Friday, January 27, 2012



ಸಹಾಯ ಮಾಡೋದು ಕೆಲವೊಮ್ಮೆ..???!! ಆದ್ರೂ ಪರ್ವಾಗಿಲ್ಲ..
ನನ್ನ ಎಮಿರೇಟ್ಸ್ ಏರ್ ಅನುಭವ ನಿಮ್ಮೊಂದಿಗೆ ಹಂಚಿಕೊಂಡಾಗ ಯಾರೋ ಸ್ನೇಹಿತರು ಚಾಟಲ್ಲಿ ..”ಏನ್ಸಾರ್ ಹೆಲ್ಪ್ ಮಾಡೋಕೆ ಹೋಗಿ ಎಂತಹಾ ಎಡವಟ್ಟಿಗೆ ಸಿಕ್ಕಿ ಹಾಕ್ಕೊಂಡ್ರಿ..??!! ತುಂಬಾ ಟೆನ್ಸ್ ಆಗಿಬೇಕು ಅಲ್ವಾ??”
ನಾನಂದೆ “ಇಂಥ ಅನುಭವ ಒಮ್ಮೆ ತುಂಬಾ ಹಿಂದೆ ಆಗಿದೆ, ಆದರೆ ಅದು ನಮ್ಮ ದೇಶದಲ್ಲಿ ಆದದ್ದು..ಹಾಗಾಗಿ ಸ್ವಲ್ಪ ಟೆನ್ಸ್ ಆದ್ರೂ - ಅನುಭವ ಧೈರ್ಯ ತುಂಬಿತ್ತು” ಅಂತ ಹೇಳಿದ್ದೆ.
“ಅದನ್ನೂ ಹಂಚ್ಕೋಬಹುದಲ್ಲ ನಮ್ಮ ಜೊತೆ” ಅಂದಿದ್ರು ಅವರು.ಈಗ ಏಕಾಏಕಿ ಆ ಯೋಚನೆ ಬಂತು. ಅದನ್ನೇ ಇಲ್ಲಿ ನಿಮ್ಮ ಜೊತೆ ಹಂಚ್ಕೋತಾ ಇದ್ದೇನೆ.
ಸುಮಾರು ಇಪ್ಪತ್ತೈದು ವರ್ಷಕ್ಕೂ ಹಿಂದಿನ ಘಟನೆ ಇದು........................................
ಬೆಂಗಳೂರಿಂದ ಹೌರಾಗೆ ಹೊರಟ ಕೋರಮಂಡಲ್ ನಲ್ಲಿ ವಿಜಯವಾಡ ಬಿಟ್ಟ ಮೇಲೇ ನನ್ನ ಆರ್ ಎ ಸಿ ಕನ್ಫರ್ಮ್ ಆಗಿ ಬರ್ತ್ ಸಿಕ್ಕಿದ್ದು. ಹೌರಾದಿಂದ ಮತ್ತೆ ಇಂಫಾಲ್ ಗೆ ಫ್ಲೈಟ್ ಹಿಡಿಯೋದು ಅಂತ ನಿರ್ಧರಿಸಿ ಬೆಂಗಳೂರಲ್ಲೇ ಟಿಕೆಟ್ ಸಹಾ ಮಾಡಿಸಿದ್ದೆ. ಸರಿ ಲಗೇಜ್ ಎಲ್ಲಾ ಸಾಗಿಸ್ಬೇಕು ಅಂತ ಇದ್ದಾಗ ಇನ್ನೂ ತಮ್ಮ ಬರ್ತ ಕಂಫರ್ಮ ಆಗಿರದ ನನ್ನ ಆರ್ ಎ ಸಿ ಜೊತೆಗಾರ ಕನ್ನಡದವರು ಒಬ್ರು, “ನೀವು ನಿಮ್ಮ ಸೀಟಿಗೆ ಹೋಗಿ ನೋಡಿ ಅಲ್ಲಿ ಒಂದು ಲಗೇಜ್ ಇಟ್ಟು ಬನ್ನಿ, ಮತ್ತೆ ನಾನೂ ನೀವು ಮಿಕ್ಕ ಲಗೇಜ್ ಇಟ್ಟು ಬರೋಣ”.....ಅಂದ್ರು...
ನಾನು ಒಂದು ಸೂಟ್ ಕೇಸ್, ಸರಪಳಿ ಮತ್ತು ಬೀಗ (ಇದು ಸಾಮಾನ್ಯವಾಗಿತ್ತು, ಆಗ...ಈಗಲೂ ಸಹಾ..ಇಲ್ಲಾಂದ್ರೆ ಸೂಟ್ ಕೇಸೇ ಮಾಯ ಆಗೋದು ಮಾಮೂಲು..!!!) ಎಲ್ಲಾ ತೆಗೆದುಕೊಂಡು ಒಂದು ಡಬ್ಬದ (ಕೋಚ್) ನಂತರದ ಡಬ್ಬ (ಕೋಚ್) ದಲ್ಲಿದ್ದ ಸೀಟು/ಬರ್ತ್ ಗೆ ಹೋಗಿ ಅಲ್ಲಿಟ್ಟು ಪಕ್ಕದಲ್ಲಿದ್ದ ಒಬ್ಬ ಮಹನೀಯರಿಗೆ
