ಹಕ್ಕಿ ಮತ್ತು ಗೂಡು
ಬಾರಕ್ಕಾ ಬಾರೇ ಕತ್ತಲಾಯ್ತು ಸೇರೋಣ ಹಾರಿ ಗೂಡು
ಹೊರಟಾಯ್ತು ಇತ್ತ ರವಿತೇಜ ಕೆಂಪಾಗಿಸಿ ಬಾನ ನೋಡು
ಹಗಲೆಲ್ಲ ಹಾರಿ ಹೂವ ಹಣ್ಣ ಹೆಕ್ಕಿ ಬಾಯಲೊಂದು ಕಾಳು
ಮುಗಿಲೆಲ್ಲಾ ತೂರಿ ಬಣ್ಣ ತಿಕ್ಕಿ ಸೂರ್ಯನಿಗೂ ಬೇಕು ಕೂಳು
ಗೂಡಲಿಹವು ರೆಕ್ಕೆಯಿರದ ಕಣ್ಣು ಬಿಡದ ಕೆಂಪು ಕೊಕ್ಕ ಕೂಸು
ಕಾಯುತಿಹವು ಗುಡುಗ, ಹಾವು ಬೇಟೆಗಾಗಿ ಬಲೆಯ ಬೀಸು
ಅಪ್ಪ ಅಮ್ಮ ಹೋಗಿಬರಲು ಎಂದಿನಂತೆ ಋತುಚಕ್ರ ವಲಸೆ
ಕಲಿಯಲೆಂದು ನಾನು ನೀನು ಹೋರಾಟ ಜೀವನದ ವರಸೆ
ಹುಟ್ಟು- ಭೂಮಿ ಜೀವ
ಭೂಮಿಯೊಂದು ಬೆಂಕಿ ಚಂಡು ನೊಂದು
ಸಿಡಿಯಿತಂತೆ ಸೂರ್ಯನಿಂದ ಅಂದು
ವೇಗ ಆವೇಗ ಭರ ನಿರ್ಭರ ತಂತು ಕಕ್ಷೆ
ಆಯ್ತು ಗ್ರಹ ತನಗೊಂದು ಉಪಗ್ರಹ ನಕ್ಷೆ
ಅಣು, ಕಣ ಅನಿಲ ಕರಗಿ ಮೂರ್ಭಾಗ ಜಲ
ಗರ್ಭದಿ ಲಾವ ಗಣಿಸಿರಿ ಮೇಲೆ ಜೀವಸಂಕುಲ
ಹುಟ್ಟಿದ್ದು ಮೊದಲು ಅಣುತುಂಬಿ ಏಕಕೋಶಿ
ರವಿ ತೇಜ ತಿಂದು ಅನಿಲ ಕುಡಿದು ಸಸ್ಯರಾಶಿ
ಬಹುಕೋಶಿ, ಜೀವಿಹೊಂದಿ ಅಂಗಾಂಶ ಹಲವು
ಸೃಷ್ಠಿಯ ವಿಸ್ಮಯ ಜೀವ ವಿಕಸನ ಹಾದಿ ಜಲವು
ಒಂದೆಡೆ ಸಸ್ಯ ಮಗದೊಂದೆಡೆ ಪ್ರಾಣಿ ಸಹಜ
ಬಂದ ಮನುಜ- ಬೇಟೆ, ಹೊಲ ಕಾಳು ಕಣಜ
ಮಳೆ ಬೆಳೆ, ಕೈಗಾರಿಕೆ ಕ್ರಾಂತಿ, ತಂದು ಭ್ರಾಂತಿ
ಇಲ್ಲವಾಗುತಿದೆ ಪ್ರಕೃತಿ ಮನುಕುಲಕೆ ನಿತ್ಯ ಶಾಂತಿ
1. ಹಕ್ಕಿ ಮತ್ತು ಗೂಡು: ತೀರಾ ಚಿಕ್ಕವನಾಗಿದ್ದಾಗ ಅಮ್ಮನ ಗುಕ್ಕಿನ ಹಾಡಿನ ನೆನಪಾಯ್ತು. ಕವನದಲ್ಲಿ ಅಪರೂಪದ ಜೋಗುಳ ನಾದವಿದೆ.
