Foto ಕೃಪೆ: ಅಂತರ್ಜಾಲ
ಓಗಿದ್ದೆ ಬೋ ದಿನದ್ಮ್ಯಾಕ್ಕೆ ಅಳ್ಳಿಗೆ ಬಸ್ನಾಗೆ
ಕೆ. ಕ್ರಾಸ್ನಾಗ್ ಇಳ್ದವ್ನೇ ನಡ್ದೆ ಕಂಮ್ದಳ್ಳಿಗೆ,
ಗದ್ದೆ, ಒಲ ಮಾವಿನ್ತೋಪು, ಕೆರೆ ಕೋಡಿ
ನಮ್ಮಳ್ಳಿ ಅಂದ್ರೇನೇ ಏನೋ ಒಂಥರ ಮೋಡಿ,
ಬಯ್ಲಾಗೆ ಮೇಯ್ತಾ ಇದ್ದೋ -ಮ್ಯಾಕೆ, ಕುರಿ
ಎತ್ಗೋಳು, ನಾಲ್ಕಾರೆಮ್ಮೆ, ಏರಿದ್ವು ಏರಿ
ಎಗ್ಲ್ ಮ್ಯಾಗ್ ಪಟ್ಟೆ ಟವ್ಲಾಕ್ಕೊಂಡ್
ಚಡ್ಡಿ ಲಾಡಿ ಮಾರುದ್ದ್ ಬಿಟ್ಕೊಂಡ್
ಎಲ್ಲಾ ಮೇಯಿಸ್ತಿದ್ದ ಎಂಕ್ಟನ್ಮಗ ಚಾಮಿ
ಮೊಣ್ಕಾಲ್ಗಂಟ ಸೀರೆ ಕಟ್ಕೊಂಡ್
ಬತ್ತದ್ಪೈರು ನಾಟಿ ಆಕ್ತಿದ್ಲು ಸುಬ್ರಾಮಿ
ಅಟ್ಟಿ ಅತ್ರ ಬತ್ತಿದ್ದಂಗೆ ಘಮ್ ಅಂತ ವಾಸ್ನೆ
ನನ್ನಜ್ಜಿ ನಾಗವ್ವ ಸಂಬ್ರಮ್ದಾಗೆ ಕೋಲೂರ್ಕಂಡ್
ನೋಡಾಕ್ಬಂದ್ಲು ಕುಸ್ಯಾಗಿ ಎತ್ತ್ಯಾಡ್ಸಿದ್ ಕೂಸ್ನೆ
ಮಕ ಇಸ್ಟಗ್ಲಾ ಮಾಡ್ಕಂಡು ಬೊಚ್ಬಾಯ್ ಬಿಟ್ಕಂಡ್
ಅಂದ್ಲು, ಬಾಲ ಮಗ ಬಾಲ, ಏನೀಪಾಟೀ ಸೊರ್ಗೀಯಾ?
ವಜನ್ನಿಳ್ಸಾಕೆ ಏರೋಬಿಕ್ಕು ಮಾಡ್ತೀನಿ ಏನಿಂಗಂದೀಯಾ?
ವಾಸ್ನೆ ಎಳ್ಕೊಂಡೋಯ್ತು ನನ್ನ ಅಡ್ಗೆ ಮನ್ಗೆ
ಕೈಕಾಲ್ತೊಳ್ದೋನೆ ಎತ್ಕೊಂಡೆ ಊಟದ್ತಣ್ಗೆ
ಅವ್ವ ಎತ್ಕೊಂಡ್ಬಂದ್ಲು ಮಂಕ್ರಿ ತುಂಬಿ ಬಿಸ್ಬಿಸಿ
ಮುದ್ದೆ
ಜೊತ್ಗೆ ಅಸ್ಯವ್ರೆಕಾಳ್ಸಾರು, ಉಣ್ಸೆ ಉಳಿ ಮಾವಿನ್ಗೊಜ್ಜು
ಚಪ್ಪರಿಸ್ಕೊಂಡ್ ತಿಂದೆ ಗಡದ್ದಾಗಿ ನಾಕ್ನಾಕ್ ಮುದ್ದೆ
ಇಂಗೇ ತಿಂದ್ರೆ ಇರೊಲ್ಲ ಸಕ್ರೆ ಕಾಯ್ಲೆ ಬರೊಲ್ಲ ಬೊಜ್ಜು
ಜಲನಯನ,
ReplyDeleteರಾಜರತ್ನಂ ಅವರ ಪುನರವತಾರ ಅನಿಸುವಂತಹ ಕವನ. ಖುಶಿಯಿಂದ ಹಾಡಿಕೊಳ್ಳಬಹುದು.
