(ಚಿತ್ರಗಳು: ಅಂತರ್ಜಾಲದ ಕೃಪೆ)
ಅಪ್ಪಾ...
ಏನ್ಮಗಾ...?
ನಾನು ಓಟ್ ಆಕಾದು ಇನ್ನೂ ಎಷ್ಟ್ ವರ್ಷಕ್ಕೆ?
ಯಾಕ್ ಕಣ್ಮಗಾ?
ಮೊಬೈಲು ಪೋನ್ ನೋಡಾಕೆ ಬರ್ದೇ ಇರೋರ್ಗೆ ಓಟ್ ಆಕಾಕೆ....
ಅದ್ಯಾಕ್ಮಗಾ ಈವಾಗೆಲ್ಲಾರ್ಗೂ ಬತ್ತದೆ ಅದು..ಓದಿರ್ಲಿ ಇಲ್ದೇ ಇರ್ಲಿ...
ಮತ್ತೆ ಅದೇನೋ ಇಸ್ಸಿಸ್ಸಿ ನೋಡ್ತಾ ಇದ್ರಂತೆ ನಮ್ ಇದಾನ್ ಸೌದ್ದಾಗೆ ಮಿನಿಸ್ಟ್ರು..?
ನಂಗೊತ್ತಿಲ್ಲ ಮಗ....
ಅಪ್ಪಾ....
ಸಾಸಕರು ಇದಾನ್ಸೌದ್ದಾಗೆ ಪರ್ಮಾಣ ವಚ್ನ ತಗೋತಾರಲ್ವಾ?
ಔದ್ಕಣ್ಮಗಾ? ದೇವ್ರ ಎಸರ್ನಾಗೆ- ಕಪಟ ವಂಚ್ನೆ ಏನೂ ಇಲ್ದೇ
ಜನ್ರ ಇತ ಕಾಪಾಡೋ ಕೆಲ್ಸ ಮಾಡ್ತೀವಿ ಅಂತ.
ಮತ್ತೆ ದೇವಸ್ತಾನ್ದಂಗಿರೋ ಇದಾನ್ಸೌದ್ದಾಗೆ
ಇಸ್ಸಿಸ್ಸಿ ನೋಡ್ತಿದ್ರಲ್ಲಾ... ಪರ್ಮಾಣ್ ಮುರ್ದಂಗಲ್ವಾ?
ನಂಗೊತಿಲ್ಲ ಮಗಾ..??
ಅಪ್ಪಾ...
ಏನ್ಮಗಾ..?
ನೀನೂ ಎಷ್ಟ್ ಕಿತ ಓಟ್ ಮಾಡಿದ್ದೀಯಾ?
ಒಂದಾರ್ ಏಳ್ ಕಿತ......
ನಿಂಗೆ ಮೊಬೈಲ್ ಪೋನು ನೋಡಾಕ್ಕೆ ಬರೊಲ್ಲ ಅಲ್ವಾ?
ಊಂ ಕಣ್ಮಗಾ ಗೇಯ್ಮೆ ಮಾಡ್ಕಂಡ್ ಇದೆಲ್ಲಾ ಎಲ್ಲಿ ಕಲೀಮಾ??
ಅಂಗಾರೆ ಈ ಕಿತ ಎಲೆಕ್ಸನ್ಗೆ ನಿಂತ್ಕ ಗೆದ್ದೇ ಗೆಲ್ತೀಯಾ
ಆಮ್ಯಾಕ್ಕಾದ್ರೂ ಪೋನ್ ನೋಡೋದು ನಾನ್ಕಲೀದಿದ್ರೆ ಆಗಾಣಿಲ್ಲ..
ಅಂಗಾರೆ...ನೀನೂ ಇಸ್ಸಿಸ್ಸಿ ನೋಡಿಯಾ..??
ನಂಗೊತ್ತಿಲ್ಲ ಮಗ.
ha ha ha soooooooooooooooper!!!!!!!!!!!!!
ReplyDeleteಭಾಷೆಯ ಸೊಗಡು ಬಲು ಚೆನ್ನಾಗಿದೆ ಸರ್..
ReplyDeleteಜೊತೆಗೆ ಎಲ್ಲೊ ಒಂದು ಕಡೆ ಪ್ರಜ್ಞಾವಂತ ನಾಗರಿಕರಿಗೆ ಕಾಡೋ ಪ್ರಶ್ನೆ ಮಗನ ಮಾತಲ್ಲಿದೆ....
