Tuesday, July 21, 2009
Sunday, July 19, 2009
ಫೋಟೋ





ಫೋಟೋ ಫೋಟೋ ....ಫೋಟೋಗಳು,
ಸ್ನೇಹಿತರೇ,
ನನಗೆ ಈ ಪೋಸ್ಟ್ ಗೆ ಪ್ರೇರಣೆ, ಶಿವು, ಮಲ್ಲಿಕಾರ್ಜುನ್, ಗುರು, ರೂಪಶ್ರೀ, ಮುಂತಾದ ಫೋಟೋ-ಪ್ರೇಮಿ ಅತಿರಥರು ಎಂದರೆ ಅತಿಶಯೋಕ್ತಿ ಏನಲ್ಲ. ಆದ್ರೆ ನನ್ನದು ಬರೀ ಎರವಲು ಪೋಸ್ಟ್..ಅವರಂತೆ ನಾನು ಚಿತ್ರಗ್ರಾಹಿಯಲ್ಲ. ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಾಯಿತು ಈ ಅದ್ಭುತ ಫೋಟೋಗಳನ್ನು...ಅದಕ್ಕೆ ಹಾಕಿದೆ ಬ್ಲಾಗ್ ಗೆ. ಇದರ ಮೂಲ ನಮ್ಮ ಕುವೈತ್ ಕನ್ನಡ ಕೂಟದ ಪ್ರೆಸಿಡೆಂಟರಾದ ನಕ್ರೆ ಸತೀಶ್ ಚಂದ್ರ ಶೆಟ್ಟರ ಮೈಲ್.
ಸ್ನೇಹಿತರೇ,
ನನಗೆ ಈ ಪೋಸ್ಟ್ ಗೆ ಪ್ರೇರಣೆ, ಶಿವು, ಮಲ್ಲಿಕಾರ್ಜುನ್, ಗುರು, ರೂಪಶ್ರೀ, ಮುಂತಾದ ಫೋಟೋ-ಪ್ರೇಮಿ ಅತಿರಥರು ಎಂದರೆ ಅತಿಶಯೋಕ್ತಿ ಏನಲ್ಲ. ಆದ್ರೆ ನನ್ನದು ಬರೀ ಎರವಲು ಪೋಸ್ಟ್..ಅವರಂತೆ ನಾನು ಚಿತ್ರಗ್ರಾಹಿಯಲ್ಲ. ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಾಯಿತು ಈ ಅದ್ಭುತ ಫೋಟೋಗಳನ್ನು...ಅದಕ್ಕೆ ಹಾಕಿದೆ ಬ್ಲಾಗ್ ಗೆ. ಇದರ ಮೂಲ ನಮ್ಮ ಕುವೈತ್ ಕನ್ನಡ ಕೂಟದ ಪ್ರೆಸಿಡೆಂಟರಾದ ನಕ್ರೆ ಸತೀಶ್ ಚಂದ್ರ ಶೆಟ್ಟರ ಮೈಲ್.
ಈ ಫೋಟೋಗಳು ಅಮೇರಿಕೆಯಲ್ಲಿ ನಡೆದ ಮರಳಿನಮೇಲೆ-ಕಲೆ ಸ್ಪರ್ಧೆಯಲ್ಲಿ ಕ್ಲಿಕ್ಕಿಸಿದವಿಗಳು
Monday, July 13, 2009
ಮೀನು

