Monday, June 29, 2009

ಮಗು


ಮಗು
ನಿನ್ನಗು
ನನಗೂ
ಅಮ್ಮಗೂ.
ಮಗು
ನೀನಗು
ದೂಡಿ
ನಮ್ಮ ಬಿಗು.
ಮಗು
ನೀನಕ್ಕರೆ
ನಮಗೆ
ಹಾಲು ಸಕ್ಕರೆ
ತಾಯಿಗೆ
ನೀನೇ ಆಸ್ತಿ
ಹೇಳುವಳಲ್ಲಾ
ನನ್ನ ಚಿನ್ನ
ನನ್ನ ಬಂಗಾರ?

4 comments:

  1. ಕವನದಂತೆಯೇ ಸುಂದರವಾದ ಫೋಟೋ. ಯಾರದಿದು?

    ReplyDelete
  2. ಸುನಾಥ್ ಸರ್,
    ಧನ್ಯವಾದಗಳು...ಇದನ್ನ ಧರಿತ್ರಿಯವರೇ ಹೇಳಬೇಕು....ಅವರ ಬ್ಲಾಗಿನಿಂದ ಎರವಲು ಪಡೆದದ್ದು...

    ReplyDelete
  3. ಜಲನಯನ ಸರ್,

    ಈ ಫೋಟೋವನ್ನು ಮೊದಲೇ ನೋಡಿದ್ದೆ...ಅದನ್ನು ಬಳಸಿಕೊಂಡು ಮುದ್ದಾದ ಮಗುವಿನ ಕವನವನ್ನು ಬರೆದಿದ್ದೀರಿ...ಸೊಗಸಾಗಿದೆ...

    ReplyDelete
  4. ಶಿವು, ಇದು ಧರಿತ್ರಿಯವರ ಬ್ಲಾಗ್ ಪೋಸ್ಟ್ ನಿಂದ ಎರವಲು ತಂದದ್ದು...ಇದಕ್ಕೆ ಪದಪ್ರಯೋಗದಿಂದ ಭಾವನೆ ಕೊಡುವ ಪ್ರಯತ್ನ ಅಷ್ಟೆ ನನ್ನದು..thanks commentsಗೆ

    ReplyDelete