ಮಳೆ ಬಂದು ನಿಂತ ಮೇಲೆ ಎಲ್ಲ ತಣ್ಣಗಾಗಿದೆ...
ಮರವೂ ಇಲ್ಲ ಹನಿಯೂ ಇಲ್ಲ ಎಲ್ಲಾ ಬೋಳಾಗಿದೆ...
ಬಿದ್ದ ಹನಿಗೆ ಗುದ್ದು ತಿಂದ ಮಣ್ಣು ಅಲುಗಾಡಿದೆ
ಶುಭ್ರ ಹರಿವನದಿ ಬೆಟ್ಟದಿಂದ ಬಗ್ಗಡ ಹೊತ್ತು ಹೊರಟಿದೆ
ದಾರಿಯಲ್ಲಿ ಸಿಕ್ಕಿಬಿದ್ದೆ ಹನಿಬಿತ್ತು ತಲೆಯಮೇಲೆ
ತಣ್ಣನೆಯ ಅನುಭವ ಇಲ್ಲ ಬರಬಹುದೇ ಖಾಯಿಲೆ
ಗಾಳಿಯಲ್ಲಿ ತೇಲುತಿದ್ದ ಧೂಳು ಕ್ರಿಮಿ ಇತ್ತುಮೊದಲೆ
ನಮ್ಮ ಗೋರಿ ನಾವೇ ತೋಡಿ ಅತ್ತು ಕರೆವ ಮೊದಲೇ
ಪರಿಸರ ನೋಡಲಿಲ್ಲ ಹುಚ್ಚು, ಬರೀ ಸರ-ವೇ ಕಂಡಿತಲ್ಲ
ಡಾಂಬರು ಹಚ್ಚಲು ಮರವ ಉರುಳಿಸಿ ಹಣ್ಣ ಬಯಸು ಸಲ್ಲ
ಹಾದಿ ಬದಿಲಿ ಬಾಯಾರಿ ಬರಲು ನೀರು ಬೇಡ ನೆರಳೂ ಇಲ್ಲ
ಆಳುದ್ದ ಬಾವಿ ಬಲು ನೀರು, ಈಗ ತೋಡಿ ಬರೀ ಬೆವರೇ ಎಲ್ಲಾ
ಪಾತಾಳ ಸೇರೆ ಬಾವಿ ಬೋರು, ನೀರಿಲ್ಲ ಮಗುವೇ ಬಿದ್ದಿತಲ್ಲಾ
ಕಾಡ ಕಡಿದು ಹಲ-ಹಲಗೆ ಮಾಡಿ, ಬೇಟೆಯಾಡಿ ಕೊಂದೆವು
ಹುತ್ತ ಹೊಡೆದು ಹಾವ ಸಿಗಿದು ಚೀಲಮಾಡಿ ಬೆಲ್ಟು ಮಾಡಿಕೊಂಡೆವು
ಹೊಲದಲಿ ಹೆಗ್ಗಣ ಪಿಡುಗಿಗೆ ಸುಲಭವೆಂದು ಪಾಶಾಣ ಹಾಕಿ ಕೊಂದೆವು
ಸೊಳ್ಳೆ ನೊಣ ಕ್ರಿಮಿ ಕೀಟಕೆ ಎಂಡೋಸಲ್ಫಾನ್ ಡಿ.ಡಿ.ಟಿ ತಂದೆವು
ಕಲುಷಿತ ಹುಲ್ಲು, ಗೋವಿನ ಹಾಲು, ತಾಯ ಮೊಲೆಗೂ ಕೊಟ್ಟೆವು
ಇದ್ದುದರಲ್ಲಿ ತೃಪ್ತಿಪಡುವ ಮನಸೇಕೆ ಇಲ್ಲದಾಗಿದೆ ?
ಜಾತಿ ಮತ, ಹಣ-ಅಧಿಕಾರದಾಸೆ ಏಕೆ ಪ್ರಧಾನವಾಗಿದೆ?
ನನ್ನಜನ, ನನ್ನ ಮನೆ, ನನ್ನಮಕ್ಕಳು ಕೊನೆಗೆ ನಾನೇ ಏಕಾಗಿದೆ?
ತಾನೇ ಎಂದು ಮೆರೆದವರು ಮಣ್ಣಾದರೆಂದು ಏಕೆ ತಿಳಿಯದಾಗಿದೆ?
ಕಲಿಕಾಲದ ಮಹಿಮೆ!
ReplyDeleteಸುನಾಥ್ ಸರ್, ಕಾಲದ ಮಹಿಮೆಗಿಂತ ಅಕಾಲ ಮಹಿಮೆ ಮಾನವನದು ಎನ್ನಬಹುದೇ..?