Can I leave this here and get my other luggage, please can U keep a watch on this? I will chain it and lock it also (ಲಗೇಜ್ ಇಲ್ಲಿಟ್ಟು ನನ್ನ ಮಿಕ್ಕ ಲಗೇಜ್ ತರಬೇಕು ಸ್ವಲ್ಪ ಇದನ್ನ ಗಮನಿಸ್ತೀರಾ ಸರ್) ಎಂದೆ.
ಆತ “OK no problem ..go and come..” ಅಂತ ಹೇಳ್ದ. ಜಲಬಾಧೆ ಬೇರೆ ಹೆಚ್ಚಾಗಿತ್ತು.. ಅವಸರದಲ್ಲಿ ರಿಯಲೈಸ್ ಆಗಿರ್ಲಿಲ್ಲ.. ಈಗ ಬರ್ತ್ ಸಿಕ್ಕು ನಿರಾಳ ಆದಮೇಲೆ.. ಅದೂ.. ಈಗ ನನ್ನ ನೋಡು ಅಂತ ಎಚ್ಚರಿಸೋಕೆ ಶುರು ಹಚ್ಕೊಳ್ತು. ಆ ಕೋಚ್ ನ ಕಡೆಯಲ್ಲಿದ್ದ ಟಾಯ್ಲೆಟ್ಟಿಗೆ ಹೋದೆ, ಉಸ್ಸಪ್ಪಾ.... ಎಂಥಾ ರಿಲೀಫ್ ಅಲ್ವಾ?? ಜಲಬಾಧೆ ವಿಪರೀತ ಆಗಿ ಅದನ್ನ ನಿವಾರಿಸ್ಕೊಂಡಾಗ...!!!!??
ಕೈ ತೊಳೆದು ಮುಖಕ್ಕೆ ಸ್ವಲ್ಪ ತಣ್ಣೀರು ಚಿಮುಕಿಸಿಸ್ಕೊಂಡು  ಹೊರ ಬರಬೇಕು.. ಕೆಳಗಡೆ ಒಂದು ಪರ್ಸ್ ಕಾಣಿಸ್ತು...!! ಜೇಬು ನೋಡ್ಕೊಂಡೆ ..ಅಬ್ಬಾ...!! ಇದೆ ನನ್ನ ಪರ್ಸು..!!! ಯಾರದ್ದೋ ಪಾಪ.. ಅಂತ ಅದನ್ನ ತೆಗೆದು ಜೇಬಿಗೆ ಹಾಕಿಕೊಂಡೆ... ಹೊರಗಡೆ ಬಂದು... ಮಧ್ಯದಲ್ಲಿದ್ದ ನನ್ನ ಸೀಟಿನ ಕಡೆಗೆ ಹೋಗುವಾಗ ಬಹುಶಃ ಟಾಯ್ಲೆಟ್ಟಿನಿಂದ ಮೂರನೇ ಕೂಪೆ (ಪಾರ್ಟಿಶನ್), ನಲ್ಲಿದ್ದ  ಸುಮಾರು ೪೫-೪೮ ವರ್ಷ ವಯಸ್ಸಿನವರೊಬ್ಬರು ಆತಂಕದಲ್ಲಿ ದಾರಿಯನ್ನು ಅಡ್ಡಗಟ್ಟಿ ತಮ್ಮ ಫ್ಯಾಮಿಲಿ ಲಗೇಜ್ ಎಲ್ಲಾ ಗಡಿಬಿಡಿಯಲ್ಲಿ ಹುಡ್ಕಾಡ್ತಾ ಇದ್ದರು... ನಂತರ ನನ್ನನ್ನ ದಾರಿ ಬಿಡಿ ಅನ್ನೋ ತರಹ ಹೇಳಿ..ಪಕ್ಕಕ್ಕೆ ತಳ್ಳುತ್ತಾ ಟಾಯ್ಲೆಟ್ ಕಡೆಗೆ ಹೋದರು.. ನನಗೆ ಬಹುಶಃ ಅವರು ಹುಡುಕುತ್ತಿದ್ದುದು ಪರ್ಸೇನಾ?? ಎನ್ನುವ ಅನುಮಾನ ಬಂತು.. ಟಾಯ್ಲೆಟ್ಟಿಗೆ ಹೋಗಿ ..