Saturday, February 13, 2010

ಇದು ಎಂಥಾ ಜಾಲವಯ್ಯ


ಎಂಥಾ ಜಾಲವಯ್ಯ...
ಇದು ಎಂಥ ಅಂತರ್ಜಾಲವಯ್ಯ
ಹೊಸ ವಿಷಯ ತಿಳಿಸಿ
ಹೊಸ ಆಸೆ ಹುಟ್ಸೋ
ಮಾಯಾಜಾಲವಯ್ಯ

ನೆಟ್ಟಲ್ಲಿ ಬಿದ್ದು ಒದ್ದಾಡುವ
ಹುಡ್ಗಿ ಹಿಂದೆ ಹುಡ್ಗ ಓಡಾಡುವ
ಬುದ್ಧಿ ಇಲ್ದೇ ಬರಿದಾಗುವ
ನಿದ್ದೆ ಕೆಟ್ಟು ಮಂಕಾಗುವ
ಒಂದೇ ಹುಚ್ಚನಂತೆ ಅಲೆವಾ....
ಇದು..ಎಂಥಾ ಜಾಲವಯ್ಯ....

ಕ್ಲಾಸು ತಪ್ಸಿ ಬಂಕ್ ಹೊಡೆಯುವ
ನೆಟ್ ಕೆಫೆಯ ಎದೆಗೆ ಹಣ ಸುರಿಯುವ
ಡೌನ್ ಆದ್ರೆ ತಾನೂ ಡೌನ್ ಆಗುವಾ
ಆನ್ ಲೈನು ಬಂದ್ರೆ ಚೀರಾಡುವಾ
ಹಣವಿಲ್ಲದಿದ್ರೆ ಪರದಾಡುವಾ....
ಇದು ಎಂಥಾ ಜಾಲವಯ್ಯ......

22 comments:

 1. ಸೂಪರ್!

  ಎಂಥಾ ಲೋಕವಯ್ಯಾ ಹಾಡಿನ ರಾಗಕ್ಕೂ ಹೊಂದಿಕೆಯಾಗುವಂಥ ಸಾಹಿತ್ಯ!

  ಇಷ್ಟವಾಯ್ತು ಇದು.

  ReplyDelete
 2. ಅಜಾದ್,

  ನೆಟ್ ಜಾಲದಿಂದ ಹಾಳಾಗುತ್ತಿರುವ ಯುವಜನಾಂಗದ ಬಗ್ಗೆ ಸೊಗಸಾದ ಪದ್ಯ..

  ReplyDelete
 3. ಆಜಾದ್ ಸರ್,
  ' ಇದು ಎಂಥಾ ಲೋಕವಯ್ಯಾ'.... ಹಾಡಿನ ಟ್ಯೂನ್ ಗೆ ಹೊಂದಿಯಾಗುವ ಹಾಗೆ ಬರೆದಿದ್ದೀರಾ..... ಯುವ ಜನಾಂಗದ ನೆಟ್ ಲೋಕ, ನೆಟ್ಟಲೋಕಕ್ಕೆ ಬರೆದಿದ್ದೀರಾ...... ಚೆನ್ನಾಗಿದೆ..... ಯುವ ಜನಾಂಗ ಹಾದಿ ತಪ್ಪಿದೆ, ಮತ್ತೆ ಕೆಲವೊಂದು ಜಾಲ ಹಾದಿತಪ್ಪಿಸುತ್ತಿವೆ.....

  ReplyDelete
 4. ಅಜ್ಹಾದ್ ಸರ್
  ಇದೆ ಅಂತರ್ಜಾಲ ನಮ್ಮ ಬ್ಲಾಗ್ ಕೊಟ್ಟಿದೆ
  ಆದರೆ ಅಂತರ್ಜಾಲ ದ ಸದುಪಯೋಗ ಆಗಬೇಕು ಅಷ್ಟೇ
  ಒಳ್ಳೆಯ ಪದ್ಯ

  ReplyDelete
 5. ನೀಲಿ ಹೂವಿನ ಪ್ರತಿಕ್ರಿಯೆಗೆ ಧನ್ಯವಾದ.