ReplyDelete2. ಹುಟ್ಟು- ಭೂಮಿ ಜೀವ: ಜೀವ ಜಗತ್ತಿನ ಉಗಮದ ಸರಳೀಕೃತ ಚಿತ್ರಣ ಇಲ್ಲಿದೆ. ಮಕ್ಕಳಿಗೂ ವಿಙ್ಞಾನ ಅರ್ಥ ಮಾಡಿಸಬಲ್ಲ ಅಪೂರ್ವ ಶಿಶು ಸಾಹಿತ್ಯ ಶೈಲಿ.
ನನ್ನ ಬ್ಲಾಗಿಗೂ ಸ್ವಾಗತ ಸಾರ್.
ಆಜಾದ್ ಸರ್,
ReplyDeleteವೊವ್ ಸರ್..ಎರಡು ಕವನಗಳು ಸೂಪರ್...
ಜಲನಯನ,
ReplyDeleteವಿಭಿನ್ನ ಶೈಲಿಯಲ್ಲಿ, ವಿಭಿನ್ನ ಸ್ತರದ ಕವನಗಳನ್ನು ರಚಿಸಬಲ್ಲ ನಿಮ್ಮ ಪ್ರತಿಭೆಗೆ ಈ ಕವನಗಳು ಸಾಕ್ಷಿಯಾಗಿವೆ!
ಚೆಂದದ ಕವಿತೆಗಳು ಆಜ಼ಾದಣ್ಣ... ಜೀವವಿಕಸನದ ಬಗ್ಗೆ ವಿಙ್ಞಾನದ ಕವಿತೆ ಮನಸೆಳೆಯಿತು!
ReplyDeleteಬದರಿ ಸರ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
ReplyDeleteಅಶೋಕ್ ಧನ್ಯವಾದ...
ReplyDeleteಸುನಾಥಣ್ಣ ಇದು ನಿಮ್ಮ ಆತ್ಮೀಯತೆ ಅಭಿಮಾನ ಮತ್ತು ತಮ್ಮನ ಮೇಲಿನ ವಿಶ್ವಾಸಕ್ಕೆ ಸಾಕ್ಷಿ....ಧನ್ಯವಾದ
ReplyDeleteಪ್ರದೀಪ್ ಧನ್ಯವಾದ,,,,
ReplyDeleteಕವನಗಳೆರಡೂ ವಿಭಿನ್ನವಾಗಿವೆ. ಮೆಚ್ಚುಗೆಯಾಯಿತು.
ReplyDeleteಧನ್ಯವಾದ ಮಂಜುಳಾ ದೇವಿಯವರೇ....
ReplyDeleteಸುಂದರ ಕವನಗಳು, ಇಷ್ಟವಾಯಿತು ಸಾರ್ ..
ReplyDeleteಧನ್ಯವಾದ ಈಶ್ವರ್ ಪ್ರಸಾದ್.. ನಿಮ್ಮ ಆಗಮನಕ್ಕೆ ಧನ್ಯವಾದ...
ReplyDeleteಎರಡೂ ಕವಿತೆಗಳು ಸರಳವಾಗಿ ಕ೦ಡರೂ ಗ೦ಭೀರವಾದ ಚಿ೦ತನೆಯ ತಳಹದಿ ಇದೆ. ಶುಭಕಾಮನೆಗಳು, ಅಜಾದ್ ಸರ್.
ReplyDeleteಅನ೦ತ್
ಅನಂತ್ ಸರ್ ಬಹಲ ದಿನಗಳ ನಂತರ ನಿಮ್ಮ ಶುಭಾಶಿರ್ವಾದ...ಧನ್ಯವಾದ...
ReplyDelete