ಸುನಾಥಣ್ಣ ...ಧನ್ಯವಾದ ನಿಮ್ಮ ಆಶೀರ್ವಾದ ಗೆಳೆಯರ ಪ್ರೋತ್ಸಾಹ ಸಾಕು... ರಾಜರತ್ನಂ ರತ್ನಸಾಗರ... ನನಗೆ ಅದರಲ್ಲಿ ಬಿಂದುವಾಗುವ ಅರ್ಹತೆಯೂ ಇದೆಯೋ ಇಲ್ಲವೋ ಅನುಮಾನ....
ReplyDeleteಬೋ ಸಂದಾಗೈತೆ ಬಯ್ಯಾ ಪದ್ಯ..:)
ReplyDeleteahaaa tumbaa chennaagide kavana..baayalli neerurisuvashTu...
ReplyDelete:-)
malathi S
ಮನಸಿಗೆ ಈಗ್ಲೇ ಬೋ ಪಸಂದ್ ಅನ್ಸಿದ್ರೆ... ರಾಗಿ ಮುದ್ದೆ ಅಸ್ಯವ್ರೆಕಾಳ್ಸಾರು ಉಣ್ಣಾಕಿಕ್ಲೇಬೇಕು ಒಂದಿನ....ಹಹಹ.. ಥ್ಯಾಂಕ್ಸೂ ಕಣ್ತಂಗಿ...
ReplyDeleteಮಾಲತಿ ನಿಮಗೆ ಥ್ಯಾಂಕ್ಸ್ ಹೇಳ್ಬೇಕು ಈ ಕವನ ಹುಟ್ಟೋಕೆ ನೀವೇ ಕಾರಣ...
ReplyDeleteನಮ್ಮ ದಕ್ಷಿಣ ಕನ್ನಡದವರಿಗೆ ರಾಗಿ ಮುದ್ದೆ ಗೊತ್ತೇ ಇಲ್ಲ.. ನಾನೂ ಸ್ವಲ್ಪ ಮುದ್ದೆ ಬ್ಯಾಟಿಂಗ್ ಮದ್ದೂರು ಕಡೆ ಹೋದಾಗ ಮಾಡುವುದುಂಟು..
ReplyDeleteಭಾರೀ ಖುಷಿ, ಗ್ರಾಮ್ಯ ಕನ್ನಡದ ಬಳಕೆ ತುಂಬಾ ಖುಷಿಯಾಗಿದೆ ಓದಲು..
ಈಶ್ವರ್ ಸರ್.. ಮುದ್ದೆ ಊಟ ನಮಗೆಲ್ಲಾ ಬಹಳ ಪ್ರಿಯ...ನೀವೂ ಸವಿದಿದ್ದೀರಿ...ಅಯಾ ಪ್ರದೇಶದ ಬೆಳೆಗಳಿಗೆ ಹೊಂದಿಕೊಂಡಂತೆ ಬಂದ ಆಹಾರ ಪದ್ಧತಿ ನಮ್ಮದು..ಹಾಗಾಗಿ ಇದು ಸಹಜ... ನಾನು ಮಂಗಳೂರಲ್ಲಿದ್ದಾಗ ..ಕಲ್ತಾಪ..ಗೋಳಿ ಬಜ್ಜಿ ಬಹಳ ಇಷ್ಟಪಟ್ಟು ತಿಂತಿದ್ದೆ... ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ReplyDeleteಸೂಪರ್ ಮಸ್ತ್ ಬರೆದಿದ್ದೀರಿ... ಮುದ್ದೇ ಸಾರು ಊಟ ಮಾಡಿದ ಹಾಗೇ ಆಯ್ತು ಸರ್
ReplyDeleteಅಜಾದ್, ನಿಮ್ಮ ಹಳ್ಳಿ ಪದ್ಯ ಜೊತೆಗೆ ಕೊನೆಯಲ್ಲಿ ಪಕ್ಕಾ ಹಳ್ಳಿ ಊಟದ ಸವಿ ಹಾಗೇ ಉಂಡಂಗೆ ಆಯ್ತು...