ಜಲಸಂಕುಲದಲಿ
ವಿಕಸನ ಸಂಕೋಲೆ
ಅದಮ್ಯ ಕೊಂಡಿಯಲಿ
ಮಿಂದು ಬಂದುದು ಮೀನು.
ಜಲಜನನ
ಜಲನಯನ
ಜಲಜೀವನ
ಜಲಜಾಕ್ಷಿ ಮೀನು.
ಸುತ್ತಿಬರುತಲಿ
ತತ್ತಿಯಿಡಿತಲಿ
ಬಿತ್ತಿ ವಂಶವ
ಜಲಮಹತು ಮೀನು.
ಬೆನ್ನು ಮೂಳೆಯ
ಬೆನ್ನು ಹಿಡಿದರೆ
ನರ ಬೇರುತೋರುವ
ಜಲೋಗಾಮಿ ಮೀನು.
ಕೊಳವಿರಲಿ
ಕೆರೆಬರಲಿ
ನದಿ ಸೇರಿ
ಸಾಗಿ ಸಾಗರ
ಎಲ್ಲ-ಸಲ್ಲ ಮೀನು.
ನಿನ್ನೆಯ ಹಾದು ಬಂದಬೀದಿ,
ನಾಳೆಗೆ ತೋರು ಬರುವರಿಗೆ ಹಾದಿ
ಕಲಕಿರಾಡಿಯಿರೆ ನೀರು
ಅದತೊರೆದು ಬೇರೆಡೆ ಸೇರು
ಸರಾಗ ಗಮನ ನಯವ ಕಲಿ
ವಿರಾಗ ಬಿಡು ಮೀನಂತೆ ನಲಿ
ದಾಹ, ಹರಿದುಸಿರು ಮರೆಯದಿರು ನೀರು
ರಾಡಿಮಾಡದಿರು ಕುಡಿವುದು ಬೇರು
ಜಲನಯನಕೆ ಜಲವೇ ಜೀವ,
ತರುವುದು ಮನುಕಲಕೆ ತಪ್ಪಿನಡೆದರೆ ಸಾವ.
Monday, June 29, 2009
ಮಗು
ಭಾವ, ಜೀವ, ಕವನ ಕಥನ

ಭಾವ ಭಾವಕೆ ಬದುಕು
ಬದುಕ ಬದುಕಲಿ ಭಾವ
ಭಾವವಿಲ್ಲದ ನಾವು
ತಣ್ಣಗೆ ಬಿದ್ದಂತೆ ಕಾವು
ಮಂಥಿಸಿದರೆ ಕಥನ
ಮಂಥಿಸಿದರೆ ಕವನ
ಮಂಥಿಸಿದರೆ ಸ್ವಂತ
ರಂಜಿಸಲು ಜೀವನ
ಅಕ್ಕನ ಗಂಡ ಭಾವ
ಅವರಿಲ್ಲದಿರೆ ಅಭಾವ
ಆ ಭಾವಕ್ಕೆ ಈ ಭಾವ
ಒಬ್ಬರೊಳಗೊಬ್ಬರ ಜೀವ
ಇಹದ ಬದುಕು - ಭವ
ಬದುಕಿರಲು - ಅದೇ ಜೀವ
ತೊರೆದುಜೀವ- ನಿರ್ಜೀವ
ಭಾವ ಬೇಕು ಮರೆಯಲು ನೋವ
‘ಮನಸ‘ ಕದಡಿತು - ಮೂಡಿತು ಕವನ
ಕನಸ ಹೆಣೆಯಿತು - ಬೆಂಬಿಡದ ಮನನ
ಭಾವನ- ಮಂಥನ, ಕಥನ- ಕವನ
ಹೀಗಲ್ಲವೇ ಸಹಜ ನಿರಂತರ ಜೀವನ ?
Wednesday, June 3, 2009
ಹಲೋ...ಪ್ರೊ. ಪರಮೇಶ್

(ದಾವಣಗೆರೆಯ ಗಾಂಜಾ ಸಾಧುವಿನ ಕಥೆ ಕೇಳಿ ಪ್ರೇರಿತ)
ಭಂ..ಭಂ..ಭೋಲೇ ಶಂಕರ
ಭಸ್ಮ ಉಂಟು ಭಂಗಿ ಇಲ್ಲ
ಸಿಗರೇಟ್ ಹಿಡಿದಿದೆ ನನ್ ಕರ
ಹಿಡಿದಿದೆ ಸುಕ್ಕು
ಮುಖ ಬಾಯಿ ಬೊಕ್ಕು
ಆದ್ರೂ ಯಾರಿಲ್ಲ ನನ್ ಥರ
ಕೈಲಿ ದೇಹಿ ಕಮಂಡಲ
ಗಡ್ಡನೆರೆ ಮುಖಮಂಡಲ
ಕಾವಿತೊಟ್ಟು ಹೇಳುವೆ ಹರೋಹರ
ಎಲ್ಲಿರುವೆ ಗಂಗಾಧರ
ಲೈನು busy ಬಲು ಭಯಂಕರ
ಮಿಸ್ ಕಾಲ್ ಕೊಟ್ಟಿರುವೆ ಪ್ರೊ.ಪರಮೇಶ್ವರ
ಯಾಗಾದಿ ಪೂಜೆ ಬೇಕಿಲ್ಲ
ಹೋಮ ಹವನ ಸಾಕಲ್ಲ
ಮೊಬೈಲ್ ಯುಗ ಆಯ್ತಲ್ಲ
ನೀನೇ ಕಾಲ್ ಮಾಡೋ ಶಿವ ಶಂಕರ
Monday, June 1, 2009
ಅಕ್ಕಿಗೂ ಮೊದ್ಲು ಭತ್ತ ಅಲ್ವೇ ಸಾ

