Monday, June 1, 2009
ಅಕ್ಕಿಗೂ ಮೊದ್ಲು ಭತ್ತ ಅಲ್ವೇ ಸಾ
ಮೂರ್ತಿ, ಬ್ಲಾಗ್ ಪೋಸ್ಟ್ ನನಗೆ ಯಾರೋ ಮೈಲ್ ಮಾಡಿದ್ರು...ಬಹುಶಃ ಈ ಕವಿ ಮೂಲಕ...ನೆನಪಾಗ್ತಿಲ್ಲ, ಚನ್ನಾಗಿದೆ ವಿಷಯ ತಮಾಷೆ ಮತ್ತು ನಮ್ಮ ನಾಗರಿಕ ನಗರವಾಸಿಗಳು ಹಳ್ಳಿಯವರನ್ನು ಕಂಡು ಮೂಗು ಮುರಿಯೋದು ಬಿಡಬೇಕು..ಯಾಕಂದ್ರೆ ಕೆಲ ವಿಷಯ ಅವ್ರಿಂದ ಕಲೀಬೇಕಾಗುತ್ತೆ...
ಉದಾ.. ಹಳ್ಳಿ ಸ್ಕೂಲಿಗೆ ಕುತೂಹಲಕ್ಕೆ ಬಂದ ನಗರದ ಹುಡುಗ ಹಳ್ಳಿ ಹುಡುಗ್ರನ್ನ ಬುದ್ದಿ ಇಲ್ಲದೋರು ಅಂತ ಆಡ್ಕೊಂಡಿದ್ದನ್ನ ನೋಡಿ ಮೇಷ್ಟ್ರುಅವನಿಗೆ ಮತ್ತು ತಿಮ್ಮನಿಗೆ ಹೊರಗಡೆ ಹೋಗಿ ನಾವು ತಿನ್ನೋ ಅನ್ನದ ಮೂಲಾನ ತನ್ನಿ ಅನ್ತಾರೆ...ನಗರದ ಹುಡುಗ ಹೊರಗಡೆ ಕುಯ್ಲಿಗೆ ಗದ್ದೆ ಇದ್ದದ್ದು ನೋಡಿ ಮೇಷ್ಟ್ರು ನನ್ನ ಬುದ್ಧಿ ಪರೀಕ್ಷೆಗೆ ಹೀಗೆ ಹೇಳಿದ್ದಾರೆ ಅಂತ ..ತನ್ನ ಭಾವನ ಮನೆಗೆ ಹೋಗಿ ಅಕ್ಕಿ ಕಾಳುಗಳನ್ನ ತರ್ತಾನೆ...ಮೇಷ್ಟ್ರು ಇಬ್ಬರನ್ನೂ ಕೇಳ್ದಾಗ ತಿಮ್ಮ ಭತ್ತದ ತೆನೆ ತೋರ್ಸಿದ್ರೆ..ನಗರದ ಹುಡುಗ ಹೆಮ್ಮೆಯಿಂದ ಅಕ್ಕಿ ಕಾಳು ತೋರಿಸ್ತಾನೆ.
ಮೇಷ್ಟ್ರು ಹೇಳ್ತಾರೆ.. ನಾನು ಹೇಳಿದ್ದು ನಾನು ತಿನ್ನೋ ಅನ್ನದ ಮೂಲ.. ಅದಕ್ಕೆ ನಗರದ ಹುಡುಗ ಹೇಳ್ತಾನೆ..ಅಕ್ಕಿ ಅಲ್ಲವೇ ಅನ್ನಮಾಡೋಕೆ ಬೇಕಾಗಿರೋದು...ಆದ್ರೆ ತಿಮ್ಮ ಹೇಳ್ತಾನೆ, ಸಾ ಅಕ್ಕಿಗೂ ಮೊದ್ಲು ಭತ್ತ ಅಲ್ವೇ ಸಾ... ಷಹಬ್ಬಾಶ್ ತಿಮ್ಮ ಅಂತಾರೆ ಮೇಷ್ಟ್ರು.