ReplyDeleteಬೆಟ್ಟ ಗುಡ್ಡದ ಮೇಲಿನ ಮರ ಕಡಿದು ಬೋಳುಮಾಡಿ ನದಿಯಲಿ ನೀರಿಲ್ಲ ಇದ್ದರೂ ಜಲಾಶಯದಲ್ಲಿ ನಿಲ್ಲಲಿಲ್ಲ ಎಂದರೆ..ಕಾರಣ ಜಲಾಶಯದ ತುಂಬ ತುಂಬಿರುವ ಹೂಳು..ಎನ್ನುವುದು ಏಕೆ ತಿಳಿಯುತ್ತಿಲ್ಲ...? ನನ್ನ ಬಾಲ್ಯದಲ್ಲಿ ನೊಡಿದ್ದ ಬೆಂಗಳೂರಿನ ಸುತ್ತಮುತ್ತ ಎಷ್ಟೋ ಕೆರೆಗೆಳು ಇಂದು ಕಾಂಕ್ರೀಟ್ ಕಾಡಿನ ಬೀಡಾಗಿವೆ...ಧನ್ಯವಾದ ಸರ್ ನಿಮ್ಮ ಭೇಟಿ ಮತ್ತು ಪ್ರತಿಕ್ರಿಯೆಗೆ.
ವಿಶ್ವ ಪರಿಸರ ದಿನ ಕ್ಕೆ ಸೂಕ್ತವಾದ , ಸಮಂಜಸ ಕವನ ಭಯ್ಯ.
ReplyDeleteಇದ್ದುದರಲ್ಲಿ ತೃಪ್ತಿಪಡುವ ಮನಸೇಕೆ ಇಲ್ಲದಾಗಿದೆ ?
ತಾನೇ ಎಂದು ಮೆರೆದವರು ಮಣ್ಣಾದರೆಂದು ಏಕೆ ತಿಳಿಯದಾಗಿದೆ?
ಪ್ರಸ್ತುತ ಪರಿಸ್ಥಿತಿಯಲ್ಲಿ ಕೇಳಲೇಬೇಕಾದಂಥ ಪ್ರಶ್ನೆಗಳು. ಚಂದದ ಕವನ.
ಹೀಗೆ ಮುಂದುವರದರೆ ನಮ್ಮದೆನ್ನಲು ನಾವೇ ಇಲ್ಲ.
ReplyDeleteಅಂತ್ಯ ಇಲ್ಲದ ಆರಂಭಕ್ಕೆ ಅಂತ್ಯ ಹಾಡುವಳೇ..ಆ ಭೂ ತಾಯಿ.
ನಿಮ್ಮವ,
ರಾಘು.
ಓ ಮನಸೇ, ಧನ್ಯವಾದ..ನನ್ನ ಮನಸು ಕೇಳುತ್ತಿಲ್ಲ ...ಬೇಕು ಇನ್ನೂ ಬೇಕು ಎನುತಿದೆ..ಅದಕ್ಕೇ ಅಲ್ಲವೇ ಬುದ್ಧ ಹೇಳಿದ್ದು...ಆಸೆಯೇ ದುಃಖಕ್ಕೆ ಮೂಲ ಎಂದು...ತೃಪ್ತಿಪಟ್ಟರೆ ಸುಖವುಂಟು ಅತೃಪ್ತ ಆತ್ಮಕೆ..ಇರದು ವಿಶ್ರಾಂತಿ
ReplyDeleteರಾಘು, ಧನ್ಯವಾದ ಮೊದಲಿಗೆ ಸ್ವಲ್ಪ ಅನಿಸ್ತು ಭಾವಮಂಥನಕ್ಕೆ ಸ್ನೇಹಿತರು ಭೇಟಿ ಕೊಡ್ತಾರೋ ಇಲ್ಲವೋ ಎಂದು..
ReplyDeleteThere is everything for our need in the nature!
ReplyDeleteBut for our greed, at the cost of nature still we have everything!!
But if environment is lost we also lost being its part!!!
This truth we should know !!!]Thanks for the very cute poem on environment concern.
ಆಜಾದ್ ಸರ್,
ReplyDeleteಪರಿಸರ ಉಳಿಸೋದು, ಬೆಳೆಸೋದು... ಕನಸಿನ ಮಾತು ಅನಿಸತ್ತೆ..... ಮರ ನೆಡೋದರ ದುಪ್ಪಟ್ಟು ಕಡೀತಾ ಇದಾರೆ....... ಉಪಾಯ, ಪರಿಹಾರ ಇದೆಯಾ ಇದಕ್ಕೆ ಅಂತ ನಂಬಿಕೆಯೇ ಇಲ್ಲ...... ಇನ್ನು ಮುಂದೆಯಾದರೂ ಮರ ನೆದದಿದ್ದರೂ , ಕಡಿಯದಿದ್ದರೆ ಸಾಕು... ಅದೇ ದೊಡ್ಡ ಉಪಕಾರ ..... ತುಂಬಾ ಚೆನ್ನಾಗಿದೆ ಸರ್...ಕವನ.......