ಮೂರ್ತಿ, ಬ್ಲಾಗ್ ಪೋಸ್ಟ್ ನನಗೆ ಯಾರೋ ಮೈಲ್ ಮಾಡಿದ್ರು...ಬಹುಶಃ ಈ ಕವಿ ಮೂಲಕ...ನೆನಪಾಗ್ತಿಲ್ಲ, ಚನ್ನಾಗಿದೆ ವಿಷಯ ತಮಾಷೆ ಮತ್ತು ನಮ್ಮ ನಾಗರಿಕ ನಗರವಾಸಿಗಳು ಹಳ್ಳಿಯವರನ್ನು ಕಂಡು ಮೂಗು ಮುರಿಯೋದು ಬಿಡಬೇಕು..ಯಾಕಂದ್ರೆ ಕೆಲ ವಿಷಯ ಅವ್ರಿಂದ ಕಲೀಬೇಕಾಗುತ್ತೆ...
ಉದಾ.. ಹಳ್ಳಿ ಸ್ಕೂಲಿಗೆ ಕುತೂಹಲಕ್ಕೆ ಬಂದ ನಗರದ ಹುಡುಗ ಹಳ್ಳಿ ಹುಡುಗ್ರನ್ನ ಬುದ್ದಿ ಇಲ್ಲದೋರು ಅಂತ ಆಡ್ಕೊಂಡಿದ್ದನ್ನ ನೋಡಿ ಮೇಷ್ಟ್ರುಅವನಿಗೆ ಮತ್ತು ತಿಮ್ಮನಿಗೆ ಹೊರಗಡೆ ಹೋಗಿ ನಾವು ತಿನ್ನೋ ಅನ್ನದ ಮೂಲಾನ ತನ್ನಿ ಅನ್ತಾರೆ...ನಗರದ ಹುಡುಗ ಹೊರಗಡೆ ಕುಯ್ಲಿಗೆ ಗದ್ದೆ ಇದ್ದದ್ದು ನೋಡಿ ಮೇಷ್ಟ್ರು ನನ್ನ ಬುದ್ಧಿ ಪರೀಕ್ಷೆಗೆ ಹೀಗೆ ಹೇಳಿದ್ದಾರೆ ಅಂತ ..ತನ್ನ ಭಾವನ ಮನೆಗೆ ಹೋಗಿ ಅಕ್ಕಿ ಕಾಳುಗಳನ್ನ ತರ್ತಾನೆ...ಮೇಷ್ಟ್ರು ಇಬ್ಬರನ್ನೂ ಕೇಳ್ದಾಗ ತಿಮ್ಮ ಭತ್ತದ ತೆನೆ ತೋರ್ಸಿದ್ರೆ..ನಗರದ ಹುಡುಗ ಹೆಮ್ಮೆಯಿಂದ ಅಕ್ಕಿ ಕಾಳು ತೋರಿಸ್ತಾನೆ.
ಮೇಷ್ಟ್ರು ಹೇಳ್ತಾರೆ.. ನಾನು ಹೇಳಿದ್ದು ನಾನು ತಿನ್ನೋ ಅನ್ನದ ಮೂಲ.. ಅದಕ್ಕೆ ನಗರದ ಹುಡುಗ ಹೇಳ್ತಾನೆ..ಅಕ್ಕಿ ಅಲ್ಲವೇ ಅನ್ನಮಾಡೋಕೆ ಬೇಕಾಗಿರೋದು...ಆದ್ರೆ ತಿಮ್ಮ ಹೇಳ್ತಾನೆ, ಸಾ ಅಕ್ಕಿಗೂ ಮೊದ್ಲು ಭತ್ತ ಅಲ್ವೇ ಸಾ... ಷಹಬ್ಬಾಶ್ ತಿಮ್ಮ ಅಂತಾರೆ ಮೇಷ್ಟ್ರು.
Subscribe to:
Posts (Atom)