ಅಷ್ಟೇ ಅವಸರವಾಗಿ ಬಂದವರು ಬಂಗಾಲಿಯಲ್ಲಿ .. ತಮ್ಮ ಆತಂಕದಲ್ಲಿದ್ದ ಹೆಂಡತಿಗೆ “ಅಲ್ಲೂ ಇಲ್ಲ ಕಣೇ” ಅನ್ನೋ ಹಾಗೆ ಏನೋ ಹೇಳಿದ್ರು... ..
ನಾನು “sir, excuse me. What are you searching for?” (ಏನು ಹುಡುಕುತ್ತಿದ್ದೀರಾ ಸರ್?) ಎಂದೆ.,.. ಆತ ಅಸಡ್ಡೆಯಿಂದ..ಅಸಹನೆಯಿಂದ... “ಕಿಚೂ ನಾಯ್” ಅಂದ... ಆಮೇಲೆ ಆತನಿಗೆ ಅನಿಸಿರಬೇಕು.. “nothing Bhai.. .. did u see any purse… there?” (ಏನಿಲ್ಲ.... ಅಂದಹಾಗೆ ನೀವು  ಯಾವ್ದಾದ್ರೂ ಪರ್ಸ್ ನೋಡಿದ್ರಾ??) ಅಂದ. ನಾನು ನನ್ನ ಜೇಬಿನಲ್ಲಿದ್ದ ಟಾಯ್ಲೆಟ್ಟಲ್ಲಿ ಸಿಕ್ಕ ಪರ್ಸನ್ನು ಆತನಿಗೆ ತೋರ್ಸಿದ್ದೆ ತಡ.. “ yes..yes..yes.. this is mine..!!!” (ಹೌದು ಹೌದು ಹೌದು ಇದೇ ನನ್ನ ಪರ್ಸ್) ಅಂತ ಕೈಯಿಂದ ಪರ್ಸು ಕಿತ್ಕೊಂಡು ಅವಸರವಸರ ಪರ್ಸು ತೆಗೆದು ನೋಡಿದ. ಅವನನ್ನೇ ನಿರೀಕ್ಷೆಯಿಂದ ನೋಡ್ತಿದ್ದ ಅವನ ಹೆಂಡತಿ ಮತ್ತು ಮಕ್ಕಳ (ಆಗ್ಲೇ ನೋಡಿದ್ದು ಆತನಿಗೆ ಇಬ್ಬರು ಸುಮಾರು ೧೫-೧೯ ವರ್ಷದ ಸುಂದರ ಹೆಣ್ಣು ಮಕ್ಕಳು ಇದ್ದರು ಅಂತ...!!! ತನ್ನವರತ್ತ ನೋಡಿ “ಎಲ್ಲಾ ಸರಿಯಿದೆ ..ಅನ್ನೋ ಹಾಗೆ ಬಂಗಾಲಿಯಲ್ಲಿ ಹೇಳಿ...” ನನ್ನ ಕಡೆ ತಿರುಗಿ “thanks gentle man…” ಎಂದ. ನಾನು “you are most welcome” ಹೇಳಿ, ಹೊರಡೋದ್ರಲ್ಲಿದ್ದೆ.. ಅಷ್ಟರಲ್ಲಿ ಅವನ ಹೆಂಡತಿ “one minute please” ಎಂದವಳೇ ತನ್ನ ಗಂಡನಿಗೆ ಟಿಕೆಟ್ ಬಗ್ಗೆ ಕೇಳಿದ್ಲು... ಆತ ಪರ್ಸ್ ಹುಡಿಕಿದ.. ಊಂಹೂಂ.. ಮತ್ತೆ ಹುಡುಕಿದ...!! ಮಗದೊಮ್ಮೆ... ಈಗ ಬೆವರಲಾರಂಭಿಸಿದ.. ಟಿಕೆಟ್ ಇರಲಿಲ್ಲ... ’ಇಲ್ಲ ಅನ್ನೋ ಥರ ತಲೆ ಆಡಿಸಿ ಹೆಂಡತಿನ ನೋಡ್ತಾ... ನನ್ನ ಕಡೆ ತಿರುಗಿ “mister, where are the tickets..??” (ಟಿಕೆಟ್ ಎಲ್ಲಿ ಮಾರಾಯ್ರೇ??) ಎಂದ..