  ReplyDelete
 6. ಶಿವು ಇದ್ದಕ್ಕಿದ್ದಂತೆ ಉತ್ಭವಿಸಿದ ಕವನ ಇದು...ಮೂರೇ ನಿಮಿಷದಲ್ಲಿ ಬರೆದು ಪೋಸ್ಟೂ ಮಾಡಿಬಿಟ್ಟೆ...ಆದ್ದರಿಂದ ಚನ್ನಾಗಿ ಮೂಡಿದ್ದು ನಿಮ್ಮ ಮೆಚ್ಚುಗೆ ಗಳಿಸಿದ್ರೆ ಅದು ನನ್ನ ಅದೃಷ್ಟ.

  ReplyDelete
 7. ದಿನಕರ್, ನಿಮ್ಮ ಚಾಟ್ ನಂತರ ನಿಮ್ಮ ಬ್ಲಾಗಿಗೆ ನಿಮ್ಮ ಪ್ರತಿಕ್ರಿಯೆ ನಂತರ ಹೋಗ್ತಿದ್ದೀನಿ.. ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...

  ReplyDelete
 8. ಗುರು, ನಿಜ ಪ್ರತಿ ಆಧುನಿಕ ಆವಿಷ್ಕಾರಕ್ಕೂ ಅದರದೇ ಆದ ಮೆರಿಟ್ಸ್ ಮಾತ್ತೆ ಡಿ-ಮೆರಿಟ್ಸ ಇವೆ...ಜಾಲವೂ ಹಾಗೇನೆ..ನಮ್ಮ-ನಿಮ್ಮ ಬಾಂಧವ್ಯಕ್ಕೆ ಕಾರಣ ಈ ಜಾಲವೇ...ಉಪ್ಯೋಗಿಸೋರ ಕೈಲಿದೆ ಇದರ ಉಪ್ಯೋಗ-ದುರುಪಯೋಗ. ಧನ್ಯವಾದ

  ReplyDelete
 9. superb sir :) :)tumba ista aithu :)

  ReplyDelete
 10. idu entha chandada kavanavaiah !!! good to read.

  ReplyDelete
 11. ಮಂಜುಶ್ವೇತೆಗೆ ಧನ್ಯವಾದ...ಇದು ಫಾರ್ ಎ ಚೇಂಜ್ ಇರ್ಲಿ ಅಂತ ಇಂದಿನ ನೆಟ್ ಕ್ರೇಜ್ ನ ಬಗ್ಗೆ ಹಾಕಿದ್ದು...ಇಷ್ಟವಾದುದಕ್ಕೆ ಧನ್ಯವಾದ

  ReplyDelete
 12. ಸೀತಾರಾಂ ಸರ್, ನಮನ..ನಿಮಗೆ ಇಷ್ಟವಾಯ್ತಾ..?

  ReplyDelete
 13. ಬಾಲು, ನೆಟ್ ಎಷ್ಟು ಒಳ್ಳೇದೋ ಅಷ್ಟೆ ಸಮಸ್ಯೆ ತರುತ್ತೆ ಸರಿಯಾಗಿ ಉಪಯೋಗವಾಗದಿದ್ದರೆ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 14. howdu idara bagge naanu article baritiddini bahala chennagide

  ReplyDelete
 15. 'ಜಲನಯನ ' ಅವ್ರೆ..,

  (u/a) ಕೈ ತುಂಬಾ ಕೆಲಸ ಕೊಡುವ ಜಾಲವಿದಯ್ಯ.. ತರಕಾರಿ ಮಾರಿಸುವ ಜಾಲವಿದು ಅಯ್ಯ...

