Monday, March 5, 2012

ಇಂಗೇ ಒಸಿ ಸುಮ್ಕೆ


ಚಿತ್ರ: (ಫೇಸ್ ಬುಕ್ ) ವಿಜಯಶ್ರೀ ನಟರಾಜ್ ಕೃಪೆ

ಇಂಗೇ ಒಸಿ ಸುಮ್ಕೆ
ಏನ್ಲ ತಿಂಮ ಏನಿಂಗ್ ಕೂತಿಯಾ?
ತಲೆಮ್ಯಾಗಾಕಾಶಾ ಬಿದ್ದಂಗಿದ್ದೀಯಾ??
ಬೋ ಯೋಸ್ನೆ, ನಿನ್ ಬ್ಯಾಸ್ರ ಏನ್ಲಾ ಬಡ್ಡೆತ್ತದೆ?
ಆ ಕಡೆ ನೋಡುದ್ರೆ ನಿನ್ನಮ್ಮಾನೂ ಸುಮ್ಕುಂತದೆ?

ಇಲ್ಕಲಾ ಸಿಂಗ.. ಬ್ಯಾಸ್ರ ಆಗೋ ಇಸ್ಯಾನೇಯಾ
ಅಮ್ಮಂಗ್ ಗೊತ್ತಾಯ್ತದೆ ಮುಂದಾಗೋ ಇಸಯಾ
ಅನ್ಮಪ್ಪ ಐನಾತಿ ವರ ಕೊಟ್ಟವ್ನೆ ನಮ್ಮಮ್ಮಂಗೆ
ಅವ್ಳೇಳಿದ್ಬವಿಸ್ಯ ಕೇಳಿ ಕುಂತಿವಿ ಎಲ್ಲಾ ಗುಮ್ನಂಗೆ

ನಮ್ ಪೈಕಿ ಕೆಲವ್ರು ಅಗ್ತೀವಂತೆ ಬೆಳ್ದು ಗಡವ
ನೆಲ್ದ್ ಮ್ಯಾಗೇ ಓಡಾಡ್ತೀವಂತೆ ಬಿಟ್ಟು ಮರಗಿಡ್ವ
ಅಂಗೇ ಸಾವ್ರಾರು ವರ್ಸದ್ ಮ್ಯಾಗೆ ನಿಂತು ನೆಟ್ಗೆ
ಅಲ್ದಾಡ್ತೀವಂತೆ ಕಾಡು ಮೇಡು, ಆಗ್ತೀವಂತೆ ರಾಜ್ರಂಗೆ

ಇಸ್ಯಾ ಆಟೇ ಆಗಿದ್ರೆ ಯೋಸ್ನೆ ಇರ್ನಿಲ್ಲ ತಮ್ಮ
ಬೆಳೀತೀವಂತೆ, ಇಡೀತದಂತೆ ಬೇಸಾಯದ್ಗುಮ್ಮ
ಅದ್ಕೆ ಕಾಡ್ಕಡೀತೀವಂತೆ, ನೆಲ ಬಗೀತೀವಂತೆ
ಅಂಗೇ ನಮ್ಗೋರೀನ್ ನಾವೇ ತೋಡ್ಕೋತೀವಂತೆ

ಅಂದ್ಲು ಅಮ್ಮ, ಜಾತಿ ಮತ ಧರ್ಮ ಕರ್ಮ ಬತ್ತದೆ
ಮನ್ಸಾ ಆಗ್ತೀವಿ, ತನ್ನೋರ್ಮ್ಯಾಲೇ ದ್ವೇಸ ಉಟ್ತದೆ
ಪ್ರಾಣಿ ಪಕ್ಸಿ ಏನು ನೆಲಾನೂ ಇಪರೀತ ಎದ್ರಾದೂ
ಬ್ರಮ್ಮ ಮಾಡಿದ್ದು ಬ್ರಮ್ಮನ್ಗೇ ಎಡ್ವಂಟ್ಟಾಗ್ಕುಂತದೂ

ಅದ್ಕೇ ಯೋಸ್ನೆ ಆಗದೆ, ಅಮ್ಮನ್ಮಾತು ಆದ್ರೆ ದಿಟ ?
ಅನ್ಮಂತಣ್ಣ ಎಲ್ಲಾ ಗೊತ್ತಿದ್ದೇ ಆಡವ್ನಾ ಇಂಗೆ ಆಟ?
ಯೋಳ್ಬಿಡ್ತೀನಿ.. ನಾನಿರ್ತೀನಿ ಮರದ್ಮ್ಯಾಲೆ ಇಂಗೇ
ನೀವ್ಬೇಕಾದ್ರೆ ಮನುಸ್ರಾಗಿ ನಾನ್ಕುಂತ್ಕತೀನಿ ಸುಮ್ಗೆ.



36 comments:

  1. ಅದ್ಭುತವಾಗಿ ಬರೆದಿದ್ದೀರಿ ಸರ್.. ಎಲ್ಲಿ೦ದ ಎಲ್ಲಿಗೆ ಲಿ೦ಕ್ ಮಾಡಿದ್ರಿ..:) ವಾವ್..ತು೦ಬಾ ಚನ್ನಾಗಿದೆ..!