ನಾನು ಆವಾಕ್ಕಾದೆ...!!! ಅರೆ ಇವನಾ??!! ಸೌಜನ್ಯವೇ ಇಲ್ಲವೇ..?? ಎಂದುಕೊಂಡು.. “what sir, I dint even open your purse.. I didn’t see any thing, then where is the question of the tickets… please search may be some where U have kept…” (ಏನು ಸ್ವಾಮಿ?? ನಿಮ್ಮ ಪರ್ಸು ಓಪನ್ ಸಹಾ ಮಾಡ್ಲಿಲ್ಲ ನಾನು ಏನನ್ನೂ ನೋಡುಯೂ ಇಲ್ಲ...ಇನ್ನು ಟಿಕೆಟ್ ಪ್ರಶ್ನೆ ಎಲ್ಲಿ ಬರುತ್ತೇ?? ಸರಿಯಾಗಿ ನೋಡಿ ಎಲ್ಲೋ ಇಟ್ಟಿರ್ತೀರಾ) ಎಂದೆ.. ,ಮತ್ತೆ ಆತ ಪರ್ಸ್ ಚೆಕ್ ಮಾಡಿದ... “no no U only have taken….U gave me back the empty purse… return my tickets…” (ಇಲ್ಲ ಇಲ್ಲ ನೀನೇ ತೆಗೆದುಕೊಂಡಿದ್ದೀಯಾ!! ಕೊಡು ನನ್ನ ಟಿಕೆಟ್, ನನಗೆ ಖಾಲಿ ಪರ್ಸ್ ಕೊಟ್ಟಿದ್ದೀಯಾ). ನನಗೆ ಏನು ಹೇಳಬೇಕೋ ತೋಚದಾಯಿತು... ಅವನು, ಅವನ ಹೆಂಡತಿ ..ನಾನೇ ಟಿಕೆಟ್ ಕದ್ದಿದ್ದೀನಿ ಅನ್ನೋ ತರಹ ವರ್ತಿಸೋಕೆ ಪ್ರಾರಂಭಿಸಿ.. ನೀನು ಇಲ್ಲೇ ಕೂತ್ಕೋ ಅಂತ ಅಲ್ಲೇ ಕೂರುಸ್ಕೊಂಡ್ರು.. ಅವರ ಮಕ್ಕಳಿಬ್ಬರೂ ಅಮ್ಮನ ಹತ್ತಿರ ಪಿಸುಗುಡ್ತಾ ಇದ್ರು... “ಅಮ್ಮಾ ಪಾಪ ಅವರು ನಮ್ಮ ಪರ್ಸ್ ತಗೊಂಡ್ ಬಂದು ಕೊಟ್ಟಿದ್ದಾರೆ..ಅಂತಹುದರಲ್ಲಿ ಅವರು ಏಕೆ ಕದಿಯುತ್ತಾರೆ..?” ಎನ್ನುವಂತೆ ಹೇಳಿರಬೇಕು...ಅವರಮ್ಮ ’ನೀವು ಸುಮ್ಮನಿರಿ ಯಾರು ಎಂಥವರು ಹೇಳೋಕೆ ಆಗೊಲ್ಲ...’ ಎಂದವಳು ಗಂಡನ ಕಿವಿಯಲ್ಲಿ ಏನೋ ಕಿವಿಯಲ್ಲಿ ಪಿಸುಗುಟ್ಟಿದಳು...
(ಮುಂದುವರೆಯುತ್ತೆ................)