ReplyDeleteಕೆ ಕ್ರಾಸು , ಕಂಬ್ದಳ್ಳಿ, ತಣಿಗೆ [ಊಟದ ಕಂಚಿನ ತಟ್ಟೆ ], ಬಿಸ್ಬಿಸಿ ಮುದ್ದೆ ಜೊತ್ಗೆ ಅಸ್ಯವ್ರೆಕಾಳ್ಸಾರು,ಇದೇನು ನಮ್ ಮಂಡ್ಯ ಜಿಲ್ಲೆ ಪರಿಸರ ಗಮಗುಡುತ್ತಿದೆ. ಕವಿತೆ ಸೂಪರ್. ಗ್ರಾಮೀಣ ಸೊಗಡಿನ ಭಾಷೆ ಸೂಪರ್ . ಜೈ ಅಜಾದ್ ಸರ್
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಸುಗುಣ ಧನ್ಯವಾದ
ReplyDeleteಅಸ್ಯವ್ರೆ ಕಾಳ್ಸಾರಿನ್ಜೊತೆಗಿದ್ರೆ ಮುದ್ದೆ
ಉಂಡವ್ನಿಗೆ ಬರುತ್ತೆ ಸಂತೇಲೂ ನಿದ್ದೆ
ಇದು ನನ್ನ ಅನಿಸಿಕೆ....
ಶಿವು ಬಹಳ ಪರೂಪ ಆಗಿಬಿಟ್ರಿ... ಹೌದು ಮುದ್ದೆ ಸವಿನೇ ಬೇರೆ...ಧನ್ಯವಾದ ಬಂದುದಕ್ಕೆ ಪ್ರತಿಕ್ರಿಯೆಗೆ
ReplyDeleteಇದೆಲ್ಲಾ ನನ್ನ ಕಲ್ಪನೆ ಹೆಸರುಗಳು... ಆದ್ರೂ ನನಗೆ ಮೊದಲ ದುಡಿಮೆಯ ಅನ್ನ ನೀಡಿದ್ದು ಮಂಡ್ಯ ಬುದ್ದಿ... ಅದ್ಕೇಯಾ ಮಂಡ್ಯ ಅಂದ್ರೆ ಒಸಿ ಅಂಗೇ ಒಂಥರಾ ತವ್ರಿನ್ ಗಮ್ಲು.... ತಣಿಗೆನ ನಮ್ಮಲ್ಲೂ (ಬೆಂಗಳೂರು, ಕೋಲಾರ, ತುಮಕೂರು) ಬಳಕೆ ಮಾಡ್ತಾರೆ.. ಧನ್ಯವಾದ ಬಾಲು... ಅಂಗೇ ಒಂದಪಾ ಓಗ್ಮಾ ನಮ್ ಮಂಡ್ಯ ಸುತ್ಮುತ್ತಾ ಏನಂತೀರಾ????
ReplyDeleteಆಹಾ! ನಾನೂ ಬಾಯಿ ಚಪ್ಪರಿಸುತ್ತಲೇ ಕವನ ಓದಿದೆ! ಹಳ್ಳಿಗೆ ಹೋಗಿ ಬಂದಂಗೆ ಆಯ್ತು! ಅವರೇಕಾಯಿ ಸಾರಿನಲ್ಲಿ ಅದ್ದಿದ ಆ ರಾಗಿಮುದ್ದೆ ಫೋಟೋ ನೋಡಿದರಂತೂ.. ಹೊಟ್ಟೆ ಮತ್ತೆ ಹಸಿವಾಗಲು ಶುರುವಾಯಿತು!