ಚೆನ್ನಾಗಿದೆ...
ಹಳ್ಳಿಯ ಮುಗ್ಧ ರೈತ ಅಪ್ಪ, ದೇಶದ ಭವಿಷ್ಯದ ಕನಸು ಮಗು, ಇವರಿಬ್ಬರ ಸಂಭಾಷಣೆ..............
ReplyDeleteಅಜಾದ್ ಭಯ್ಯಾ, ಮೊಬೈಲ್ ಬಳಸಲು ಬಾರದ ರಾಜಕಾರಣಿ!!!!! ಯೋಚಿಸಲೇಬೇಕಾದ ವಿಷಯ.
ನಿಜ, ದುರಂತ ! ವ್ಯಂಗ್ಯ ತುಂಬಾ ಮಾರ್ಮಿಕವಾಗಿದೆ..
ReplyDeleteನೀಲಿ ಚಿತ್ರ ಕಾಣದಂತೆ ಎನ್ನ ಕುರುಡನ ಮಾಡಯ್ಯ ತಂದೆ!
ReplyDeleteನೀಲಿ ಮಾತು ಕೇಳದಂತೆ ಎನ್ನ ಕಿವುಡನ ಮಾಡಯ್ಯ ತಂದೆ!
ಪೋಲಿ ಮಾತು ಆಡದಂತೆ ಎನ್ನ ಮೂಕನ ಮಾಡಯ್ಯಾ ತಂದೆ!
ಬಾಲು ಧನ್ಯವಾದ... ಸುನಥಣ್ನನ ಮನೋಕಾಮನೆ ನೋಡಿ.... ಇವರು ಪರ್ಫೆಕ್ಟ್ ಅನ್ಸೊಲ್ವಾ ಓಟ್ ಹಾಕಿ ಗೆಲ್ಸೋಕೆ.....ಹಹಹ
ReplyDeleteಸುಶ್ಮಾ ಧನ್ಯವಾದ...ಪ್ರಜ್ಞಾವಂತ ನಾಗರಿಕರಿಗೆ ಕಾಡೋ ಪ್ರಶ್ನೆ ಬರೀ ಅಲ್ಲಿಗೇ ನಿಂತಿರೋದೇ ನಮ್ಮೆಲ್ಲರ ದೌರ್ಭಾಗ್ಯ... ಅಲ್ವಾ..?? ಸಹಿಸ್ಬೇಕು..ಎಲ್ಲರೂ ಜಾಗೃತರಾಗೋವರೆಗೂ...
ReplyDeleteಪ್ರವೀಣ ಧನ್ಯವಾದ... ಜಾತಿ, ಮೀಸಲಾತಿ, ಧರ್ಮ, ಪಂಗಡ ಅಂತ ಓಟು ಹಾಕೋ ಕಾಲ ಅಥವಾ ಜನ ಇರೋವರೆಗ್ಯ್ ತಪ್ಪಿದ್ದಲ್ಲ ತಮ್ಮಯ್ಯ ಈ ಪೀಡನೆ,,,
ReplyDeleteಈಶ್ವರ್ ಸರ್ ಧನ್ಯವಾದ... ಎಲ್ಲಾ ಯೋಚಿಸ್ಬೇಕು ಕಾರ್ಯತತ್ಪರಾಗಬೇಕು....
ReplyDeleteಸುನಾಥಣ್ಣ... ಇದನ್ನ ಹಾಗೆ ಮಾಡೋರು ಕೋರಿಕೋಬೇಕು..ನಮಗೆ ಆ ಮನೋಧರ್ಮ ಗಟ್ಟಿಯಾಗಬೇಕು ಅಲ್ವಾ..?? ಒಳ್ಳೆ ಆಶಯ .. ಧನ್ಯವಾದ.
ReplyDeleteಆಜಾದೂ...
ReplyDeleteನಕ್ಕು ಹಾಸ್ಯವೆಂದಕೊಂಡರೂ..
ಎಲ್ಲೋ ಒಂದು ಕಡೆ ಚುಚ್ಚುತ್ತದೆ...
ಈ ಅಪ್ಪ/ ಮಗು ಸೀರಿಯಲ್ ಮಸ್ತ್ ಇರ್ತದೆ... ಜೈ ಹೋ !!