18 comments:

  1. interesting aagi barediddiraa sir....

    munduvarisi...

    ReplyDelete
  2. ಅಜಾದ್ ಸರ್ ನಿಮ್ಮ ಅನುಭವ ಚೆನ್ನಾಗಿ ಮೂಡಿಬಂದಿದೆ.ಕರುಣೆಯಿಂದ ಸಹಾಯ ಮಾಡಿದರೆ ಒಮ್ಮೊಮ್ಮೆ ಎಂತಹ ಪಚೀತಿ ಅಂತಾ ನಿಮ್ಮನ್ನು ನೋಡಿ ಅನ್ಸುತ್ತೆ.ಮೊದಲನೆಯ ಕಂತು ಆಸಕ್ತಿ ಮೂಡಿಸಿದೆ ಎರಡನೆಯ ಕಂತಿನಲ್ಲಿ ಏನಾಯ್ತು ಅಂತಾ ಕುತೂಹಲ ಮೂಡಿದೆ. .......!!!
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  3. ದಿನಕರ್... ಧನ್ಯವಾದ...

    ReplyDelete
  4. ಹೌದು ಬಾಲು...ಸಹಾಯ ಮಾಡುವಾಗಲೂ ಯೋಚಿಸಿ ಮಾಡಬೇಕು ಅನ್ನಿಸುತ್ತೆ...ಅಲ್ವಾ??ಧನ್ಯವಾದ.. ನೋಡಿ ನೀವೇ ಮುಂದಿನ ಕಂತು....

    ReplyDelete
  5. ಎಂಥಾ ಜನರಪ್ಪಾ ಇವರು! ಮುಂದೇನಾಯ್ತು ಅಂತ ಕಾಯ್ತಾ ಇದೀನಿ!

    ReplyDelete
  6. ಮುಂದಿನ ಕಂತು ಕಾಯುತ್ತಿದ್ದೇವೆ ಅಜಾದ್ ಸರ್ :) ಖುಷಿಯಾಯ್ತು ..

    ReplyDelete
  7. ಸುನಾಥಣ್ಣ,,.. ಆ ಮನುಷ್ಯ ಎಷ್ಟು ನಿಷ್ಕರುಣಿ ಥರ ವರ್ತಿಸಿದ ಅಂದ್ರೆ...ಅಬ್ಬಾ...!! ಧನ್ಯವಾದ

    ReplyDelete
  8. ಈಶ್ವರ್ ಸರ್...ಧನ್ಯವಾದ... ಬೇಗ ಬರ್ತೇನೆ ಮುಕ್ತಾಯದೊಂದಿಗೆ...

