ಬಿಡೆ ಎನ್ನುತಿದೆ
ಬೆಂಬಿಡದೆ ಬರುತಿದೆ
ಕೆಂಡಕೈಲಿ ಹಿಡಿದು
ಚೆಂಡಾಡುವ ಛಲ
ಉಂಡು ಗುಂಡಾಗುವ ಬಲ
ಷರತ್ತು ಇರಬೇಕು
ಎದೆಗಾರಿಕೆ ಬೆಳೆಸಿಕೋಬೇಕು
ಕಂಡು ಪತಂಗವ
ಬೆಂದಬೂದಿಯಿಂದೆದ್ದು
ಚಿಮ್ಮುವ ಫೀನಿಕ್ಸಿನ ಗುದ್ದು
ಉಸಿರುನಿಲ್ಲುವತನಕ
ಉಸಿರಾಡಲಡ್ಡಿಯೇನು?
ಬರಲಿ ಅದು ನಿನ್ನ ಹಿಂದೆ
ಬೀಳಬೇಡ ಅದರಬೆನ್ನ ಹಿಂದೆ
ತಪ್ಪಲ್ಲ ..ಒಪ್ಪುವೆ
ಮಾಡಿದರೂ ಮೋಸವ
ಮಾಡಬೇಡ ಸಹವಾಸವ
ಕಲಿ ಸವಾಲೆಸೆವುದ
ಬದುಕ ಬದುಕುವುದಕಲಿ
ಸಾವ ಮೆಟ್ಟುದೇ ಸವಿ
ಸಾವ ಮೆಟ್ಟುವುದಾ ಸವಿ
ಚೆನ್ನಾಗಿದೆ ಕವನ...ಆಜಾದ ಭ ಯ್ಯ ...
ReplyDeleteಛಲ ಬೇಕು ಬದುಕಲು
ಗುರಿಯನ್ನು ತಲುಪಲು
ಬದುಕಿಗೊಂದು ಅರ್ಥ ಕೊಡಲು.....:))
ಮನದ ಮಾತಿನ ತಂಗಿಗೆ ಧನ್ಯವಾದ..ಪ್ರತಿಕ್ರಿಯೆಗೆ... ಪ್ರಕಾಶ ನಾನು ಜೀವನದ ಎರಡುಮುಖಗಳ ಪರಿಚಯ ಮಾಡುವ ಪ್ರಯತ್ನ ಮಾಡಿದ್ದೇವೆ...
ReplyDeleteಜೀವಿತದ ವ್ಯವಸ್ತೆಯನ್ನ ಕವನದಲ್ಲಿ ಹೇಳುವ ಪ್ರಯತ್ನ ಚೆನ್ನಾಗಿದೆ ಭೈಯ್ಯ :)
ReplyDeleteರಂಜು, ಇಬ್ರೂ ಮಾತನಾಡಿಕೊಂಡು ಪ್ರತಿಕ್ರಿಯೆಹಾಕಿದಿರೋ ಹೇಗೆ...ಧನ್ಯವಾದ...ಒಂದು ಪ್ರಯತ್ನ..ಹತಾಷೆ ಬೇಡ ಎನ್ನೋದಕ್ಕೆ....
ReplyDeletenice poem on optimism
ReplyDeletekeep it up
ಕವನದ ಆಶಯಕ್ಕೆ ತಕ್ಕುದಾದ meter ಇರುವದು ಈ ಕವನಕ್ಕೆ ಸೊಗಸು ನೀಡಿದೆ.
ReplyDeleteತೆರೆಯ ಮೇಲೆ ತೆರೆ ಎದ್ದಂತೆ, ಕವನದ ಸಾಲುಗಳು ಏಳುತ್ತ ಹೋಗಿವೆ. ಸುಂದರವಾದ ಕವನ.