  ನಾ ಕಂಡಂತೆ.. ಅಂತರ್ಜಾಲದ ಸಧ್ಬಳಕೆಯಷ್ಟೇ ಯುವಕರಿಗೆ ದುರ್ಬಳಕೆ ಆಗುತ್ತಿದೆ..

  ನನ್ನ 'ಮನಸಿನಮನೆ'ಗೆ ಬನ್ನಿ:http//manasinamane.blogspot.com

  ReplyDelete
 16. ಜಲನಯನ,
  ಜಾಲದ ಬಗೆಗೆ ತುಂಬ ಗಟ್ಟಿಮುಟ್ಟಾದ ಜಾಲವನ್ನೇ ಹೆಣೆದಿದ್ದೀರಿ!

  ReplyDelete
 17. ದಿವ್ಯಾ ಗೆ ದಿವ್ಯ ಸ್ವಾಗತ...ಬಹಳ ದಿನಗಳ ನಂತರ ..ಬರೋಣವಾಯಿತು...ಧನ್ಯವಾದ...ನಿನ್ನ ಲೇಖಕ್ಕೆ ಕಾಯುತ್ತಿದ್ದೇನೆ...ಹರಿದು ಬರಲಿ...ತೇಲಿಬಿಡುವೆವು ಪ್ರತಿಕ್ರಿಯೆಯ ಕಾಗದದ ದೋಣಿ.

  ReplyDelete
 18. ಗುರುದೆಸೆ ನಿಜ ನಿಮ್ಮ ಮಾತು...ಸದ್ಬಳಕೆಯಾದರೆ ಇದು ಉತ್ತಮ ಸಾಧನ ಮತ್ತು ಮಾಧ್ಯಮ.

  ReplyDelete
 19. ಸುನಾಥ್ ಸರ್, ಹಲವು ಯುವಕರು ವೃಥಾ ಕಾಲಹರಣ ಮಾಡುವುದನ್ನು ನಾನು ನೋಡಿದ್ದೇನೆ..ವಸ್ತುತಃ ಒಬ್ಬ ತಾಯಿ-ಮಗನ ನಡುವಿನ ಇದೇ ಕಾರಣಕ್ಕೆ ಜಗಳವನ್ನು ಬಿಡಿಸಬೇಕಾದ ಪ್ರಮೇಯ ಬಂದಿತ್ತು....ಸಾಧನಗಳು ಹೇಗೆ ದುರ್ಬಳಕೆಯಾಗಬಹುದು ಎನ್ನುವುದಕ್ಕೆ ಇದೂ ಒಂದು ಉದಾಹರಣೆ....ಧನ್ಯವಾದ ನಿಮ್ಮ ಎಂದಿನಂತಹ ಪ್ರೋತ್ಸಾಹಕ ನುಡಿಗೆ.

  ReplyDelete
 20. ಸರ್,

  ನೆಟ್ ಮ್ಯಾನಿಯಾವನ್ನು ಭಲೆ ಚನ್ನಗಿ ಚಿತ್ರಿಸಿದ್ದೀರಿ.

  ಪೂರ್ತಿ ಬ್ಲಾಗ್ ಓದಿ ಮತ್ತೆ ಪ್ರತಿಕ್ರಯಿಸುತ್ತೇನೆ.

  - ಬದರಿನಾಥ ಪಲವಳ್ಳಿ

  Pl. visit my Kannada Poety Blog:
  www.badari-poems.blogspot.com

  ReplyDelete
 21. ಬದರಿಯವರೇ, ನಿಮ್ಮ ಕವನಗಳು ಬಹಳ ಪಸಂದಾಗಿವೆ ...ನನ್ನ ಭಾವ ಮಂಥನಕ್ಕೆ ಬಂದು ಪ್ರತಿಕ್ರಿಯೆ ಮತ್ತು ಅನಿಸಿಕೆಯನ್ನು ನಮೂದಿಸಿದಿರಿ ಧನ್ಯವಾದ

  ReplyDelete