ಅಪ್ಪಾ
ಏನು ಮಗು?
ತೆರಿಗೆ ಹೆಚ್ಚು ವಸೂಲಿ ಆಯ್ತು ಅಂತ
ಬಿ.ಬಿ.ಎಂ.ಪಿ. ನೌಕರರಿಗೆ ಔತಣ ಏರ್ಪಡಿಸಿದ್ದರಲ್ಲಾ..?
ಹೌದು ಮಗು, encourage ಮಾಡೋಕೆ..
ಮತ್ತೆ ನಿರಂತರ ಹೆಚ್ಚು ಕೃಷಿ ಉತ್ಪನ್ನಗಳನ್ನು ಕೊಡೋ
ರೈತನಿಗೆ ಯಾಕೆ ..ಊಟ ಬೇಡ
ಸರಿಯಾಗಿ ವಿದ್ಯುತ್ ಪೂರೈಸ್ತಾಯಿಲ್ಲ ಸರ್ಕಾರ..?
ಗೊತ್ತಿಲ್ಲ ಮಗು.
ಅಪ್ಪಾ
ಏನುಮಗು?
ಮೈಸೂರ್ ಸಿಲ್ಕುಸೀರೆ ದುಬಾರಿಯಂತೆ?
ಹೌದು ಮಗು
ಮತ್ತೆ ಸರ್ಕಾರ ಮೂರು ಸಾವಿರಕ್ಕೆ
ಬಡವರಿಗೇ ಏಟುಕೋ ಸೀರೆ ಮಾಡ್ತಾರಂತೆ
ಹೌದು ಮಗು
ಚುನಾವಣೆ ಸಮ್ಯದಲ್ಲಿ ದಾಳಿಮಾಡಿ
ಜಪ್ತುಮಾಡಿದ ಸೀರೆ ಇವು ಅಂತಾರಲ್ಲಾ..
ಗೊತ್ತಿಲ್ಲ ಮಗು.
ಅಪ್ಪಾ
ಏನುಮಗು?
ಶಿವಮೊಗ್ಗದಲ್ಲಿ ಕೃಷಿ ವಿ,ವಿ, ಸ್ಥಾಪಿಸ್ತಾರಂತೆ?
ಹೌದು ಮಗು
ಮತ್ತೆ ರೈತನಿಗೆ ಕೃಷಿಗೆ ಇನ್ನೂ ಹೆಚ್ಚು
ಜಮೀನು ಸಿಗುತ್ತಾ?
ಗೊತ್ತಿಲ್ಲ ಮಗು
ಮೈಸೂರು ಸೀರೆ ಪ್ರಶ್ನೆಗೆ ಉತ್ತರ ಬಹಳ ಚೆನ್ನಾಗಿತ್ತು, ಮುಂದುವರೆಯಲಿ ಮಗುವಿನ ಪ್ರಶ್ನೆಗಳು...
ReplyDeleteಪ್ರಭು, ಕೆಲವು ವಿಷಯಗಳು ಬಹಳ ವಿಚಿತ್ರ್ ಎನಿಸುತ್ತವೆ..ಹಾಗೇ ಸೀರೆಯೂ ಅನ್ನಿಸ್ತು ಅದ್ಕೇ ಬರೆದೆ...thanks ಪ್ರತಿಕ್ರಿಯೆಗೆ
ReplyDeleteಗೊತ್ತಿಲ್ಲ ಮಗು series ಚೆನ್ನಾಗಿದೆ.
ReplyDeleteಹೀಗೆ ಮುಂದುವರೆಸಿ.
ಕೃಷಿ ವಿ.ವಿ. ಸ್ಥಾಪನೆ ಮಾಡಲು ರೈತರ ಜಮೀನನ್ನೇ ತೆಗೆದುಕೊಳ್ಳಲೂ ಬಹುದು ನೋಡಿ.
ನಿಮ್ಮ "ಗೊತ್ತಿಲ್ಲ ಮಗು" ಮಾಲಿಕೆ ನನಗೆ ಹೆಚ್ಚು ಇಷ್ಟ. ಕಾರಣ ಅದರೊಳಗೆ ನೀವು ಅಡಕಗೊಳಿಸುವ ವಿಡ೦ಬನಾತ್ಮಕ ವಿಚಾರ. ಮು೦ದುವರಿಯಲಿ.
ReplyDeleteಈ ನಿಮ್ಮ ಮಗು ಬಲೇ ತುಂಟ ಕಣ್ರೀ!
ReplyDeleteಸರ್ ಎಲ್ಲಾ ಸಾಲುಗಳು ಇಷ್ಟವಾದವು ಚೆನ್ನಾಗಿದೆ ಮುಂದುವರಿಯಲಿ
ReplyDeleteಸರ್,
ReplyDeleteನಿಮ್ಮ ಮಗನ ಪ್ರಶ್ನೆಗಳು ಯಾವಾಗಲು ಇಷ್ಟವಾಗುತ್ತವೆ...
ಚಿಕ್ಕದಾಗಿ ಚೊಕ್ಕವಾಗಿ ವಾಸ್ತವ ಸತ್ಯಗಳನ್ನು "ಗೊತ್ತಿಲ್ಲ ಮಗು" ಚೆನ್ನಾಗಿ ತೆರೆದಿಡುತ್ತಿದೆ. ಹೀಗೆ ಮುಂದುವರಿಯಲಿ ಸರ್,
ಧನ್ಯವಾದಗಳು.
ಜ್ಯೋತಿ ಮೇಡಂ: ನೀವು ಹೇಳಿದ್ದು ಒಂದು ನಗ್ನ ಸತ್ಯ ವಾದರೆ, ಇರುವ ಕೃಷಿ ವಿ.ವಿ. ಯಿಂದ ಪದವೀಧರರಾಗಿ ಹೊರಬರುತ್ತಿರುವ ಯುವಕರಿಗೆ ನೌಕರಿಗೆ ಸರಿಯಾದ ಮಾರ್ಗಸೂಚಿ ಕಾರ್ಯಕ್ರಮವನ್ನು ಕೊಡದೇ ಏಕ ಪಕ್ಷೀಯ ನಿರ್ಧಾರಗಳು ನಾಡಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ ಅಲ್ಲವೇ? ಥ್ಯಾಂಕ್ಸ್ ಗೂಡಿಗೆ ಬಂದುದಕ್ಕೆ.
ReplyDeleteಪರಾಂಜಪೆಯವರೇ, ಮಗುವಿನ ಪ್ರಶ್ನೆಗೆ ನನ್ನ ಬಳಿಯಷ್ಟೇ ಅಲ್ಲ ಸರ್ಕಾರದಬಳಿಯೂ ಇಲ್ಲ ಉತ್ತರ..
ನಿಮ್ಮ ಪ್ರೋತ್ಸಾಹದ ಫಲ ಇದು ಸುನಾಥ್ ಸರ್...ಸಲಹೆ ಇದ್ರೆ ಕೊಡಿ ಸರ್ ಇಂಪ್ರೂವ್ ಮಾಡೋಕೆ..
ನೆನಪಿಗೆ ಬಂದ ಮನಸು...ಹೀಗೇ ಬರುತ್ತಿದ್ದರೆ ಬ್ಲಾಗು ಬೆಳೆಯುತ್ತೆ...ಅಲ್ಲವೇ..?
ಶಿವು, thanks. ಈ ಸರಣಿಯ ಅಸ್ತಿತ್ವಕ್ಕೆ ನಿಮ್ಮೆಲ್ಲರ ಅಶೀರ್ವಾದ ಕಾರಣ...