Subscribe to:
Post Comments (Atom)
ಸರ್,
ReplyDeleteಹಳ್ಳಿ ಹುಡುಗನ ಮುಗ್ಧತೆಯಲ್ಲೇ ಬುದ್ಧಿವಂತಿಕೆಯಿದೆಯಲ್ಲವೇ...
ನಗರದ ಹುಡುಗ ಹಾಲಿನ ಮೂಲ ನಂದಿನಿ ಡೈರಿ ಅಂತಾನೆ. ಹೀಗಿದೆ ನಗರದ ಬದುಕು. ಆದರೂ ಹಳ್ಳಿಯವರನ್ನು ಕೀಳಾಗಿ ಕಾಣುತ್ತಾರೆ.
ReplyDeleteಗುರುಗಳೇ,
ReplyDeleteನಮ್ಮ ಹಳ್ಳಿ ಹುಡುಗನ ಬುದ್ದಿವಂತಿಕೆಯನ್ನು ಮೆಚ್ಚಲೇಬೇಕು.....
ನಿಜವಾದ ಜ್ಞಾನ ಎಲ್ಲಿದೆ ಅಂತ ನೋಡಿ!
ReplyDeleteಇವತ್ತಿನ ನಗರವಾಸಿಗಳ ಮಕ್ಕಳಿಗೆ ಬಹಳಷ್ಟು ವಿಚಾರಗಳು ಗೊತ್ತಿಲ್ಲ, ನಾವೊಮ್ಮೆ ನಮ್ಮ ಪಕ್ಕದ ಮನೆಯವರನ್ನು ಕರಕೊ೦ಡು ನಮ್ಮ ಊರಿಗೆ ಹೋಗಿದ್ದೆವು, ಪಕ್ಕದ ಮನೆಯವರೇ ಆದ ನಮ್ಮ ಸ್ನೇಹಿತರ ಮಗಳು ೯ನೇ ತರಗತಿ ಹುಡುಗಿ, ಓದಿನಲ್ಲಿ ತು೦ಬಾ ಜಾಣೆ, ದಾರಿಯಲ್ಲಿ ಸಾಗುತ್ತಿರುವಾಗ ಭತ್ತದ ಗದ್ದೆ ಕ೦ಡು "Rice Field" ಅನ್ನುತ್ತಿದ್ದಳು, ಅಲ್ಲಮ್ಮ ಅದು "Paddy Field" ಅ೦ದೆ. ಅವಳಿಗೆ ಅದೇನೆ೦ದು ಥಟ್ಟನೆ ಅರ್ಥವಾಗಲೇ ಇಲ್ಲ. ಈಗಿನ ಮಕ್ಕಳಿಗೆ ಹಲವು basic ವಿಚಾರಗಳ ಬಗ್ಗೆ ತಿಳುವಳಿಕೆಯ ಕೊರತೆ, ಅವಜ್ಞೆ ಇದೆ ಅನ್ನುವುದು ನಿಮ್ಮ ಬರಹದಿ೦ದ ವ್ಯಕ್ತವಾಗಿದೆ.
ReplyDeleteಶಿವು, ಹಳ್ಳಿ ಹಲವಾರು ಗಹನ ಜೀವನ-ಸಂಬಂಧಿ ವಿಷಯಗಳನ್ನು ಬೋಧಿಸುತ್ತದೆ...ಇವನ್ನು ಯಾವುದೇ ಪಠ್ಯ ವಿಷಯದಲ್ಲಿ ಬೋಧಿಸಲಾಗುವುದಿಲ್ಲ. ನಿಮ್ಮ ಮಾತು ಅಕ್ಷರಶಃ ನಿಜ.