ಸೀತಾರಾಮ್ ಸರ್, ಧನಾತ್ಮಕ ಭಾವನೆಗಳಿಗೆ ಹೆಚ್ಚುಒತ್ತು ನಮ್ಮಲ್ಲಿನ ಋಣಾತ್ಮಕ ಗುಣಗಳಿಗೆ ಸ್ವಲ್ಪ ಹಿಂದೇಟು ಎನ್ನುವುದನ್ನು ನಂಬಿರುವವ ನಾನು. ಧನ್ಯವಾದ ನಿಮ್ಮ ಮಾತಿಗೆ
ReplyDeleteಸುನಾಥ್ ಸರ್, ತಮ್ಮಲ್ಲಿದ್ದ ಅಲ್ಪ ಆರೋಗ್ಯ ಸಂಬಂಧಿ ತೊಂದರೆಗೆ ತಮ್ಮನ್ನೇ ಅರ್ಪಿಸಿಬಿಟ್ಟ ನನ್ನ ದೊಡ್ಡಪ್ಪನ ನೆನೆಪಾಗಿ ಈ ಕವನ ಹೊಮ್ಮಿದ್ದು...ಅವರಲ್ಲಿ ಸಾವು ಬರುವವರೆಗೆ ಬದುಕಬೇಕೆಂಬ ಛಲ ಇರಲಿಲ್ಲ..ಅದನ್ನೇ ಹುಡುಕಹೊರಟಿದ್ದು ....ಅವರ ಸಾವಿಗೆ ಕಾರಣ ಎಂದೇ ನನ್ನ ನಂಬಿಕೆ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ReplyDeleteಛಲ ಇಲ್ಲದಿರೆ ಗುರಿ ಎಲ್ಲಿಯದು
ReplyDeleteಒಳ್ಳೆಯ ಕವನ ಸರ್
ಗುರು, ನಿಮ್ಮ ಮಾತು ನಿಜ ಛಲವೇ ಬಲ..ಗುರಿ ಮುಟ್ಟಲು ಸಾಧಿಸಲು...ಅಲ್ಲವೇ..? ಧನ್ಯವಾದ.
ReplyDelete'ಜಲನಯನ' ಅವ್ರೆ..,
ReplyDelete....ಗೆಲ್ಲೋನಿಗೆ ಬೇಕು ಹಠ.. ಮಾತು ನೆನಪಾಯ್ತು.
Blog is Updated:http://manasinamane.blogspot.com
ಏನಾಗುತ್ತು ಆಗ್ಲಿ ನೋಡೊಣ ಅಂತ ಹೊರಟು ಬಿಡುವ ಹಾಗೆ ಮಾಡುತ್ತದೆ ಕವನ, ಇದ್ದಷ್ಟು ದಿನ ಹಾಯಾಗಿದ್ದುಬಿಡಬೇಕಲ್ಪಾ...
ReplyDeleteಹಾಗೇ ನಿಮ್ಮ ಕಾಲ್-ಏಜು ಮಿನಿಕವನ ಬಹಳ ಇಷ್ಟ ಆಯ್ತು, ಬರೀತಾ ಇರಿ... ಚೆನ್ನಾಗಿದೆ.
ಥ್ಯಾಂಕು ಪ್ರಭುಜೀ...ಮತ್ತೆ ನನ್ನ ಜಲನಯನಾನ ಸ್ವಲ್ಪ ನೋಡಿ ಬನ್ನೀಪ್ಪಾ...ನಿಮಗೊಂದು ವಿಷಯ ಇದೆ ಅದ್ರಲ್ಲಿ.....
ReplyDeleteಆಜಾದ್ ಸರ್,
ReplyDeleteತಂಬಾ positive energy ಕೊಡುವ ಕವನಕ್ಕೆ ಧನ್ಯವಾದ......
Thanks Dinakar....for a change in english...hahaha
ReplyDeletehi..
ReplyDeletethnx for the comment,,
I am browsing ur blog..Its excellent..
I got a lesson from this song...."try & try again " will succeed.Am I right,,,,
Regards
Nice one sir...ತಪ್ಪಲ್ಲ ..ಒಪ್ಪುವೆ
ReplyDeleteಮಾಡಿದರೂ ಮೋಸವ
ಮಾಡಬೇಡ ಸಹವಾಸವ
ಕಲಿ ಸವಾಲೆಸೆವುದ
ಬದುಕ ಬದುಕುವುದಕಲಿ
e saalugalu tumbaa hidisidavu...
superb lines :) :)tumba chennagide sir :)
ReplyDeleteಚೆ೦ದದ ಕವನ..
ReplyDeleteಇಷ್ಟವಾಯಿತು :)
ಶೆಟ್ಟಿಯವರೇ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...ನನ್ನ ಜಲನಯನದತ್ತಲೂ ಕಣ್ಣು ಹಾಯಿಸಿ...ನಮ್ಮ ಬ್ಲಾಗ್ ಸ್ನೇಹಿತರ ಒಮ್ದು ಸಮ್ಮಿಲನದ ಯೋಚನೆಯನ್ನು ಪ್ರಸ್ತುತಪಡಿಸಿದ್ದೀನಿ..ನೋಡಿ...
ReplyDeleteಅಶೋಕ್ ಧನ್ಯವಾದರೀ..ನಿಮ್ಮ ಪ್ರೋತ್ಸಾಹಕ್ಕೆ ಮತ್ತು ನಿಮ್ಮ ಪ್ರತಿಕ್ರಿಯೆಗೆ..
ReplyDeleteಮಂಜುಶ್ವೇತೆಗೆ ಧನ್ಯವಾದ....ಪ್ರತಿಕ್ರಿಯೆಗೆ...
ReplyDeleteಸುಶ್ಮಾ ಸಿಂಧು...ನನ್ನ ಗೂಡಿಗೆ ಬಮ್ದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.....
ReplyDelete