    ReplyDelete
  9. ಮುಂದೇನಾಯ್ತು ಅಂತ ಕಾತರದಿಂದ ಇದ್ದೇನೆ.

    ReplyDelete
  10. ಮಂಜುಳಾವ್ರೆ..ಧನ್ಯವಾದ ಖಂಡಿತಾ ಬರ್ತೇನೆ...ಬೇಗ.

    ReplyDelete
  11. ಆಜಾದೂ....

    ಸಹಾಯವೋ... ಫಜೀತಿಯೋ...!!
    ನಿನ್ನ ವಿಮಾನದ ಪ್ರಸಂಗ ಇನ್ನೂ ಹಸಿರಾಗಿದೆ...

    ಮುಂದುವರೆಯಲಿ.... Jai Ho !!

    ReplyDelete
  12. ಧನ್ಯವಾದ ಪ್ರಕಾಶೂ....ಫಜೀತಿ...ಒಂದು ರೀತಿ ಆದ್ರೂ ಸಹಾಯ ಮಾಡೋ ಚಾನ್ಸು ಸಿಕ್ರೆ ಹಿಂದೆ ಬೀಳೊಲ್ಲ...ಅದು ನಿಜ....ಎಲ್ಲರೂ ಹೀಗಲ್ಲ ಅಲ್ವಾ??

    ReplyDelete
  13. ಆಜಾದ್ ಸರ್ ,
    ಪ್ರಾಮಾಣಿಕತೆ ಗೆ ಬೆಲೆ ಎಲ್ಲಿದೆ ಸರ್ ???? ಇಂತಹದೆ ಕಥೆಗಳನ್ನೇ ನಾವು ಕೇಳ್ತಾ ಇರ್ತೀವಲ್ಲ......ಮುಂದೇನಾಯ್ತು ಎನ್ನುವ ಕುತೂಹಲವಿದೆ ಸರ್......ಬೇಗ ಬರೀರಿ....

    ReplyDelete
  14. ಅಶೋಕ್... ಬೆಲೆಯಿದೆ ಆದರೆ ಅದನ್ನ ತೂಗಿ ನೋಡುವವ ಬೇಕು... ಹಾಗಂತ ನಾವು ಪ್ರಾಮಾಣಿಕತೆಯ ಹಾದಿಯನ್ನ ಬಿಡದಿದ್ದರೆ ಅದೇ ನಮಗೆ ನಾವೇ ಕೊಟ್ಟುಕೊಳ್ಳೋ ಕೊಡುಗೆ...ಅಲ್ವಾ... ಬರ್ತೀನಿ ಬೇಗ ಮುಕ್ತಾಯದೊಂದಿಗೆ.

    ReplyDelete
  15. This comment has been removed by the author.

    ReplyDelete
  16. ಅಜಾದ್ ಸರ್,
    ಒಳ್ಳೆಯತನ ಅಥವಾ ಒಳ್ಳೆಯವರಿಗೆ ಪರೀಕ್ಷೆಗಳು ಜಾಸ್ತಿಯಂತೆ!
    ನಿಮ್ಮ ಒಳ್ಳೆಯತನಕ್ಕೂ ಅಂತಹ ಪರೀಕ್ಷೆ ಅನ್ನಿಸುತ್ತೆ.

    ಮುಂದಿನ ಭಾಗದ ನಿರೀಕ್ಷೆಯಲ್ಲಿ...........

    ReplyDelete
  17. ಪ್ರವೀಣ ಕಾಣ್ಲಿಲ್ಲ ನನ್ನ ಓದುಗರಲ್ಲಿ ಅಂದ್ಕೋತಿದ್ದೆ....ಬಂದ್ಯಾ..?? ಥ್ಯಾಂಕ್ಸ್ ಕಣಪ್ಪಾ... ಹೂಂ..ಅದೂ ಒಂಥರ ಹಂಗೇನೇ...

    ReplyDelete