    ReplyDelete
  2. ಧನ್ಯವಾದ ವಿಜಯಶ್ರೀ...ಇದು ನಿಮ್ಮ ಫೋಟೋ ಮಂಥಿತ ಭಾವದ ಅಕ್ಷರರೂಪೀ ಪ್ರಕಟಣೆ ಅಷ್ಟೇ... ಶ್ರೇಯ ಚಿತ್ರಕ್ಕೆ... ನನ್ನದು ಹುಲು ಪ್ರಯತ್ನ.

    ReplyDelete
  3. ಹ್ಹ ಹ್ಹ ಹ್ಹಾ... ತುಂಬಾ ಚೆಂದಾಗಿದೆ ಕವನ! ಮಂಗಗಳ ಮಾತುಗಳು ಕೇಳಿ ಬಹಳ ನಗು ಬಂದಿತು!

    ReplyDelete
  4. ಆಜಾದ್ ಸರ್....

    ಮಂಗಗಳ ಸಂಭಾಷಣೆ ಮೂಲಕ ಎಷ್ಟೊಂದು ವಿಷಯಗಳನ್ನು ಬಿಚ್ಚಿಟ್ಟಿದ್ದೀರಿ..ಮಂಗ ನಿಂದ ಮಾನವ ಅಂತಾರೆ....ಆದರೆ ಮಂಗಗಳಿಗಿರುವಷ್ಟು ಬುದ್ದಿ ಮಾನವನಿಗಿಲ್ಲ ಅನ್ಸುತ್ತೆ....ಸುಪರ್ಬ್ ಸರ್.....ತುಂಬಾ ಚೆನ್ನಾಗಿ ಬರೆದಿದ್ದೀರಿ...

    ReplyDelete
  5. ಸಕತ್ತಾಗಿದೆ ಸರ್ :)

    ReplyDelete
  6. ವಾವ್ವ ವಾವ್ವ .... ಸೂಪರ್ ಆಗಿದೆ ಸರ್....

    ReplyDelete
  7. ಆಜಾದಣ್ಣ..
    ಎಲ್ಲಿಂದ್ ತರ್ತೀಯಾ ಇಂಥಾ ವಿಸ್ಯಾನಾ?
    ಪಸಂದಾಗೈತೆ ಕಣಣ್ಣೋ.. !!

    ಅಯ್ಯಾ ಪುಟ್ಟಣ್ಣಾ..
    ಈ ಭಾಸೆ, ವರಸೆ ನಂಗೂ ಕಲ್ಸಿ ಕೊಡಣ್ಣ...

    ReplyDelete
  8. ಅ೦ಗೇ ವಸಿ ಸುಮ್ಕೆ ಪುರಾಣ...ಸ೦ದಾಕೈತೆ ಅಜಾದ್ ಸರ್. ಒ೦ದೊ೦ದ್ ಪದಾವ ಎಲ್ಡೆಲ್ಡು ದಪ ಓದ್ಕೋಬುಕು...ಅಭಿನ೦ದನೆಗಳು.
    ಅನ೦ತ್

    ReplyDelete
  9. superb....

    adyaage yochne maaDteeraa saar...wonderful.....

    ReplyDelete
  10. ಸೂಪರ್ ಕವನ ಬಯ್ಯಾ.. ನೀವೇಳಿದಂಗೆ ನಿಜಕ್ಕೂ ಬ್ರಹ್ಮ0ಗೆ ತಲೆಬೀಸಿ ಆಗೋ ತರನೆ ಮನುಜ ಕುಲ ಸಾಗ್ತಾ ಇದೆ ಅನ್ಸುತ್ತೆ ಅಲ್ವಾ. ಮನುಷ್ಯ ಬೆಳೆಯುತ್ತಾ ಬೆಳೆಯುತ್ತಾ ಅವಸಾನದತ್ತ ಸಾಗುತ್ತಿದ್ದಾನಾ ???

    ReplyDelete
  11. ಪ್ರದೀಪ್ ಧನ್ಯವಾದ...

    ReplyDelete
  12. This comment has been removed by the author.

    ReplyDelete
  13. ವಾಣಿಶ್ರೀ ಧನ್ಯವಾದರೀ ನಿಮ್ಮ ಅಭಿಮತಕ್ಕೆ

    ReplyDelete
  14. ಆಶೋಕ್ ಮಂಗನಿಂದ ಮಾನವ ಆದರೆ ಈಗ ಮತ್ತೆ ಮಂಗನಾಗೋ ಕನಿಷ್ಟ ಸಾಧ್ಯತೆಯನ್ನೂ ಇಲ್ಲದಾಗಿಸುತ್ತಿದ್ದಾನೆ ಅನ್ಸುತ್ತೆ...ಧನ್ಯವಾದ ಪ್ರತಿಕ್ರಿಯೆಗೆ

    ReplyDelete
  15. ಧನ್ಯವಾದ ಸುಬ್ರಮಣ್ಯ...

    ReplyDelete
  16. ಆಶಾವ್ರೇ ಧನ್ಯವಾದ ನಿಮ್ಮ ಅಭಿಮಾನಕ್ಕೆ...

