Monday, June 29, 2009

ಭಾವ, ಜೀವ, ಕವನ ಕಥನ



ಭಾವ ಭಾವಕೆ ಬದುಕು
ಬದುಕ ಬದುಕಲಿ ಭಾವ
ಭಾವವಿಲ್ಲದ ನಾವು
ತಣ್ಣಗೆ ಬಿದ್ದಂತೆ ಕಾವು

ಮಂಥಿಸಿದರೆ ಕಥನ
ಮಂಥಿಸಿದರೆ ಕವನ
ಮಂಥಿಸಿದರೆ ಸ್ವಂತ
ರಂಜಿಸಲು ಜೀವನ


ಅಕ್ಕನ ಗಂಡ ಭಾವ
ಅವರಿಲ್ಲದಿರೆ ಅಭಾವ
ಆ ಭಾವಕ್ಕೆ ಈ ಭಾವ
ಒಬ್ಬರೊಳಗೊಬ್ಬರ ಜೀವ

ಇಹದ ಬದುಕು - ಭವ
ಬದುಕಿರಲು - ಅದೇ ಜೀವ
ತೊರೆದುಜೀವ- ನಿರ್ಜೀವ
ಭಾವ ಬೇಕು ಮರೆಯಲು ನೋವ

‘ಮನಸ‘ ಕದಡಿತು - ಮೂಡಿತು ಕವನ
ಕನಸ ಹೆಣೆಯಿತು - ಬೆಂಬಿಡದ ಮನನ
ಭಾವನ- ಮಂಥನ, ಕಥನ- ಕವನ
ಹೀಗಲ್ಲವೇ ಸಹಜ ನಿರಂತರ ಜೀವನ ?

12 comments:

  1. ಭಾವದ ಮಂಥನ ಸೊಗಸಾಗಿದೆ

    ReplyDelete
  2. ಮಹೇಶ್
    ಏನ್ರಪ್ಪಾ..ಬ್ಲಾಗ್ ಖಾಲಿ ಬಿಟ್ಟಿದ್ದೀರಿ...ಮೈದಾನ ಖಾಲಿ ಬಿಟ್ರೆ..ಪುಂಡು ಪೋಕ್ರಿಗಳ ಅಡ್ಡ-(ಗ್ರೌನ್ದ್) ಆಗುತ್ತೆ...ಬೇಗ ತುಂಬ್ಸಿ ಸ್ವಾಮಿ...
    thanks ನನ್ನ ಕವನಕ್ಕೆ ಉತ್ತರಿಸಿದ್ದೀರಿ...ಇದು ಮನಸು-ಅವರ ಕವನದಿಂದ ಪ್ರೇರಿತ...!! ಖುಷಿಯಾಯ್ತಾ..ಈಗ...???!!! ಆಹಾ..!! ಮುಖ ನೋಡಿ ಹೇಗೆ ಅರಳಿದ್ಯೋ...ಇಬ್ಬರ್ದೂ...ಹಹಹಹ

    ReplyDelete
  3. ಜಲನಯನ,
    ಭಾವವಿಲ್ಲದಿರೆ ಜೀವನೆವೆ ಅಭಾವ ಎನ್ನುವದನ್ನು ಸೊಗಸಾಗಿ ಹೇಳಿದ್ದೀರಿ.

    ReplyDelete
  4. ಸುನಾಥ್ ಸರ್
    ಭಾವವೆನ್ನುವುದರ ನನ್ನ ನಿಲುಕಿಗೆ ಬಂದ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ಜಲನಯನ ಸರ್,

    ಜೀವನದಲ್ಲಿ ಭಾವವೆಂಬುದು ಎಷ್ಟು ಮುಖ್ಯ ಎನ್ನುವುದನ್ನು ಕವನದಲ್ಲಿ ಚೆನ್ನಾಗಿ ಹೇಳಿದ್ದೀರಿ...
    ಧನ್ಯವಾದಗಳು.

    ReplyDelete
  6. ಶಿವು, ಭಾವನೆಗಳನ್ನು ಚಿತ್ರದಲ್ಲಿ ತುಂಬಿ ಪ್ರಸ್ತುತಿಸುವ ಕಲೆ ನಿಮ್ಮದಾದರೆ...ಪದಗಳ ಬಳಕೆಯಿಂದ ಅವನ್ನು ವ್ಯಕ್ತಪಡಿಸುವ ಹುಚ್ಚು ನಮ್ಮದು.
    ನಿಮ್ಮ ಮಾತು ನಿಜ...ಭಾವನೆಯಿಲ್ಲದಿದ್ದರೆ..ಓಡಾಡುವ ಯಂತ್ರದಂತೆ...ಸಂತೋಷಕ್ಕೆ ನಗು, ದುಃಖಕ್ಕೆ ಅಳು, ಕೋಪ, ತಾಪ, ಬಿಗುಮಾನ, ಮುನಿಸು, ರಂಪಾಟ...ಏನೆಲ್ಲ...ಇದರೆ ಪ್ರಕಟಣೆಯೇ ಭಾವನೆ ಅಲ್ಲವೇ...ಚಿತ್ರ, ಕಥೆ ಕವನ, ಇತ್ಯಾದಿಗಳ ಮೂಲಕ..??

    ReplyDelete
  7. Tumbaa chennagide bhavarhagalu ..

    ReplyDelete
  8. ರಂಜಿತಾ..ನನ್ನ ಬ್ಲಾಗ್ ಗೆ ಸ್ವಾಗತ...ನಿಮ್ಮ ಅನ್ನಿಸಿಕೆ, ಪ್ರತಿಕ್ರಿಯೆ ನಮಗೆ ಸ್ಪೂರ್ತಿ...ಇದು ಪರಸ್ಪರ ಬೆನ್ನು ತಟ್ಟುವ ಆಚಾರವಾಗಿರದೇ..ಏನಾದರೂ ಸಲಹೆ ಸೂಚನೆಗಳಿದ್ದರೆ ತಿಳಿಸಿದರೆ ನಮ್-ನಮ್ಮ ಬ್ಲಾಗನ್ನು ಇನ್ನೂ ಭಾವಪೂರಿತ ಮತ್ತು ಉತ್ತಮಗೊಳಿಸಬಹುದು...

    ReplyDelete
  9. ಭಾವಮಂಥನ ಬ್ಲಾಗಿನ ಹೆಸರಿಗೆ ತಕ್ಕ ಕವನ...

    ReplyDelete
  10. Thanks ಪ್ರಭು, ಭಾವನೆಗಳನ್ನು ಭರಿಸಿಕೊಂಡಿರದೇ ಭರದಿಂದ ಹರಿಯಬಿಟ್ಟರೆ....ಮಂಥನಕ್ಕೆ ಎಡೆಮಾಡಿದರೆ....ಕವನ, ಕವಿತೆ, ಕಥನ, ಎಲ್ಲಾ ಸಾಧ್ಯ ಎಂದುದ್ರಿಂದ ಪ್ರಯತ್ನಿಸಿದೆ. ನಿಮಗೆ ಮೆಚ್ಚುಗೆ ಯಾದುದಕ್ಕೆ ಧನ್ಯವಾದಗಳು,

    ReplyDelete