Wednesday, June 3, 2009

ಹಲೋ...ಪ್ರೊ. ಪರಮೇಶ್



(ದಾವಣಗೆರೆಯ ಗಾಂಜಾ ಸಾಧುವಿನ ಕಥೆ ಕೇಳಿ ಪ್ರೇರಿತ)

ಭಂ..ಭಂ..ಭೋಲೇ ಶಂಕರ
ಭಸ್ಮ ಉಂಟು ಭಂಗಿ ಇಲ್ಲ
ಸಿಗರೇಟ್ ಹಿಡಿದಿದೆ ನನ್ ಕರ
ಹಿಡಿದಿದೆ ಸುಕ್ಕು
ಮುಖ ಬಾಯಿ ಬೊಕ್ಕು
ಆದ್ರೂ ಯಾರಿಲ್ಲ ನನ್ ಥರ
ಕೈಲಿ ದೇಹಿ ಕಮಂಡಲ
ಗಡ್ಡನೆರೆ ಮುಖಮಂಡಲ
ಕಾವಿತೊಟ್ಟು ಹೇಳುವೆ ಹರೋಹರ
ಎಲ್ಲಿರುವೆ ಗಂಗಾಧರ
ಲೈನು busy ಬಲು ಭಯಂಕರ
ಮಿಸ್ ಕಾಲ್ ಕೊಟ್ಟಿರುವೆ ಪ್ರೊ.ಪರಮೇಶ್ವರ
ಯಾಗಾದಿ ಪೂಜೆ ಬೇಕಿಲ್ಲ
ಹೋಮ ಹವನ ಸಾಕಲ್ಲ
ಮೊಬೈಲ್ ಯುಗ ಆಯ್ತಲ್ಲ
ನೀನೇ ಕಾಲ್ ಮಾಡೋ ಶಿವ ಶಂಕರ

10 comments:

  1. ಶಿವಶಂಕರ call ಮಾಡಿದರೆ, ಅದು missed call ಆಗೋದಿಲ್ಲ. ಅದು
    Final call!

    ReplyDelete
  2. ಸರ್,

    ಪೋಟೋ ಸೂಪರಾಗಿದೆ...ಅದಕ್ಕೆ ತಕ್ಕಂತೆ ಕವನವೂ ಚೆನ್ನಾಗಿದೆ...

    ನನಗಂತೂ ನಗು ಬಂತು...

    ReplyDelete
  3. ಸುನಾಥ್ ಸರ್...ನೀವು ಹೇಳೋದು ನಿಜ...ಆದರೆ...ದೇವರಜೊತೆ ಮಾತನಾಡುವ ಶಕ್ತಿ ಇರೋರಿಗೆ ಅದು missed ಕಾಲ್ ಆಗಬಹುದಲ್ಲವೇ...ನಿನ್ನೆ ಟಿ.ವಿ. ವಾರ್ತೆ ನೋಡಿದ ಮೇಲೆ ಬರೆದದ್ದು. ಧನ್ಯವಾದ ಪ್ರತಿಕ್ರಿಯೆಗೆ

    ReplyDelete
  4. ಶಿವು..ಈ ಚಿತ್ರ ಸ್ವಂತದ್ದಲ್ಲಪ್ಪ ಅಮೇಲೆ....ನನ್ ಮ್ಯಾಲೆ ಕೇಸ್ ಗೀಸ್ ಜಡ್ದ್ರೆ ಕಷ್ಟ...ಹಹಹ...ಬರೀ ಗಾಂಜಾದ ಮೇಲೆ ಬದುಕಿರೋ ಜೋಗಿಗಳು ಇದ್ದಾರಂತೆ...ಇವರೋ ಮೊಬೈಲ್ ಮೂಲಕ ಕಾಲ್ ಕೊಡ್ತಾರೆ ಶಂಭೋ ಶಂಕರನಿಗೆ.

    ReplyDelete
  5. ಸರ್, ಚಿತ್ರಕ್ಕೆ ತಕ್ಕ ಕವನ. ಅದು ದೇವರಿಗೆ STDನೋ, ISDನೋ ಗೊತ್ತಿಲ್ಲ. ಭೋಳೇ ಶಂಕರನ ಫೋನ್ engage ಆಗಿರುವುದೇ ಹೆಚ್ಚು, ಯಾಕೆಂದರೆ ಅವನಿಗೆ ಭಕ್ತರ ಕಾಟ ಜಾಸ್ತಿ ಅಲ್ವೇ? ಯಾರಾದರೂ ಒಬ್ಬರು ಅವನಿಗೆ ಕರೆ ಮಾಡುತ್ತಲೇ ಇರುತ್ತಾರೆ

    ReplyDelete
  6. ದೀಪಸ್ಮಿತಾಗೆ ವಂದನೆಗಳು ಮತ್ತು ಗೂಡಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ಶಂಕರ ಅದ್ಕೇ ಇರಬೇಕು ಯಾವುದೇ Tower ಇಲ್ದೇ ಇರೋ ಕೈಲಾಸಕ್ಕೆ ಹೋಗಿ ಕುಂತಿರೋದು ಅಲ್ವೇ..?? ಹಹಹ

    ReplyDelete
  7. ಫೋಟೋ ಮಸ್ತ್ ಆಗಿದೆ. ಕವನದ ಸಾಲುಗಳು ಇಷ್ಟವಾದವು.

    ReplyDelete
  8. ಅಗ್ನಿ...thanks ಬ್ಲಾಗಿಗೆ ಬಂದುದಕ್ಕೆ...ಹಾಗೇ ನಿಮ್ಮ ಅನಿಸಿಕೆಯನ್ನು ಕಾಮೆಂಟಿಸಿದ್ದೀರಿ...ಬರುತ್ತಿರಿ...

    ReplyDelete
  9. ಹ್ಹ ಹ್ಹ ಹ್ಹ... ಏನು ಆಧುನಿಕ ಸಾಧುಗಳೋ, ಏನು ಅವರ ಭಕ್ತಿಯೋ.. ಕ ಮಂಡಲ ಹಿಡಿಯಬೇಕಿದ್ದ ಕೈಯಲ್ಲಿ ಸಿಗರೇಟ್, ಮೊಬೈಲ್ ಬೇರೆ.. ನಿಮ್ಮ ಕವನ ಚಿತ್ರದಲ್ಲಿರುವ ಸಾಧುವನ್ನು ಮತ್ತು ಅವನ ಆಡುತ್ತಿರಬಹುದಾದ ಸಂಭಾಷಣೆಯನ್ನು ಚೆನ್ನಾಗಿ ವರ್ಣಿಸುತ್ತದೆ. ಹಾಡು ಬರೆದು ಚಿತ್ರ ಹುಡುಕಿದಿರೋ ಅಥವಾ ಚಿತ್ರ ನೋಡಿ ಹಾಡು ಬರೆದಿರೋ? :) ಎನೀವೇ, ಒಳ್ಳೇ ಕವನ, ಇಷ್ಟವಾಯಿತು.

    ReplyDelete
  10. ಫೋಟೋ ಗೆ ತಕ್ಕ ಕವನ, ಕವನಕ್ಕೆ ತಕ್ಕ ಫೋಟೋ ....ಕಮನ್ಡಲದ ಒಳಗೆ ಎನಿದೆ ಗುರುವೇ...

    ReplyDelete