಲ-ಬಲ

ಬಿಡೆ ಎನ್ನುತಿದೆ

ಬೆಂಬಿಡದೆ ಬರುತಿದೆ

ಕೆಂಡಕೈಲಿ ಹಿಡಿದು

ಚೆಂಡಾಡುವ ಛಲ

ಉಂಡು ಗುಂಡಾಗುವ ಬಲ

ಷರತ್ತು ಇರಬೇಕು

ಎದೆಗಾರಿಕೆ ಬೆಳೆಸಿಕೋಬೇಕು

ಕಂಡು ಪತಂಗವ

ಬೆಂದಬೂದಿಯಿಂದೆದ್ದು

ಚಿಮ್ಮುವ ಫೀನಿಕ್ಸಿನ ಗುದ್ದು

ಉಸಿರುನಿಲ್ಲುವತನಕ

ಉಸಿರಾಡಲಡ್ಡಿಯೇನು?

ಬರಲಿ ಅದು ನಿನ್ನ ಹಿಂದೆ

ಬೀಳಬೇಡ ಅದರಬೆನ್ನ ಹಿಂದೆ

ತಪ್ಪಲ್ಲ ..ಒಪ್ಪುವೆ

ಮಾಡಿದರೂ ಮೋಸವ

ಮಾಡಬೇಡ ಸಹವಾಸವ

ಕಲಿ ಸವಾಲೆಸೆವುದ

ಬದುಕ ಬದುಕುವುದಕಲಿ

ಸಾವ ಮೆಟ್ಟುದೇ ಸವಿ

ಸಾವ ಮೆಟ್ಟುವುದಾ ಸವಿ

Saturday, February 20, 2010

ಇನ್ನೊಂದು-ಮೂರು..ಹಾಗೇ...

ಕಾಲ್-ಏಜು


ನನಗಾಯ್ತು ಯುವೇಜು
ಜೊತೆಗೆ ನೀನ್ಬಂದೆ ಬಾಜು
ಎಲ್ಲ ಸೇರಿದ್ದು ಅಲ್ಲಿ
ಅದುವೇ ನಮ್ಮ ಕಾಲ್-ಏಜು


ಮನೆಯವರಿಗೆ ಸುಳ್ಳು
ಕಲಿಯೋದಕ್ಕೆ ಕಲ್ಲು
ಕೆಲವರು ಸೇರೋದೆ ಇಲ್ಲಿ
ಮಾಡೋಕೆ ಗುಲ್ಲು


ಕಲಿತವ ಉಳೀತಾನೆ
ಇಲ್ಲದವ ಅಲೀತಾನೆ
ಅವ ಆಗ್ತಾನಲ್ಲೇ ಪ್ರೊಫೆಸರು
ಇವ ಬರೋರ್ಗೆಲ್ಲಾ ಸೀನಿಯರು


No ಮಿಲನ್
ಅವಳಪ್ಪನಾದ ನಮ್ಮಿಬ್ಬರ ಮಧ್ಯೆ
ವಿಲನ್
ಅದಕೇ ಬಹಳದಿನ ಆದ್ರೂ ಆಗುತ್ತಿಲ್ಲ
ಮಿಲನ್




Un-ರೀಚಬಲ್ಲು
ಕ್ಲಿಂಟನ್ನು ಮಾವ
ಲ್ಯಾಡನ್ನು ಭಾವ
ಲಾಲು ಅವ್ರಪ್ಪ
ಶನಿ, ರಾಹು, ಕೇತು
ಎಲ್ಲಾ ಇದ್ದಕಡೆ
ನಾನು ಹ್ಯಾಗೆ ಹೋಗಲಪ್ಪ

Saturday, February 13, 2010

ಇದು ಎಂಥಾ ಜಾಲವಯ್ಯ


ಎಂಥಾ ಜಾಲವಯ್ಯ...
ಇದು ಎಂಥ ಅಂತರ್ಜಾಲವಯ್ಯ
ಹೊಸ ವಿಷಯ ತಿಳಿಸಿ
ಹೊಸ ಆಸೆ ಹುಟ್ಸೋ
ಮಾಯಾಜಾಲವಯ್ಯ

ನೆಟ್ಟಲ್ಲಿ ಬಿದ್ದು ಒದ್ದಾಡುವ
ಹುಡ್ಗಿ ಹಿಂದೆ ಹುಡ್ಗ ಓಡಾಡುವ
ಬುದ್ಧಿ ಇಲ್ದೇ ಬರಿದಾಗುವ
ನಿದ್ದೆ ಕೆಟ್ಟು ಮಂಕಾಗುವ
ಒಂದೇ ಹುಚ್ಚನಂತೆ ಅಲೆವಾ....
ಇದು..ಎಂಥಾ ಜಾಲವಯ್ಯ....

ಕ್ಲಾಸು ತಪ್ಸಿ ಬಂಕ್ ಹೊಡೆಯುವ
ನೆಟ್ ಕೆಫೆಯ ಎದೆಗೆ ಹಣ ಸುರಿಯುವ
ಡೌನ್ ಆದ್ರೆ ತಾನೂ ಡೌನ್ ಆಗುವಾ
ಆನ್ ಲೈನು ಬಂದ್ರೆ ಚೀರಾಡುವಾ
ಹಣವಿಲ್ಲದಿದ್ರೆ ಪರದಾಡುವಾ....
ಇದು ಎಂಥಾ ಜಾಲವಯ್ಯ......