    ReplyDelete
  17. ಸುಶ್ಮಾ, ಚಿತ್ರ ಕಂಡೊಡನೆ ಮನಸಿಗೆ ಬಂದ ಸಾಲುಗಳು...ಸ್ಫೂರ್ತಿ ಚಿತ್ರದ್ದು...ಧನ್ಯವಾದ

    ReplyDelete
  18. ಮಂಗನಿಂದ ಮಾನವ ಎಂಬುದು ಉಕ್ತಿ.. ಆದ್ರೆ ಮಂಗಗಳಿಗೂ ಮನುಷ್ಯರಾಗಲು ಇಷ್ಟವಿಲ್ಲ ಎಂದಾದರೆ ಮನುಷ್ಯ ಇಂದು ಯಾವ ದಾರಿಯಲ್ಲಿದ್ದಾನೆ ಎಂಬುದನ್ನು ಆಲೋಚಿಸಬೇಕಾಗುತ್ತದೆ.
    ತುಂಬಾ ಚೆನ್ನಾಗಿದೆ ಸರ್. ;) ಈ ಭಾಷೆಯನ್ನು ನನಗು ಕಲಿಸಿಕೊಡಿ

    ReplyDelete
  19. ಜಲನಯನ,
    ಮಂಗಗಳೂ ಹೇಸುವ ಜನ್ಮ ಮನುಷ್ಯನದು! ಕಲ್ಪನೆಯ ಕುದುರೆಯನ್ನು ಚೆನ್ನಾಗಿ ಓಡಿಸಿದ್ದೀರಿ. ಉತ್ತಮ ಕವನಕ್ಕೆ ಅಭಿನಂದನೆಗಳು.

    ReplyDelete
  20. ಕವನ ಚೆನ್ನಾಗಿದೆ ಸರ್ ..

    ReplyDelete
  21. ಪ್ರಕಾಶ ಇದೆಲ್ಲಾ ನಿಮ್ಮೆಲ್ಲರ ಅಭಿಮಾನ ಅಷ್ಟೇ ಕಣ್ದೊಡ್ತಮ್ಮಾ....ಹಹಹ ಕಲೀಯಾಕೇನಯ್ತೆ...ಮನ್ಸ್ಮಾಡ್ಬೇಕಾಟೇಯಾ....ಊಂ...

    ReplyDelete
  22. ಸುಗುಣ ಧನ್ಯವಾದ ಕನ್ರೀ....

    ReplyDelete
  23. ಹಹಹ ಅನಂತ್ ಸರ್ ಔದ್ಕನ್ಬುದ್ದಿ ಅಂಗೇ ಸುಮ್ಕೆ ಒಸಿ ಒಗ್ದೆ...ನಿಮ್ಮಾತ್ಗೆ ಟ್ಯಾಂಕೂ...

    ReplyDelete
  24. ದಿನಕರ್ ಧನ್ಯವಾದ ನಿಮ್ಮ ಅಭಿಮಾನ ಹೀಗೇ ಇರ್ಲಿ...

    ReplyDelete
  25. ಚೇತು...ಥ್ಯಾಂಕ್ಸ್...ಮತ್ತೆ ನೀನು ಏನೂ ಬರೆದಿಲ್ಲ ಬ್ಲಾಗಲ್ಲಿ....

    ReplyDelete
  26. ಉಮೇಶ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ..

    ReplyDelete
  27. ಸಂಧ್ಯಾ ನಿಜ ನೋಡಿ.. ಮಂಗಗಳೂ ಹೇಸಿಗೆ ಪಡುವಂತೆ ನಮ್ಮ ವರ್ತನೆ ಆಗ್ತಿದೆ...ಧನ್ಯವಾದ ನಿಮ್ಮ ಅನಿಸಿಕೆಗೆ.

    ReplyDelete
  28. ಸುನಾಥಣ್ಣ ಕಲ್ಪನೆ ಕುದುರೆಗೆ ಪ್ರಚೋದನೆ ವಿಜಯಶ್ರೀ ಹಾಕಿದ ಚಿತ್ರ...ಧನ್ಯವಾದ

    ReplyDelete
  29. ಈಶ್ವರ್ ಧನ್ಯವಾದ ಸರ್..ನನ್ನಲ್ಲಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕಾಗಿ

    ReplyDelete
  30. avarE innoo enen matadkotaavo nammanna nodi. mangana aatakkinta hechuch manushyana upatala.... :)kalpane chenaagide

    ReplyDelete
  31. ಕಪಿ ಮುಖೇನ ಸಮಾಜದ ಅಂಕುಡೊಂಕು ತೋರಿದ ಆಜಾದಣ್ಣಂಗೆ ಜೈ. ಚಿತ್ರಕ್ಕೂ ಸೈ.

    ReplyDelete
  32. ಚೆನ್ನಾಗಿದೆ ಸರ್ ...ಪ್ರಸ್ತುತ ಸಮಾಜಕ್ಕೆ ಹೇಳಿ ಮಾಡಿಸಿದ್ದು !.

    ReplyDelete