ReplyDeleteನಮ್ಮೂರಿಗೆ ಬಂದ ಒಬ್ಬ ನಗರದ NSS ವಿದ್ಯಾರ್ಥಿಗೆ ಮೆಕ್ಕೆ ಜೋಳದ ತೆನೆ ತೋರ್ಸಿ ನಿನ್ನ popcorn ಇದರಿಂದಲೇ ತಯಾರಾಗೋದು ಅಂದಿದಕ್ಕೆ ಅವನಿ ಹೊಗೊಲೋ ಗುಲ್ಡು ಅನ್ನೋದೇ..
ಅಲ್ಲೇ ಚನ್ನಾಗಿ ಬಲಿತು ಸುಲಿಯಲು ಹಾಕಿದ್ದ ತೆನೆಯನ್ನು ತೆಗೆದು ಅದನ್ನ ಒಣಗಿಸಿ, ಸುಲಿದು, ಕಾಳನ್ನು ಮರಳು ತುಂಬಿದ ಬಾಣಲಿಗೆ ಹಾಕಿ ತೋಟದ ಒಲೆಯಲ್ಲಿ ಇಟ್ಟು ಚಿಟ ಚಿಟ ಸಿಡಿಯುವ popcorn ಮಾಡಿಕೊಟ್ಟೇ ನೋಡಿ..ಆಶ್ಚರ್ಯದಿಂದ ಅವನ ತೆರೆದ ಬಾಯಿಗೆ ಬಿದ್ದ ಬಿಸಿ popcorn ಸುಟ್ಟಾಗಲೇ..ಅವನಿಗೆ ನಿಜ ಗೊತ್ತಾದದ್ದು.
ಸುನಾಥ್ ಸರ್, ಹಳ್ಳಿಗಳ ವೈಭವೀಕರಣ ಮಾಡಿ ಎನ್ನುತ್ತಿಲ್ಲ ಆದರೆ ನಮ್ಮ ನಾಗರೀಕತೆಯ ಸೋಗು ಆ ಸೊಗಡನ್ನು ಸುಡುತ್ತಿದೆ ಎನ್ನುವುದು ನೀವೂ ಗಮನಿಸಿರಬೇಕು...ಅಲ್ಲವೇ..?
ಮೂರ್ತಿ, ಮಲ್ಲಿಕಾರ್ಜುನ್ ಸಹ ನನ್ನ ಮಾತನ್ನು ಒಪ್ಪುವುದು ಖಂಡಿತ.
ಪರಾಂಜಪೆಯವರೇ...ಪಟ್ಟಣದ ಎಷ್ಟೋ ಮಂದಿಗೆ ನುಗ್ಗೇ ಕಾಯಿ, ಆಲೂ ಗೆಡ್ಡೆ ಮುಂತಾದುವುಗಳ ಮೂಲ ಗಿಡ ಸ್ವರೂಪ ತಿಳಿದಿರಲಿಕ್ಕಿಲ್ಲ.
ಬಹಳ ದಿನ್ ಕಲ್ಲಂಗಡಿ ಗಿಡದಲ್ಲಿ ಬೆಳೆಯುತ್ತದೆಂದೂ ಶೇಂಗಾ ನೆಲದಮೇಲೆ ಬೆಳೇಯುತ್ತೆಂದೂ ನನ್ನ ಕಲ್ಪನೆ ಇತ್ತು ಅಪ್ಪ ಎಷ್ಟು ಸಾರಿ ಹೇಳಿದ್ರೂ ನಾನೇ ಸ್ವತಃ ನೋಡಿದಮೇಲೆ ನಂಬಿದ್ದು
ReplyDeleteಹಳ್ಳಿ ಜನ ಒಳ್ಳೆ ಜನ ತಳಕು ಬಳಕು ತಿಳಿಯದ ಮುಗ್ದರು...ಚೆನ್ನಾಗಿ ಬರೆದಿದ್ದೀರಾ...
ReplyDelete