Sitaram sir, Quenching the thirst needs water, taking it ina cup and drinking as much required is entirely different from pouring it and trying to drink from the pouring water making the remaining water a waste...this is what needs to be anlaysed and practiced...
ReplyDeleteThank you for the comments and nice thought provoking lines...
ದಿನಕರ್ ಮರ ನೆಡೋದಿರ್ಲಿ..ನಮ್ಮ ಮಹಾಶಯರು ನೆಲ ಅಗೆದು ಸಾವಿರಾರು ವರ್ಷ ತಗಲುವ ಮೇಲ್ಮಣ್ಣನ್ನ ಕೆಲವೇ ತಿಂಗಳಲ್ಲಿ ಹಾಳುಗೆಡಹಿ ಬೇರೆಯವೌ ಮರ ನೆಡೋಕೂ ಅನರ್ಹ ಮಾಡ್ತಾರಲ್ಲ ಇಂಥಾ ಗಣಿಗಾರಿಕೆಗೆ ಏನು ಹೇಳಬೇಕು...? ಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ
ReplyDeletechennagide sir
ReplyDeleteಧನ್ಯವಾದ ಗುರು...ನಿಮ್ಮ ಬರೋಣಕ್ಕೆ ಮತ್ತು ಕಾಮೆತ್ತಿಸಿದ್ದಕ್ಕೆ..
ReplyDeleteawesome lines sir..heegina paristitiyannu estu chennagi varnisidirra..
ReplyDeletekoneya naalku saalugalu tumba ista aitu sir:)
ಆಜಾದ್ ಸರ್...
ReplyDeleteಮಾನವನ ಸ್ವಾರ್ಥ ಹಾಗೂ ಅತಿಯಾಸೆಗೆ ಎಲ್ಲವು ನಶಿಸುತ್ತ ಇದೆ ಸರ್....ತುಂಬಾ ಅರ್ಥಗರ್ಭಿತವಾಗಿದೆ ನಿಮ್ಮ ಕವನ...
ಪ್ರಕೃತಿಯ ಮೇಲೆ ಮಾನವನ ಅತಿಕ್ರಮಣದ ಬಗ್ಗೆ ಉತ್ತಮ ಚಿತ್ರಣ ನೀಡಿದ್ದೀರಿ. ನಿಮ್ಮ ಮನದಾಳದ ನೋವು, ಕಾಳಜಿ ಎಲ್ಲರಲ್ಲೂ ಇರುವ೦ತಿದ್ದರೆ ಎಷ್ಟು ಒಳ್ಳೆಯದಿತ್ತು. ಅಲ್ಲವೇ?
ReplyDeleteಅಜಾದ್,
ReplyDeleteಪರಿಸರದ ಬಗ್ಗೆ ನೀವು ಬರೆದಿರುವ ಕವನವನ್ನು ತಡವಾಗಿ ಓದಿದ್ದೇನೆ. ಅದಕ್ಕೆ ಕಾರಣ ನಿಮಗೆ ಗೊತ್ತು. ಕಾಳಜಿಯುಕ್ತ ಕವನಕ್ಕೆ ಧನ್ಯವಾದಗಳು.
ಸುಮ, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಇದ್ದುದರಲ್ಲಿ ತೃಪ್ತಿಪಡುವ ಗುಣ ನಮ್ಮದಾಗಿದ್ದರೆ...ಎಷ್ಟು ಚೆನ್ನ ಇರುತ್ತಿತ್ತು..?!!
ReplyDeleteಅಶೋಕ್, ಅತಿ ಆಸೆಯಿಂದ ಅಲ್ಲವೇ ಮೊಗಲರು, ಬ್ರಿಟೀಷರು ನಮ್ಮ ದೇಶದಮೇಲೆ ದಾಳಿಮಾಡಿದ್ದು...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ReplyDeleteಧನ್ಯವಾದ ಪ್ರತಿಕ್ರಿಯೆಗೆ ಪ್ರಭಾಮಣಿ ನನ್ನ www.jalanayana.blogspot.com ಗೆ ಭೇಟಿ ನೀಡಿ...
ReplyDeleteಶಿವು ...ಹೌದು ನಿಮ್ಮ ಬ್ಯುಸಿ ಶೆಡ್ಯೂಲ್ ನಲ್ಲೂ ಬಂದು ನಾಲ್ಕು ಸಾಲು ಕಾಮೆಂಟ್ ಮಾಡಿದ್ರಲ್ಲ ..ಧನ್ಯವಾದ.
ReplyDelete