ಹಳ್ಳಿಯ ಮುಗ್ದ ಭಾಷೆಯಲ್ಲಿ ಮುಟ್ಟಿ ನೋಡಿಕೊಳ್ಳುವಂತ ಸಂದೇಶ ಕೊಟ್ಟಿದ್ದಿರಿ.. ಚೆನ್ನಾಗಿದೆ
ReplyDeleteಆಜಾದ್ ಸರ್.....
ReplyDeleteಚೆನ್ನಾಗಿದೆ.... ತಮಾಷೆ ಮಾಡಿ ಹೇಳಿದರೂ , ಕೋಪದಲ್ಲಿ ಹೇಳಿದರೂ ಸತ್ಯ ಸತ್ಯಾನೆ ಅಲ್ವಾ....ಈ ನಿಮ್ಮ ಅಪ್ಪ-ಮಗನ ಸಂಭಾಷಣೆ ಸರಣಿ ಚೆನ್ನಾಗಿದೆ....
ಪ್ರಕಾಶೂ ಧನ್ಯವಾದ ಕಣೋ...
ReplyDeleteಮೊಬೈಲ್ ಬಳಸಿದ್ದು ನಾನು ಕುವೈತಿಗೆ ಬಂದಮೇಲೆನೇ...ಛೇ ಒಂದು ಎಲೆಕ್ಶನ್ನಿಗೆ ನಿಲ್ಲೋ ಚಾನ್ಸ್ ಮಿಸ್ ಆಯ್ತು ಹಹಹಹ
ಸಂಧ್ಯ ಧನ್ಯವಾದ...ನಮ್ಮ ಎಷ್ಟೋ ಜಿಜ್ಞಾಸೆಗಳಿಗೆ ನಮ್ಮಲ್ಲಿ ಕೆಲವೊಮ್ಮೆ ಉತ್ತರ ಸಿಗೊಲ್ಲ ಮಕ್ಕಳು ಕೆಣಕೋದು ಬಿಡೊಲ್ಲ...ಆದ್ರೆ ಉತ್ತರ ಕಂಡುಕೊಂಡು ಅವರಿಗೆ ತಿಳಿವಳಿಕೆ ನೀಡಬೇಕಾದ್ದು ನಮ್ಮ ಕರ್ತವ್ಯ..
ReplyDeleteಅಶೋಕ್...ನಿಮ್ಮ ಪೋಸ್ಟ್ ಓದೋದ್ರೊಳಗೆ ಬಾಲು ಕಾಮೆಂಟ್ ಬಿತ್ತು... ಹಹಹ ಧನ್ಯವಾದ ನಿಮ್ಮ್ ಅಭಿಪ್ರಾಯಕ್ಕೆ
ReplyDeleteಅಜಾದ್,
ReplyDeleteನಂಗೊತ್ತಿಲ್ಲ ಮಗು, ನಿಜಕ್ಕೂ ತುಂಬಾ ಒಳ ಅರ್ಥವುಳ್ಳ ಮೇಲ್ಮೆ ನೋಟದಲ್ಲಿ ವ್ಯಂಗ್ಯ ತುಂಬಿರುವ ಚುಟುಕೆಂದೇ ನನ್ನ ಭಾವನೆ. ಇದು ಆಗಾಗ ಬರುತ್ತಿರಲಿ....
ಧನ್ಯವಾದ ಶಿವು...ಚುರುಕು ಮುಟ್ಟಿಸೋ ಚುಟುಕುಗಳು .ಅಂತೀರಾ..??
ReplyDeleteಚೆನ್ನಾಗಿದೆ ಸರ್.
ReplyDeleteಈ ಮೊನಚು ಅವರಿಗೂ ಅರ್ಥವಾಗಿದ್ರೆ ಚೆನ್ನಿತ್ತು.
ನಂಗೆ ಮೊಬೈಲ್ ನಲ್ಲಿ ಚಿತ್ರ ನೋಡಕ್ ಬರಲ್ಲ.
ಎಲೆಕ್ಸನ್ ಗೆ ನಿಲ್ಲನ ಅಂತ :)
ಸ್ವರ್ಣಾ
ಸ್ವರ್ಣ....ಸೂಪರ್...ನನ್ನ ಓಟು ಖಂಡಿತಾ...ನಿಮಗೇ... ಧನ್ಯವಾದ ನಿಮ್ಮ ಅಭಿಮತಕ್ಕೆ
ReplyDeleteThis comment has been removed by a blog administrator.
ReplyDelete