ReplyDeleteಪ್ರದೀಪ್ ನನ್ನ ಹಾಗೆ ಮುದ್ದೆ ಪ್ರಿಯರು...ಮತ್ತೊಮ್ಮೆ ಸೇರಿದಾಗ ಹೋಗಿಯೇ ಬಿಡೋಣ ಮುದ್ದೆ ತಿನ್ನೋಕೆ ಎಲ್ಲಾದ್ರೂ...
ReplyDeleteಧನ್ಯವಾದ
ಸುನಾಥಣ್ಣ ಈ ಪ್ರತಿಕ್ರಿಯೆ ನೀವು ಹಾಕಿದ್ದ ಮೊದಲನೇ ಪ್ರತಿಕ್ರಿಯೆ ಈ ಲೇಖನಕ್ಕೆ... ಎಲ್ಲಿಹೋಯ್ತು..???!!!
ReplyDeleteಮುದ್ದೆ ಸರ್ವ ಶಕ್ತ ಸುಗ್ರಾಸ ಭೋಜನ.
ReplyDeleteಯಾವತ್ ಹಳ್ಳಿ ಬದುಕಿಗೆ ವಾಪಸ್ಸಾಗ್ತೀವೋ ಕಣಣ್ಣ!
ಬದರಿ ಸರ್...ಧನ್ಯವಾದ... ಅಳ್ಳಿಕಡೀಕ್ ನಾನೂ ಓಗ್ದೆ ಬೋ ವರ್ಸ ಆಯ್ತ್ ಕಣಣ್ಣೋ...
ReplyDeleteಗಡದ್ದಾಗಿ ಹೊಡ್ದು ನಾಕ್ನಾಕು ಮುದ್ದೆ
ReplyDeleteಹೊಟ್ಟೆ ತಣ್ಗಾಗಿ ಹಾಸ್ಗೀಲ್ ಬಿದ್ದೆ
ಅಂತ ಕವನ ಓದಿ ಕನ್ವರಿಸ್ತಿದ್ದೆ!!!!
ಅಜಾದ್ ಭಯ್ಯಾ, ಸಕತ್ತಾಗಿದೆ!!!
CHENNAAGIDE AZADANNA
ReplyDeleteವಾಹ್ ವಾಹ್ ಪ್ರವೀಣ..
ReplyDeleteಮುದ್ದೆ ತಿಂದ್ನಿದ್ದೆಗೋದ್ರೆ ನೀನೇ ಭಾಗ್ಯಶಾಲಿ.....
ಥ್ಯಾಂಕ್ಸೂ ಸೀತಾರಾಮಣ್ನ,,,,
ReplyDeleteಆಜಾದ್ ಸರ್,
ReplyDeleteನಾನು ಕುಂದಾಪುರದವನು...ನಮಗೆ ಈ ಮುದ್ದೆ ತಿಂದೆ ಅಭ್ಯಾಸ ಇಲ್ಲ....ಹೀಗೆ ಬೆಂಗಳೂರಿನ ಸ್ನೇಹಿತರೊಬ್ಬರ ಮನೆಗೆ ಹೋದಾಗ ಮುದ್ದೆ ಹಾಕಿ ಕೊಟ್ಟಿದ್ರು.....ತುಂಬಾ ಹೊತ್ತಿನವರೆಗೆ ಅದನ್ನು ಹೇಗೆ ತಿನ್ನೋದು ಅಂತಾನೆ ಗೊತ್ತಾಗಿರಲಿಲ್ಲ...ಅದ್ನಾ ಚೂರು ಮಾಡಿ ತಿನ್ನೋದಾ ಅಥವ ನುಂಗೋದಾ ಅಂತಾ....ನನ್ನ ಗೆಳೆಯ ಅದ್ನಾ ನುಂಗಿ ಬಿಡಬೇಕು ಅಂದಾಗ ಮತ್ತೆ ತಲೆಬಿಸಿ ಆಗಿದ್ದು ನಿಜ...ಇಷ್ಟ ದೊಡ್ಡ ಮುದ್ದೇನ ನುನ್ಗೋದ್ ಹೇಗೆ ಅಂತ ???....ಹಹಹಹ.......ಉತ್ತಮ ಕವನ ಸರ್...ಇಷ್ಟ ಆಯಿತು ....