ಗಂಗೆ ನಿನಗೆ ಕೋಟಿ ನಮನ
ನಿನ್ನ ಗಾಯನ ಸುಧೆ
ನಾಡೇಕೆ ಹೆಮ್ಮೆ
ಪಡುವುದು ವಸುಧೆ
ರುಚಿ-ಅಭಿರುಚಿ ಮೆಲ್ಲು
ಸಂಗೀತ ನಿನ್ನದು ಸೂಜಿಗಲ್ಲು
ಗಂಗೂ ನೀ ಹಾಡೆ ತೆರೆದ ಬಾಯಿ
ಶಾಂತ ಗಂಗೆ ನಡೆದಂತೆ ಹಾಯಿ
ಭೀಮಸೇನ-ಗಂಗೂ ಗಾಯನ
ಮಲ್ಲಿಕಾರ್ಜುನ ಕನ್ನಡಿಗರ ಮನನ
ಗಂಗೆ ಇಲ್ಲದಿರೆ ಇಹದಲಿ ಏನು?
ಗಾನಗಂಗೆ ಚಿರಂತನ ಅಲ್ಲವೇನು?
ನಿನ್ನ ದಾರಿ ನಮಗೆ ಮಾರ್ಗದರ್ಶನ
ಇಹತ್ಯಜಿಸಿದ ಚೇತನ ನಿನಗೆ ಕೋಟಿ ನಮನ
ಸಂಗೀತ ಸಾಮ್ರಾಜ್ಞಿಗೆ ನನ್ನದೂ ನಮನ....
ReplyDeleteದೇಶ ಮಹಾನ ಕಲಾತಾರೆಯನ್ನು ಕಳೆದುಕೊಂಡಿದೆ..
ನಿಮ್ಮ ಮಾತು ಅಕ್ಷರಶಃ ಸತ್ಯ...ಕನ್ನಡನಾಡಿಗೆ ಮತ್ತು ಸಂಸ್ಕೃತಿಗೆ ಈ ದಶಕ ತುಂಬಾ ನಷ್ಟಕರ ಎಂದು ನನ್ನ ಅನ್ನಿಸಿಕೆ...ಕನ್ನಡ ಕಣ್ಮಣಿ ಡಾ.ರಾಜ್, ಕನ್ನಡಿಗರ ಹೆಮ್ಮೆ ಭೀಮ್ಸೇನ್ ಜೋಶಿ ಮತ್ತು ಈಗ ಗಂಗೂಬಾಯಿ....ಅಲ್ಲವೇ..??
ReplyDeleteಜಲನಯನ,
ReplyDeleteನಮ್ಮೆಲ್ಲರ ಮನದ ತಲ್ಲಣವನ್ನು ನಿಮ್ಮ ಕವನ ಸೆರೆ ಹಿಡಿದಿದೆ.